ಹೊಸಲುಮಾರಮ್ಮನ ಜಾತ್ರೆ ಮಹೋತ್ಸವ

Team Udayavani, Mar 30, 2021, 4:21 PM IST

ಹೊಸಲುಮಾರಮ್ಮನ ಜಾತ್ರೆ ಮಹೋತ್ಸವ

ಹುಣಸೂರು: ತಾಲೂಕಿನ ಮಲ್ಲಿನಾಥಪುರ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವವು ಕೋವಿಡ್  ಹಿನ್ನೆಲೆಯಲ್ಲಿ ಸರಳವಾಗಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಮಾರಮ್ಮ ದೇವಸ್ಥಾನದ ಮೇಲೆ ಜೀವಂತ ಕೋಳಿ ಎಸೆದು ಹರಕೆ ತೀರಿಸುವ ವಿಶಿಷ್ಟ ಜಾತ್ರೆ ಇದಾಗಿದ್ದು, ತಹಶೀಲ್ದಾರ್‌ ಸೂಚನೆಯಂತೆ ಸುತ್ತ ಏಳುಊರಿನ ಜನರು ಸೇರಿ ಈ ಜಾತ್ರೆ ನಡೆಸಿದರು. ಮೊದಲಿಗೆ ಹುಣಸೂರು ಖಜಾನೆಯಲ್ಲಿ ಇಟ್ಟಿದ್ದ ದೇವರ ಭಂಡಾರವನ್ನು ಶನಿವಾರವೇ ಮಲ್ಲಿನಾಥಪುರದಲ್ಲಿರುವ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಸೋಮವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ದೇವಿಗೆ ವಿವಿಧ ಪೂಜಾ ಕೈಂಕರ್ಯ ನಡೆದವು. ಆನಂತರ ಸಂಪ್ರದಾಯದಂತೆ ಬೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನಾಭರಣ, ಬೆಳ್ಳಿಯ ಮುಖವಾಡ ಹಾಕಿ, ಅಲಂಕರಿಸಿ 2 ಕಿ.ಮೀ. ದೂರದ ದೇವಾಲಯಕ್ಕೆ ಮಲ್ಲಿನಾಥಪುರದಿಂದ ಬರಿಗಾಲಲ್ಲಿ ಮೆರವಣಿಗೆ ಮೂಲಕ ಭಕ್ತರು ಆಗಮಿಸಿದರು.

ಏಳು ಊರಿನ ಜನ: ದೇವಸ್ಥಾನದವರೆಗೆ ಬಾಯಿಗೆಬೀಗಹಾಕಿ ಕೊಂಡಿದ್ದವರು, ಭಕ್ತರು ಕೊಂಬು, ಕಹಳೆ, ಟಮಟೆ, ಮಂಗಳ ವಾದ್ಯಕ್ಕೆ ತ‌ಕ್ಕಂತೆ ನೃತ್ಯ ಮಾಡುತ್ತ ದಾರಿಯುದ್ದಕ್ಕೂ ಈಡುಗಾಯಿ ಒಡೆದು ಜಾತ್ರಾ ಮಾಳಕ್ಕೆ ಆಗಮಿಸಿದರು. ಸುತ್ತಮುತ್ತಲಿನ ‌ ಏಳೂರಿನಜನರು ಮಾತ್ರವೇ ಈ ಜಾತ್ರೆಯಲ್ಲಿ ಭಾಗವಹಿಸಿದ್ದರು.ದಾರಿಯುದ್ದಕ್ಕೂ ಈಡುಗಾಯಿ: ಮಲ್ಲಿನಾಥಪುರದಿಂದ ಮಾರಮ್ಮನ ಆಯುಧ, ಒಡವೆ ಇಡುವ ಪೆಟ್ಟಿಗೆ(ಕುರ್ಜು)ಯನ್ನು ಹುಲಿವಾಹನದಲ್ಲಿರಿಸಿ, ನಂದಿಕಂಬ ಹೊತ್ತು ಉತ್ಸವಮೂರ್ತಿಯೊಂದಿಗೆರಸ್ತೆಯುದ್ದಕ್ಕೂ ಈಡುಗಾಯಿ ಒಡೆಯುತ್ತ ಸಾಗಿಬಂದರೆ, ಮತ್ತೂಂದೆಡೆ ವೀರಗಾಸೆ ಕುಣಿತ, ಗುಡ್ಡದಕುಣಿತ, ಕಾಡು ಗುಡ್ಡರ ಕುಣಿತದೊಂದಿಗೆಬೀರೇಶ್ವರಸ್ವಾಮಿಗೆ ಉಘೇ ಉಘೇ ಎಂದು ಘೋಷಣೆ ಕೂಗುತ್ತ ಭಕ್ತರು ಭಕ್ತಿ-ಭಾವ ಮೆರೆದರು. ಮಹಿಳೆಯರು ತಲೆ ಮೇಲೆ ತಂಬಿಟ್ಟು ಹೊತ್ತಿದ್ದರೆ  , ಕೆಲವರು ಬಾಯಿಗೆ ಬೀಗ ಹಾಕಿಸಿಕೊಂಡು ದೇವರಿಗೆಹರಕೆ ತೀರಿಸಿದ್ದರು.

ಜೀವಂತ ಕೋಳಿ ಎಸೆದರು: ಮಧ್ಯಾಹ್ನದ ವೇಳೆಗೆ ದೇವರ(ಕುರ್ಜು) ಮೆರವಣಿಗೆ ದೇವಸ್ಥಾನದ ಬಳಿಗೆ ಆಗಮಿಸುತ್ತಿದ್ದಂತೆ ಹರಕೆ ಹೊತ್ತಿದ್ದ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾಂಕೇತಿಕವಾಗಿಜೀವಂತಕೋಳಿಯನ್ನು ದೇವಾಲಯದ ಮೇಲೆ ಎಸೆದರೆ, ದೇವಸ್ಥಾನದ ಎದುರು ದೇವಾಲಯಕ್ಕೆ ಸಂಬಂಧಿಸಿದ ಸುತ್ತಮುತ್ತಲ ಏಳೂರಿನ ಮುಖಂಡರು ಕುರಿಮರಿ ಬಲಿ ಕೊಟ್ಟು ಹರಕೆ ಸಲ್ಲಿಸಿದರು.

ಏಳೂರಿನ ಗ್ರಾಮದೇವತೆ: ಹೊಸಲುಮಾರಮ್ಮ ದೇವಸ್ಥಾನ ಸುತ್ತಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದಾಗಿದ್ದು, ಜಾತ್ರಾ ಮಹೋತ್ಸವ ‌ಕ್ಕೆ ಮಲ್ಲಿನಾಥಪುರ,ಬಿಳಿಕೆರೆ, ಬೋಳನಹಳ್ಳಿ-ರಾಮೇನಹಳ್ಳಿ, ರಂಗಯ್ಯನ ಕೊಪ್ಪಲು, ಎಮ್ಮೆಕೊಪ್ಪಲು, ಮೈದನಹಳ್ಳಿ ಗ್ರಾಮಸ್ಥರು ಬಿರುಬೀಸಲು ತಾಳಲಾರದೇ ದೇವಾಲಯದ ಆವರಣದ ಸುತ್ತಲಿನ ‌ಲ್ಲಿರುವ ಮರದ ನೆರಳಲ್ಲಿ ನಿಂತುದೇವರ ಮೆರವಣಿಗೆ ವೀಕ್ಷಿಸಿ, ಪೂಜೆ ಸಲ್ಲಿಸಿದರು.ಸಂಜೆ ಮತ್ತೆ ದೇವರಿಗೆ ಸಂಬಂಧಿಸಿದಒಡವೆ(ಭಂಡಾರ), ಆಯುಧ ಸೇರಿ ಎಲ್ಲವನ್ನೂಮೆರವಣಿಗೆಯಲ್ಲಿ ತಂದು, ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು.

ಪೊಲೀಸ್‌ ನಿರೀಕ್ಷಕ ರವಿಕುಮಾರ್‌, ಎಸ್‌ಐ ರಾಮಚಂದ್ರ ನಾಯಕ ನೇತೃತದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು‌ . ತಹಶೀಲ್ದಾರ್‌ ಬಸವರಾಜ್‌ ಸರಳವಾಗಿ ಆಚರಿಸಲು ಮನವಿ ಮಾಡಿದ್ದರಿಂದ ಹೊರಗಿನ ಭಕ್ತರ ‌ ಆಗಮಿಸಿರಲಿಲ್ಲ.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.