ಕೊವ್ಯಾಕ್ಸಿನ್ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್
‘ಕೊವ್ಯಾಕ್ಸಿನ್’ಲಸಿಕೆಯು ಶೇ. 81 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ
Team Udayavani, Mar 3, 2021, 7:08 PM IST
ನವದೆಹಲಿ : ಭಾರತದಲ್ಲೇ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆಯು ಶೇ. 81 ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.
ಮತ್ತೊಂದು ವಿಷಯ ಅಂದ್ರೆ ಈ ಕೋವಿಡ್ ಲಸಿಕೆ ಅಮೆರಿಕಾದ ರೂಪಾಂತರ ಕೋವಿಡ್ ವೈರಸ್ ಸೋಂಕನ್ನೂ ಪರಿಣಾಮಕಾರಿಯಾಗಿ ಎದುರಿಸುತ್ತದೆ ಎಂದು ತಿಳಿಸಲಾಗಿದೆ
ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ನಂತ್ರ ಈ ಮಾಹಿತಿಯನ್ನು ನೀಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಕ್ಲಿನಿಕಲ್ ಟ್ರಯಲ್ ನಡೆದಿದ್ದು, ಇದಕ್ಕೆ 25,800 ಜನರು ಭಾಗವಹಿಸಿದ್ದರು. ಈ ಪೈಕಿ 43 ಜನರಿಗೆ ಕೋವಿಡ್ ಸೋಂಕು ಇದ್ದು, ಇವರಲ್ಲಿ ಕೇವಲ ಏಳು ಮಂದಿಗೆ ಪ್ರಯೋಗಾತ್ಮಕ ಲಸಿಕೆ ನೀಡಲಾಗಿತ್ತು. ಇನ್ನುಳಿದ 36 ಜನರು ಕೇವಲ ಪ್ರಯೋಗಗಳಿಗಷ್ಟೇ ಭಾಗಿಯಾಗಿದ್ದರು.
ಇನ್ನು ಕೋವ್ಯಾಕ್ಸಿನ್ ಕೊನೆಯ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುವ ಮುನ್ನವೇ ಭಾರತ ಸರ್ಕಾರವು ತುರ್ತು ಸಂದರ್ಭದಲ್ಲಿ ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ