ಮಕ್ಕಳು ನೋಟ್ಸ್‌ ಹಂಚಿಕೊಳ್ಳಲಿ, ಭೌತಿಕ ತರಗತಿಯೂ ನಡೆಯಲಿ


Team Udayavani, May 23, 2021, 6:35 AM IST

ಮಕ್ಕಳು ನೋಟ್ಸ್‌ ಹಂಚಿಕೊಳ್ಳಲಿ, ಭೌತಿಕ ತರಗತಿಯೂ ನಡೆಯಲಿ

ಶೈಕ್ಷಣಿಕ ವ್ಯವಸ್ಥೆಯ ಮೇಲೆ ಕೊರೊನಾ ಕೊಟ್ಟ ಪೆಟ್ಟು ಅಂತಿಂಥದ್ದಲ್ಲ. ಕಳೆದ ವರ್ಷದ ಶಿಕ್ಷಣ ಆನ್‌ಲೈನ್‌ನಲ್ಲೇ ಲೀನವಾಗಿಬಿಟ್ಟಿತ್ತು. ಈ ವರ್ಷವೂ ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ. ಈ ಹಂತದಲ್ಲಿ ಏನು ಮಾಡಬೇಕು? ಸರಕಾರಕ್ಕೆ ಗೊಂದಲವಿದೆ; ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಸ್ಪಷ್ಟತೆ ಇಲ್ಲ. ಹಾಗಿದ್ದರೆ ಏನು ಮಾಡಬೇಕು? ಈ ಬಗ್ಗೆ “ಉದಯವಾಣಿ’ ರಾಜ್ಯದ ಉದ್ದಗಲದ ನೂರಕ್ಕೂ ಹೆಚ್ಚು ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆ. ಅವುಗಳಲ್ಲಿ ಕೆಲವರ ಅಭಿಪ್ರಾಯ ಇಲ್ಲಿದೆ.

ವಿದ್ಯಾರ್ಥಿಗಳು ನೋಟ್ಸ್‌ ವಿನಿಮಯ ಮಾಡಿಕೊಳ್ಳಬೇಕು
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ
ಆನ್‌ಲೈನ್‌ ಶಿಕ್ಷಣ ಪ್ರಮಾಣವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಕೆಲಸ ಮಾಡಬೇಕು. ಹಳ್ಳಿಗಳಲ್ಲಿ ಶಿಕ್ಷಕರು ಈಗಿನಿಂದಲೇ ನೋಟ್ಸ… ಸಿದ್ದಪಡಿಸಿ ಮೊಬೈಲ್‌ ವ್ಯವಸ್ಥೆ ಇರುವ ಮಕ್ಕಳಿಗೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಶಿಕ್ಷಕರು ಉಳಿದು ಪಾಠ ಮಾಡಲು ಅವಕಾಶ ಇದ್ದರೆ, ಅದಕ್ಕೆ ಆದ್ಯತೆ ನೀಡಬೇಕು. ಚೈನ್‌ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಬೇಕು. ವಾಟ್ಸ್‌ ಆ್ಯಪ್‌ ವ್ಯವಸ್ಥೆ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಠ್ಯವನ್ನು ನೋಟ್ಸ… ಕಳುಹಿಸಿ, ಅವರಿಂದ ಮೊಬೈಲ್‌ ವ್ಯವಸ್ಥೆ ಇಲ್ಲದ ಮಕ್ಕಳಿಗೆ ಪಾಠ ತಲುಪಿಸುವ ಕೆಲಸ ಮಾಡಬೇಕು. ಪತ್ರಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತ ಪಾಠಗಳನ್ನು ಕಲಿ ಸುವ ವ್ಯವಸ್ಥೆ ಮಾಡಬೇಕು. ಸರಕಾರ ಮಕ್ಕಳಿಗೆ ನಿರಂತರ ಕಲಿ ಕೆಗೆ ಅವಕಾಶ ಇರುವಂತೆ ನೋಡಿಕೊಳ್ಳಬೇಕು. ಮೊಬೈಲ್‌, ವಾಟ್ಸ್‌ ಆ್ಯಪ್‌ ಇಲ್ಲದ ಮಕ್ಕಳನ್ನು ವಾಟ್ಸ್‌ ಆ್ಯಪ್‌ ಇರುವ ಮಕ್ಕ ಳೊಂ ದಿಗೆ ಸೇರಿಸಿ ನೋಟ್ಸ್‌ ಬರೆದುಕೊಳ್ಳುವ ವ್ಯವಸ್ಥೆ ಮಾಡಬೇಕು.
**
ಸೆಪ್ಟಂಬರ್‌ ವರೆಗೆ ಭೌತಿಕ ತರಗತಿಗೆ ಅವಕಾಶ ಕೊಡಿ
– ಕಿರಣ್‌ ಪ್ರಸಾದ್‌, ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಉಪಾಧ್ಯಕ್ಷರು
ಆನ್‌ಲೈನ್‌ ಕಲಿ ಕೆಗೆ ಭಾರ ತ ದಲ್ಲಿ ಅಷ್ಟೇನು ಉತ್ತೇ ಜ ನ ಕಾ ರಿ ಯಾಗಿ ಇಲ್ಲ. ಹೀಗಾಗಿ ಭೌತಿಕ ತರ ಗ ತಿ ಗಳು ಅನಿ ವಾ ರ್ಯ ವಾ ಗಿದೆ. ಮುಂದಿನ ಅಕ್ಟೋ ಬರ್‌, ನವೆಂಬರ್‌ನಲ್ಲಿ ಕೋವಿಡ್‌ ಸೋಂಕು 3ನೇ ಅಲೆಯ ಅಪಾಯ ಇರುವುದರಿಂದ ಸರಕಾರ ಜುಲೈಯಿಂದ ಸೆಪ್ಟಂಬರ್‌ತನಕ ಭೌತಿಕ ತರ ಗ ತಿ ಗ ಳನ್ನು ನಡೆ ಸಲು ಅವ ಕಾಶ ಕೊಡ ಬೇಕು. ಹಾಗೊಮ್ಮೆ 3ನೆ ಅಲೆ ಖಚಿ ತ ವಾ ದರೆ ಆಗ ಆನ್‌ಲೈನ್‌ ತರ ಗ ತಿ ಗ ಳನ್ನು ಮುಂದು ವ ರಿಸಲು ಸರಕಾರ ಮುಂದಾ ಗ ಬೇಕು.
**
ದಿನಕ್ಕೊಂದು ತರಗತಿ ಪಾಠ ನಡೆಯಲಿ
– ಪುಟ್ಟಣ್ಣ, ವಿಧಾನ ಪರಿಷತ್‌ ಸದಸ್ಯ
ಕೊರೊನಾ ಪರಿಸ್ಥಿತಿಯಲ್ಲಿ ಎಲ್ಲವೂ ಕಷ್ಟವಿದೆ. ಆದರೆ ಶೈಕ್ಷಣಿಕ ಅಂತರ ಹೆಚ್ಚಾದಂತೆ ಮಕ್ಕಳ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹೀಗಾಗಿ ಕನಿಷ್ಠ ದಿನಕ್ಕೊಂದು ತರಗತಿಯ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ಪಾಠ ಮಾಡಿಸಬೇಕು. ಸೋಮವಾರ ಒಂದನೇ ತರಗತಿ, ಮಂಗಳವಾರ ಎರಡನೇ ತರಗತಿ ಹೀಗೆ ಒಂದೊಂದು ದಿನ ಒಂದೊಂದು ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸಿ, ಕನಿಷ್ಠ ಬೋಧನೆ ಹಾಗೂ ಕಲಿಕೆಯ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಿದೆ. ನಿತ್ಯವೂ ಶಾಲೆಯನ್ನು ಸ್ಥಳೀಯಾಡಳಿತದ ಮೂಲಕ ಸ್ಯಾನಿಟೈಸರ್‌ ಮಾಡಬೇಕು. ಶಿಕ್ಷಕರು ಕೊರೊನಾ ತಡೆ ಕಾರ್ಯದಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಅದೇ ಸುರಕ್ಷತೆಯೊಂದಿಗೆ ಶಾಲೆ ಬರುವಂತಾಗಬೇಕು.
**
ಪರೀಕ್ಷೆ ಬೇಡ, ಜೀವನ ಮೌಲ್ಯ ಕಲಿಸಿ
– ಭೋಜೇಗೌಡ, ವಿಧಾನ ಪರಿಷತ್‌ ಸದಸ್ಯ
ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಪರೀಕ್ಷೆ ಅಥವಾ ರ್‍ಯಾಂಕ್‌ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಬದಲಾಗಿ ಮಕ್ಕಳಿಗೆ ಜೀವನ ಮೌಲ್ಯದ ಶಿಕ್ಷಣ ನೀಡಬೇಕು. ಇದಕ್ಕಾಗಿ ಸೂಕ್ತ ಯೋಜನೆ ಸಿದ್ಧಪಡಿಸಬೇಕು. ಮುಂದಿನ ಪರಿಸ್ಥಿತಿ ಅರಿತು ಈಗಿಂದಲೇ ಸಮರ್ಪಕ ಯೋಜನೆ ಸಿದ್ಧಪಡಿಸಿದಾಗ ಮಾತ್ರ ಕಲಿಕೆ ಅಂತರ ನಿವಾರಣೆ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಬಹುದಾಗಿದೆ.
**
ಪಾಠ ಯಶಸ್ವಿಯಾಗಿದೆ, ಪರೀಕ್ಷೆಯೇ ಸವಾಲು
– ಪ್ರೊ| ಈಶ್ವರ ಭಟ್‌, ಕುಲಪತಿ, ಕಾನೂನು ವಿವಿ, ಧಾರವಾಡ
ಕೊರೊನಾ ಕಾರಣದಿಂದ ಭೌತಿಕ ಬೋಧನೆ ಇಲ್ಲವಾಗಿದ್ದರೂ ಕಾನೂನು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಕಳೆದ ಮೂರು ಸೆಮಿಸ್ಟರ್‌ಗಳನ್ನು ಆನ್‌ಲೈನ್‌ ಮೂಲಕವೇ ಬೋಧನೆ ಕೈಗೊಳ್ಳಲಾಗುತ್ತಿದೆ. ಆರಂಭದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ಹೇಳುತ್ತಿದ್ದರು. ಇದೀಗ ಅವೆಲ್ಲವೂ ಸರಿ ಹೋಗಿದ್ದು, ದಿನಕ್ಕೆ ನಾಲ್ಕು ಕ್ಲಾಸ್‌ಗಳು ನಡೆಯುತ್ತಿದ್ದು, ಒಂದು ತರಗತಿಗೆ 60 ವಿದ್ಯಾರ್ಥಿಗಳಲ್ಲಿ ಸುಮಾರು 50 ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗುತ್ತಿದ್ದಾರೆ. ಪ್ರಾಧ್ಯಾಪಕರು ಬೋಧನೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಪವರ್‌ ಪಾಯಿಂಟ್‌ ಪ್ರಸಂಟೇಶನ್‌ ನೀಡುತ್ತಿದ್ದು, ಆನ್‌ಲೈನ್‌ನಲ್ಲಿಯೇ ಸಂವಾದ ನಡೆಯುತ್ತಿದೆ. ಗ್ರಂಥಾಲಯದ ಇ-ಪಠ್ಯ ಮಾಹಿತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಪಠ್ಯಪುಸ್ತಕದ ಅನೇಕ ಮಾಹಿತಿಯನ್ನು ಶೇರಿಂಗ್‌ ಸ್ಕ್ರೀನ್‌ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಬೋಧನೆ ಕೊನೆಯಲ್ಲಿ ಪ್ರಾಧ್ಯಾಪಕರು ಪಠ್ಯದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಇ-ಮೇಲ್‌ ಮೂಲಕ ರವಾನಿಸುತ್ತಾರೆ. ನಮಗಿರುವ ಸಮಸ್ಯೆ ಎಂದರೆ ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸುವುದು, ಮೌಲ್ಯಾಂಕನ ಮಾಡುವುದು ಹೇಗೆ ಎಂಬುದಾಗಿದೆ.
**
ಪ್ರೀ ಲೋಡೆಡ್‌ ಗ್ಯಾಜೆಟ್‌ ನೀಡಲಿ
– ಅರುಣ್‌ ಶಹಾಪೂರ್‌, ವಿಧಾನ ಪರಿಷತ್‌ ಸದಸ್ಯ
ರಾಜ್ಯದಲ್ಲಿ ಸಾಕಷ್ಟು ಐಟಿ ಕಂಪೆನಿಗಳಿಗೆ. ಅವುಗಳ ಸಿಎಸ್‌ಆರ್‌ ನಿಧಿ ಬಳಕೆ ಮಾಡಿಕೊಂಡು ಎಲ್ಲ ಕಡೆಗೆ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕು. ಇಲಾಖೆಯಲ್ಲಿ ಅನಗತ್ಯವಾಗಿ ವ್ಯರ್ಥ ಆಗುವ ಹಣವನ್ನು ತಡೆದು. ಆರೋಗ್ಯದ ಅನಂತರದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಬಿಪಿಎಲ್‌ ಮಕ್ಕಳಿಗೆ ಎಲ್ಲರೂ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ನೀಡುವ ವ್ಯವಸ್ಥೆ ಮಾಡಬೇಕು. ಮೊದಲೇ ಆಡಿಯೋ ವಿಜುವಲ್‌ಗ‌ಳನ್ನು ಲೋಡ್‌ ಮಾಡಿದ ಟ್ಯಾಬ್‌ನಂಥ ಗ್ಯಾಜೆಟ್‌ಗಳನ್ನು ಮಕ್ಕಳಿಗೆ ನೀಡುವ ವ್ಯವಸ್ಥೆ ಮಾಡಬೇಕು. ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಒಂದು ಬಾರಿ ಫ್ರೀ ಲೋಡೆಡ್‌ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ ನೀಡಿ, ವರ್ಷ ಮುಗಿದ ಅನಂತರ ಮತ್ತೆ ವಾಪಸ್‌ ಪಡೆದು ಮುಂದಿನ ವರ್ಷದ ಮಕ್ಕಳಿಗೆ ಕೊಡಬಹುದು.
**
ಉದಯವಾಣಿಯಿಂದ ಉತ್ತಮ ಗೈಡ್‌: ಡಿಸಿಎಂ
– ಡಾ| ಸಿ.ಎನ್‌ ಅಶ್ವತ್ಥನಾರಾಯಣ, ಡಿಸಿಎಂ
ಸಂಕಷ್ಟ ಕಾಲದಲ್ಲಿ “ಉದಯವಾಣಿ’ ಕೈಗೊಂಡಿರುವ “ಶಿಕ್ಷಣದ ಭವಿಷ್ಯ-ಪರಿಣಿತರ ಸಲಹೆ’ ಅಭಿಯಾನ ಅರ್ಥಪೂರ್ಣ ಮತ್ತು ಸಕಾಲಿಕ.

ಕೋವಿಡ್‌-19 ಸಮಯದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮೊದಲ ಅಲೆ ಬಂದಾಗಲೇ ಶೈಕ್ಷಣಿಕ ವರ್ಷ‌ ಹಳಿತಪ್ಪದಂತೆ ನೋಡಿಕೊಳ್ಳಲಾಯಿತು. ಈಗ ಎರಡನೇ ಅಲೆ ತೀವ್ರವಾಗಿದ್ದು, ವೇಗವಾಗಿ ಹರಡುತ್ತಿದೆ. ಆದಾಗ್ಯೂ ಸರಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗದಂತೆ ಕ್ರಮ ವಹಿಸುತ್ತಿದೆ. ಇದೇ ವೇಳೆ ಉದಯವಾಣಿ ಪತ್ರಿಕೆ ಇಂತ ಸಾರ್ಥಕ ಪ್ರಯತ್ನ ಮಾಡಿರುವುದು ಶ್ಲಾಘನೀಯ.

ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ಸೋಂಕಿನ ಭಯದ ಜತೆಗೆ, ಶಿಕ್ಷಣದ ಬಗ್ಗೆಯೂ ಆತಂಕಗೊಂಡಿದ್ದಾರೆ. ಆದರೆ, ಉದಯವಾಣಿ ವಿದ್ಯಾರ್ಥಿಗಳ ಕೈಹಿಡಿದು ಮುಂದಿನ ಭವಿಷ್ಯಕ್ಕೆ ಉತ್ತಮ ರೀತಿಯಲ್ಲಿ ಗೈಡ್‌ ಮಾಡುತ್ತಿದೆ.

ಹೊಸ ಆವಿಷ್ಕಾರಿ ಮನೋಭಾವದಿಂದ ಉದಯವಾಣಿ ಆರಂಭ ಮಾಡಿರುವ ಈ ಪ್ರಯತ್ನ ಯಶಸ್ವಿಯಾಗಲಿ. ಈ ಮೂಲಕ ಪೋಷಕರ ಆತಂಕ ದೂರವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಳ್ಳೆಯ ಮುನ್ನುಡಿ ಬರೆಯಲಿ ಎಂಬುದೇ ನನ್ನ ಸದಾಶಯ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.