ಬೆಳ್ತಂಗಡಿ: ವಿದ್ಯುತ್ ಸ್ಪರ್ಶಿಸಿ ತಾಯಿ, ಮಗು ಸಾವು
Team Udayavani, May 30, 2021, 1:44 PM IST
ಬೆಳ್ತಂಗಡಿ: ಪಟ್ರಮೆ ಗ್ರಾಮದ ಕೊಡಂದೂರು ಎಂಬಲ್ಲಿ ಪಂಪುಶೆಡ್ ನೊಳಗೆ ಸ್ವಿಚ್ ಹಾಕುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ತಾಯಿ ಹಾಗೂ ಪುಟ್ಟ ಮಗ ಸ್ಥಳ ದಲ್ಲೇ ಸಾವನ್ನಪ್ಪಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಕೊಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ ಗೀತಾ (30) ಹಾಗೂ ಪುತ್ರ ಭವಿಷ್ (4) ಮೃತಪಟ್ಟವರು.
ಇದನ್ನೂ ಓದಿ: ಭೀಮೆಯಲ್ಲಿ ಈಜುತ್ತಿದ್ದಾಗ ಕೊಚ್ಚಿಹೋದ ನಾಲ್ಕು ಮಕ್ಕಳು
ದನಗಳಿಗೆ ನೀರು ಕೊಡುವ ಉದ್ದೇಶದಿಂದ ಪಂಪ್ ಸ್ವಿಚ್ ಹಾಕುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ಮುಂದುವರೆಸಿದ್ದಾರೆ.