ಚೌಕ ಪ್ರಮೋಶನ್ಗೆ ದರ್ಶನ್ ಸಾಥ್
Team Udayavani, Feb 19, 2017, 4:46 PM IST
“ಚೌಕ’ ಚಿತ್ರವನ್ನು ಜನ ಇಷ್ಟಪಡುವ ಮೂಲಕ ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಚಿತ್ರತಂಡ ಹೊರಟಿದೆ. ಅದು ಪ್ರಮೋಶನ್ ಮೂಲಕ. ಹೌದು, ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ಕೊಡುವ ಮೂಲಕ ಚಿತ್ರದ ಪ್ರಮೋಶನ್ ಮಾಡಲು ಮುಂದಾಗಿದೆ. ಈ ತಂಡಕ್ಕೆ ದರ್ಶನ್ ಕೂಡಾ ಸಾಥ್ ನೀಡುತ್ತಿದ್ದಾರೆಂಬುದು ವಿಶೇಷ. “ಚೌಕ’ ಚಿತ್ರದಲ್ಲಿ ದರ್ಶನ್, ರಾಬರ್ಟ್ ಎಂಬ ಪಾತ್ರದಲ್ಲಿ ನಟಿಸಿದ್ದು ನಿಮಗೆ ಗೊತ್ತೇ ಇದೆ. ಅದು ಗೆಸ್ಟ್ ಅಪಿಯರೆನ್ಸ್.
ಸಾಮಾನ್ಯವಾಗಿ ದರ್ಶನ್ ಗೆಸ್ಟ್ ಅಪಿಯರೆನ್ಸ್ ಮಾಡಿದರೆ ಆ ಸಿನಿಮಾಗಳ ಪ್ರಮೋಶನ್ಗೆ ಹೋಗುವುದು ಕಡಿಮೆ. ಆದರೆ, ಈ ಬಾರಿ “ಚೌಕ’ ಚಿತ್ರದ ಪ್ರಮೋಶನ್ಗಾಗಿ ಫೆ.20 ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ, ಮಳವಳ್ಳಿಯ ಚಿತ್ರಮಂದಿರಗಳಿಗೆ ಭೇಟಿ ಕೊಡಲಿದ್ದಾರೆ. ಅಷ್ಟಕ್ಕೂ ದರ್ಶನ್ “ಚೌಕ’ ಚಿತ್ರದ ಪ್ರಮೋಶನ್ನಲ್ಲಿ ಭಾಗವಹಿಸಲು ಕಾರಣ ಏನು ಎಂದು ಕೇಳಿದರೆ ಅದಕ್ಕೆ ಕಾರಣ ದ್ವಾರಕೀಶ್ ಬ್ಯಾನರ್. “ಚೌಕ’ ದ್ವಾರಕೀಶ್ ಬ್ಯಾನರ್ನಲ್ಲಿ ನಿರ್ಮಾಣವಾದ 50ನೇ ಚಿತ್ರ. ಈ ಬ್ಯಾನರ್ ಹಾಗೂ ದರ್ಶನ್ ನಡುವೆ ಒಂದು ಸೆಂಟಿಮೆಂಟ್ ಇದೆ. ಅದು ತಾವು ಅನ್ನ ತಿಂದ ಸಂಸ್ಥೆ ಎಂಬುದು. ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ , ದ್ವಾರಕೀಶ್ ಬ್ಯಾನರ್ನ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು ನಿಮಗೆ ಗೊತ್ತೇ ಇದೆ. ಅಂದು ತಮ್ಮ ತಂದೆಗೆ ಅವಕಾಶ ಕೊಟ್ಟ ಸಂಸ್ಥೆ ಎಂಬ ಕೃತಜ್ಞತಾ ಭಾವನೆ ಕೂಡಾ ದರ್ಶನ್ಗಿದೆ. ಈ ಕಾರಣದಿಂದ “ಚೌಕ’ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುವ ಜೊತೆಗೆ ಈಗ ಪ್ರಮೋಶನ್ನಲ್ಲೂ ಸಾಥ್ ನೀಡಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…