ಮೋದಿ ಗಿಫ್ಟ್ 5 ಲಕ್ಷಕ್ಕೆ ಹರಾಜು
Team Udayavani, Jan 29, 2019, 12:30 AM IST
ಹೊಸದಿಲ್ಲಿ: ಪ್ರಧಾನಿ ಮೋದಿಗೆ ನೀಡಲಾಗಿದ್ದ ಉಡುಗೊರೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ಮುಗಿದಿದ್ದು, ಎರಡು ಉಡುಗೊರೆಗಳಿಗೆ ಗರಿಷ್ಠ ತಲಾ 5 ಲಕ್ಷ ರೂ. ಬಿಡ್ ಮಾಡಲಾಗಿದೆ. ಬಸವೇಶ್ವರರ ಪ್ರತಿಮೆ 70 ಸಾವಿರ ರೂ.ಗೆ ಹರಾಜಾಗಿದೆ.
ರೈಲ್ವೇ ನಿಲ್ದಾಣದಲ್ಲಿ ಬ್ಯಾಗ್ ಹಿಡಿದು ಮೋದಿ ನಿಂತಿರುವ ಚಿತ್ರ ಹಾಗೂ ಮರದ ಬೈಕ್ ತಲಾ 5 ಲಕ್ಷ ರೂ. ಗಳಿಸಿದೆ. ಕಲಾಕೃತಿಗೆ 50 ಸಾವಿರ ರೂ. ಹಾಗೂ ಮರದ ಬೈಕ್ಗೆ 40 ಸಾವಿರ ರೂ. ಮೂಲ ಬೆಲೆ ನಿಗದಿಪಡಿಸಲಾಗಿತ್ತು. ಹರಾಜಿಗೆ ಇಡಲಾಗಿದ್ದ ಒಟ್ಟು 19 ಸಾವಿರ ಸಾಮಗ್ರಿಗಳ ಪೈಕಿ 270 ಸಾಮಗ್ರಿಗಳು ಬಿಕರಿಯಾಗಿದ್ದು, ಮಂಗಳವಾರದಿಂದ ಆನ್ಲೈನ್ ಹರಾಜು ಆರಂಭವಾಗಲಿದೆ. ಆನ್ಲೈನ್ನಲ್ಲಿ ವಿದೇಶಗಳೂ ಸಹಿತ ಎಲ್ಲೆಡೆಯಿಂದ ಬಿಡ್ ದಾಖಲಾಗುವ ನಿರೀಕ್ಷೆಯಿದ್ದು, ಇನ್ನಷ್ಟು ಮೊತ್ತ ಸಂಗ್ರಹವಾಗಲಿದೆ. ಈ ಹರಾಜಿನಿಂದ ಸಂಗ್ರಹವಾದ ಮೊತ್ತವನ್ನು ನಮಾಮಿ ಗಂಗೆ ಯೋಜನೆಗೆ ವಿನಿಯೋಗಿಸಲಾಗುತ್ತದೆ.
ಬಸವೇಶ್ವರರ ಪ್ರತಿಮೆಗೆ 70,000 ರೂ.
ಬೈಕ್, ಪೇಂಟಿಂಗ್ಗೆ ಗರಿಷ್ಠ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ