World Cup Final Countdown: ಹೊಮ್ಮಲಿ ಗೆಲುವಿನ ಆಟ; ಒಲಿಯಲಿ 3ನೇ ಮುಕುಟ

ದ್ರಾವಿಡ್‌ ಅವರಿಗಾಗಿ ಈ ವಿಶ್ವಕಪ್‌ ಗೆಲ್ಲಬೇಕು: ರೋಹಿತ್‌ ಶರ್ಮ

Team Udayavani, Nov 19, 2023, 6:00 AM IST

1-sdads

ಅಹ್ಮದಾಬಾದ್‌: ಟಿಕ್‌ ಟಿಕ್‌ ಟಿಕ್‌…. ಕ್ರಿಕೆಟ್‌ ಗಡಿಯಾರ ಬಡಿಯು ತ್ತಿದೆ. ಭಾರತೀಯರು ಹಾಗೂ ಕ್ರಿಕೆಟ್‌ ಜಗತ್ತು ಅತ್ಯಂತ ಕುತೂಹಲದಿಂದ, ತುದಿ ಗಾಲಲ್ಲಿ ನಿಂತು ನಿರೀಕ್ಷಿಸುತ್ತಿದ್ದ ಸಮಯ ಎದುರಾಗಿದೆ. ಕ್ರಿಕೆಟಿನ ಪವರ್‌ಹೌಸ್‌ ಹಾಗೂ “ಶಕ್ತಿಮಾನ್‌’ ತಂಡಗಳಾದ ಭಾರತ ಮತ್ತು ಆಸ್ಟ್ರೇಲಿಯ 13ನೇ ವಿಶ್ವಕಪ್‌ ಫೈನಲ್‌ ಕದನಕ್ಕೆ ಸಜ್ಜಾಗಿವೆ. ರವಿವಾರ ಅಪರಾಹ್ನ ತಮ್ಮ ಕ್ರಿಕೆಟ್‌ ಸೇನೆಯನ್ನು ಅಹ್ಮದಾಬಾದ್‌ನ ದೈತ್ಯ ಕ್ರೀಡಾಂಗಣದಲ್ಲಿ ಕದನಕ್ಕೆ ಇಳಿಸುವುದರೊಂದಿಗೆ ವಿಶ್ವ ಕ್ರಿಕೆಟಿನ ಜೋಶ್‌, ರೋಮಾಂಚನ, ಆವೇಗ-ಆವೇಶ, ಲಕ್ಷ ವೀಕ್ಷಕರ ಭೋರ್ಗ ರೆತವೆಲ್ಲ ಕ್ರಿಕೆಟ್‌ ನಭೋಮಂಡಲದಲ್ಲಿ ಮಾರ್ದನಿಸಲಿದೆ.

ಎರಡು ಕೂಡ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿ ಫೈನಲ್‌ಗೆ ಮುನ್ನುಗ್ಗಿ ಬಂದ ಬಲಿಷ್ಠ ಪಡೆಗಳು. ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತಿನಂತೆ ಟೀಮ್‌ ಇಂಡಿಯಾ ಆಡಿದ್ದೆಲ್ಲ ಗೆಲುವಾಗಿ ಪರಿವರ್ತನೆಗೊಂಡಿದೆ. ಹತ್ತಕ್ಕೆ ಹತ್ತೂ ಜಯಭೇರಿ. ಅಜೇಯ ಓಟ. ಆಸ್ಟ್ರೇಲಿಯ ಮೊದಲೆರಡು ಪಂದ್ಯಗಳನ್ನು ಸೋತ ಬಳಿಕ ಹಿಂದಿರುಗಿ ನೋಡಿಲ್ಲ. ಆಡು ವುದೇ ಗೆಲ್ಲುವುದಕ್ಕಾಗಿ ಎಂಬುದು ಎರಡೂ ತಂಡಗಳ ಸಿದ್ಧಾಂತ. ಹೀಗಾಗಿ ಇದೊಂದು ಸಾಟಿಯಿಲ್ಲದ ಫೈನಲ್‌ ಕಾಳಗವಾಗಿ ಕ್ರಿಕೆಟ್‌ ಇತಿಹಾಸದಲ್ಲಿ ಶಾಶ್ವತವಾಗಿ ದಾಖ ಲಾಗುವುದರಲ್ಲಿ ಅನುಮಾನವಿಲ್ಲ.

ಬೆಟ್ಟದಷ್ಟು ನಿರೀಕ್ಷೆ
ಎರಡೂ ತಂಡಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆ. ರೋಹಿತ್‌ ಪಡೆಯ 11 ಆಟಗಾರರ ಮೇಲೆ 140 ಕೋಟಿ ಭಾರತೀಯರ ಹರಕೆ, ಹಾರೈಕೆ ಇದೆ. ಭಾರತದ 2ನೇ ಕಪ್‌ ಗೆಲುವಿಗೆ 20 ವರ್ಷಗಳ ಹಿಂದೆ “ವಾಂಡರರ್ ಸ್ಟೇಡಿಯಂ’ನಲ್ಲಿ ಅಡ್ಡಗಾಲಿಕ್ಕಿದ ಆಸ್ಟ್ರೇಲಿಯವನ್ನು ಈ ಬಾರಿ ಮಣಿಸಲೇಬೇಕು ಎಂಬ ಹಕ್ಕೊತ್ತಾಯವೂ ಇದೆ. ಟಿ20 ಲೀಗ್‌ಗಳಿಂದ ಏಕದಿನ ಕ್ರಿಕೆಟ್‌ ಕೂಡ ಚಾರ್ಮ್ ಕಳೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಗೆಲುವು ಖಂಡಿತವಾಗಿಯೂ ಜಾಗತಿಕ ಕ್ರಿಕೆಟ್‌ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂಬುದು ಸಾರ್ವತ್ರಿಕ ಅನಿಸಿಕೆ. ಈ ಕಾರಣಕ್ಕಾಗಿಯೂ ಟೀಮ್‌ ಇಂಡಿಯಾ ವಿಶ್ವಕಪ್‌ ಗೆಲ್ಲಬೇಕು ಮತ್ತು ಖಂಡಿತ ಗೆಲ್ಲಲಿದೆ; ಟ್ರೋಫಿಯ ಮೇಲೆ ಭಾರತದ ಹೆಸರೇ ಬರೆಯಲ್ಪಟ್ಟಿದೆ ಎಂಬುದು ಎಲ್ಲರ ದೃಢ ಅಭಿಪ್ರಾಯ.

ಲೀಗ್‌ನಲ್ಲಿ ಆಸ್ಟ್ರೇಲಿಯವನ್ನು ಮಣಿಸುವ ಮೂಲಕವೇ ತನ್ನ ಅಭಿಯಾನ ಆರಂಭಿಸಿರುವ ಭಾರತ, ಫೈನಲ್‌ನಲ್ಲಿ ಆಸೀಸ್‌ಗೆ ಇನ್ನೊಂದು ಆಘಾತ ನೀಡಿದರೆ ಅದೊಂದು ಪರಿಪೂರ್ಣ ಆವೃತ್ತವಾಗಲಿದೆ. ಚೆನ್ನೈ ಚೇಸಿಂಗ್‌ ವೇಳೆ 2 ರನ್ನಿಗೆ 3 ವಿಕೆಟ್‌ ಕಳೆದುಕೊಂಡೂ ಗೆದ್ದು ಬಂದದ್ದಿದೆಯಲ್ಲ, ಈ ಸ್ಫೂರ್ತಿಯೇ ಭಾರತವನ್ನು ಪ್ರಶಸ್ತಿ ಸುತ್ತಿನ ತನಕ ಕರೆದು ತಂದಿರುವುದು!

ಆಸ್ಟ್ರೇಲಿಯದ್ದು ಪ್ರತ್ಯೇಕ ಸಿದ್ಧಾಂತ. ಇವರನ್ನು ಸೆಮಿಫೈನಲ್‌ನಲ್ಲೇ ಹೊಡೆದುರು ಳಿಸಿದರೋ ಬಚಾವ್‌, ಫೈನಲ್‌ಗೆ ಲಗ್ಗೆ ಹಾಕಿದರೆ ಯಾರನ್ನೂ ಬಿಡುವುದಿಲ್ಲ ಎಂಬುದಕ್ಕೆ ನಿದರ್ಶನಗಳು ಹಲವು. ದೊಡ್ಡ ಕೂಟಗಳಲ್ಲಿ ಗೆಲ್ಲುವ ಕಲೆ ಇವರಿಗೆ ಕರಗತ. ಆದರೆ ನೆನಪಿರಲಿ, ಈ ಬಾರಿ ಕಾಂಗರೂ ಸವಾಲು ಖಂಡಿತ ಸುಲಭದ್ದಲ್ಲ.

ಲ್ಲ ವಿಭಾಗಗಳಲ್ಲೂ ಬಲಿಷ್ಠ
ಭಾರತ ಎರಡೂ ವಿಭಾಗಗಳಲ್ಲಿ ಹೆಚ್ಚು ಬಲಿಷ್ಠ. ಬ್ಯಾಟಿಂಗ್‌ನಲ್ಲಿ ಸ್ವತಃ ನಾಯಕ ರೋಹಿತ್‌ ಶರ್ಮ ಮುಂಚೂಣಿಯಲ್ಲಿ ನಿಂತು ಇಡೀ ಸರದಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಪವರ್‌ ಪ್ಲೇಯಲ್ಲಿ ಭಾರತದ ಬ್ಯಾಟಿಂಗ್‌ ಪವರ್‌ ಏನೆಂಬುದನ್ನು ತೋರ್ಪಡಿಸುತ್ತ ಬಂದಿದ್ದಾರೆ. ರೋಹಿತ್‌ ಗಳಿಕೆ 550 ರನ್‌.

ಡೆಂಗ್ಯೂದಿಂದ ಚೇತರಿಸಿಕೊಂಡ ಬಳಿಕ ಶುಭಮನ್‌ ಗಿಲ್‌ ಕಪ್ತಾನನಿಗೆ ತಕ್ಕ ಜತೆಗಾರನಾಗಿ ಕಾಣಿಸಿಕೊಂಡಿದ್ದಾರೆ. ಸರಿಯಾದ ಹೊತ್ತಿನಲ್ಲಿ “ಬ್ಯಾಟಿಂಗ್‌ ಪೀಕ್‌’ ತಲುಪಿದ್ದಾರೆ.

ವಿರಾಟ್‌ ಕೊಹ್ಲಿ ಆಟದ ಬಗ್ಗೆ ದೂಸ್ರಾ ಮಾತೇ ಇಲ್ಲ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿಶ್ವಕಪ್‌ನಲ್ಲಿ ಇಷ್ಟೊಂದು ರನ್‌ ಪ್ರವಾಹ (711) ಹರಿಸಿದ ಆಟಗಾರನನ್ನು ಈ ಜಗತ್ತೇ ಕಂಡಿಲ್ಲ!

ಒಂದೆರಡು ವೈಫ‌ಲ್ಯಗಳ ಬಳಿಕ ಶ್ರೇಯಸ್‌ ಅಯ್ಯರ್‌ ಹೆಚ್ಚು ಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುತ್ತಿರುವುದು ಶುಭ ಸೂಚನೆ. ಶತಕದ ಹ್ಯಾಟ್ರಿಕ್‌ ಇವರಿಗೊಲಿದರೂ ಅಚ್ಚರಿ ಇಲ್ಲ.
ಕೆ. ಎಲ್‌. ರಾಹುಲ್‌ ಅವರದು ಕೀಪಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲೂ ಬಹಳ ಜವಾಬ್ದಾರಿಯುತ ಪ್ರದರ್ಶನ. ಮಧ್ಯಮ ಕ್ರಮಾಂಕದ ನಂಬಿಗಸ್ಥ ಆಟಗಾರ. ಸೂರ್ಯಕುಮಾರ್‌ ಯಾದವ್‌ ಮಾತ್ರ ಅವಕಾಶವನ್ನು ಬಳಸಿಕೊಂಡಿಲ್ಲ.

“ಅನ್ರೋಹಾ ಎಕ್ಸ್‌ಪ್ರೆಸ್‌’ ಶಮಿ

ಆರಂಭದಲ್ಲಿ ಮೂಲೆಗುಂಪಾಗಿದ್ದ ಮೊಹಮ್ಮದ್‌ ಶಮಿ ಈಗ ಭಾರತದ ಬೌಲಿಂಗ್‌ ಹೀರೋ, ಮ್ಯಾಚ್‌ ವಿನ್ನರ್‌. “ಅನ್ರೋಹಾ ಎಕ್ಸ್‌ಪ್ರೆಸ್‌’ ಸಾಹಸಕ್ಕೆ ನ್ಯೂಜಿಲ್ಯಾಂಡ್‌ ಎದುರಿನ ಒಂದು ಪ್ರದರ್ಶನ ಸಾಕು. 23 ವಿಕೆಟ್‌ ಬೇಟೆಯಾಡಿರುವ ಶಮಿ ಎದುರಾಳಿ ಗಳ ಪಾಲಿಗೆ ಭಾರೀ ಅಪಾಯಕಾರಿ. ಬುಮ್ರಾ, ಸಿರಾಜ್‌, ಕುಲದೀಪ್‌ ಮತ್ತು ಆಲ್‌ರೌಂಡರ್‌ ಜಡೇಜ ಅವರನ್ನೊಳಗೊಂಡ ಭಾರತದ ಬೌಲಿಂಗ್‌ ವಿಭಾಗ ಭಾರೀ ಹರಿತ. ಒಂದೇ ಮಾತಲ್ಲಿ ಹೇಳಬೇಕೆಂದರೆ, ಇಡೀ ಭಾರತ ತಂಡವೇ ಪ್ರಚಂಡ ಹಾಗೂ ಅಸಾಮಾನ್ಯ ಫಾರ್ಮ್ ಹೊಂದಿದ ಅತ್ಯಪರೂಪದ ನಿದರ್ಶನ ಇದು. ಅಂದಮೇಲೆ ವಿಶ್ವಕಪ್‌ ಗೆಲ್ಲಲೇನಡ್ಡಿ?!

ನಮ್ಮ ಯಶಸ್ಸಿನಲ್ಲಿ ಕೋಚ್‌ ರಾಹುಲ್‌ ದ್ರಾವಿಡ್‌ ಪಾತ್ರ ದೊಡ್ಡದು. ಅವರಿಗಾಗಿ ಈ ವಿಶ್ವಕಪ್‌ ಗೆಲ್ಲಬೇಕು”
– ರೋಹಿತ್‌ ಶರ್ಮ
ಭೋರ್ಗರೆಯುತ್ತಿರುವ ಅಹ್ಮದಾಬಾದ್‌ ಕ್ರೀಡಾಂಗಣವನ್ನು ನಿಶ್ಯಬ್ದಗೊಳಿಸುವುದೇ ನಮ್ಮ ಗುರಿ”
– ಪ್ಯಾಟ್‌ ಕಮಿನ್ಸ್‌

ಆಸ್ಟ್ರೇಲಿಯ ಸಶಕ್ತ ತಂಡ
ಫೈನಲ್‌ ಪಂದ್ಯಗಳನ್ನು ಹೇಗೆ ಗೆಲ್ಲಬೇಕು, ಏನೆಲ್ಲ ರಣತಂತ್ರವನ್ನು ರೂಪಿಸಬೇಕು, ಎದುರಾಳಿಯ ಯಾವ ಆಟಗಾರನನ್ನು ಟಾರ್ಗೆಟ್‌ ಮಾಡಬೇಕು ಎಂಬೆಲ್ಲ ಗೆಲುವಿನ ಸೂತ್ರಗಳನ್ನು ಆಸ್ಟ್ರೇಲಿಯಕ್ಕಿಂತ ಚೆನ್ನಾಗಿ ಬಲ್ಲ ಇನ್ನೊಂದು ತಂಡ ಇಲ್ಲ ಎಂದೇ ಹೇಳಬೇಕು.

ಕಮಿನ್ಸ್‌ ಪಡೆ ಎಡವಿದ್ದು ಎರಡೇ ಕಡೆ. ಆರಂಭಿಕ ಪಂದ್ಯದಲ್ಲಿ ಭಾರತ 3 ವಿಕೆಟ್‌ಗಳನ್ನು 2 ರನ್ನಿಗೆ ಉದುರಿಸಿಯೂ ಗೆಲ್ಲಲು ವಿಫ‌ಲವಾಯಿತು. ಹಾಗೆಯೇ ದಕ್ಷಿಣ ಆಫ್ರಿಕಾಕ್ಕೆ 311 ರನ್‌ ಬಿಟ್ಟುಕೊಟ್ಟು 177ಕ್ಕೆ ಮಗುಚಿತು.
ಮುಂದಿನದ್ದೆಲ್ಲ ಗೆಲುವಿನ ಪಯಣ. ಎರಡು ಅಮೋಘ ಗೆಲುವಿನ ಬಗ್ಗೆ ಹೇಳಬೇಕೆಂದರೆ ಅಫ್ಘಾನಿಸ್ಥಾನ ಮತ್ತು ನ್ಯೂಜಿಲ್ಯಾಂಡ್‌ ಎದುರಿನ ಸೆಮಿಫೈನಲ್‌ ಪಂದ್ಯವನ್ನು ಉಲ್ಲೇಖೀಸಬಹುದು. ಅಫ್ಘಾನ್‌ ವಿರುದ್ಧ 91ಕ್ಕೆ 7 ವಿಕೆಟ್‌ ಉದು ರಿಸಿಕೊಂಡೂ ಮತ್ತೆ ಹಾನಿ ಮಾಡಿಕೊಳ್ಳದೆ 293ರ ತನಕ ಸಾಗಿದ್ದು ಬಣ್ಣನೆಗೂ ಮೀರಿದ್ದು. ಗ್ಲೆನ್‌ ಮ್ಯಾಕ್ಸ್‌ವೆಲ್‌ ವಿಶ್ವಕಪ್‌ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟದ ಮೂಲಕ ಹೀರೋ ಎನಿಸಿದರು.
ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹರಿಣಗಳನ್ನು 212ಕ್ಕೆ ತಡೆದು ನಿಲ್ಲಿಸಿದ ಬಳಿಕ ಬ್ಯಾಟಿಂಗ್‌ ಕುಸಿತ ಅನುಭವಿಸಿದರೂ ಗೆಲುವಿಗೇನೂ ಅಡ್ಡಿ ಆಗಲಿಲ್ಲ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌.

ಆಸ್ಟ್ರೇಲಿಯ: ಡೇವಿಡ್‌ ವಾರ್ನರ್‌, ಟ್ರ್ಯಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌, ಸ್ಟೀವನ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೋಶ್‌ ಇಂಗ್ಲಿಸ್‌, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌ (ನಾಯಕ), ಆ್ಯಡಂ ಝಂಪ, ಜೋಶ್‌ ಹೇಝಲ್‌ವುಡ್‌.

ಭಾರತ-ಪಾಕ್‌ ಪಂದ್ಯದ ಪಿಚ್‌
ಫೈನಲ್‌ ಮುಖಾಮುಖೀ ಭಾರತ-ಪಾಕಿಸ್ಥಾನ ನಡುವಿನ ಲೀಗ್‌ ಪಂದ್ಯಕ್ಕೆ ಬಳಸಿಕೊಳ್ಳಲಾಗಿದ್ದ ಪಿಚ್‌ ಮೇಲೆ ನಡೆಯು ವುದು ಬಹುತೇಕ ಖಾತ್ರಿಯಾಗಿದೆ. ಅಂದಮಾತ್ರಕ್ಕೆ ಇದು ಲೋ ಸ್ಕೋರ್‌ ಮ್ಯಾಚ್‌ ಆಗಲಿದೆ ಎಂಬ ಆತಂಕ ಬೇಡ.
ಅ. 14ರ ಈ ಮುಖಾಮುಖೀಯಲ್ಲಿ ಪಾಕಿಸ್ಥಾನ 42.5 ಓವರ್‌ಗಳಲ್ಲಿ 191ಕ್ಕೆ ಕುಸಿದಿತ್ತು. ಭಾರತ 30.3 ಓವರ್‌ಗಳಲ್ಲಿ 3 ವಿಕೆಟಿಗೆ 192 ರನ್‌ ಬಾರಿಸಿ ಜಯಭೇರಿ ಮೊಳಗಿಸಿತ್ತು. ಸಾಂ ಕ ಬೌಲಿಂಗ್‌ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಕಾದಿವೆ ದಾಖಲೆಗಳು
· ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್‌ ಪೂರ್ತಿಗೊಳಿಸಲು ಜಸ್‌ಪ್ರೀತ್‌ ಬುಮ್ರಾಗೆ ಇನ್ನೊಂದು ವಿಕೆಟ್‌ ಬೇಕಿದೆ. ಹಾಗೆಯೇ ಏಕದಿನದಲ್ಲಿ 150 ವಿಕೆಟ್‌ ಪೂರ್ತಿಗೊಳಿಸಲು ಇನ್ನು 3 ವಿಕೆಟ್‌ ಉರುಳಿಸಬೇಕಿದೆ.
· ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 450 ವಿಕೆಟ್‌ ಪೂರೈಸಲು ಮೊಹಮ್ಮದ್‌ ಶಮಿಗೆ ಇನ್ನು 3 ವಿಕೆಟ್‌ ಅಗತ್ಯವಿದೆ. ಹಾಗೆಯೇ ಏಕದಿನದಲ್ಲಿ 200 ವಿಕೆಟ್‌ ಕ್ಲಬ್‌ ಸೇರಲು 6 ವಿಕೆಟ್‌ ಬೇಕಿದೆ.
· ಇನ್ನೊಂದೇ ಬೌಂಡರಿ ಬಾರಿಸಿದರೆ ರವೀಂದ್ರ ಜಡೇಜ ಏಕದಿನದಲ್ಲಿ 200 ಬೌಂಡರಿ ಪೂರ್ತಿಗೊಳಿಸಲಿದ್ದಾರೆ.
· ಡೇವಿಡ್‌ ವಾರ್ನರ್‌ಗೆ ಏಕದಿನದಲ್ಲಿ 7 ಸಾವಿರ ರನ್‌ ಗಡಿ ತಲುಪಲು ಇನ್ನು 75 ರನ್‌ ಬೇಕಾಗಿದೆ.
· ಏಕದಿನದಲ್ಲಿ 1,300 ಬೌಂಡರಿ ಪೂರ್ತಿಗೊಳಿಸಲು ವಿರಾಟ್‌ ಕೊಹ್ಲಿಗೆ 10 ಬೌಂಡರಿಗಳ ಅಗತ್ಯವಿದೆ.
· ಟ್ರ್ಯಾವಿಸ್‌ ಹೆಡ್‌ ಇನ್ನೊಂದೇ ಒಂದು ಸಿಕ್ಸರ್‌ ಬಾರಿಸಿದರೆ ಏಕದಿನದಲ್ಲಿ 50 ಸಿಕ್ಸರ್‌ ಪೂರ್ತಿಗೊಳಿಸಿದಂತಾಗುತ್ತದೆ. ಹಾಗೆಯೇ ಇನ್ನೊಂದು ಬೌಂಡರಿ ಬೀಸಿದರೆ ಏಕದಿನದಲ್ಲಿ 250 ಬೌಂಡರಿ ಪೂರ್ತಿಗೊಳಿಸಲಿದ್ದಾರೆ.
· ಗ್ಲೆನ್‌ ಮ್ಯಾಕ್ಸ್‌ವೆಲ್‌ ಏಕದಿನದಲ್ಲಿ 4 ಸಾವಿರ ರನ್‌ ಪೂರ್ತಿಗೊಳಿಸಲು ಇನ್ನು 107 ರನ್‌ ಮಾಡಬೇಕಿದೆ.
· ವಿರಾಟ್‌ ಕೊಹ್ಲಿ ಬರೀ 3 ರನ್‌ ಮಾಡಿದರೆ ವಿಶ್ವಕಪ್‌ನಲ್ಲಿ 2ನೇ ಅತ್ಯಧಿಕ ರನ್‌ ಬಾರಿಸಿದ ರಿಕಿ ಪಾಂಟಿಂಗ್‌ ದಾಖಲೆಯನ್ನು (1,743) ಮೀರಿ ನಿಲ್ಲಲಿದ್ದಾರೆ.
· ರೋಹಿತ್‌ ಶರ್ಮ ಏಕದಿನದಲ್ಲಿ ಸಾವಿರ ಬೌಂಡರಿಗಳ ಗಡಿಯಲ್ಲಿದ್ದಾರೆ. ಇದಕ್ಕೆ ಬೇಕಿರುವುದು 11 ಬೌಂಡರಿ.

ಅಹ್ಮದಾಬಾದ್‌ ಅಂಕಿಅಂಶ
ಆಡಲಾದ ಪಂದ್ಯ 30
ಬ್ಯಾಟಿಂಗ್‌ ಫ‌ಸ್ಟ್‌  ಜಯ 15
ಚೇಸಿಂಗ್‌ ಜಯ 15
ಮೊದಲ ಇನ್ನಿಂಗ್ಸ್‌ ಸರಾಸರಿ 243
ಮೊದಲ ಇನ್ನಿಂಗ್ಸ್‌ ಜಯದ ಸರಾಸರಿ 253
ಸರ್ವಾಧಿಕ ಮೊದಲ ಇನ್ನಿಂಗ್ಸ್‌ ಮೊತ್ತ 365
ಸರ್ವಾಧಿಕ ರನ್‌ ಚೇಸ್‌ 325

ವಿಶ್ವಕಪ್‌ ಮುಖಾಮುಖಿ
 ಪಂದ್ಯ: 13
ಭಾರತ ಜಯ: 05
 ಆಸ್ಟ್ರೇಲಿಯ ಜಯ: 08
ಲೀಗ್‌ ಪಂದ್ಯದ ಫ‌ಲಿತಾಂಶ
ಭಾರತಕ್ಕೆ 6 ವಿಕೆಟ್‌ ಜಯ

2003 2023 ಫೈನಲ್‌ ಸಾಮ್ಯತೆ

ಭಾರತ-ಆಸ್ಟ್ರೇಲಿಯ 2003ರ ಬಳಿಕ ಮೊದಲ ಸಲ ಫೈನಲ್‌ನಲ್ಲಿ ಮುಖಾಮುಖೀ ಆಗುತ್ತಿವೆ. ಅಂದಿನ ಫೈನಲ್‌ಗ‌ೂ ಇಂದಿನ ಪ್ರಶಸ್ತಿ ಹಣಾಹಣಿಗೂ ಸಾಕಷ್ಟು ಸಾಮ್ಯತೆಗಳನ್ನು ಗುರುತಿಸಬಹುದು.
· 2003ರಲ್ಲಿ ಆಸ್ಟ್ರೇಲಿಯ ಸತತ 10 ಪಂದ್ಯಗಳನ್ನು ಗೆದ್ದು 3ನೇ ವಿಶ್ವಕಪ್‌ಗಾಗಿ ಸ್ಪರ್ಧೆಗೆ ಇಳಿದಿತ್ತು. ಇದಕ್ಕೂ ಮುನ್ನ ಆಸೀಸ್‌ 1987 ಮತ್ತು 1999ರಲ್ಲಿ ಚಾಂಪಿಯನ್‌ ಆಗಿತ್ತು. ಈ ಬಾರಿ ಭಾರತ ಕೂಡ ಸತತ 10 ಪಂದ್ಯಗಳನ್ನು ಗೆದ್ದಿದೆ. 3ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಭಾರತ 1983 ಮತ್ತು 2011ರಲ್ಲಿ ಚಾಂಪಿಯನ್‌ ಆಗಿತ್ತು.
· 2003ರ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯ 9 ವಿಕೆಟ್‌ಗಳಿಂದ ಭಾರತವನ್ನು ಮಣಿಸಿತ್ತು. ಬಳಿಕ ಫೈನಲ್‌ನಲ್ಲೂ 125 ರನ್ನುಗಳಿಂದ ಗೆದ್ದು ಬಂದಿತು. ಈ ಬಾರಿ ಭಾರತ 6 ವಿಕೆಟ್‌ಗಳಿಂದ ಆಸ್ಟ್ರೇಲಿಯವನ್ನು ಪರಾಭವಗೊಳಿಸಿದೆ. ಈ ಸಾಧನೆ ಫೈನಲ್‌ನಲ್ಲೂ ಪುನರಾವರ್ತನೆಗೊಂಡೀತೇ ಎಂಬುದೊಂದು ನಿರೀಕ್ಷೆ.
· ಈ ಸಲ ಆಸ್ಟ್ರೇಲಿಯ 2 ಸೋಲುಗಳ ಬಳಿಕ ಸತತ 8 ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿದೆ. ಅಂದು ಭಾರತ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ಗೆ ಸೋಲುಣಿಸಿ, ಆಸ್ಟ್ರೇಲಿಯಕ್ಕೆ ಶರಣಾದ ಬಳಿಕ ಸತತ 8 ಪಂದ್ಯಗಳನ್ನು ಜಯಿಸಿ ಪ್ರಶಸ್ತಿ ಸುತ್ತಿಗೆ ಬಂದಿತ್ತು.
· ವಿಶ್ವಕಪ್‌ ಟೂರ್ನಿಯೊಂದರಲ್ಲಿ ಕೇವಲ 2 ತಂಡಗಳು ಸತತ 10 ಪಂದ್ಯಗಳನ್ನು ಜಯಿಸಿವೆ. 2003ರಲ್ಲಿ (ಹಾಗೂ 2007ರಲ್ಲಿ) ಆಸ್ಟ್ರೇಲಿಯ ಹಾಗೂ ಈ ಬಾರಿ ಭಾರತದಿಂದ ಈ ಸಾಧನೆ ದಾಖಲಾಗಿದೆ.
· ತಂಡದಲ್ಲಿ ಸಮತೋಲನ ಸಾಧಿಸುವ ಸಲುವಾಗಿ 2003ರಲ್ಲಿ ಪಾರ್ಥಿವ್‌ ಪಟೇಲ್‌ ಬದಲು ರಾಹುಲ್‌ ದ್ರಾವಿಡ್‌ ವಿಕೆಟ್‌ ಕೀಪಿಂಗ್‌ ನಡೆಸಿದ್ದರು. ಈ ಬಾರಿ ಕೆ.ಎಲ್‌. ರಾಹುಲ್‌ ಸರದಿ. ರಿಷಭ್‌ ಪಂತ್‌ ವಿಶ್ರಾಂತಿಯಲ್ಲಿರುವುದರಿಂದ, ಫ್ರಂಟ್‌ಲೆçನ್‌ ಕೀಪರ್‌ ಇಶಾನ್‌ ಕಿಶನ್‌ ಅವರನ್ನು ಹೊರಗಿರಿಸಿ ರಾಹುಲ್‌ ಕೈಗೆ ಗ್ಲೌಸ್‌ ತೊಡಿಸಲಾಯಿತು. ಅಂದು ದ್ರಾವಿಡ್‌ 318 ರನ್‌ ಗಳಿಸಿದರೆ, ಇಂದು ರಾಹುಲ್‌ 386 ರನ್‌ ಮಾಡಿದ್ದಾರೆ.
· 2003ರಲ್ಲಿ ಸಚಿನ್‌ ತೆಂಡುಲ್ಕರ್‌ ಅತ್ಯಧಿಕ 673 ರನ್‌ ಬಾರಿಸಿ ವಿಶ್ವಕಪ್‌ ದಾಖಲೆ ಸ್ಥಾಪಿಸಿದರು. ಈ ಬಾರಿ ವಿರಾಟ್‌ ಕೊಹ್ಲಿ 700 ರನ್‌ ಗಡಿ ದಾಟಿ ನೂತನ ಎತ್ತರ ತಲುಪಿದರು.

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.