ಕಳೆದ ಬಾರಿಯ ನಿರಾಸೆ ಮರುಕಳಿಸದಿರಲಿ


Team Udayavani, Mar 7, 2021, 1:20 PM IST

expection from budget

ಚಿಕ್ಕಬಳ್ಳಾಪುರ: ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಹಾಗೂ ತರಕಾರಿ ಉತ್ಪಾದನೆಯಲ್ಲಿ ಗಮನ ಸೆಳೆದಿರುವ ಯಾವುದೇ ನದಿನಾಲೆ ಗಳಿಲ್ಲದ ನೀರಾ ವರಿ ಸೌಲಭ್ಯದಿಂದ ವಂಚಿತಗೊಂಡಿರುವ ಬರ ಪೀಡಿ ತ ಪ್ರದೇಶ ಎಂದು ಅಪಖ್ಯಾತಿಗೆ ಗುರಿಯಾಗಿ ರುವ ‌ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಮುಕ್ತಿ ಸಿಗುವುದೇ ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಮಾ.8ರಂದು ಮುಖ್ಯಮಂತ್ರಿ ಬಿ.ಎಸ್‌ .ಯಡಿ ಯೂರಪ್ಪ ಅವರು ಮಂಡಿಸಲಿರುವ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿ ರುವ ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯ ಅನುದಾನ ಲಭಿಸುವುದೇ ಎಂಬ ಚರ್ಚೆ ಸಾರ್ವ ತ್ರಿಕ ವಲಯದಲ್ಲಿ ಆರಂಭಗೊಂಡಿದೆ.

ಅಪಾರ ನಿರೀಕ್ಷೆ: ರಾಜ್ಯ ಬಿಜೆಪಿ ಸರ್ಕಾರ ದಲ್ಲಿ ಪ್ರಭಾವಿ ಸಚಿವರು, ಸಿಎಂ ಆಪ್ತರಾಗಿರುವ ಡಾ.ಕೆ.ಸುಧಾ ಕರ್‌ ಮೇಲೆ ಜಿಲ್ಲೆಯ ಜನರು ಅಪಾರ ನಿರೀಕ್ಷೆ ಇಟ್ಟು ಕೊಂಡಿದ್ದು ಜಿಲ್ಲೆಯ ಸರ್ವಾಂ ಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆ ಗಳಿಗೆ ಬಜೆಟ್‌ ನಲ್ಲಿ ಸ್ಥಾನ ಮಾನ ಸಿಗುವುದೇ ಎಂದು ಕಾದುಕುಳಿತಿದ್ದಾರೆ.

ಇನ್ನೆಷ್ಟು ವರ್ಷ ಬೇಕು: ಜಿಲ್ಲೆಯಲ್ಲಿ ಪ್ರಮುಖವಾಗಿ ನೀರಾವರಿ ಸೌಲಭ್ಯ ಗಳಿಂದ ವಂಚಿತಗೊಂಡಿದ್ದು, ಈ ಭಾಗಕ್ಕೆ ಕುಡಿ ಯುವ ನೀರು ಪೂರೈಕೆ ಮಾಡುವ ಸಲು ವಾಗಿ ಆರಂಭಿಸಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಈ ಯೋಜನೆಯ ಮೂಲಕ ಬರಪೀಡಿತ ಜಿಲ್ಲೆಗೆ ನೀರು ಹರಿಯಲು ಎಷ್ಟು ವರ್ಷ ಕಾಯಬೇಕೆಂಬ ಅಸ ಮಾಧಾನ ಜಿಲ್ಲೆಯ ನಾಗರಿಕರಲ್ಲಿ ಉದ್ಭವವಾಗಿದೆ.

ತ್ವರಿತವಾಗಿ ಈಡೇರಲಿ: ರಾಜ್ಯ ಬಿಜೆಪಿ ಸರ್ಕಾರ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿ ಸಲು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ವಿರೋ ಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಮಳೆಯ ನೀರನ್ನು ಆಶ್ರಯಿಸಿಕೊಂಡು ಜೀವನ ನಡೆಸುತ್ತಿರುವ ಈ ಭಾಗದ ರೈತರಿಗೆ ಶಾಶ್ವತ ನೀರಾವರಿ ಯೋಜನೆ ಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆ ತ್ವರಿತವಾಗಿ ಈಡೇರಲಿ ಎಂಬ ಒತ್ತಾಸೆಯಾಗಿದೆ.

ಕೃಷ್ಣ ನದಿ ಹರಿಸಲಿ: ಜಿಲ್ಲೆಗೆ ನೀರಾವರಿ ಯೋಜನೆ ಕಲ್ಪಿಸುವ ಮೊದಲು ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಹೆಚ್‌.ಎನ್‌.ವ್ಯಾಲಿಯ ಯೋಜನೆ ಮೂಲಕ ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬಂದಿದ್ದು, ಅದು ಹೊರತುಪಡಿಸಿ ಬೇರೆ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿ ಗೊ ಳಿ ಸಿಲ್ಲ. ಈ ಮಧ್ಯೆ ಜಿಲ್ಲೆಯ ಗಡಿಗೆ ಹೊಂದಿ ಕೊಂಡಿರುವ ಹಿಂದೂಪುರಕ್ಕೆ ಕೃಷ್ಣ ನದಿ ನೀರು ಹರಿದು ಬಂದಿದ್ದು, ಅದನ್ನು ಜಿಲ್ಲೆಗೆ ಹರಿಸಲು ಜನಪ್ರತಿನಿಧಿಗಳು ಮತ್ತು ಸರ್ಕಾರ ವಿಶೇಷ ಗಮನ ಹರಿಸಬೇಕಾಗಿದೆ.

ಕೃಷಿ ಆಧಾರಿತ ಇನ್ನಿತರೆ ಕೈಗಾರಿಕೆ ಸ್ಥಾಪಿಸಲಿ: ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಹಿಂದಿನ ಸಮ್ಮಿಶ್ರ ಸರ್ಕಾರ ಜಿಲ್ಲೆಯ ಆಟೋ ಮೊಬೈಲ್‌ ಬಿಡಿಭಾಗಗಳ ಕಾರ್ಖಾನೆ ಮತ್ತು ಜಿಲ್ಲೆಯ ಜಲಮೂಲಗಳಾದ ಕೆರೆಗಳನ್ನು ಅಭಿವೃದ್ಧಿಳಿಸುವ ಯೋಜನೆ ಪ್ರಕಟಿಸಲಾಗಿತ್ತಾ ದರೂ ಇದುವರೆಗೆ ಎರಡು ಯೋಜನೆಗಳಿಗೆ ಮೋಕ್ಷ ಕೂಡಿ ಬಂದಿಲ್ಲ. ಜಿಲ್ಲೆಯಲ್ಲಿ ಬಹುತೇಕ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಬೆಂಗಳೂರು ಮತ್ತಿತರರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಜಿಲ್ಲೆಯಲ್ಲಿ ಕೃಷಿ ಆಧಾರಿತ ಇನ್ನಿತರೆ ಕೈಗಾರಿಕೆಗಳನ್ನು ಸ್ಥಾಪಿಸಬೇಕಾಗಿದೆ.

ಶೈಕ್ಷಣಿಕೆ ಕೇಂದ್ರ: ಶಿಡ್ಲಘಟ್ಟ ತಾಲೂಕಿನಲ್ಲಿ ಬೆಂಗ ಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಜಾಗವನ್ನು ಕಾಯ್ದಿರಿಸುವ ಮತ್ತು ಅಲ್ಲಿ ನಾಲೇಜ್‌ ಸಿಟಿ ಸ್ಥಾಪಿಸಬೇಕೆಂಬ ಬೇಡಿಕೆ ಅನುಷ್ಠಾನಗೊಳಿಸಲು ಅಗತ್ಯ ಹಣಕಾಸು ಮತ್ತು ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬಜೆಟ್‌ನಲ್ಲಿ ಆದ್ಯತೆ ನೀಡಿ ಜಿಲ್ಲೆಯನ್ನು ಶೈಕ್ಷಣಿಕೆ ಕೇಂದ್ರ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ.

ಎಂ.ಎ.ತಮೀಮ್‌ಪಾಷ

ಟಾಪ್ ನ್ಯೂಸ್

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

10

Drought relief: ಕೇಂದ್ರದ ಬರ ಪರಿಹಾರಕ್ಕೆ ಕಾದು ಕುಳಿತ ರೈತರು

Mangoes: ಹಣ್ಣುಗಳ ರಾಜ ಮಾವು ಈ ಬಾರಿ ದುಬಾರಿ

Mangoes: ಹಣ್ಣುಗಳ ರಾಜ ಮಾವು ಈ ಬಾರಿ ದುಬಾರಿ

Covishield Vaccine; ಹಾಕಿಸಿಕೊಂಡವರು ಐಸ್‌ಕ್ರೀಮ್‌ ತಿನ್ನಬಾರದಾ?

Covishield Vaccine ಹಾಕಿಸಿಕೊಂಡವರು ಐಸ್‌ಕ್ರೀಮ್‌ ತಿನ್ನಬಾರದಾ?

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.