ವ್ಯಸನ ಮುಕ್ತಿಗೆ ಪ್ರೇರಣೆ ಗುರುಬಸವ ಶ್ರೀ


Team Udayavani, Aug 21, 2017, 11:29 AM IST

bidar 2.jpg

ಔರಾದ: ಶ್ರಾವಣ ಮಾಸದಲ್ಲಿ ಮಠ ಮಂದಿರಗಳಲ್ಲಿ ಪುರಾಣ ಪ್ರವಚನ ಹೇಳುವ ಮೂಲಕ ಸ್ವಾಮೀಜಿಗಳು ಭಕ್ತರ ಕಲ್ಯಾಣಕ್ಕಾಗಿ ಶ್ರಮಿಸುವುದನ್ನು ಕಾಣುತ್ತೇವೆ. ಆದರೆ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು ಭಕ್ತರ ಮನೆ, ಅಂಗಡಿಗಳಿಗೆ ಹೋಗಿ ದುಶ್ಚಟಗಳಿಂದ ದೂರ ಇರುವಂತೆ ಭಕ್ತರಿಗೆ ಅರಿವು ಮೂಡಿಸುವುದು ಮಾದರಿ ಕಾರ್ಯ. ಶ್ರಾವಣ ಮಾಸ ನಿಮಿತ್ತ ಸಂತಪುರ ಅನುಭವ ಮಂಟಪದಲ್ಲಿ ಶ್ರೀಗಳು ನಿತ್ಯ ಸಂಜೆ 6ರಿಂದ 8ಗಂಟೆ ವರೆಗೆ ಪ್ರವಚನ ಹೇಳಿ ಧರ್ಮದ ಜಾಗೃತಿ ಮೂಡಿಸುತ್ತಾರೆ. ಇದಕ್ಕೂ ಮುನ್ನ ಸಂತಪುರ ಗ್ರಾಮದ ಪ್ರತಿ ಮನೆ, ಅಂಗಡಿ,
ಸರ್ಕಾರಿ-ಅರೆಸರ್ಕಾರಿ ಕಚೇರಿ, ಸಂಘ ಸಂಸ್ಥೆಯ ಕಚೇರಿಗಳಿಗೂ ತೆರಳಿ ದುಶ್ಚಟ ಮುಕ್ತ ಜೀವನಸಾಗಿಸಲು ಜನರಿಗೆ ಸಲಹೆ ನೀಡುತ್ತಾರೆ. ಜರಲ್ಲಿನ ಬೀಡಿ, ಸಿಗರೇಟ್‌, ತಂಬಾಕು ಇನ್ನಿತರ ಮಾದಕ ವ್ಯಸನದ ಪದಾರ್ಥಗಳನ್ನು ತಮ್ಮ ಜೋಳಿಗೆಗೆ ಹಾಕುವ ಮೂಲಕ ಇನ್ನೊಮ್ಮೆ ಇಂಥ ಪದಾರ್ಥಗಳನ್ನು ಸೇವಿಸುವುದಿಲ್ಲ ಎಂದು ಪ್ರಮಾಣ ಮಾಡಿಸಿ, ಭಕ್ತರನ್ನು ಉತ್ತಮ ದಾರಿಗೆ ತರುವ ಶ್ರೀಗಳ ಕಾರ್ಯ ಅನನ್ಯವಾದದ್ದು. ಶ್ರೀಗಳ ಈ ಕಾರ್ಯದಿಂದ ಪ್ರೇರಣೆಗೊಂಡು
ಸಂತಪುರ ಗ್ರಾಮದಲ್ಲಿ 2 ಸಾವಿರ ಜನರು ತಮ್ಮ ವ್ಯಸಗಳಿಂದ ಹೊರ ಬಂದು ಉತ್ತಮ ಜೀವನ ಸಾಗಿಸಲು ಮುಂದಾಗಿದ್ದಾರೆ. ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ದುಶ್ಚಟಗಳಿಂದ ಮುಕ್ತರಾಗಿ ಜೀವಿಸುವಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪ್ರವಚನಗಳಿಂದ ಜನರಿಗೆ ಉತ್ತಮ ಜೀವನ ಸಾಗಿಸುವಂತೆ
ತಿಳಿಸಲಾಗುತ್ತಿದೆ. ಅದರಂತೆಯೇ ಇಂದಿನ ಯುವಕರಿಗೆ ಹಾಗೂ ವ್ಯಸನಿಗಳಿಗೆ ಉತ್ತಮ ಆರೋಗ್ಯಕರ ಜೀವನ ಸಾಗಿಸುವಂತೆ ಸಲಹೆ ನೀಡಲಾಗುತ್ತಿದೆ. ಧರ್ಮ ರಕ್ಷಣೆ ಹಾಗೂ ಜನರ ಕಲ್ಯಾಣಕ್ಕಾಗಿ ದುಡಿಯುವುದೇ ನಮ್ಮ ಮುಖ್ಯ
ಗುರಿಯಾಗಿದೆ ಎಂದು ಶ್ರೀ ಗುರುಬಸವ ಪಟ್ಟದೇವರು ತಿಳಿಸುತ್ತಾರೆ. ಜಿಲ್ಲೆ ಸೇರಿದಂತೆ ತಾಲೂಕಿನ ಪ್ರತಿಯೊಂದು
ಗ್ರಾಮದ ಯವಕರು, ಹಿರಿಯರು ದುಶ್ಚಟಗಳ ದಾಸರಾಗಿ ತಮ್ಮ ಜೀವನಕ್ಕೆ ತಾವೇ ಕೊಡಲಿ ಪೆಟ್ಟು ಹಾಕಿಕೊಳ್ಳುತ್ತಿದ್ದಾರೆ. ಇದರಿಂದ ಮುಂದೆ ಸಮಾಜ ಹಾಗೂ ದೇಶದ ವ್ಯವಸ್ಥೆಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಪಾದಯಾತ್ರೆ ಮೂಲಕ ಮಾಡಲಾಗುತ್ತಿದೆ. ನನ್ನ ಪತಿ ನಿತ್ಯ ಮದ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದರು. ಇದರಿಂದ ಬೆಳೆಯುವ ನಮ್ಮ ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬಿರುತ್ತಿತ್ತು. ಈ ಕುರಿತು ಹಲವು ಬಾರಿ ಹೇಳಿದರೂ ಪ್ರಯೋಜನವಾಗಿದ್ದಿಲ್ಲ. ಈಗ ಶ್ರೀಗಳು ಮಾಡುತ್ತಿರುವ ದುಶ್ಚಟ ಮುಕ್ತ ಸಮಾಜ ಎನ್ನುವ ಕಾರ್ಯದಿಂದ ನನ್ನ ಪತಿ ಮದ್ಯ ಸೇವನೆ ಬಿಟ್ಟಿದ್ದಾರೆ. ಶ್ರೀಗಳ ಕಾರ್ಯ ತಾಲೂಕಿನಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಸಂತಪುರ ಗ್ರಾಮದ ಗೃಹಿಣಿ ಅಂಬಿಕಾ ಬಿರಾದರ ಹೇಳುತ್ತಾರೆ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.