ಕಲ್ಯಾಣಮಂಟಪದ ಸ್ವಗತ 


Team Udayavani, Sep 10, 2017, 7:50 AM IST

kalyana-mantapa.jpg

ಆಗಲೇ ರಾತ್ರಿ ಹನ್ನೆರಡಾಯಿತು. ಕಣ್ಣುಗಳು ತೂಕಡಿಸುತ್ತಿವೆ.  ಮಧ್ಯಾಹ್ನದಿಂದ ನನ್ನನ್ನು ಹೊರಗೂ ಒಳಗೂ ಅಲಂಕಾರ ಮಾಡಿ ಕೆಲಸದವರೂ ದಣಿದಿ¨ªಾರೆ. ಹೊರಗೆ ವಿದ್ಯುತ್‌ ದೀಪಾಲಂಕಾರ, ಪುಷ್ಪಾಲಂಕಾರ, ಕಾರಂಜಿ, ಒಳಗೆ ಮಂಟಪಾಲಂಕಾರ, ವಧುವರರ ವೇದಿಕೆಯ ಅಲಂಕಾರ ಹೀಗೆ ಅದೆಷ್ಟು ಸುಂದರವಾಗಿ ನನ್ನನ್ನು ಕಂಗೊಳಿಸುವಂತೆ ಮಾಡಿ¨ªಾರೆ. ಈಗೆÇÉೋ ಊಟಮಾಡಿ ಮಲಗಿರಬೇಕು ಅವರು, ಪಾಪ ಮತ್ತೆ ನಾಳಿನ ಮುಹೂರ್ತಕ್ಕೆ  ನನ್ನ ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳನ್ನು ಆಗಲೇ ತಯಾರು ಮಾಡಿಕೊಂಡೇ ಬಂದಿ¨ªಾರೆ. ವಧು-ವರರ ಹೆಸರು ಹಾಗೂ ಎರಡೂ ಕಡೆಯ ಕುಟುಂಬಸ್ಥರ ಹೆಸರುಗಳನ್ನು ಅದೆಷ್ಟು ಚಂದಾಗಿ ಎಲೆ, ಹೂವುಗಳಲ್ಲಿ ಅರಳಿಸಿ¨ªಾರೆ.

ನಾನೂ ಸ್ವಲ್ಪ ಕಣ್ಣು ಮುಚ್ಚೋಣ ಎಂದರೆ ಗದ್ದಲ ಕಡಿಮೆಯೇ ಆಗಿಲ್ಲ. ಅರಿಶಿಣ ಶಾಸ್ತ್ರ ನಡೆಯುತ್ತಲೇ ಇದೆ. ಮೈಕಿನಲ್ಲಿ ಹಾಡುಗಳು, ವಾಲಗದವರ ಸದ್ದು ಈಗತಾನೆ ಕಡಿಮೆಯಾಗಿದೆ. ಅಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ಭಟ್ಟರು ಸಂಜೆಯ ಫ‌ಳಾರ ಹಾಗೂ ರಾತ್ರಿಯ ಅಡುಗೆ ತಯಾರಿಗೆ ಮಧ್ಯಾಹ್ನದಿಂದಲೇ ತಮ್ಮ ಪಟಾಲಂ ಜೊತೆ ಹಾಜರಾಗಿ¨ªಾರೆ. ಇಷ್ಟು ಹೊತ್ತೂ ಹೆಚ್ಚುವ, ತುರಿಯುವ, ರುಬ್ಬುವ, ಕರಿಯುವ, ಬಡಿಸುವ ಮತ್ತು ಪಾತ್ರೆಗಳ ಗದ್ದಲ ಇದ್ದೇ ಇತ್ತು. ಈಗತಾನೆ ಮಲಗಿ ವಿಶ್ರಮಿಸುತ್ತಿ¨ªಾರೆ. ಮತ್ತೆ ಮುಂಜಾನೆ ಬೇಗ ಎದ್ದು ಮದುವೆಯ ಭೂರೀಭೋಜನಕ್ಕೆ ತಯಾರು ಮಾಡಿಕೊಳ್ಳಬೇಕಲ್ಲವೇ. ಇರಲಿ ಬಿಡಿ, ಎರಡು ದಿನ ನಿ¨ªೆ ಇರದಿದ್ದರೆ ನನಗೇನೂ ಬೇಜಾರಿಲ್ಲ. ಈ ಗದ್ದಲವೆÇÉಾ ಎರಡು ದಿನ ತಾನೇ? ಮತ್ತೆ ಮುಂದಿನ ಮದುವೆ ಮುಹೂರ್ತ ಬರುವವರೆಗೂ ಒಂಟಿ ಪಿಶಾಚಿಯಾಗಿ ನಿಂತಿರುವುದು ಇದ್ದೇ ಇದೆ. ಮೊದಲೆÇÉಾ ಉಳ್ಳವರು ಮಾತ್ರವೇ ನನ್ನಲ್ಲಿ ಮದುವೆ ಮಾಡುತ್ತಿದ್ದರು, ಆದರೆ ಈಗ ಸ್ಥಳದ ಆಭಾವ, ನೀರಿನ ಅಭಾವ ಹೆಚ್ಚಾಗಿರುವುದರಿಂದ ಎಲ್ಲರೂ ಮದುವೆಗೆ ಕಲ್ಯಾಣ ಮಂಟಪಗಳನ್ನೇ ನೆಚ್ಚಿಕೊಂಡಿ¨ªಾರೆ.

ಸುತ್ತಮುತ್ತಲಿನ ಹಳ್ಳಿಜನರೂ ಸಹ ಈಗ ಮದುವೆಗಳಿಗೆ ನಮ್ಮನ್ನೇ ಹೆಚ್ಚಾಗಿ ಆಶ್ರಯಿಸುವುದುಂಟು. ಹಳೆಯ ದಿನಗಳಲ್ಲಿ ಮದುವೆ ಎನ್ನುವುದು ಐದು ದಿನಗಳ ಕಾರ್ಯಕ್ರಮವಾಗಿತ್ತಂತೆ, ಆದರೆ ಈಗ ಬರೀ ಎರಡು ದಿನಗಳ ಆಚರಣೆಗೆ ಸೀಮಿತವಾಗಿದೆ. ಯಾರಿಗೂ ಪುರುಸೊತ್ತಿÇÉಾ, ಸಮಯವಿÇÉಾ, ರಜೆ ಸಿಗುವುದಿÇÉಾ ಎಂಬುವುದು ಒಂದು ಕಡೆಯಾದರೆ ನನ್ನಂತಹ ಮದುವೆ ಛತ್ರಗಳ ಬಾಡಿಗೆ ಗಗನಕ್ಕೇರಿರುವುದೂ ಸಹ ಮತ್ತೂಂದು ಕಾರಣ. ನನ್ನನ್ನು ಬುಕ್‌ ಮಾಡಿದ ಮೇಲೆಯೇ ಮದುವೆ ಆಮಂತ್ರಣ ಪತ್ರಿಕೆಗಳು ಅಚ್ಚಾಗುವುದು ಎಂದರೆ ನನಗಿರುವ ಪ್ರಾಮುಖ್ಯತೆ ಕಂಡು ಖುಷಿಯಾಗುತ್ತದೆ. ಅದರಲ್ಲೂ ನನ್ನಂತಹ ಎಸಿ ಅಳವಡಿಸಿರುವ ಕಲ್ಯಾಣಮಂಟಪ ಆಯ್ಕೆ ಉಳ್ಳವರದ್ದೇ ಸೈ.

ನನ್ನ ಮಾಲೀಕನೂ ನನ್ನ ನಿರ್ಮಾಣಕ್ಕೆ ಮೊದಲು ಸಿನೆಮಾ ಟಾಕೀಸು ಕಟ್ಟಿಸುವ ಯೋಜನೆ ಹಾಕಿದ್ದನಂತೆ. ಈಗಿನ ಪೀಳಿಗೆ ಮೊದಲೇ ಚಿತ್ರಮಂದಿರಗಳಲ್ಲಿ ಸಿನೆಮಾ ನೋಡುವುದನ್ನು ಕಡಿಮೆ ಮಾಡಿವೆ.  ಮೊದಲು ಟಿವಿ ಹಾವಳಿಯಿಂದ ಟಾಕೀಸುಗಳು ಸ್ವಲ್ಪಮಟ್ಟಿಗೆ ಹೊಡೆತ ಕಂಡರೂ ಉತ್ತಮ ಸಿನೆಮಾಗಳನ್ನು ಜನರು ಚಿತ್ರಮಂದಿರಗಳಿಗೇ ಬಂದು ವೀಕ್ಷಿಸುತ್ತಿದ್ದರು. ಆದರೆ ಈಗ ಮೊಬೈಲು, ಕಂಪ್ಯೂಟರ್‌ಗೆ ಇಂಟರ್‌ನೆಟ್‌ ಹಾಕಿಸಿಕೊಂಡು ಅದರÇÉೇ ತಮಗೆ ಬೇಕಾದ ಸಿನೆಮಾ ವೀಕ್ಷಿಸುವ ಹುಚ್ಚು ಹೆಚ್ಚಾಗಿರುವುದನ್ನು ಕಂಡು ಸದ್ಯ ನೊಣ ಹೊಡೆಯುವ ಪರಿಸ್ಥಿತಿ ಬರಬಾರದÇÉಾ ಎಂದು ನನ್ನನ್ನು ಕಟ್ಟಿಸುವ ಆಲೋಚನೆ ಬಂತು ಅಂತಾ ಸ್ನೇಹಿತರ ಬಳಿ ಹೇಳುತ್ತಿರುತ್ತಾನೆ. ಅದೂ ಅಲ್ಲದೆ ಮೊದಲಿನ ಕಾಲದ ಹಾಗೆ ನಮ್ಮ ಅಣ್ಣಾವ್ರ ಸಿನೆಮಾ, ವಿಷ್ಣು, ಅಂಬಿ, ಅನಂತ್‌ ಮುಂತಾದ ನಾಯಕರು ನಟಿಸಿದ್ದ ಸಿನೆಮಾಗಳಿಗೆ ಮೂರ್‍ನಾಕು ಗಂಟೆ ಕ್ಯೂ ಹಚ್ಚಿ ಟಿಕೆಟ್‌ ಸಿಕ್ಕಾಗ ಜನ್ಮ ಸಾರ್ಥಕವಾಯಿತೆಂದು ಸಂಭ್ರಮ ಪಡುವ ಜನರೇ ಕಡಿಮೆ. ಆಗೊಂದು, ಈಗೊಂದು ಉತ್ತಮ ಸಿನೆಮಾಗಳು ಬಂದರೂ ಜನರಿಗೆ ಟಾಕೀಸಿಗೆ ಹೋಗಿ ನೋಡುವಷ್ಟು ಸಹನೆಯೂ ಇಲ್ಲ ಎಂದು ಆಗಾಗ ಬೈಯುತ್ತಿರುತ್ತಾನೆ. ಇದನ್ನೆÇÉಾ ಗಮನದಲ್ಲಿಟ್ಟುಕೊಂಡೇ ಪಾಪ ನನ್ನನ್ನು ಕಟ್ಟಿಸುವ ಪ್ಲಾನು ಮಾಡಿರಬೇಕು. ಅವನ ಪ್ಲಾನು ಪ್ಲಾಪಾಗಲಿಲ್ಲ.  ನನ್ನಿಂದ ಲಾಭ ಅವನು ಊಹಿಸಿದ್ದಕ್ಕಿಂತ ಹೆಚ್ಚಾಗುತ್ತಿರುವುದೇ ಕಾರಣ.  ಏಕೆಂದರೆ ಜಗತ್ತಿನಲ್ಲಿ ಏನು ನಡೆಯದಿದ್ದರೂ ಮದುವೆಗಳು ನಡೆದೇ ನಡೆಯುತ್ತವೆ ನೋಡಿ. ಎಷ್ಟೇ ಹಣದ ಅಡಚಣೆ ಇದ್ದರೂ ಮದುವೆ ಛತ್ರಕ್ಕೆ ಹೇಗಾದರೂ ಹಣ ಹೊಂದಿಸಿಯೇ ತೀರುತ್ತಾರೆ.   

ನನ್ನದೇ ಪುರಾಣವಾಯಿತು. ಸಂಜೆಯಿಂದ ಗಂಡು-ಹೆಣ್ಣಿನ ಕಡೆಯವರು ಅದೆಷ್ಟು ಸಂಭ್ರಮ ಸಡಗರದಿಂದ ನಿಶ್ಚಿತಾರ್ಥಕ್ಕೆ ಅಣಿ ಮಾಡಿದರು ಗೊತ್ತಾ! ಮದುಮಕ್ಕಳನ್ನು ಕೂರಿಸಿ ನಿಶ್ಚಿತಾರ್ಥದ ಶಾಸ್ತ್ರವೂ ನೆರವೇರಿತು. ವಧುವಿನ ಸುತ್ತಲೂ ಆಕೆಯ ಗೆಳತಿಯರ ದಂಡು ಸುತ್ತುವರೆದು ಆಕೆಯನ್ನು, ಮದುಮಗನನ್ನು ರೇಗಿಸುತ್ತಾ ನಗಿಸುತ್ತಿತ್ತು. ಆಕಡೆ ವರನ ಕಡೆಯ ಚಿಗುರುಮೀಸೆ ತರುಣರು ಈ ತರುಣಿಯರನ್ನು ತುಂಟತನದಿ ಚುಡಾಯಿಸುತ್ತ ಮಾತಿನÇÉೇ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದರು.  ಹುಡುಗಾಟದ ವಯಸ್ಸು ನೋಡಿ. ಮದುವೆಗೆ ಕನ್ಯಾ ಹುಡುಕುತ್ತಿರುವ ತರುಣರ ಕಣ್ಣು ಚಂದದ ಚೆಲುವೆಯರನ್ನು ಹಿಂಬಾಲಿಸುತ್ತಿತ್ತು. ಕೆಲವು ಹಿರಿಯರು ತಮ್ಮ ಮದುವೆ ವಯಸ್ಸಿನ ಮಗಳು ಅಥವಾ ಮಗನಿಗೆ ಯಾರಾದರೂ ಸೂಕ್ತ ಎನಿಸಿದರೆ  ಅವರ ಕುಲ, ಗೋತ್ರ, ವಿದ್ಯಾಭ್ಯಾಸ, ಮನೆತನ ವಿಚಾರಿಸುತ್ತಿದ್ದರು. ಅವರವರ ಯೋಚನೆ ಅವರವರಿಗೆ ಅಲ್ಲವೇ? ಇÇÉೇ ಪ್ರೇಮ ಅಂಕುರಿಸಿ ನಂತರ ಮದುವೆ ಮಾತುಕತೆ ಆಗಿರುವ ಜೋಡಿಗಳೆಷ್ಟೋ ನೋಡಿದ್ದೇನೆ. ಹಾಗೆಯೇ ಕೆಲವೊಂದು ಮದುವೆಗಳಲ್ಲಿ ತಾಳಿ ಕಟ್ಟುವ ಸಮಯದಲ್ಲಿ ವಧು ಅಥವಾ ವರ ಪರಾರಿಯಾಗಿ ಹೆತ್ತವರಿಗೆ ಫ‌ಜೀತಿ ತಂದಿಟ್ಟಿದ್ದನ್ನೂ ಕಂಡಿದ್ದೇನೆ.    

ಇನ್ನು ಊಟ ಆದ ಮೇಲೆ ಶುರುವಾದ ಅರಿಶಿಣ ಶಾಸ್ತ್ರದ ಗದ್ದಲ ಇನ್ನೂ ಮುಂದುವರೆದಿದೆ ನೋಡಿ. ವಧುವಿನ ಮೈ ಅರಿಶಿಣದಿಂದ ಮಿಂದೆದ್ದು ಕೆನ್ನೆಗಳು ಮುತ್ತೆçದೆಯರ ಹಾಗೂ ಗೆಳತಿಯರ ಛೇಡಿಸುವಿಕೆಗೆ ಯಾವುದೋ ಸುಮಧುರ ನೆನಪಿನಿಂದ ಆಗಾಗ ಕುಂಕುಮ ಬಣ್ಣಕ್ಕೆ ತಿರುಗುತ್ತಿದೆ. ಆಕೆಯ ಮುಖದಲ್ಲಿ ಚೆÇÉಾಟದ ಹುಡುಗಿಯ ಹುಡುಗುತನ ಮಾಯವಾಗಿ ಪ್ರೌಢಕಳೆ ಬಂದಿದೆ. ಸುತ್ತಮುತ್ತಲಿನ ಮುತ್ತೆçದೆಯರೂ ಸಹ ಅರಿಶಿಣವನ್ನು ಒಬ್ಬರಿಗೊಬ್ಬರು ಹಚ್ಚುತ್ತಾ ಸಂಭ್ರಮಿಸುತ್ತಿ¨ªಾರೆ. ವಧುವಿನ ತಂದೆತಾಯಿಗಳು ಸಂಜೆಯಿಂದ ಗಂಡಿನ ಕಡೆಯವರು ಹಾಗೂ ಅತಿಥಿಗಳ ಊಟ, ಉಪಚಾರದಲ್ಲಿ ಯಾವ ಕುಂದುಕೊರತೆಯೂ ಬಾರದಂತೆ ಎಚ್ಚರವಹಿಸುವುದರಲ್ಲಿ ಪೂರ್ತಿ ಮಗ್ನರಾಗಿ¨ªಾರೆ. ಸದ್ಯ ಈ ಮದುವೆ ನಿರ್ವಿಘ್ನವಾಗಿ ಮುಗಿದರೆ ಸಾಕೆಂದು ಅದೆಷ್ಟು ದೇವರಲ್ಲಿ ಹರಕೆ ಕಟ್ಟಿಕೊಂಡಿ¨ªಾರೋ ಏನೋ?  ಹೆಣ್ಣು ಹೆತ್ತವರು ತಾನೆ, ಇದೆÇÉಾ ಇದ್ದದ್ದೇ ಬಿಡಿ. ತಾವು ದುಡ್ಡು ಕೊಟ್ಟು ಮಾಡಿಸಿದ ಅಲಂಕಾರ ಮಗಳದ್ದೇ ಇರಬಹುದು, ನನ್ನದೇ ಇರಬಹುದು ಆಸ್ವಾದಿಸಲು ಅವರಿಗೆ ಪುರುಸೊತ್ತೇ ಇರುವುದಿಲ್ಲ. ಇನ್ನು ನಿ¨ªೆ ಬಂದ ಗಂಡಸರು ಹೆಂಗಸರ ಸಂಭ್ರಮ ನೋಡುತ್ತಾ ಅಲ್ಲÇÉೇ ಉರುಳಿ ನಿ¨ªೆಗೆ ಜಾರುತ್ತಿ¨ªಾರೆ, ಕೆಲವರು ರೂಮಿಗೆ ಹೋಗಿ ಮಲಗುತ್ತಿ¨ªಾರೆ. ಮತ್ತೂ ಕೆಲವರು ಮಕ್ಕಳನ್ನು ತಟ್ಟಿ ಮಲಗಿಸುತ್ತಿ¨ªಾರೆ. ಮತ್ತೆ ಕೆಲವು ಜನಕ್ಕೆ ರೂಮುಗಳು ಸಾಕಾಗುವುದಿಲ್ಲ ಹೊಟೇಲುಗಳಲ್ಲಿ ಬುಕ್‌ ಮಾಡಿಸಿ “ಬೀಗರೇ’ ಅಂತಾ ಗಂಡಿನ ತಂದೆ ಗತ್ತಿನಿಂದ ಆರ್ಡರ್‌ ಮಾಡಿದ್ದನ್ನು ಕೇಳಿಸಿಕೊಂಡೆ. ಪಾಪ ಯಾರ್ಯಾರಿಗೋ ಫೋನ್‌ ಮಾಡಿ ಹೇಳಿ ಒಂದತ್ತು ರೂಮು ಬುಕ್‌ ಮಾಡಲು ಕಳುಹಿಸಿ ಪಾಪ ಸುಸ್ತಾಗಿ ನನ್ನ ಕಂಬಕ್ಕೆ ಒರಗಿಕೊಂಡು ನಿಂತಿದ್ದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಎಷ್ಟೋ ಮದುವೆಗಳಲ್ಲಿ ಊಟ ಸರಿಯಾಗಿಲ್ಲ, ಕೊಟ್ಟಿರುವ ಬಟ್ಟೆ ಸರಿಯಿಲ್ಲ, ಬಂಗಾರದ ಚೈನು, ಉಂಗುರ ದಪ್ಪ ಇಲ್ಲ, ಸ್ವಾಗತಿಸಲು ಯಾರೂ ಇಲ್ಲ, ಸರಿಯಾಗಿ ಮಾತನಾಡಿಸಲಿಲ್ಲ ಹೀಗೆ ಏನೇನೋ ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಕ್ಯಾತೆ ತೆಗೆಯದಿದ್ದರೆ ಗಂಡಿನ ಕಡೆಯವರು ಹೇಗಾಗುತ್ತಾರೆ ಹೇಳಿ? ಆದರೂ ಈಗೀಗ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ.  ಹೆಣ್ಣು-ಗಂಡು ಇಬ್ಬರೂ ಆದಷ್ಟು ದುಡಿಯುವವರಾಗಿರುವುದರಿಂದ ಸ್ವಲ್ಪ ಗಂಡಿನವರ ಗತ್ತು, ಗೈರತ್ತು ಕಡಿಮೆಯಾಗಿ ಹೆಣ್ಣಿನ ಕಡೆಯವರಿಗೆ ಸಿಗಬೇಕಾದ ಗೌರವ ಸಲ್ಲುತ್ತಿದೆ.  

ಬೆಳಗಾಯಿತೇ?, ಕಣ್ಣು ಹತ್ತಿದ್ದೇ ಗೊತ್ತಾಗಲಿಲ್ಲ. ಅಬ್ಟಾ, ಎಲ್ಲರಲ್ಲೂ ಒಂದು ರೀತಿಯ ಗಡಿಬಿಡಿ ಕಾಣುತ್ತಿದೆ. ಸುರಗಿ ನೀರಾದ ಮೇಲೆ ತಾಳಿಕಟ್ಟುವ ಶಾಸ್ತ್ರದ ತನಕ ಜೋಯಿಸರು ಹೇಳಿದ ರೀತಿಯಲ್ಲಿ ಎಲ್ಲವೂ ನಡೆಯುತ್ತಿದೆ. ಮೂರು ಗಂಟು ಬೀಳುವ ವೇಳೆಯಲ್ಲಿ ಹೆಣ್ಣು ಹೆತ್ತ ತಾಯಿಯ ಗಂಟಲುಬ್ಬಿ ಬಂದು, ಒಂದೆಡೆ ಮಗಳು ಮದುವೆಯಾದ ಸಂತೋಷ, ಮತ್ತೂಂದೆಡೆ ಅವಳನ್ನು ಅಗಲುವ ದುಃಖದಲ್ಲಿ ಉಕ್ಕಿ ಬರುವ ಭಾವನೆಗಳನ್ನು ನಿಯಂತ್ರಿಸುತ್ತಾ ಹರಸುತ್ತಿ¨ªಾಳೆ. ಅದಕ್ಕೇ “ತಾಯಿಗಿಂತ ಬಂಧುವಿಲ್ಲ’ ಎನ್ನುವರೇನೋ? ಇನ್ನು ತಂದೆಯಾದವನೂ ಸಹ ತನ್ನ ಕೈಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿದ್ದ ಚಿನಕುರಳಿ ಈಗ ತನ್ನ ಸಂಗಾತಿಯ ಕೈ ಹಿಡಿದು ಹೊಸ ಬಾಳಿಗೆ ನಾಂದಿ ಹಾಡುತ್ತಿರುವುದನ್ನು ಕಂಡಾಗ ಜನ್ಮ ಸಾರ್ಥಕ ಎನಿಸಿ ಕಣ್ಣೀರನ್ನು ಕಣ್ಣಿನÇÉೇ ಇಂಗಿಸಲು ಹರಸಾಹಸ ಪಡುವುದನ್ನು ಹತ್ತಿರದಿಂದ ನೋಡುವುದು ನಾನೇ ಅಲ್ಲವೇ? ಅಕ್ಷತೆ ಬಿದ್ದ ನಂತರ ನವದಂಪತಿಗಳು ತಮ್ಮದೇ ಕನಸಿನ ಲೋಕದಲ್ಲಿ ತೇಲಾಡುತ್ತಿ¨ªಾರೆ. ಎÇÉೋ ಹುಟ್ಟಿ, ಎÇÉೋ ಬೆಳೆದು ನನ್ನಲ್ಲಿ ಬಂದು ಒಂದಾಗಿ ಬೆಸೆಯುವ ಜೋಡಿಗಳಿಗೆ ನಾನೂ ಮನದುಂಬಿ ಆಶೀರ್ವದಿಸುತ್ತೇನೆ.  ಎರಡು ಮನಸುಗಳ ಮಿಲನಕ್ಕೆ ಎರಡು ಕುಟುಂಬಗಳ ಬಾಂಧವ್ಯಕ್ಕೆ ನಾನು ಸಾಕ್ಷಿಯಾಗಿ ನಿಲ್ಲುತ್ತೇನೆ. ಮೈಕಿನಲ್ಲಿ ಅಣ್ಣಾವ್ರ ಹಾಡು ತೇಲಿ ಬರುತ್ತಿದೆ 
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ… 

ಎಲ್ಲದಕ್ಕಿಂತ ಹೆಚ್ಚಾಗಿ ಫೋಟೋಗ್ರಾಫ‌ರ್‌ಗಳು ಹಾಗೂ ವೀಡಿಯೋಗ್ರಾಫ‌ರ್‌ಗಳು ಬಿಡುವಿಲ್ಲದೆ ಪ್ರತಿಯೊಂದು ನವದಂಪತಿಗಳು ಪಾಲ್ಗೊಳ್ಳುವ ಶಾಸ್ತ್ರಗಳನ್ನು ಸೆರೆಹಿಡಿಯುತ್ತಿ¨ªಾರೆ. ಈ ಬ್ಯೂಟೀ ಪಾರ್ಲರ್‌ನವರು ವಧು-ವರರನ್ನು ರತಿ-ಮನ್ಮಥರಂತೆ ಸಿಂಗರಿಸುತ್ತಿ¨ªಾರೆ.  ಅದೇನು ಮಾಯೆಯಿದೆಯೋ ಅವರ ಕೈಯಲ್ಲಿ ! , ಆ ಮೇಕಪ್ಪು ಕಿಟ್ಟಿನಲ್ಲಿ ಎಂಬುದೇ ನನಗೆ ಆಶ್ಚರ್ಯ. ಹೊಸ ಜೋಡಿಯ ಅವರವರ ಅಮ್ಮ, ಚಿಕ್ಕಮ್ಮ, ಅಕ್ಕ, ತಂಗಿಯರೂ ಸಹ ಬ್ಯೂಟಿ ಪಾರ್ಲರ್‌ನ ಮಹಿಳೆಯ ಕೈಯÇÉೇ ಸಿಂಗರಿಸಿಕೊಳ್ಳುತ್ತಿ¨ªಾರೆ. ಆಕೆಯ ಕೈ ಚಕಚಕನೆ ಇವರೆಲ್ಲರ ಹೇರ್‌ ಸ್ಟೈಲ್‌, ಮೇಕಪ್ಪು ಮಾಡುತ್ತಿದ್ದರೆ ನಾನಂತೂ ಬೆಪ್ಪಾಗಿ ನೋಡುತ್ತಿರುತ್ತೇನೆ.  ಇನ್ನು ಆರತಕ್ಷತೆಯಲ್ಲಿ ಪ್ರತಿಯೊಬ್ಬರೂ ಉಡುಗೊರೆ ಕೊಟ್ಟು ಹಾರೈಸಿ ವಿಡಿಯೋ, ಫೋಟೋಕ್ಕೆ ಪೋಸು ಕೊಡುವ ದೃಶ್ಯ ಮನಮೋಹಕ. ಈಗಿನ ಕಾಲದಲ್ಲಿ ಸ್ಮಾರ್ಟ್‌ಫೋನುಗಳು ಲಗ್ಗೆಯಿಟ್ಟು ಎಲ್ಲರೂ ಅವರವರದೇ ಗುಂಪು ಮಾಡಿಕೊಂಡು ಫೋಟೋಗಳನ್ನು, ವೀಡಿಯೋಗಳನ್ನು ತೆಗೆದುಕೊಳ್ಳುತ್ತಿರುವುದೇ ಹೆಚ್ಚು ಕಾಣುತ್ತಿದೆ. ಸೆಲ್ಫಿà ಹುಚ್ಚಂತೂ ಮಿತಿಮೀರಿದೆ ಬಿಡಿ. 

ಉಡುಗೊರೆ ಕೊಟ್ಟ ನಂತರ ಊಟದ ಕೋಣೆಯ ಕಡೆ ಎಲ್ಲರೂ ಹೆಜ್ಜೆ ಹಾಕುತ್ತಿ¨ªಾರೆ. ಅಲ್ಲಂತೂ ಸಾûಾತ್‌ ಅನ್ನಪೂರ್ಣೇಶ್ವರಿ ದೇವಿಯೇ ಅವತರಿಸಿ¨ªಾಳೇನೋ ಎಂಬಂತೆ ಭಾಸವಾಗುತ್ತಿದೆ. ಅದೆಷ್ಟು ಬಗೆ ಬಗೆಯ ತಿನಿಸುಗಳು, ಸಿಹಿಭಕ್ಷÂಗಳು. ಅದರ ಪರಿಮಳ ಜನರ ಜಿಹ್ವಾ ಚಾಪಲ್ಯ ಗರಿಗೆದರುವಂತೆ ಮಾಡುತ್ತಿವೆ. ಬಾಳೆಎಲೆ ಊಟ ಬಯಸುವವರಿಗೊಂದು ಕಡೆ, ಬಫೆ ಬಯಸುವವರಿಗೆ ಇನ್ನೊಂದು ಕಡೆ ಅಣಿ ಮಾಡಿ¨ªಾರೆ. ಇನ್ನೂ ಪಂಕ್ತಿ ಮುಗಿಯುವ ಮುಂಚೆಯೇ ಕೂತು ಉಣ್ಣುವವರ ಹಿಂದೆ ಮುಂದಿನ ಪಂಕ್ತಿಗೆ ಜನ ನಿಂತು ಉಣ್ಣುವವರನ್ನು ಮಜುಗರಕ್ಕೀಡು ಮಾಡುತ್ತಿ¨ªಾರೆ, ಸ್ವಲ್ಪ ಕಾಯುವಷ್ಟು ಸಹನೆ ಇಲ್ಲ. ಹೋಗಲಿ ಎಂದರೆ ಬಫೆ ಸಿಸ್ಟಮ್ಮಿಗೂ ಆಡಿಕೊಳ್ಳುವವರೇನು ಕಡಿಮೆ ಇಲ್ಲ. ಭಿಕ್ಷುಕರಂತೆ ಕೈಯೊಡ್ಡಿ ನಿಲ್ಲಬೇಕು ಎಂದು ಹೀಯಾಳಿಸುವವರೆಷ್ಟೋ? ಬೇಕಾಗಿದ್ದು, ಬೇಡಾಗಿದ್ದನ್ನೆಲ್ಲ ಆವಶ್ಯಕತೆ ಇರಲಿ, ಇಲ್ಲದಿರಲಿ ಹಾಕಿಸಿಕೊಂಡು ಬಿಟ್ಟು ಹೋಗುವವರೇನು ಕಡಿಮೆಯಿಲ್ಲ. ಅನ್ನದ ಹಾಗೂ ಹಸಿವಿನ ಬೆಲೆ ಅರಿತವರು ಮಾತ್ರ ಪೂರ್ತಿಯಾಗಿ ತಿಂದು ಕೈತೊಳೆಯುವುದು. ಫ‌ಲ, ತಾಂಬೂಲ ಸ್ವೀಕರಿಸಿ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಿ¨ªಾರೆ.  

ಸಂಜೆಯ ಹೊತ್ತಿಗೆ ಎಲ್ಲರೂ ಹೊರಟು ಎಲ್ಲ ಖಾಲಿ ಖಾಲಿ ಎನಿಸುತ್ತಿದೆ.  ಹೂಂ! ಈಗ ನನ್ನನ್ನು ಸ್ವತ್ಛಗೊಳಿಸಲು ಬಹಳಷ್ಟು  ಸಿಬ್ಬಂದಿಯೇ ಬೇಕು ಬಿಡಿ, ಅಷ್ಟು ಗಬ್ಬು ನಾರುತ್ತಿದ್ದೇನೆೆ. ನನ್ನ ಬಾತ್‌ರೂಮುಗಳು, ಟಾಯ್‌ಲೆಟ್ಟುಗಳ ಸ್ಥಿತಿಯಂತೂ ಹೇಳಲೇಬೇಕಾಗಿಲ್ಲ.  ಕನ್ನಡಿಗಳಿಗೆÇÉಾ ಟಿಕಲಿಗಳನ್ನು ಅಂಟಿಸಿ, ಸೋಪುಗಳೆÇÉಾ ಕರಗಿ ಮೆತ್ತಿಕೊಂಡು ಜಾರಿಕೆಯಾಗಿವೆ. ತಮ್ಮನ್ನು ಅಲಂಕರಿಸಿಕೊಳ್ಳುವ ಭರದಲ್ಲಿ ರೂಮಿನ ಅಂದವನ್ನು ಕಡೆಗಾಣಿಸುತ್ತಾರೆ. ರೂಮುಗಳಲ್ಲಿ ಮುಡಿದು ಬಾಡಿ ಬಿಸಾಕಿದ ಹೂವು, ಬಾಚಿದ ಮೇಲೆ ಕಟ್ಟಿ ಬಿಸಾಡಿರುವ ಕೂದಲಿನ ಗಂಟುಗಳು, ಜ್ಯೂಸು, ಕಾಫಿ ಲೋಟಗಳು ಎÇÉೆಂದರಲ್ಲಿ ಕಾಣುತ್ತಿವೆ. ಕಸಕ್ಕೆಂದು ಬುಟ್ಟಿ ಇದ್ದರೂ ಅದನ್ನು ಉಪಯೋಗಿಸುವರು ಕಡಿಮೆಯೇ. ಹೋಗುವಾಗ ಸೌಜನ್ಯಕ್ಕೂ ನನ್ನನ್ನು ನೆನೆಸಿಕೊಳ್ಳುತ್ತಾರೋ? ಗೊತ್ತಿಲ್ಲ. ಅಷ್ಟು ದುಡ್ಡು ಸುರಿದಿದ್ದೇವೆ ಈ ಛತ್ರಕ್ಕೆ, ಹಾಗಾಗಿ ಇದನ್ನು ನಾವಿರುವ ತನಕ ಹ್ಯಾಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು ಎನ್ನುವ ಅವರ ಆಲೋಚನೆಯಲ್ಲಿ ನಾನೊಬ್ಬ ಬೆಲೆವೆಣ್ಣೇನೋ ಎಂಬಂತೆ ಭಾಸವಾಗಿ ಒಮ್ಮೊಮ್ಮೆ ಮನ ಮುದುಡುತ್ತದೆ.  ಆದರೆ ಅದನ್ನೆಂದೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ.    

ಮತ್ತೆ ಎರಡು ದಿನದಲ್ಲಿ ಮಾಲೀಕ ನನ್ನನ್ನು ಲಕಲಕ ಹೊಳೆಯುವಂತೆ ಮಾಡಿ¨ªಾನೆ. ಅದ್ಯಾರೋ ಮತ್ತೂಬ್ಬ ತಂದೆ ನನ್ನನ್ನು ಬುಕ್‌ ಮಾಡಲು ಬಂದಿ¨ªಾನೆ. ಮತ್ತೆ ಯಾವ ಮು¨ªಾದ ಜೋಡಿ ಒಂದಾಗಲು ನನ್ನಂಗಳಕ್ಕೆ ಕಾಲಿಡುತ್ತದೆಯೋ ಎಂದು ನೋಡಲು ಕಣ್ಣುಗಳು ಕಾತರಿಸುತ್ತಿವೆ. ನಿಮ್ಮ ಪೈಕಿಯವರೇನು?

– ನಳಿನಿ ಭೀಮಪ್ಪ

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.