600 ಕೋ.ರೂ. ಮೌಲ್ಯದ ಬೇನಾಮಿ ಆಸ್ತಿ ವಶ
Team Udayavani, May 25, 2017, 2:21 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಪ್ಪು ಹಣ ವಿರೋಧಿ ಸಮರಕ್ಕೆ ಆದಾಯ ತೆರಿಗೆ ಇಲಾಖೆಯೂ ಕೈಜೋಡಿಸಿದ್ದು, ಭಾರೀ ಪ್ರಮಾಣದ ಬೇನಾಮಿ ವ್ಯವಹಾರಗಳನ್ನು ಪತ್ತೆಹಚ್ಚಿದೆ. ದೇಶಾದ್ಯಂತ 400 ಬೇನಾಮಿ ವ್ಯವಹಾರಗಳನ್ನು ಪತ್ತೆ ಮಾಡಿರುವ ಆದಾಯ ತೆರಿಗೆ ಇಲಾಖೆ, 600 ಕೋ. ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ಒಟ್ಟು 240 ಪ್ರಕರಣಗಳಲ್ಲಿ ಈ ಪ್ರಮಾಣದ ವ್ಯವಹಾರ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಹೇಳಿವೆ.
ಹೊಸ ಬೇನಾಮಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವ ಸಂಬಂಧ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ 24 ಮೀಸಲು ಬೇನಾಮಿ ನಿಗ್ರಹ ಘಟಕಗಳನ್ನು ಸ್ಥಾಪಿಸಿದೆ. ಈ ಘಟಕಗಳ ಮೂಲಕ ಅದು ಭಾರೀ ಪ್ರಮಾಣದ ಬೇನಾಮಿ ವ್ಯವಹಾರಗಳನ್ನು ಪತ್ತೆ ಮಾಡಿದೆ. ಬೇನಾಮಿ ಆಸ್ತಿಯಲ್ಲಿ ಸ್ಥಿರಾಸ್ತಿ ಅಥವಾ ಚರಾಸ್ತಿ, ಕಾರ್ಪೊರಲ್ ಅಥವಾ ನಾನ್ ಕಾರ್ಪೊರಲ್ ಆಸ್ತಿಯನ್ನು ಪತ್ತೆ ಮಾಡಿದೆ. ಇಲ್ಲಿ ಅನಾಮಿಕ ವ್ಯಕ್ತಿಗಳು, ಬೇರೊಬ್ಬರ ಹೆಸರಲ್ಲಿ ಆಸ್ತಿ ಮಾಡಿರುವುದು ಪತ್ತೆಯಾಗಿದೆ. 2016ರ ನ. 1ರಿಂದ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದ್ದು, ಆರೋಪ ಸಾಬೀತಾದರೆ 7 ವರ್ಷಗಳ ವರೆಗೆ ಜೈಲು ಗ್ಯಾರಂಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ