‘ಲೀಡರ್‌’ ಉದಯವಾಣಿ ವೆಬ್ ಸೈಟ್ ನಲ್ಲಿ ಟ್ರೇಲರ್ ರಿಲೀಸ್


Team Udayavani, Jan 11, 2017, 11:34 AM IST

Leader-(1).jpg

ಶಿವರಾಜಕುಮಾರ್‌ ಅಭಿನಯದ “ಲೀಡರ್‌’ ಚಿತ್ರದ ಪ್ರಚಾರ ಕೆಲಸವನ್ನು ಚಿತ್ರತಂಡ ಶುರು ಮಾಡಿರಲಿಲ್ಲ. ಅದಕ್ಕೆ ಕಾರಣ “ಶ್ರೀಕಂಠ’. ಶಿವರಾಜಕುಮಾರ್‌ ಅಭಿನಯದ “ಶ್ರೀಕಂಠ’ ಚಿತ್ರದ ಬಿಡುಗಡೆ ಜನವರಿ ಆರಕ್ಕೆ ನಿಗದಿಯಾಗಿತ್ತು. ಈಗ ಚಿತ್ರ ಬಿಡುಗಡೆಯಾಗಿರುವುದರಿಂದ, “ಲೀಡರ್‌’ ಚಿತ್ರತಂಡದವರು ಚಿತ್ರದ ಪ್ರಚಾರ ಕೆಲಸವನ್ನು ಶುರು ಮಾಡಿದ್ದಾರೆ. ಇದರ ಮೊದಲ ಹಂತವಾಗಿ “ಲೀಡರ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಟ್ರೇಲರ್‌ ಬಿಡುಗಡೆಯು ಜನವರಿ 13ರ ಶುಕ್ರವಾರದಂದು ನಿಗದಿಯಾಗಿದ್ದು, ಅಂದು ಮೊಟ್ಟ ಮೊದಲ ಬಾರಿಗೆ ಉದಯವಾಣಿ ಡಾಟ್‌ಕಾಮ್‌ ಮೂಲಕ ಬಿಡುಗಡೆಯಾಗಲಿದೆ.

ಈ ಟ್ರೇಲರ್‌ನ ವಿಶೇಷವೆಂದರೆ, ಈ ಟ್ರೇಲರ್‌ ಸಂಪೂರ್ಣ ಶಿವಮಯವಾಗಿರುವುದು. ಅಂದರೆ ಶಿವರಾಜಕುಮಾರ್‌ಮಯವಾಗಿರುವುದು. ಇಲ್ಲಿ ಅವರ ಲುಕ್‌, ಖದರ್‌, ಸ್ಟೈಲ್‌ ಎಲ್ಲವೂ ಪರಿಚಯಿಸಬೇಕೆಂಬುದು ಚಿತ್ರತಂಡದ ಉದ್ದೇಶ. ಅದೇ ಕಾರಣಕ್ಕೆ ಶಿವರಾಜಕುಮಾರ್‌ ಅವರ ಎಕ್ಸ್‌ಕ್ಲೂಸಿವ್‌ ಟ್ರೇಲರ್‌ ಬಿಡುಗಡೆ ಮಾಡಲಾಗುತ್ತದೆ. ಅಂದಹಾಗೆ, “ಲೀಡರ್‌’ ಚಿತ್ರದ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಮಾತು, ಹಾಡು, ಫೈಟು ಎಲ್ಲವೂ ಮುಗಿದಿದೆ. ಇನ್ನು ಚಿತ್ರತಂಡವು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಉದ್ದೇಶಿಸಿತ್ತು. ಈಗ ಚಿತ್ರೀಕರಣ ಮನಾಲಿಗೆ ಶಿಫ್ಟ್ ಆಗಲಿದೆಯಂತೆ.

ಅದರ ಜೊತೆಗೆ ಒಂದು ಹಾಡನ್ನು ಖತಾರ್‌ನಲ್ಲಿ ಚಿತ್ರೀಕರಿಸಬೇಕು ಎಂಬ ಯೋಚನೆಯೂ ಇದೆ. ಹೀಗೆ ಖತಾರ್‌ ಮತ್ತು ಮನಾಲಿ ಚಿತ್ರೀಕರಣವು ಫೆಬ್ರವರಿ 20ರ ಹೊತ್ತಿಗೆ ಮುಗಿಯಲಿದೆ. “ಲೀಡರ್‌’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. “ಲೀಡರ್‌’ ಚಿತ್ರದಲ್ಲಿ ಪ್ರಣೀತಾ ನಾಯಕಿಯಾಗಿದ್ದಾರೆ. ಇನ್ನು ಶರ್ಮಿಳಾ ಮಾಂಡ್ರೆ, ಆಶಿಕಾ, ವಂಶಿಕೃಷ್ಣ, ಚಿ. ಗುರುದತ್‌, ವಿಜಯ್‌ ರಾಘವೇಂದ್ರ, ಗುರು ಜಗ್ಗೇಶ್‌ ಹಾಗೂ ಯೋಗಿ ನಟಿಸುತ್ತಿದ್ದಾರೆ. ಇನ್ನು ತಂತ್ರಜ್ಞರ ಬಗ್ಗೆ ಹೇಳುವುದಾದರೆ, ಈ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶಿಸುತ್ತಿದ್ದಾರೆ.

ಕಥೆ, ಚಿತ್ರಕಥೆ ಸಹ ಅವರದ್ದೇ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ “ರೋಸ್‌’ ಎಂಬ ಅಜೇಯ್‌ ರಾವ್‌ ಹಾಗೂ ಶ್ರಾವ್ಯ ಅಭಿನಯದ ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಈಗ ಈ ಚಿತ್ರದ ಮೂಲಕ ಅವರು ನಿರ್ದೇಶನಕ್ಕೆ ವಾಪಸ್ಸಾಗುತ್ತಿದ್ದಾರೆ. ಆ ಚಿತ್ರವನ್ನು ನಿರ್ಮಿಸಿದ್ದ ತರುಣ್‌ ಶಿವಪ್ಪ ಈ ಚಿತ್ರದ ನಿರ್ಮಾಪಕರು. ಅವರೊಂದಿಗೆ ಹಾರ್ದಿಕ್‌ ಶೆಟ್ಟಿ ಸಹ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು “ರೋಸ್‌’ಗೆ ಛಾಯಾಗ್ರಹಣ ಮಾಡಿದ್ದ ಗುರುಪ್ರಶಾಂತ್‌ ರೈ, ಸಂಗೀತ ನೀಡಿದ್ದ ವೀರ್‌ ಸಮರ್ಥ್ ಎಲ್ಲರೂ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.