ಮನಸೂರೆಗೊಳಿಸುವ ಸುಂದರ ಪ್ರವಾಸಿತಾಣ ‘ಉತ್ಸವ ರಾಕ್ ಗಾರ್ಡನ್’


ಗಣೇಶ್ ಹಿರೇಮಠ, May 9, 2021, 11:52 AM IST

hsegere

ಉತ್ಸವ ರಾಕ್ ಗಾರ್ಡನ್ ಎಂಬ ಹೆಸರಿನ ಈ ತಾಣವು ಇರುವುದು ಉತ್ತರ ಕರ್ನಾಟಕದಲ್ಲಿ. ಹಾವೇರಿ ಜಿಲ್ಲೆಯ ಹಾವೇರಿ ಪಟ್ಟಣದಿಂದ ವಾಯವ್ಯ ದಿಕ್ಕಿಗೆ 30 ಕಿ.ಮೀ ಚಲಿಸಿದರೆ ಸಿಗುವ ಪಟ್ಟಣ ಶಿಗ್ಗಾಂವ್. ಇಲ್ಲಿಂದ ಮತ್ತೆ ವಾಯವ್ಯ ದಿಕ್ಕಿಗೆ ಸುಮಾರು 10 ಕಿ.ಮೀ ಕ್ರಮಿಸಿದರೆ ಗೊಟಗೋಡಿ ಎಂಬ ಹಳ್ಳಿಯ ಸರಹದ್ದಿನಲ್ಲಿರುವ ಉತ್ಸವ ರಾಕ್ ಗಾರ್ಡನ್ ಸಿಗುತ್ತದೆ.

ಹಳ್ಳಿಯ ಸಮಗ್ರ ಜೀವನದ ಚಿತ್ರಣವನ್ನು ಮಾದರಿ ಪ್ರತಿಮೆಗಳ ಮೂಲಕ ಸುಂದರವಾಗಿ ಇಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಸುಂದರವಾದ ಉದ್ಯಾನವನವನ್ನೂ ಸಹ ಇಲ್ಲಿ ಕಾಣಬಹುದು.

ಪ್ರವೇಶ ದ್ವಾರ ಆಕರ್ಷಕವಾಗಿದೆ. ಬೃಹತ್ ಹಾವಿನ ಹುತ್ತದ ಮಾದರಿಯಲ್ಲಿ ಮುಂಭಾಗದ ಗೋಡೆ ಇದೆ. ಇದರ ಮೇಲೆ ಮಿಂಚುತ್ತಿರುವ ಪುಟಾಣಿಗಳ ಗ್ಲಾಸ್ ಶಿಲ್ಪಗಳಿವೆ. ಚಕ್ಕಡಿಯ ಗಾಲಿಗಳು ಗಾರ್ಡನ್‌ನ ಪ್ರವೇಶದ್ವಾರ. ಒಳ ಪ್ರವೇಶಿಸುತ್ತಿದ್ದಂತೆ ಕನ್ನಡಿಗರ ಕಣ್ಮಣಿ ದಿ.ರಾಜಕುಮಾರ್ ಕೊಳವೊಂದರಲ್ಲಿ ತನ್ನ ಆರಾಧ್ಯದೈವ ಶಿವನಿಗೆ ಕಣ್ಣು ನೀಡುವ ಬೇಡರ ಕಣ್ಣಪ್ಪನ ರೂಪದಲ್ಲಿ ಕಾಣಸಿಗುತ್ತಾರೆ.

ಕೊಳದ ಸುತ್ತಲು ಇವರ ಅಭಿನಯದ ಸಾಮಾಜಿಕ ಹಾಗೂ ಭಕ್ತಿ ಪ್ರದಾನ ಚಿತ್ರಗಳ ಶಿಲ್ಪಗಳಿವೆ. ಇದಕ್ಕೆ ಡಾ.ರಾಜ್‌ಕುಮಾರ್ ಸರ್ಕಲ್‌ಎಂದು ಹೆಸರಿಡಲಾಗಿದೆ.ರಾಜಣ್ಣನನ್ನು ಕಣ್ಣು ತುಂಬಿಕೊಂಡು ಮುಂದೆ ಸಾಗಿದಾಗ ಕರ್ನಾಟಕದ ಮೂವರು ಮಹಾನ ಕಲಾವಿದರಾದ ಡಾ.ಎಂ.ವಿ.ಮಿಣಜಗಿ, ಡಿ.ವಿ.ಹಾಲಬಾವಿ ಹಾಗೂ ಟಿ.ಪಿ.ಅಕ್ಕಿಅವರ ಸ್ಮರಣಾರ್ಥ ನಿರ್ಮಿಸಿದ ಬೃಹತ್‌ಆಲದ ಮರ ಇದೆ. ತುಸು ಮುಂದಕ್ಕೆ ಸಾಗಿದರೆ ಕೆಟ್ಟದ್ದನ್ನು ನೋಡಬೇಡ, ಮಾತಾಡಬೇಡ, ಕೇಳಬೇಡ ಎಂದು ಬಾಪುಜಿ ಸಂದೇಶ ಸಾರುವ ಮಕ್ಕಳ ಕಾರಂಜಿ ಇದೆ. ಇಲ್ಲಿ ನಮ್ಮ ಬಾಲ್ಯಾವಸ್ಥೆಯ ಸವಿ ನೆನಪುಗಳು ಹಸಿರಾಗುತ್ತವೆ. ಇದು ಮಕ್ಕಳ ಮುಗ್ಧಲೋಕ್ಕೆಹಿಡಿದ ಕೈಗನ್ನಡಿಯಾಗಿದೆ.

ನವ್ಯಕಲಾ ಪ್ರದರ್ಶನಾಲಯ, ಮದುವೆ ಪ್ರದರ್ಶನಾಲಯಗಳು ಪ್ರವಾಸಿಗರು ಹೌಹಾರುವಂತೆ ಮಾಡುತ್ತವೆ. ಕಲಾವಿದರ ಕೈ ಚಳಕಕ್ಕೆ ಶರಣು ಎನ್ನುತ್ತಾ ಮುಂದೆ ಸಾಗುತ್ತಾರೆ ಪ್ರವಾಸಿಗರು.

ಮದುವೆ ಪ್ರದರ್ಶನಾಲಯದಲ್ಲಿ ಇಸ್ಲಾಂ, ಕ್ರೈಸ್ತ, ಶೈವ, ವೈದಿಕ, ಜೈನ ಹೀಗೆ ಮುಂತಾದ ಧರ್ಮಗಳ ರೂಢಿಗತ ಮದುವೆ ಸಂಪ್ರದಾಯಗಳನ್ನು ಬಿಂಬಿಸಲಾಗಿದ್ದು ನೋಡುಗರ ಮನಸೂರೆಗೊಳ್ಳುತ್ತವೆ.

ಉತ್ತರ ಕರ್ನಾಟಕದ ಹಿಂದಿನ ಗ್ರಾಮಿಣ ಸೊಗಡನ್ನು ನೆನಪಿಸುವ ಶಿಲ್ಪಕಲೆಗಳು ಎಲ್ಲರನ್ನುಆಕರ್ಷಿಸುತ್ತದೆ. ಇಲ್ಲಿ ಕೆಲಸದಲ್ಲಿ ತೊಡಗಿದ ಹೆಂಗಸರು, ಗಂಡಸರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳಿಂದ ಗಮನ ಸೆಳೆಯುತ್ತಾರೆ. ಇಲ್ಲಿಯ ಶಿಲ್ಪಗಳು, ಅವುಗಳಿಗೆ ಪೂರಕವಾಗುವಂತೆ ಜೋಡಿಸಿದ ಸುತ್ತಲಿನ ದಿನಬಳಕೆಯ ಗ್ರಾಮ್ಯ ಸಾಮಾಗ್ರಿಗಳು, ಮನೆಗಳ ಮಾದರಿಗಳು ಇತ್ಯಾದಿ. ದೃಶ್ಯಗಳು ಹಿಂದಿನ ಗ್ರಾಮ ಸಾಮ್ರಾಜ್ಯದ ಸೊಬಗನ್ನು ನೆನಪಿಸುತ್ತವೆ.

ಸಾಂಪ್ರದಾಯಿಕ ಕೃಷಿ ಪದ್ಧತಿಯ ಹಂತಗಳು, ಹೈನುಗಾರಿಕೆ, ಆಡು, ಕುರಿ ಸಾಕಣೆ, ಬುಡಕಟ್ಟು ಜನಾಂಗದ ಬದುಕು, ಸಾಕು ಪ್ರಾಣಿ, ಕಾಡು ಪ್ರಾಣಿಗಳು, ವಿವಿಧ ತಳಿಯ ಆಕಳು ಎಮ್ಮೆಯ ತಳಿಗಳು, ಜನಪದರ ಆಟ,ಸಾರಿಗೆ ವ್ಯವಸ್ಥೆ ಹೀಗೆ ಇನ್ನು ಹಲವಾರು ಸಂಗತಿಗಳನ್ನು ಶಿಲ್ಪಗಳ ಮೂಲಕ ಅವುಗಳೊಂದಿಗೆ ಸುವ್ಯವಸ್ಥಿತ ವಾಗಿ ಸಮ್ಮಿಲನಗೊಂಡ ನಿಸರ್ಗದ ಮೂಲಕ ಕಣ್ಣು ತುಂಬಿಕೊಳ್ಳಬೇಕಾದರೆ ‘ಉತ್ಸವ ರಾಕ್‌ಗಾರ್ಡನ್’ಗೆ ಒಮ್ಮೆ ಭೇಟಿ ನೀಡಲೇಬೇಕು.

ನಮ್ಮ ನಾಡಿನ ಗ್ರಾಮೀಣ ಸಂಸ್ಕೃತಿಯ ಮಜಲುಗಳನ್ನೆಲ್ಲಾ ಸಾವಿರಾರು ಶಿಲ್ಪಗಳಲ್ಲಿ ಹಿಡಿದಿಟ್ಟಿರುವುದರಿಂದ ಎಂಟು ವಿಶ್ವ ದಾಖಲೆಗಳಲ್ಲಿ ‘ಉತ್ಸವರಾಕ್ ಗಾರ್ಡನ’ ಹೆಸರಿಸಲ್ಪಟ್ಟಿದೆ.

ಇದು ವೈಶಿಷ್ಟತೆಗಳಿಂದ ಕೂಡಿದ ಪ್ರವಾಸಿ ತಾಣವಲ್ಲದೆ ಶೈಕ್ಷಣಿಕ, ಸಾಂಸ್ಕೃತಿಕಕೇಂದ್ರವೂ ಹೌದು. ಮಕ್ಕಳು, ಸಾಮಾನ್ಯರು, ವಿದ್ಯಾವಂತರು, ಪ್ರಜ್ಞಾವಂತರೆಲ್ಲರನ್ನು ಸಮಾನವಾಗಿ ರಂಜಿಸುವ ಅಪರೂಪದ ಸ್ಥಳ. ಸಮಾಜದ ಎಲ್ಲ ಸಮುದಾಯದ ಜನ ಒಂದೆಡೆ ಸೇರಿ ಖುಷಿಪಡುವ ಭಾವೈಕ್ಯತಾ ತಾಣ.

ಬರುವುದು ಹೇಗೆ ?

ಹುಬ್ಬಳ್ಳಿ ಹಾಗೂ ಹಾವೇರಿಗಳಿಂದ ಗೊಟಗೋಡಿಯವರೆಗೆ ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಬೆಂಗಳೂರು-ಮೈಸೂರು ಕಡೆಯಿಂದ ಬರುವವರು ಹರಿಹರ, ಹಾಸನದಿಂದ ಬರುವವರು ಅರಸಿಕೆರೆ, ದಾವಣಗೆರೆ, ಉತ್ತರಕನ್ನಡದಿಂದ ಬರುವವರು ಸಿರ್ಸಿ, ಹಾವೇರಿ, ಬೆಳಗಾವಿ, ಗುಲ್ಬರ್ಗ ಹಾಗೂ ಬೀದರ್ ಕಡೆಯಿಂದ ಬರುವವರು ಹುಬ್ಬಳ್ಳಿ ಮಾರ್ಗವಾಗಿ ಬರಬಹುದು. ಗಾರ್ಡನ್ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಹೊಂದಿಕೊಂಡಿದೆ.

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.