ಸೆ.21ರಿಂದ ಸೌದಿ ಇಂಟರ್ನೆಟ್ ಫೋನ್ ಕಾಲ್ ನಿಷೇಧ ತೆರವು
Team Udayavani, Sep 20, 2017, 3:52 PM IST
ರಿಯಾಧ್ : ಸೌದಿ ಅರೇಬಿಯಾ ನಾಳೆ ಗುರುವಾರ ಸೆ.21ರಂದು ಇಂಟರ್ನೆಟ್ ಫೋನ್ ಕಾಲ್ಗಳ ಮೇಲಿನ ನಿಷೇಧವನ್ನು ತೆರವುಗೊಳಿಸಲಿದೆ ಎಂದು ಸರಕಾರಿ ವಕ್ತಾರ ತಿಳಿಸಿದ್ದಾರೆ.
ಸೌದಿ ಅರೇಬಿಯ ತೈಲೇತರ ಆದಾಯದ ಮೇಲೆ ಕಣ್ಣಿಟ್ಟಿರುವುದರಿಂದ ಆನ್ಲೈನ್ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಂಟರ್ನೆಟ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಿರುವುದಾಗಿ ವಕ್ತಾರ ಹೇಳಿದ್ದಾರೆ.
ಇಂದು ಮಧ್ಯರಾತ್ರಿಯಿಂದ (ಜಿಎಂಟಿ ಕಾಲಮಾನ 2100), ನಿಯಂತ್ರಣ ಆವಶ್ಯಕತೆಗಳನ್ನು ಪೂರೈಸುವ, ಮೈಕ್ರೋಸಾಫ್ಟ್ ಸ್ಕೈಪ್ ಮತ್ತು ಫೇಸ್ ಬುಕ್ ನ ವಾಟ್ಸಾಪ್ ವಿಡಿಯೋ ಮತ್ತು ವಾಯ್ಸ ಕಾಲ ಸೇವೆಗಳು ಗ್ರಾಹಕರ ಬಳಕೆಗೆ ಲಭ್ಯವಾಗಲಿವೆ ಎಂದು ಸಿಐಟಿಸಿ ಟೆಲಿಕಾಂ ನಿಯಂತ್ರಣ ಸಂಸ್ಥೆಯ ವಕ್ತಾರ ಅದೆಲ್ ಅಬು ಹಮೀದ್ ಇಂದು ಬುಧವಾರ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಇಂಟರ್ನೆಟ್ ಫೋನ್ ಕಾಲ್ ನಿಷೇಧ ತೆರವಿನ ಈ ಕ್ರಮದಿಂದಾಗಿ ಸೌದಿ ಅರೇಬಿಯದ ಮೂರು ಮುಖ್ಯ ಟೆಲಿಕಾಂ ನಿರ್ವಾಹಕ ಸಂಸ್ಥೆಗಳಾಗಿರುವ ಸೌದಿ ಟೆಲಿಕಾಂ ಕಂಪೆನಿ (ಎಸ್ಟಿಸಿ), ಎತಿಹಾದ್ಎಟಿಸಲಾತ್ (ಮೊಬಿಲಿ) ಮತ್ತು ಝೈನ್ ಸೌದಿ ಸಂಸ್ಥೆಗೆ ತೀವ್ರ ಹೊಡೆತ ಬೀಳಲಿದೆ. ಈ ಸಂಸ್ಥೆಗಳು ಪ್ರಕೃತ ಸೌದಿಯಲ್ಲಿ ನೆಲೆಸಿರುವ ಲಕ್ಷಾಂತರ ವಲಸಿಗರಮಾಡುವ ಅಸಂಖ್ಯ ಅಂತಾರಾಷ್ಟ್ರೀಯ ಫೋನ್ ಮತ್ತು ಟೆಕ್ಸ್ಟ್ ಕರೆಗಳಿಂದ ಗರಿಷ್ಠ ಆದಾಯವನ್ನು ಪಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ