ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ : ಓಟ ಆರಂಭಿಸಿದ ಒಸಾಕಾ; ಕೆರ್ಬರ್ ಔಟ್
Team Udayavani, May 31, 2021, 12:22 AM IST
ಪ್ಯಾರಿಸ್ : ಬಹು ನಿರೀಕ್ಷೆಯ ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಪಂದ್ಯಾವಳಿ ರವಿವಾರ ಆರಂಭಗೊಂಡಿದೆ. ವನಿತಾ ಸಿಂಗಲ್ಸ್ನಲ್ಲಿ ನಂ.2 ಆಟಗಾರ್ತಿ ನವೋಮಿ ಒಸಾಕಾ ದ್ವಿತೀಯ ಸುತ್ತು ತಲುಪಿದರೆ, ಮಾಜಿ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲಿಗೆ ತುತ್ತಾದರು.
ನವೋಮಿ ಒಸಾಕಾ ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ಟಿಗ್ ಅವರನ್ನು ತೀವ್ರ ಹೋರಾಟದ ಬಳಿಕ 6-4, 7-6 (7-4)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಆದರೆ ಮಾಧ್ಯಮಗಳಿಂದ ದೂರ ಉಳಿದ ಕಾರಣ 15 ಸಾವಿರ ಡಾಲರ್ ದಂಡಕ್ಕೆ ಗುರಿಯಾದರು.
ರೊಲ್ಯಾಂಡ್ ಗ್ಯಾರಸ್ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಅವರ ಕಳಪೆ ಫಾರ್ಮ್ ಈ ವರ್ಷವೂ ಮುಂದುವರಿಯಿತು. ಅವರಿಲ್ಲಿ ಸತತ 3ನೇ ವರ್ಷ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಅವರನ್ನು ಉಕ್ರೇನಿನ ಅರ್ಹತಾ ಆಟಗಾರ್ತಿ ಅನೆಲಿನಾ ಕಲಿನಿನಾ 6-2, 6-4ರಿಂದ ಪರಾಭವಗೊಳಿಸಿದರು.
ಪುರುಷರ ಸಿಂಗಲ್ಸ್ನಲ್ಲಿ ಇಟಲಿಯ ಫ್ಯಾಬಿಯೊ ಪೊಗ್ನಿನಿ, ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್, ರಶ್ಯದ ಕರೆನ್ ಕಶನೋವ್ ದ್ವಿತೀಯ ಸುತ್ತು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್