ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ರಾಜ್ ಗಿರ್ ಬಿಹಾರ ರಾಜ್ಯದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ

ಸುಧೀರ್, Mar 25, 2023, 5:30 PM IST

ಈ ನಿಗೂಢ ಗುಹೆಯಲ್ಲಿದೆ ಚಿನ್ನದ ಖಜಾನೆ: ಇದರ ರಹಸ್ಯ ಭೇದಿಸಲು ಯಾರಿಗೂ ಸಾಧ್ಯವಾಗಿಲ್ಲವಂತೆ

ದಿನ ಬೆಳಗಾದರೆ ಹೊಸ ಹೊಸ ವಿಷಯಗಳು ಸಾಮಾಜಿಕ ಜಾಲತಾಣ, ಮತ್ತಿತರ ಮೂಲಗಳಿಂದ ಕಾಣಸಿಗುತ್ತವೆ, ಹಾಗೆ ಜಗತ್ತಿನಲ್ಲಿ ಅನೇಕ ನಿಗೂಢ ಸ್ಥಳಗಳಿವೆ. ಆ ಸ್ಥಳಗಳ ಬಗ್ಗೆ ಯಾರಾದರೂ ಹೇಳಿದಾಗ ಅಥವಾ ಅವುಗಳನ್ನು ನಾವೇ ಕಣ್ಣಾರೆ ಕಂಡಾಗ ಹೀಗೂ ಇರಬಹುದೇ ಎಂದು ನಾವೇ ಒಮ್ಮೆ ಬೆರಗಾಗುತ್ತೇವೆ. ಬಹುತೇಕರಿಗೆ ಅದರಲ್ಲೂ ಪ್ರವಾಸ ಪ್ರಿಯರಿಗೆ ಇಂತಹ ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿ ಇರುತ್ತದೆ. ಹಾಗಾದರೆ ಬನ್ನಿ ಬಿಹಾರದಲ್ಲಿ ಚಿನ್ನದ ಖಜಾನೆ ಇರುವ ಒಂದು ನಿಗೂಢ ಗುಹೆಯ ಬಗ್ಗೆ ತಿಳಿದುಕೊಂಡು ಬರೋಣ…

ಬಿಹಾರದ ನಳಂದ ಜಿಲ್ಲೆಯಲ್ಲಿರುವ ಒಂದು ಸಣ್ಣ ಊರಾದ ರಾಜ್‌ಗೀರ್‌ನಲ್ಲಿ ಸೋನ್ ಭಂಡಾರ್ ಎಂಬ ಗುಹೆಯಿದ್ದು ಇದುವೇ ನಾವು ಹೇಳ ಹೊರಟಿರುವ ನಿಗೂಢ ಗುಹೆ. ಹೆಸರೇ ಸೂಚಿಸುವಂತೆ ‘ಸೋನ್ ಭಂಡಾರ್’ ಅಂದರೆ ಚಿನ್ನದ ಖಜಾನೆ, ಈ ಗುಹೆಯಲ್ಲಿ ಲೆಕ್ಕ ಹಾಕಲು ಸಾಧ್ಯವೇ ಇಲ್ಲದಷ್ಟು ಚಿನ್ನದ ಖಜಾನೆ ಇದೆಯಂತೆ.

ರಾಜ್ ಗಿರ್ ಬಿಹಾರ ರಾಜ್ಯದ ಒಂದು ಸಣ್ಣ ಪಟ್ಟಣವಾಗಿದ್ದು, ಇದು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಈ ನಗರವು ಪ್ರಾಚೀನ ಕಾಲದಲ್ಲಿ ಮಗಧದ ರಾಜಧಾನಿಯಾಗಿತ್ತು. ಅಲ್ಲದೆ, ಭಗವಾನ್ ಬುದ್ಧನು ಮಗಧದ ಚಕ್ರವರ್ತಿ ಬಿಂಬಿಸಾರಗೆ ಉಪದೇಶವನ್ನು ನೀಡಿದ್ದು ಕೂಡಾ ಇಲ್ಲಿಯೇ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ರಾಜ್ ಗಿರ್ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳು ಮತ್ತು ಸೋನ್ ಭಂಡಾರ್ ಗುಹೆಗಳಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಸೋನ್ ಭಂಡಾರ್’ ನಲ್ಲಿ ಗುಪ್ತ ನಿಧಿ ಇದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿಯವರೆಗೆ ಯಾರಿಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ನಿಧಿಯು ಮೌರ್ಯ ದೊರೆ ಬಿಂಬಿಸಾರನದ್ದು ಎಂದು ಹೇಳಲಾಗುತ್ತದೆ, ಆದರೂ ಕೆಲವರು ಇದನ್ನು ಹಿಂದಿನ ಮಗಧ ಚಕ್ರವರ್ತಿ ಜರಾಸಂಧನದ್ದು ಎಂದೂ ಕೂಡಾ ಹೇಳುತ್ತಾರೆ.

ಕ್ರಿ.ಪೂ 3 ಅಥವಾ 4 ನೇ ಶತಮಾನದಲ್ಲಿ ವೈಬರ್ ಬೆಟ್ಟದ ತಪ್ಪಲಿನಲ್ಲಿ ಬೃಹತ್ ಕಲ್ಲಿನಿಂದ ಈ ಗುಹೆ ನಿರ್ಮಿಸಲಾಗಿದ್ದು, ಇದರ ಪ್ರವೇಶದ್ವಾರದ ಬಂಡೆಯ ಮೇಲೆ ಗುಪ್ತ ಭಾಷೆಯಲ್ಲಿ ಬರೆದ ಶಾಸನದ ಪ್ರಕಾರ, ಈ ಗುಹೆಗಳನ್ನು ಜೈನ ಮುನಿಯವರು ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿ ಕಂಡುಬರುವ ವಿಷ್ಣುವಿನ ವಿಗ್ರಹದ ಕುರುಹುಗಳಿಂದ ಈ ಗುಹೆ ಜೈನ ಧರ್ಮಕ್ಕೆ ಸೇರಿದ್ದು ಎಂಬುದಕ್ಕೆ ಪುಷ್ಟಿ ನೀಡುತ್ತದೆ.

ಬಿಂಬಿಸಾರನನ್ನು ಅವನ ಸ್ವಂತ ಮಗ ಅಜಾತಶತ್ರು ರಾಜ್ಯದ ಆಸೆಯಿಂದ ಬಂಧಿಸಿಟ್ಟಿದ್ದ. ಕೊನೆಗೆ ಇಲ್ಲೇ ಈತ ಮರಣವನ್ನು ಹೊಂದಿದ್ದ. ಆದರೆ, ತನ್ನ ಆಡಳಿತಾವಧಿಯಲ್ಲಿ ಬಿಂಬಿಸಾರನು ತನ್ನ ಚಿನ್ನದ ಖಜಾನೆ ರಕ್ಷಿಸಲು ಈ ಗುಹೆ ನಿರ್ಮಿಸಿದ್ದ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿ ಎರಡು ಗುಹೆಗಳನ್ನು ನಿರ್ಮಿಸಲಾಗಿತ್ತು. ಇದರಲ್ಲಿ ಮೊದಲ ಗುಹೆಯಲ್ಲಿ ಸೈನಿಕರು ಪಹರೆ ಕಾಯುತ್ತಿದ್ದರೆ, ಎರಡನೇ ಗುಹೆಯಲ್ಲಿ ಅಗಾಧ ಚಿನ್ನವನ್ನು ಇದರಲ್ಲಿ ಬಚ್ಚಿಡಲಾಗಿತ್ತು ಎನ್ನಲಾಗಿದೆ.

ಹೀಗಿದೆ ಗುಹೆ :
ಸೋನ್‌ ಭಂಡಾರ್ ಗುಹೆಯೊಳಗೆ ಪ್ರವೇಶಿಸಿದಾಗ 10.4 ಮೀಟರ್ ಉದ್ದ, 5.2 ಮೀಟರ್ ಅಗಲ ಮತ್ತು 1.5 ಮೀಟರ್ ಎತ್ತರದ ಕೋಣೆಯನ್ನು ನೋಡಬಹುದು. ಈ ಕೋಣೆ ನಿಧಿಯನ್ನು ಕಾಪಾಡುವ ಸೈನಿಕರದ್ದಾಗಿತ್ತು. ಈ ಕೋಣೆ ಹಿಂದಿನ ಬಾಗಿಲು ನಿಧಿ ಇರುವ ಕೋಣೆಯನ್ನು ತೆರೆದುಕೊಳ್ಳುತ್ತದೆ. ಆದರೆ ಈ ಮಾರ್ಗದ ಬಾಗಿಲನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿದ್ದು ಇದನ್ನು ಇದುವರೆಗೂ ಯಾರಿಂದಲೂ ತೆರೆಯಲಾಗಲಿಲ್ಲ ಸಾಕಷ್ಟು ಮಂದಿ ಪ್ರಯತ್ನ ಪಟ್ಟರೂ ಈ ಕಲ್ಲನ್ನು ತೆರೆಯಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ಈ ಚಿನ್ನದ ನಿಧಿಗೆ ಪುಷ್ಠಿ ನೀಡುವಂತೆ, ಗುಹೆಯ ಒಂದು ಗೋಡೆಯ ಮೇಲೆ, ದ್ವಾರದಂತಹ ರಚನೆ ಇದೆ. ಅದರ ಪಕ್ಕದಲ್ಲಿಯೇ ಓದಲಾಗದ ಶಾಸನವಿದೆಯಂತೆ. ಇದು ಒಂದು ರೀತಿಯ ರಹಸ್ಯವಾದ ಪದ ಬಳಕೆ ಮಾಡಿರುವ ಶಾಸನ ಎಂದು ಸ್ಥಳೀಯರು ಹೇಳುತ್ತಾರೆ. ಇಂದಿನವರೆಗೂ ಆ ಶಾಸನದಲ್ಲಿರುವ ಪದವನ್ನು ಅರ್ಥ ಮಾಡಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ.

ಈ ಸೋನ್ ಭಂಡಾರ ನಿಧಿಯನ್ನು ಹುಡುಕಲು ನಿರಂತರವಾಗಿ ಪ್ರಯತ್ನಗಳು ಕೂಡಾ ನಡೆಯುತ್ತಿವೆಯಂತೆ. ಅನಾದಿ ಕಾಲದಿಂದಲೂ ಇಲ್ಲಿನ ಗುಹೆಯನ್ನು ಬಗೆದು ಚಿನ್ನದ ಮೂಲವನ್ನು ಹುಡುಕಲು ಹಲವು ತಂಡಗಳು ಯತ್ನಿಸಿ ವಿಫಲವಾಗಿವೆ. ಒಮ್ಮೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳು ಗುಹೆಯ ಗೋಡೆಗಳನ್ನು ಬಲವಾದ ಸ್ಫೋಟಕಗಳಿಂದ ಸ್ಫೋಟಿಸಲು ಪ್ರಯತ್ನಿಸಿ ನಿಧಿಯನ್ನು ಹೊರತೆಗೆಯಲು ಯತ್ನಿಸಿದ್ದರು. ಆದರೆ ಅದೂ ಕೂಡಾ ವಿಫಲವಾಗಿತ್ತಂತೆ ಅಂದಿನಿಂದ ಜನರಿಗೆ ಈ ಗುಹೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗತೊಡಗಿದೆ.

ತಲುಪುವುದು ಹೇಗೆ :
ಸೋನ್‌ ಭಂಡಾರ್ ನೋಡಲು ಪ್ರತಿ ವರ್ಷ ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ರಾಜ್‌ಗಿರ್‌’ ನಿಂದ ಸೋನ್‌ ಭಂಡಾರ್ ಗುಹೆಗಳಿಗೆ ಬಸ್ಸು ಸೇರಿದಂತೆ ಇತರ ಬಾಡಿಗೆ ವಾಹನಗಳೂ ಇಲ್ಲಿ ಲಭ್ಯವಿದೆ ಅಥವಾ ನಿಮ್ಮದೇ ವಾಹನವಿದ್ದರೆ ಗುಹೆಯ ಬಳಿಗೆ ತೆರಳಬಹುದು.

– ಸುಧೀರ್. ಎ

ಟಾಪ್ ನ್ಯೂಸ್

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

WTC Final: ಆಸೀಸ್ ತಂಡ ಈ ಇಬ್ಬರು ಆಟಗಾರರ ಬಗ್ಗೆ ತಲೆಕೆಡೆಸಿಕೊಂಡಿದೆ ಎಂದ ಪಾಂಟಿಂಗ್

ಚಾಮರಾಜನಗರ ತಾಲೂಕಿನಲ್ಲಿ ಸಣ್ಣ ವಿಮಾನ ಪತನ; ತಪ್ಪಿದ ಅನಾಹುತ; ಪೈಲಟ್ ಗಳು ಪಾರು

ಚಾಮರಾಜನಗರ ತಾಲೂಕಿನಲ್ಲಿ ಸಣ್ಣ ವಿಮಾನ ಪತನ; ತಪ್ಪಿದ ಅನಾಹುತ; ಪೈಲಟ್ ಗಳು ಪಾರು

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

Uttarakhand: ಭಾರೀ ಭೂಕುಸಿತಕ್ಕೆ ರಸ್ತೆ ಸಂಪರ್ಕ ಕಡಿತ, 300 ಯಾತ್ರಾರ್ಥಿಗಳ ಪರದಾಟ

TDY-5

BOLLYWOOD: ದೇವಸ್ಥಾನಗಳಿಗೆ ಸಾರಾ ಆಲಿಖಾನ್‌ ಭೇಟಿ; ಟ್ರೋಲ್‌ ಗಳಿಗೆ ಪ್ರತಿಕ್ರಿಯಿಸಿದ ನಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

web-lips

Beauty Tips: ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು….

Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌…

Non-vegetarian Recipes; ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌…

sun-screen-lotion

Health Tips: ಬೇಸಿಗೆಯಲ್ಲಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಈ ಲೋಷನ್ ಬಳಸಿ..

ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?

Fort;ಯಾವ ರಾಜನಿಂದಲೂ ವಶಪಡಿಸಿಕೊಳ್ಳಲು ಸಾಧ್ಯವಾಗದ ಜಂಜೀರಾ ಕೋಟೆ ಬಗ್ಗೆ ಗೊತ್ತಾ?

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು

‘ಮತ್ತದೇ ಬೇಸರ, ಮತ್ತೆ ಸಂಜೆ…’ ಒದ್ದೆ ಮೈದಾನದಲ್ಲಿ ಜಾರಿ ಬಿತ್ತು RCB ಟ್ರೋಫಿ ಕನಸು

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ರಾತ್ರೋರಾತ್ರಿ ಜಮೀನಾದ ರಾಜವಂಶಸ್ಥರ ಕಾಲದ ಕೆರೆ

ರಾತ್ರೋರಾತ್ರಿ ಜಮೀನಾದ ರಾಜವಂಶಸ್ಥರ ಕಾಲದ ಕೆರೆ

ತಂಬಾಕು ವಿರುದ್ಧ ಆದಿವಾಸಿ ಮಕ್ಕಳ ಜಾಗೃತಿ ಕೂಗು

ತಂಬಾಕು ವಿರುದ್ಧ ಆದಿವಾಸಿ ಮಕ್ಕಳ ಜಾಗೃತಿ ಕೂಗು

2-

ಕಡಬ: ವಿದ್ಯುತ್ ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಆಘಾತ; ಮೃತ್ಯು

tdy-11

ಇಂದಿರಾ ಕ್ಯಾಂಟೀನ್‌ ಕಾಯಕಲ್ಪಕ್ಕೆ ಜಿಲ್ಲಾಡಳಿತ ಕ್ರಮ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ

ಕಳಸ: ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್ ನಲ್ಲಿ ಮಲಗಿದ ಸರ್ಕಾರಿ ವೈದ್ಯ