Updated at Sun,25th Jun, 2017 12:20PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಉತ್ತರ ಕೊರಿಯಾ ಗಡಿಯಲ್ಲಿ ರಷ್ಯಾ ಸೇನೆ

ಮಾಸ್ಕೋ: ಉತ್ತರ ಕೊರಿಯಾ ಭಾಗದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಕಿಮ್‌ ಜೋಂಗ್‌-ಉನ್‌ ಅವರನ್ನು ಗುರಿಯಾಗಿಸಿಕೊಂಡು ಅಮೆರಿಕ ಯಾವುದೇ ಕ್ಷಣದಲ್ಲಿ ಬೇಕಾದರೂ ದಾಳಿ ಮಾಡೇ ಬಿಡುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಬಳಿಕ ಇದೀಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌, ಉತ್ತರ ಕೊರಿಯಾಗೆ ಹೊಂದಿಕೊಂಡಿರುವ ರಷ್ಯಾ ಗಡಿ ಭಾಗಕ್ಕೆ ಸೇನಾಪಡೆ ಹಾಗೂ ಯುದ್ಧ ಸಾಮಗ್ರಿಗಳನ್ನು ರವಾನಿಸುತ್ತಿದ್ದಾರೆ.

ಒಂದೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಂಗ್‌ಯಾಂಗ್‌ ಮೇಲೆ  ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಉತ್ತರ ಕೊರಿಯಾದ ವಲಸಿಗರು ಗಡಿ ಮೂಲಕ ರಷ್ಯಾ ಪ್ರವೇಶಿಸುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪುಟಿನ್‌ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಟ್ರಂಪ್‌ ದಾಳಿಯ ಸುಳಿವರಿತ ಚೀನಾ, ತನ್ನ ದಕ್ಷಿಣ ಗಡಿ ಭಾಗಕ್ಕೆ 1.5 ಲಕ್ಷ ಸೈನಿಕರನ್ನು ನಿಯೋಜಿಸಿದ ಮರು ದಿನವೇ ಪುಟಿನ್‌ ಕೂಡ 11 ಮೈಲಿ ಉದ್ದದ ಗಡಿಯನ್ನು ಭದ್ರಗೊಳಿಸಲು ಮುಂದಾಗಿದ್ದಾರೆ.

ರಷ್ಯಾ ಗಡಿಯತ್ತ ಮೂರು ರೈಲುಗಳಲ್ಲಿ ಮಿಲಿಟರಿ ಸಾಮಗ್ರಿಗಳನ್ನು ಸಾಗಿಸುತ್ತಿರುವ ವೀಡಿಯೋ ಇದನ್ನು ದೃಢಪಡಿಸಿದೆ. ಇದೇ ವೇಳೆ ಉತ್ತರ ಕೊರಿಯಾ ಗಡಿಯುದ್ಧಕ್ಕೂ ಯುದ್ಧ ಹೆಲಿಕಾಪ್ಟರ್‌ಗಳೂ ಹಾರಾಡುತ್ತಿದ್ದು, ರಸ್ತೆ ಮೂಲಕವೂ ಯುದ್ಧ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ ಎನ್ನಲಾಗಿದೆ.

ಇದೇ ವೇಳೆ ಉತ್ತರ ಕೊರಿಯಾವೇನಾದರೂ, ಅಮೆರಿಕದ ಮೇಲೆ ಕ್ಷಿಪಣಿ ದಾಳಿ ನಡೆಸಿದರೆ ಅದನ್ನು ತಡೆಯುವ ಶಕ್ತಿ ತಮಗಿದೆಯೇ ಎಂಬುದನ್ನು ಪೆಂಟಗಾನ್‌ ಪರೀಕ್ಷೆ ಮಾಡುತ್ತಿದೆ. ಕ್ಷಿಪಣಿ ನಿರೋಧಕ ಶಕ್ತಿ ಎಷ್ಟಿದೆ, ಅದನ್ನು ಹೇಗೆ ಬಳಕೆ ಮಾಡಬೇಕು ಎಂಬಿತ್ಯಾದಿ ಸಂಗತಿಗಳ ಬಗ್ಗೆ ಅದು ಪರಿಶೀಲನೆ ನಡೆಸುತ್ತಿದೆ.


More News of your Interest

Back to Top