ಉದಾಸೀನತೆ+ನಿರ್ಲಕ್ಷ್ಯ= 105 ಕೋಟಿ ಖೋತಾ!


Team Udayavani, Jun 24, 2017, 2:27 PM IST

hub1.jpg

ಹುಬ್ಬಳ್ಳಿ: ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಾನಗರ ಪಾಲಿಕೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಉದಾಸೀನತೆಯಿಂದಾಗಿ ಸುಮಾರು 105 ಕೋಟಿ ರೂ.ಗಳು ಖೋತಾ ಆಗಿದೆ. ಸರಕಾರದಿಂದ ಬರಬೇಕಾದ ಪಾಲಿಕೆ ನೌಕರರ ಪಿಂಚಣಿ ಬಾಕಿ ಹಣಕ್ಕೆ ಎಳ್ಳು-ನೀರು ಬಿಟ್ಟಂತಾಗಿದೆ. 

ರಾಜ್ಯ ಸರಕಾರ ಉಳಿದೆಲ್ಲ ಮಹಾನಗರ ಪಾಲಿಕೆಗಳಿಗೆ ನಿವೃತ್ತ ನೌಕರರ ಪಿಂಚಣಿ ಹಣ ನೀಡಿ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗೆ ಹಣ ನೀಡದೆ ತಾರತಮ್ಯ ತೋರುತ್ತಿದೆ ಎಂಬ ಆರೋಪ ಇದೆಯಾದರೂ, ಪ್ರಕರಣದ ಕುರಿತಾಗಿ ಸೂಕ್ಷ್ಮವಾಗಿ ಗಮನಿಸಿದರೆ ಉದಾಸೀನತೆ, ನಿರ್ಲಕ್ಷ್ಯದ ಕಾರಣದಿಂದ ಬರಬೇಕಾದ ಹಣ ಕೈ ತಪ್ಪಿರುವುದು ಗೋಚರಿಸುತ್ತದೆ.

ಮುಖ್ಯವಾಗಿ ಪೌರಾಡಳಿತ ನಿರ್ದೇಶನಾಲಯ ಹಾಗೂ ನಗರಾಭಿವೃದ್ಧಿ ಇಲಾಖೆ ನಡುವಿನ ಸಮನ್ವಯ ಕೊರತೆ, ಇದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು, ಮಹಾಪೌರರು ಸಮರ್ಪಕ ಒತ್ತಡ ಹಾಕದಿರುವುದು, ಪ್ರಕರಣದ ಗಂಭೀರತೆಯನ್ನು ಡಿಎಂಎ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ಅಧಿಕಾರಿಗಳೂ ವಿಫ‌ಲವಾಗಿರುವುದು ಸ್ಪಷ್ಟವಾಗುತ್ತದೆ. 

ಪಾಲಿಕೆಯಲ್ಲಿ ನೌಕರರ ಪಿಂಚಣಿಗೆ ತಿಂಗಳಿಗೆ ಸುಮಾರು 2.5ರಿಂದ 3 ಕೋಟಿ ರೂ.ವರೆಗೆ ವಾರ್ಷಿಕವಾಗಿ 26-27 ಕೋಟಿ ರೂ.ಗಳನ್ನು ಪಾವತಿಸಬೇಕಾಗಿದೆ. ನಾಲ್ಕು ವರ್ಷಗಳಿಂದ ಬಾಕಿ ಬಾಲ ಬೆಳೆಯುತ್ತಲೇ ಸಾಗಿದೆ. 

ಹೆಚ್ಚುವರಿ ಅನುದಾನಕ್ಕೆ ಒತ್ತು ಕೊರತೆ?: ನೌಕರರ ಪಿಂಚಣಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಎಸ್‌ಎಫ್ಸಿ ಅಡಿಯಲ್ಲಿ ಅನುದಾನ ಬರುತ್ತದೆ. ಎಸ್‌ಎಫ್ಸಿಯಿಂದ ಬರುವ ಅನುದಾನ ಟೈಡ್‌ ಮತ್ತು ಅನ್‌ಟೈಡ್‌ ಎಂಬ ಎರಡು ವಿಭಾಗಗಳಲ್ಲಿ ಹಂಚಿಕೆಯಾಗುತ್ತದೆ. ಅನ್‌ಟೈಡ್‌ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸುವುದಾದರೆ, ಟೈಡ್‌ ನೌಕರರ ವೇತನ, ಸೌಲಭ್ಯ, ಪಿಂಚಣಿಯನ್ನು ಹೊಂದಿರುತ್ತದೆ. 

ಆಯಾ ವರ್ಷಕ್ಕೆ ಬಂದ ಅನುದಾನದ ಬಳಕೆ ಪ್ರಮಾಣ ಪತ್ರವನ್ನು ಸಕಾಲಕ್ಕೆ ಸಲ್ಲಿಸುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸುವುದು ಮುಖ್ಯವಾಗಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಳಕೆ ಪ್ರಮಾಣ ಪತ್ರದ ಸಲ್ಲಿಕೆ ಹಾಗೂ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಮರ್ಪಕವಾಗಿಲ್ಲದಿರುವುದೇ ಇಂದಿನ ಪಿಂಚಣಿ ಬಾಕಿ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 

ರಾಯಚೂರು, ಬೀದರ, ಕೊಪ್ಪಳದಂತಹ ಸಣ್ಣ ನಗರಗಳು ತಮಗೆ ಬಂದಂತಹ ಅನುದಾನ ಬಳಕೆಯೊಂದಿಗೆ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿ ಅಷ್ಟು ಇಷ್ಟು ಹಣ ಪಡೆದುಕೊಂಡಿವೆ. ಇವುಗಳಿಗೆ ಹೋಲಿಸಿದರೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಯೋಜನೆ ಗಾತ್ರ ದೊಡ್ಡದಾಗಿದೆ. ಆದರೆ, ಬಂದ ಅನುದಾನದ ಸಮರ್ಪಕ ಹಾಗೂ ಸಕಾಲಿಕ ಬಳಕೆಯ ಕೊರತೆ ಹಲವು ಕಡೆ ಎದ್ದು ಕಾಣುತ್ತಿದೆ.

ಆರೋಪ-ಪ್ರತ್ಯಾರೋಪವಷ್ಟೇ ಬಳುವಳಿ: ಮಹಾನಗರ ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಹಣದ ಬಗ್ಗೆ ಈ ಹಿಂದೆ ವಿನಯಕುಮಾರ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗಲೂ ಈ ಬೇಡಿಕೆ ಮಂಡನೆ ಆಗಿತ್ತು. ಮುಖ್ಯಮಂತ್ರಿ ಬಂದಾಗಲೂ ಈ ಬಗ್ಗೆ ಮನವಿ ಮಾಡಲಾಗಿತ್ತು. ನೀಡುತ್ತೇವೆ ಎಂಬ ಭರವಸೆ ಕಾಂಗ್ರೆಸ್‌ನವರದ್ದಾದರೆ, ಪಿಂಚಣಿ ಬಾಕಿಗೆ ನಿರ್ಲಕ್ಷ್ಯ ಎಂಬ ಆರೋಪ ಬಿಜೆಪಿಯದ್ದಾಗಿತ್ತು.

ಆದರೆ ಡಿಎಂಎ ಹಾಗೂ ನಗರಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಯಾಕೆ ವಿಳಂಬ, ಅದಕ್ಕೆ  ಪರಿಹಾರದ ಕ್ರಮವೇನೆಂದು ಯಾರೊಬ್ಬರು ತೀವ್ರ ರೀತಿಯ ಯತ್ನ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಬಂದ ಅನುದಾನದ ವಿನಿಯೋಗದ ಬಳಕೆ ಪ್ರಮಾಣ ಪತ್ರದ ಸಕಾಲಿಕ ಸಲ್ಲಿಕೆ ಆಗದಿರುವುದು ಹಾಗೂ ಹೆಚ್ಚುವರಿ ಅನುದಾನಕ್ಕೆ ಸಮರ್ಪಕ ಒತ್ತಡ ಇಲ್ಲದಿರುವುದರಿಂದ, ನಗರಾಭಿವೃದ್ಧಿ ಇಲಾಖೆ ಆಯಾ ವರ್ಷದ ಹೆಚ್ಚುವರಿ ಅನುದಾನವನ್ನು ಇತರೆ ಕಾರ್ಯಗಳಿಗೆ ಅಥವಾ ಬೇಡಿಕೆ ಬಂದ ಕಡೆ ಹಂಚಿಕೆ ಮಾಡಿದೆ.

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆಗೆ ಹೆಚ್ಚುವರಿ ಹಣ ಹಂಚಿಕೆ ಆಗದಿರುವುದಕ್ಕೆ ಇದು ಕೂಡ ಪ್ರಮುಖ ಕಾರಣಗಲ್ಲೊಂದಾಗಿದೆ. ಇದರ ಹಿಂದೆ ರಾಜಕೀಯ ತಾರತಮ್ಯ ನೀತಿ ಅಡಗಿದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ನಿವೃತ್ತಿ ನೌಕರರ ಪಿಂಚಣಿ ಬಾಕಿ ಹಣದ ಬಗ್ಗೆ ಸಮರ್ಪಕ ಕ್ರಮ ಇಲ್ಲದ್ದರಿಂದ ಬಾಕಿ ಪ್ರಮಾಣ 30, 40 ಕೋಟಿ ರೂ.ಗಳ ಬಾಕಿಯ ಬಾಲ ಇದೀಗ 105ಕೋಟಿ ರೂ.ಗೆ ಬೆಳೆದು ನಿಂತಿದೆ. 

ಏಪ್ರಿಲ್‌ನಿಂದ ಮಾತ್ರ ಪಿಂಚಣಿ ಹಣ: ಪಿಂಚಣಿ ಬಾಕಿ ಹಣ ಕುರಿತಾಗಿ ಮಹಾಪೌರ ಡಿ.ಕೆ.ಚವ್ಹಾಣ ನೇತೃತ್ವದಲ್ಲಿ ಪಾಲಿಕೆ ಸರ್ವಪಕ್ಷಗಳ ಸದಸ್ಯರ ನಿಯೋಗ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ಬೇಗ್‌ ಅವರನ್ನು ಭೇಟಿ ಮಾಡಿ ಬಾಕಿ ಹಣಕ್ಕೆ ಒತ್ತಾಯಿಸಿತಾದರೂ, ಸರಕಾರ ಮಾತ್ರ ಇದಕ್ಕೆ ಒಪ್ಪದೆ, ಬಾಕಿ 105 ಕೋಟಿ ರೂ. ಹಣ ನೀಡಿಕೆ ಸಾಧ್ಯವಿಲ್ಲ.

ಏಪ್ರಿಲ್‌ನಿಂದ ಪಿಂಚಣಿ ಹಣವನ್ನು ಪಾವತಿ ಮಾಡುವುದಾಗಿ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದು, 105 ಕೋಟಿ ರೂ.ಗಳನ್ನು ಮರೆತು ಸರಕಾರದಿಂದ ಕೇವಲ ಎರಡು ತಿಂಗಳ ಬಾಕಿ ಹಣ ಹಾಗೂ ಮುಂದೆ ಪಿಂಚಣಿ ಹಣದ ಚಾಲ್ತಿ ಪಡೆದಿದೆ ಎಂಬುದಕ್ಕಷ್ಟೇ ಪಾಲಿಕೆ ತೃಪ್ತಿ ಪಟ್ಟುಕೊಳ್ಳುವಂತೆ ಆಗಿದೆ. 

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.