ಈ ಸೂಟುಧಾರಿಗೆ ಯಾರು ಸಾಟಿ?
Team Udayavani, May 30, 2017, 5:15 AM IST
ಈ ಶ್ವಾನವು ಲಂಡನ್ನ ಬ್ರಸ್ ಗ್ರಿಫಿನ್ ಎಂಬವರ ಮೋಟಾರ್ ವರ್ಲ್ಡ್ ಕಂಪನಿಯಲ್ಲಿ ಕಾರು ಸೇಲ್ಸ್ಮನ್! ಸೂಟು-ಬೂಟು, ಟೈ ಧರಿಸಿ ಅಪ್ಪಟ ಬ್ಯುಸಿನೆಸ್ಮನ್ ಥರ ಪೋಸ್ ಕೊಡುತ್ತಿರೋ ನಾಯಿಯನ್ನು ನೋಡಿದಾಗ, ಇದು ಸೇಲ್ಸ್ಮನ್ ಹೌದಾ ಅಂತ ನೀವು ಪಶ್ನಿಸಬಹುದು. ಊಹೂಂ, ಇದು ವಾಸ್ತವದಲ್ಲಿ ಸೇಲ್ಸ್ಮನ್ ಅಲ್ಲ. ಲಂಡನ್ ನಲ್ಲಿ ಮೋಟಾರ್ ವರ್ಲ್ಡ್ ಎಂಬ ಕಂಪನಿಯೂ ಇಲ್ಲ. ಇದೆಲ್ಲ ಈ ಶ್ವಾನದ ಮಾಲೀಕನ ಕಲ್ಪನೆ.
“ಗಿಲ್ಡಾ’ ಹೆಸರಿನ ಈ ನಾಯಿಯೆಂದರೆ ಮಾಲೀಕ ಗ್ರಿಫಿನ್ಗೆ ಪಂಚಪ್ರಾಣ. ಒಂದು ದಿನ ಅದಕ್ಕೆ ಸುಮ್ಮನೆ ಸೂಟು-ಬೂಟು ಧರಿಸಿ ನೋಡಿದ. ಆಹಾ, ಏನ್ ಚಂದ ಕಾಣುತ್ತೆ ಗಿಲ್ಡಾ ಎಂದುಕೊಂಡು, ಬೇರೆ ಬೇರೆ ರೂಪದಲ್ಲಿ ಅದರ ಫೋಟೋ, ವಿಡಿಯೋ ತೆಗೆದು ಆನ್ಲೈನ್ನಲ್ಲಿ ಅಪ್ಲೋಡ್ ಮಾಡತೊಡಗಿದ. ಈಗ ಗಿಲ್ಡಾಗೆ ದೊಡ್ಡ ಪ್ರಮಾಣದ ಅಭಿಮಾನಿಗಳ ಸಂಘವೇ ಇದೆಯಂತೆ.