ರುಚಿ, ರುಚಿಯಾದ ಸೋಯಾ ಚಿಲ್ಲಿ…ಸರಳ ವಿಧಾನದ ರೆಸಿಪಿ ನಿಮಗಾಗಿ…


ಶ್ರೀರಾಮ್ ನಾಯಕ್, Sep 30, 2022, 5:40 PM IST

thumbnail web exclusive food

ಇಂದು ಎಲ್ಲರೂ ಆಹಾರದಲ್ಲಿ ವೈವಿಧ್ಯತೆಯನ್ನು ಬಯಸುತ್ತಾರೆ. ಅದರಲ್ಲೂ ನಗರ ಪ್ರದೇಶದಲ್ಲಿರುವವರಂತೂ ಪ್ರತೀ ದಿನ ಅಲ್ಲದಿದ್ದರೂ ವೀಕೆಂಡ್‌ನ‌ಲ್ಲಂತೂ ವೈವಿಧ್ಯಮಯ ಆಹಾರಗಳಿಗೆ ತಮ್ಮ ಆಧ್ಯತೆಯನ್ನು ನೀಡುತ್ತಿದ್ದಾರೆ. ಹಾಗಿದ್ದರೆ ಈ ವೀಕೆಂಡ್‌ಗೆ ಮನೆಯಲ್ಲೇ ಕುಳಿತು ಚೈನೀಸ್‌ ಫುಡ್ ತಿನ್ನಬೇಕು ಎಂಬ ಆಸೆ ನಿಮಗಿದ್ದರೆ ಸೋಯಾ ಚಿಲ್ಲಿ ತಯಾರಿಸಿ ನೋಡಿ, ಇದು ತುಂಬಾ ಸಿಂಪಲ್‌.

ಸಹಜವಾಗಿ ಸೋಯಾಬೀನ್ ಎಲ್ಲರಿಗೂ ಇಷ್ಟವಾಗುತ್ತೆ. ತಿನ್ನಲು ಸ್ವಲ್ಪ ಮಟ್ಟಿಗೆ ಚಿಕನ್ ರೀತಿ ಅನಿಸುತ್ತೆ. ನಾಲಿಗೆಗೂ ಹೆಚ್ಚು ರುಚಿ ಕೊಡುವ ಸೋಯಾಬೀನ್ ನಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬೀನ್ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದೆ.ಇನ್ನು ಸೋಯಾ ಬೀನ್ ನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ.

ಹಾಗಾದರೆ ಇನ್ನೇಕೆ ತಡ ಸ್ವಾದಿಷ್ಟಕರವಾಗಿ “ಸೋಯಾ ಚಿಲ್ಲಿ” ಮಾಡುವ ವಿಧಾನವನ್ನು ಓದಿ… ಮನೆಯಲ್ಲೇ ಇದನ್ನು ಮಾಡಿಕೊಂಡು ಸ್ವಾದಿಷ್ಟವಾಗಿ ಸವಿಯಿರಿ…

ಬೇಕಾಗುವ ಸಾಮಗ್ರಿಗಳು
ಸೋಯಾ ಚಂಕ್ಸ್‌(ಸೋಯಾ ಬೀನ್)- 2ಕಪ್‌, ಮೈದಾ- 3 ಚಮಚ, ಕಾನ್‌ ಫ್ಲೋರ್‌ -2ಚಮಚ, ಕರಿಮೆಣಸಿನ ಪುಡಿ(ಪೆಪ್ಪರ್‌)-1/4 ಟೀಸ್ಪೂನ್‌, ಅಚ್ಚ ಖಾರದ ಪುಡಿ-2ಚಮಚ, ಎಣ್ಣೆ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ-2ಚಮಚ, ಸಣ್ಣಗೆ ಹೆಚ್ಚಿದ ಶುಂಠಿ-ಸ್ವಲ್ಪ,ಹಸಿ ಮೆಣಸು-2, ಈರುಳ್ಳಿ -2, ದೊಣ್ಣೆ ಮೆಣಸು(ಕ್ಯಾಪ್ಸಿಕಂ )-ಸಣ್ಣದು 1, ಸೋಯಾ ಸಾಸ್‌-2ಚಮಚ, ಟೊಮೆಟೋ ಸಾಸ್‌-3ಚಮಚ, ರೆಡ್‌ ಚಿಲ್ಲಿ ಸಾಸ್‌-2ಚಮಚ, ವಿನೆಗರ್‌ ಸ್ವಲ್ಪ, ಸ್ಪ್ರಿಂಗ್‌ ಈರುಳ್ಳಿ (ಅಲಂಕಾರಕ್ಕೆ), ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
– ಮೊದಲಿಗೆ, ಒಂದು ಪಾತ್ರೆಗೆ 3 ಕಪ್‌ ನೀರನ್ನು ಹಾಕಿ ಅದಕ್ಕೆ ಅರ್ಧ ಟೀಸ್ಪೂನ್‌ ಉಪ್ಪು ಸೇರಿಸಿರಿ.
– ಈಗ ಅದಕ್ಕೆ 2 ಕಪ್‌ ಸೋಯಾ ಚಂಕ್ಸ್‌(ಸೋಯಾ ಬೀನ್) ಹಾಕಿ ಸರಿಯಾಗಿ ಮಿಕ್ಸ್‌ ಮಾಡಿರಿ.
– ಸುಮಾರು 3ರಿಂದ 5ನಿಮಿಷಗಳ ಕಾಲ ಬೇಯಿಸಿರಿ.
– ನಂತರ ಅದರಲ್ಲಿದ್ದ ನೀರನ್ನು ತೆಗೆದು ಸರಿಯಾಗಿ ಹಿಂಡಿ ಒಂದು ಪಾತ್ರೆಗೆ ಹಾಕಿರಿ.
– ತದನಂತರ ಅದಕ್ಕೆ ಮೈದಾ, ಕಾನ್‌ ಫ್ಲೋರ್‌, ಕರಿಮೆಣಸಿನ ಪುಡಿ, ಅಚ್ಚ ಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ .
– ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಕಾದನಂತರ ಮಾಡಿಟ್ಟ ಸೋಯಾ ಚಂಕ್ಸ್‌ ಗಳನ್ನು ಹಾಕಿ ಸರಿಯಾಗಿ ಫ್ರೈ ಮಾಡಿ.
– ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಬಿಸಿಯಾದ ಮೇಲೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಈರುಳ್ಳಿ, ದೊಣ್ಣೆ ಮೆಣಸು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಹುರಿಯಿರಿ.
– ತದನಂತರ ಪೆಪ್ಪರ್‌ ಪುಡಿ,ಸೋಯಾ ಸಾಸ್‌, ಟೊಮೆಟೋ ಸಾಸ್‌, ರೆಡ್‌ ಚಿಲ್ಲಿ ಸಾಸ್‌ ಮತ್ತು ವಿನೆಗರ್‌ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
-ನಂತರ ಕಾಯಿಸಿಟ್ಟಿದ್ದ ಸೋಯಾ ಚಂಕ್ಸ್‌ ಹಾಕಿ ಪುನಃ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿರಿ.
– ಅಂತಿಮವಾಗಿ ಹೆಚ್ಚಿದ ಸ್ಪ್ರಿಂಗ್‌ ಈರುಳ್ಳಿಯೊಂದಿಗೆ ಅಲಂಕರಿಸಿರಿ.

ಬಿಸಿ-ಬಿಸಿಯಾದ ಸೋಯಾ ಚಿಲ್ಲಿ ಸವಿಯಲು ಸಿದ್ಧ.

ಟಾಪ್ ನ್ಯೂಸ್

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

3

ಅಂಜಿನಾದ್ರಿ ಬೆಟ್ಟದಲ್ಲಿ ಭಕ್ತ ಸಾಗರ; ಹನುಮ ಮಾಲೆ ವಿಸರ್ಜನೆಗೆ ಬೆಟ್ಟ ಹತ್ತಿದ ಮಾಲಾಧಾರಿಗಳು

ಮಂಗಳೂರು ಪ್ರಕರಣ: ಕೊಡಗಿನ ಹೋಂಸ್ಟೇಯಲ್ಲಿ ಪೊಲೀಸರಿಂದ ಮಾಹಿತಿ ಸಂಗ್ರಹ

ಮಂಗಳೂರು ಪ್ರಕರಣ: ಕೊಡಗಿನ ಹೋಂಸ್ಟೇಯಲ್ಲಿ ಪೊಲೀಸರಿಂದ ಮಾಹಿತಿ ಸಂಗ್ರಹ

ಮನೆ ಮನೆಗೆ ಗಂಗೆ: ಆಮೆಗತಿಯ ಕಾಮಗಾರಿ

ಮನೆ ಮನೆಗೆ ಗಂಗೆ: ಆಮೆಗತಿಯ ಕಾಮಗಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumbnail thomas edison alva

ವಿದ್ಯುತ್‌ ಬಲ್ಬ್ ಸಂಶೋಧಕ ಥಾಮಸ್ ಅಲ್ವಾ ಎಡಿಸನ್ ಮತ್ತು ವಿವಾದಗಳು !

ಕಬ್ಬಿನಾಲೆಯ ಪ್ರಕೃತಿ ಸೌಂದರ್ಯಯಕ್ಕೆ ಮತ್ತೊಂದು ಹೆಸರೇ ‘ಮತ್ತಾವು ಜಲಪಾತ…

ಕಬ್ಬಿನಾಲೆಯ ಪ್ರಕೃತಿ ಸೌಂದರ್ಯಯಕ್ಕೆ ಮತ್ತೊಂದು ಹೆಸರೇ ‘ಮತ್ತಾವು ಜಲಪಾತ’…

web exclusive food geerice

ವೀಕೆಂಡ್ ನಲ್ಲಿ ಮನೆಯಲ್ಲೇ ಘಮ ಘಮಿಸುವ ರುಚಿಯಾದ ಗೀರೈಸ್ ಮಾಡಿ ಸವಿಯಿರಿ…

story of one pf the great footballer Zinedine zidane

ಕೋಪದಿಂದಾಗಿ ವಿಶ್ವಕಪ್ ಕಳೆದುಕೊಂಡ; ಜಿದಾನೆ ಎಂಬ ದುರಂತ ನಾಯಕ

1 weqwew

ಯಕ್ಷರಂಗದ ಸು’ಪ್ರಾಸ’ಸಿದ್ದ ರಾಜಕಾರಣಿ ಕುಂಬಳೆಯ ರಾಯರು

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ

5

ಅಂಜಿನಾದ್ರಿ ಬೆಟ್ಟದಲ್ಲಿ ಸಾವರ್ಕರ್ ಫೋಟೋ ಹಿಡಿದ ಭಕ್ತ

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ವಿಜಯ್‌ ಸೇತುಪತಿ ಸಿನಿಮಾ ಚಿತ್ರೀಕರಣ ವೇಳೆ ಅವಘಡ: 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಮೃತ್ಯು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಪಡುಬಿದ್ರಿ: ವ್ಯಕ್ತಿಯ ರಕ್ಷಿಸಿ ಮಗನಿಗೆ ಒಪ್ಪಿಸಿದ ಪೊಲೀಸರು

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

ಮಂಗಳೂರಿನಲ್ಲೂ ಪಿಜಿ ನಿಯಮ ಬಿಗಿ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.