ಈದ್ ಮುನ್ನಾ ದಿನ ಉಗ್ರ ದಾಳಿ: ಪಾಕಿಸ್ಥಾನದ 3 ನಗರಗಳಲ್ಲಿ 65 ಸಾವು
Team Udayavani, Jun 24, 2017, 3:31 PM IST
ಇಸ್ಲಾಮಾಬಾದ್ : ಪಾಕಿಸ್ಥಾನದ ಮೂರು ಪ್ರಮುಖ ನಗರಗಳಲ್ಲಿ ಈದ್ ಮುನ್ನಾ ದಿನ ನಡೆದಿರುವ ಪ್ರತ್ಯೇಕ ಆತ್ಮಾಹುತಿ ದಾಳಿಗಳಲ್ಲಿ ಒಟ್ಟು 62 ಮಂದಿ ಹತರಾಗಿದ್ದು ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಬಲೂಚಿಸ್ಥಾನ ಪ್ರಾಂತ್ಯದ ರಾಜಧಾನಿಯಾಗಿರುವ ಕ್ವೆಟ್ಟಾದಲ್ಲಿನ ಐಜಿಪಿ ಮೆಹಬೂಬ್ ಅವರ ಕಾರ್ಯಾಲಯದ ಸಮೀಪ ಆತ್ಮಾಹುತಿ ಬಾಂಬ್ ದಾಳಿಕೋರನೋರ್ವ ಸ್ಫೋಟಕಗಳು ತುಂಬಿದ್ದ ಕಾರನ್ನು ಸ್ಫೋಟಿಸಿದಾಗ ಏಳು ಪೊಲೀಸರ ಸಹಿತ ಕನಿಷ್ಠ 13 ಮಂದಿ ಮೃತಪಟ್ಟ 21 ಮಂದಿ ಗಾಯಗೊಂಡರು.
ಈ ಸ್ಫೋಟವನ್ನು ಐಸಿಸ್ ಉಗ್ರ ಸಂಘನೆಯೊಂದಿಗೆ ನಂಟು ಹೊಂದಿರುವ ಉಗ್ರ ಸಮೂಹ ಮತ್ತು ತೆಹರೀಕ್ ಎ ತಾಲಿಬಾನ್ ಉಗ್ರ ಸಂಘಟನೆಯಿಂದ ಸಿಡಿದು ಹೋದ ಸಮೂಹವಾಗಿ ಜಮಾತ್ ಉಲ್ ಅಹರಾರ್ ನಡೆಸಿರುವುದಾಗಿ ಅವುಗಳ ಹೇಳಿಕೆಯಿಂದ ಗೊತ್ತಾಗಿದೆ.
ಇದಾಗಿ ಕೆಲವೇ ತಾಸುಗಳ ಅಂತರದಲ್ಲಿ ಕುರ್ರಂ ಬುಡಕಟ್ಟು ಪ್ರಾಂತ್ಯದಲ್ಲಿನ ಶಿಯಾ ಪ್ರಾಬಲ್ಯದ ಪಾರಾಚಿನಾರ್ ನಗರದಲ್ಲಿ ಜನದಟ್ಟನೆಯ ಮಾರುಕಟ್ಟೆಯಲ್ಲಿ ಬೆನ್ನು ಬೆನ್ನಿಗೆ ಎರಡು ಸ್ಫೋಟಗಳು ಸಂಭವಿಸಿದವು. ಪರಿಣಾಮವಾಗಿ ಶಿಯಾಗಳೇ ಹೆಚ್ಚು ಸಂಖ್ಯೆಯಲ್ಲಿರುವಂತೆ 45 ಮಂದಿ ಹತರಾಗಿ ಇತರ 75 ಮಂದಿ ಗಾಯಗೊಂಡರು.
ತೂರಿ ಮಾರುಕಟ್ಟೆಯಲ್ಲಿ ಮೊದಲ ಸ್ಫೋಟ ಸಂಭವಿಸಿತಾದರೆ ಎರಡನೇ ಸ್ಫೋಟ ಬಸ್ ನಿಲ್ದಾಣದಲ್ಲಿ ಸಂಭವಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ