Updated at Wed,23rd Aug, 2017 7:45PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎಸ್‌.ವಿ.ಬಾಬು ನಿರ್ಮಾಣದಲ್ಲಿ ರಮೇಶ್‌ ನಿರ್ದೇಶನ?

ರಮೇಶ್‌ ಅರವಿಂದ್‌,ಎಸ್‌.ವಿ.ಬಾಬು

ಇತ್ತೀಚೆಗೆ ನಿರ್ಮಾಪಕ ಎಸ್‌.ವಿ.ಬಾಬು ಅವರ ಹೊಸ ಕಚೇರಿಯ ಉದ್ಘಾಟನೆಗೆ ನಟ ರಮೇಶ್‌ ಅರವಿಂದ್‌ ಕೂಡಾ ಬಂದಿದ್ದರು. ಆಗಲೇ ಅನೇಕರಿಗೊಂದು ಸಂದೇಹ ಬಂದಿತ್ತು. ಅದೇನೆಂದರೆ ಇವರಿಬ್ಬರು ಜೊತೆಯಾಗಿ ಸಿನಿಮಾ ಏನಾದರೂ ಮಾಡುತ್ತಿದ್ದಾರಾ ಎಂದು. ಈಗ ಗಾಂಧಿನಗರದ ಮೂಲಗಳ ಪ್ರಕಾರ, ಎಸ್‌.ವಿ.ಬಾಬು ಹಾಗೂ ರಮೇಶ್‌ ಅರವಿಂದ್‌ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ರಮೇಶ್‌ ಮೇಲಿದ್ದು, ಸದ್ಯದಲ್ಲೇ ಆ ಸಿನಿಮಾ ಶುರುವಾಗಲಿದೆಯಂತೆ.

ಹಾಗಾದರೆ, ಯಾರು ಹೀರೋ, ಏನ್‌ ಕಥೆ ಎಂದು ನೀವು ಕೇಳಿದರೆ ಸದ್ಯ ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿಲ್ಲ. ಏಕೆಂದರೆ ಇವರಿಬ್ಬರು ಸಿನಿಮಾ ಮಾಡುತ್ತಿರುವ ವಿಚಾರ ಈಗಷ್ಟೇ ಮಾತುಕತೆಯ ಹಂತದಲ್ಲಿದ್ದು, ತಾರಾಬಳಗ ಹಾಗೂ ತಾಂತ್ರಿಕ ಅಂಶಗಳು ಇನ್ನಷ್ಟೇ ಫೈನಲ್‌ ಆಗಬೇಕಿದೆ.

Back to Top