53 ಇಂಚಿನ ಎದೆ, ಆಜಾನುಬಾಹು ಆ್ಯಕ್ಷನ್ ಹೀರೋ ರಾಮಾಯಣದ ಹನುಮಂತ “ದಾರಾಸಿಂಗ್” ನೆನಪು!


ನಾಗೇಂದ್ರ ತ್ರಾಸಿ, Apr 18, 2020, 7:20 PM IST

53 ಇಂಚಿನ ಎದೆ, ಆಜಾನುಬಾಹು ಆ್ಯಕ್ಷನ್ ಹೀರೋ ರಾಮಾಯಣದ ಹನುಮಂತ “ದಾರಾಸಿಂಗ್

ಬಾಲಿವುಡ್ ಸಿನಿಮಾದಲ್ಲಿ ಆ್ಯಕ್ಷನ್ ಹೀರೋ ಆಗಿ, ರಾಮಾಯಣ ಧಾರಾವಾಹಿಯಲ್ಲಿ ಹನುಮಂತನಾಗಿ ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತ ಕಂಡ ಅತೀ ಪ್ರಭಾವಶಾಲಿ ಕುಸ್ತಿಪಟುವಾಗಿ ಖ್ಯಾತಪಡೆದವರು ದಾರಾ ಸಿಂಗ್ ರಾಂಧಾವ. ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣದ ಹನುಮಂತನಾಗಿ ಜನಪ್ರಿಯರಾದವರು ದಿ.ದಾರಾ ಸಿಂಗ್. 1950ರ ದಶಕದಲ್ಲಿ ಸಿಂಗ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಇವರು ತಮ್ಮದೇ ಸ್ಟಂಟ್ ಗಳಿಗೆ ಹೆಸರಾಗಿದ್ದರು. ದಾರಾಸಿಂಗ್ ಹಿಂದಿ ಮತ್ತು ಪಂಜಾಬಿ ಸಿನಿಮಾಗಳ ನಿರ್ಮಾಪಕರಾಗಿ, ನಿರ್ದೇಶಕರಾಗಿ ಹಾಗೂ ಕಥೆಗಾರರಾಗಿಯೂ ದುಡಿದಿದ್ದರು. 1976ರಲ್ಲಿ ತೆರೆಕಂಡಿದ್ದ ಬಜರಂಗಬಲಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಅವರು ಹನುಮಂತನ ಪಾತ್ರಕ್ಕೆ ಮತ್ತೆ ಜೀವ ತುಂಬಿದ್ದು ರಮಾನಂದ್ ಸಾಗರ್ ಅವರ ಜನಪ್ರಿಯ
ರಾಮಾಯಣ ಧಾರವಾಹಿಯಲ್ಲಿ.

1928ರಲ್ಲಿ ಪಂಜಾಬ್ ನ ಮಾಜಾಹ್ ಪ್ರದೇಶದ ಧರ್ಮುಚಾಕ್ ಎಂಬ ಹಳ್ಳಿಯಲ್ಲಿ ರಾಂಧಾವ್ ಜನಿಸಿದ್ದರು. ಜಾಟ್ ಸಿಖ್ ಸಮುದಾಯಕ್ಕೆ ಸೇರಿದ್ದ ಇವರ ಮೂಲ ನಾಮಧೇಯ ದೀದಾರ್ ಸಿಂಗ್ ರಾಂಧಾವ್ ಎಂದಾಗಿತ್ತು.

ಆಜಾನುಬಾಹು, 53 ಇಂಚಿನ ಎದೆಯ ದಾರಾಸಿಂಗ್!
ದಾರಾ ಸಿಂಗ್ ಮೈಕಟ್ಟು ಎಂತಹವರನ್ನು ದಂಗುಬಡಿಸುವಂತಹದ್ದು. ಬರೋಬ್ಬರಿ ಆರು ಅಡಿ 2 ಇಂಚು ಎತ್ತರ. 53 ಇಂಚಿನ ಎದೆ. 127ಕೆಜಿ ತೂಕ. ಆ ಕಾಲದಲ್ಲಿಯೇ ಫೈಲ್ವಾನ್ ಆಗಿದ್ದ ದಾರಾ ಸಿಂಗ್ ಆರಂಭದಲ್ಲಿ ಕುಸ್ತಿಪಟುವಾಗಿದ್ದರು. 1947ರಿಂದ 1983ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದರು.

ಒಂದು ಕುತೂಹಲಕಾರಿ ವಿಷಯ ಏನೆಂದರೆ 1952ರಲ್ಲಿ ದಾರಾಸಿಂಗ್ ಸಾಂಗ್ಡಿಲ್ ಎಂಬ ಹಿಂದಿ ಚಿತ್ರದಲ್ಲಿ ಮೊತ್ತ ಮೊದಲಿಗೆ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದ ನಿರ್ಮಾಪಕ, ನಿರ್ದೇಶಕ ಆರ್ ಸಿ ತಲ್ವಾರ್. ಸಾಂಗ್ಡಿಲ್ ಸಿನಿಮಾದ ಕಥೆ, ಚಿತ್ರಕಥೆ ರಮಾನಂದ್ ಸಾಗರ್ ಅವರದ್ದು. ದಿಲೀಪ್ ಕುಮಾರ್, ಮಧುಬಾಲಾ ಮುಖ್ಯಭೂಮಿಕೆಯಲ್ಲಿದ್ದರು. ಸಾಂಗ್ಡಿಲ್ ಸಿನಿಮಾಕ್ಕೆ ಚಿತ್ರಕಥೆ ಬರೆದ ರಮಾನಂದ್ ಸಾಗರ್ ನಂತರ 1987ರಲ್ಲಿ ನಿರ್ದೇಶಿಸಿದ್ದ ರಾಮಾಯಣ ಧಾರಾವಾಹಿಯಲ್ಲಿ “ದಾರಾ ಸಿಂಗ್” ಗೆ ಹನುಮಂತನ ಪಾತ್ರ ಮಾಡುವಂತೆ ಆಹ್ವಾನ ನೀಡುವ ಮೂಲಕ ಮತ್ತಷ್ಟು ಜನಪ್ರಿಯಗೊಳಿಸಿದ್ದರು.

ಸ್ಟಂಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ದಾರಾ ಸಿಂಗ್ 1962ರಲ್ಲಿ ಬಾಬುಭಾಯಿ ಮಿಸ್ಟ್ರಿ ಅವರು “ಕಿಂಗ್ ಕಾಂಗ್” ಸಿನಿಮಾದಲ್ಲಿ, 1963ರಲ್ಲಿ ಮುಮ್ತಾಜ್ ಮತ್ತು ದಾರಾಸಿಂಗ್ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಜೋಡಿ 16 ಹಿಂದಿ ಸಿನಿಮಾಗಳಲ್ಲಿ ನಟಿಸಿತ್ತು. ಅಷ್ಟೇ ಅಲ್ಲ ಮುಮ್ತಾಜ್ ಮತ್ತು ದಾರಾ ಸಿಂಗ್ ಅತೀ ಹೆಚ್ಚು ಸಂಭಾವನೆ ಪಡೆಯುವ ಬಿ ಗ್ರೇಡ್ ನಟರಾಗಿದ್ದರು. ಆ ಕಾಲಕ್ಕೆ ದಾರಾ ಸಿಂಗ್ ಒಂದು ಸಿನಿಮಾಕ್ಕೆ ಪಡೆಯುತ್ತಿದ್ದ ಸಂಭಾವನೆ ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ!

ರುಸ್ತುಂ ಎ ಬಾಗ್ದಾದ್, ಅವಾರಾ ಅಬ್ದುಲ್ಲಾ, ಆಯಾ ತೂಫಾನ್, ಲುಟೇರಾ, ನೌಜವಾನ್, ಡಾಕು ಮಂಗಲ್ ಸಿಂಗ್, ಚೋರೋಂಕಾ ಚೋರ್, ಮೇರಾ ನಾಮ್ ಜೋಕರ್, ವಾರಂಟ್, ಮರ್ದ್ , ಶಾರುಖ್ ಜತೆಗೆ ಕಲ್ ಹೋ ನಾ ಹೋ ಸೇರಿದಂತೆ 2012ರವರೆಗೆ ಬಾಲಿವುಡ್ ಸಿನಿಮಾದಲ್ಲಿ ದಾರಾ ಸಿಂಗ್ ಮಿಂಚಿದ್ದರು.

ಕುಸ್ತಿಪಟುವಾಗಿ ಸೋಲೇ ಕಾಣದ ದಾರಾಸಿಂಗ್:
1947ರಲ್ಲಿ ಸಿಂಗಾಪುರಕ್ಕೆ ತೆರಳಿದ್ದ ದಾರಾ ಸಿಂಗ್ ಕುಸ್ತಿ ಪಂದ್ಯದಲ್ಲಿ ಟಾರ್ಲೊಕ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆಫ್ ಮಲೇಷ್ಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ನಂತರ 1954ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕುಸ್ತಿಪಟು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕುಸ್ತಿಯಲ್ಲಿನ ತಮ್ಮ ನೈಪುಣ್ಯಯಿಂದ ದೇಶಾದ್ಯಂತ ಅಪಾರ ಗೌರವ, ಮನ್ನಣೆ ಗಳಿಸಿದ ಹೆಮ್ಮೆ ದಾರಾ ಸಿಂಗ್ ಅವರದ್ದಾಗಿತ್ತು. ಆ ಕಾಲದ ಘಟಾನುಘಟಿ ಕುಸ್ತಿಪಟುವಾಗಿದ್ದ ಕಿಂಗ್ ಕಾಂಗ್ (King kong)ಅವರನ್ನು ಪರಾಜಯಗೊಳಿಸಿ 1959ರಲ್ಲಿ ಕಾಮನ್ ವೆಲ್ತ್ ಚಾಂಪಿಯನ್ ಪಟ್ಟ ಪಡೆದಿದ್ದರು. ಜಾರ್ಜ್ ಗೋರ್ಡಿಯೆಂಕೋ ಮತ್ತು ಜಾನ್ ಡಿಸಿಲ್ವಾ ಅವರಿಗೂ ಸೋಲಿನ ರುಚಿ ಉಣಿಸಿದ್ದರು. 1969ರಲ್ಲಿ ಅಮೆರಿಕಾದ ಲೋವ್ ಥೆಝ್ ಅವರನ್ನು ಸೋಲಿಸಿ ದಾರಾ ಸಿಂಗ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಬಲಾಢ್ಯ ಕುಸ್ತಿಪಟುವಾಗಿದ್ದ ಸಿಂಗ್ ರುಸ್ತುಂ ಎ ಹಿಂದ್, ರುಸ್ತುಂ ಎ ಪಂಜಾಬ್ ಎಂಬ ಬಿರುದಿಗೆ ಪಾತ್ರರಾಗಿದ್ದರು. 1983ರಲ್ಲಿ ಕುಸ್ತಿ ಸ್ಪರ್ಧೆಗೆ ವಿದಾಯ ಘೋಷಿಸಿದ್ದರು. ಕುಸ್ತಿ ಪಂದ್ಯದಲ್ಲಿ ದಾರಾ ಸಿಂಗ್ ಪರಾಜಯಗೊಂಡಿದ್ದೇ ಇಲ್ಲ ಎಂಬುದು ಹೆಗ್ಗಳಿಕೆ.

ಕುಸ್ತಿ, ನಟನೆಯಲ್ಲಿ ಹೆಸರಾಗಿದ್ದ ದಾರಾ ಸಿಂಗ್ 1998ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ನಂತರ ರಾಜ್ಯಸಭೆಗೆ ಆಯ್ಕೆಯಾದ ಮೊದಲ ಕ್ರೀಡಾಪಟುವಾಗಿದ್ದರು. 2003ರಿಂದ 2009ರವರೆಗೆ ಮೇಲ್ಮನೆ ಸದಸ್ಯರಾಗಿದ್ದರು. 2012ರ ಜುಲೈ 11ರಂದು ಮುಂಬೈಯ ನಿವಾಸದಲ್ಲಿ ದಾರಾಸಿಂಗ್ ವಿಧಿವಶರಾಗಿದ್ದರು. ಇದೀಗ ದೂರದರ್ಶನದಲ್ಲಿ ಮತ್ತೆ ರಾಮಾಯಣ ಮರುಪ್ರಸಾರವಾಗುವುದರೊಂದಿಗೆ ದಾರಾಸಿಂಗ್ ಅವರ ನಟನೆಯ ಖದರ್ ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ.

*ನಾಗೇಂದ್ರ ತ್ರಾಸಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.