ರಾಜ್ಯದ ಪ್ರತಿಯೊಬ್ಬರಿಗೂ ಕೋವಿಡ್‌ ಲಸಿಕೆ ದೊರೆಯಲಿ

Team Udayavani, Jun 11, 2021, 9:07 PM IST

11-6

ದಾವಣಗೆರೆ: ರಾಜ್ಯದ ಪ್ರತಿಯೊಬ್ಬರಿಗೂ ಸೆಪ್ಟಂಬರ್‌ ವೇಳೆಗೆ ಕೋವಿಡ್‌ ಲಸಿಕೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡ ಬಣ) ಪದಾಧಿಕಾರಿಗಳು, ಕಾರ್ಯಕರ್ತರು ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು. ಮಹಾಮಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರಿ ಅಂಕಿ-ಅಂಶದ ಪ್ರಕಾರವೇ 30 ಸಾವಿರಕ್ಕೂ ಅಧಿಕ ಜನರು ಸಾವನ್ನಪಿದ್ದಾರೆ. ಲಕ್ಷಾಂತರ ಜನರು ಸೋಂಕಿನಿಂದ ನರಳುತ್ತಿದ್ದಾರೆ.

ಎರಡನೇ ಅಲೆ ಮುಗಿಯುವ ಮುನ್ನವೇ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸುತ್ತಿದ್ದಾರೆ. ಕೊರೊನಾದಿಂದ ರಕ್ಷಿಸಲು ಲಸಿಕೆ ಸೂಕ್ತ ಪರಿಹಾರ. ಹಾಗಾಗಿ ಸರ್ಕಾರ ಸೆಪ್ಟಂಬರ್‌ ವೇಳೆಗೆ ಪ್ರತಿಯೊಬ್ಬರಿಗೆ ಲಸಿಕೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸರ್ಕಾರ ಬೂತ್‌ ಮಟ್ಟದಲ್ಲಿ ಲಸಿಕಾ ಅಭಿಯಾನ ಪ್ರಾರಂಭಿಸುವ ಮೂಲಕ ಎಲ್ಲರಿಗೂ ಲಸಿಕೆ ದೊರೆಯುವ ವ್ಯವಸ್ಥೆ ಮಾಡಬೇಕು. ಬಡವ-ಶ್ರೀಮಂತರು ಎಂಬ ತಾರತಮ್ಯ ಮಾಡುವುದನ್ನು ನಿಲ್ಲಿಸಬೇಕು.

ಖಾಸಗಿ ಆಸ್ಪತ್ರೆಗಳಿಗೆ ಶೇ. 25 ರಷ್ಟು ಲಸಿಕೆ ಖರೀದಿಸುವ ಅನುಮತಿಯನ್ನೇ ರದ್ದುಪಡಿಸಬೇಕು. ಸರ್ಕಾರದ ಮೂಲಕವೇ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು. ಪ್ರಾರಂಭಿಕ ಹಂತದಲ್ಲಿ ಪ್ರಥಮ ಡೋಸ್‌ ಪಡೆದಂತಹವರು ಎರಡನೇ ಡೋಸ್‌ ಪಡೆಯುವುದಕ್ಕೆ ಇನ್ನಿಲ್ಲದ ತೊಂದರೆ ಪಡುವಂತಾಗಿದೆ. ಮೊದಲನೇ ಡೋಸ್‌ ಪಡೆದವರಿಗೆ ಅತೀ ತುರ್ತಾಗಿ ಆದ್ಯತೆ ಮೇರೆಗೆ ಎರಡನೇ ಡೋಸ್‌ ನೀಡಬೇಕು ಎಂದರು. ಅಕ್ಟೋಬರ್‌ ವೇಳೆಗೆ ಮೂರನೇ ಅಲೆ ಬರಲಿದ್ದು ಮಕ್ಕಳ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.

ಮಕ್ಕಳ ಅಮೂಲ್ಯ ಪ್ರಾಣ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ಮತ್ತು ಪೋಷಕರಿಗೆ ಕಡ್ಡಾಯವಾಗಿ ಲಸಿಕೆ ಕೊಡಬೇಕು. ಲಸಿಕೆ ಪಡೆಯಲು ಅನುಕೂಲವಾಗುವಂತೆ ನೋಂದಣಿ ಪ್ರಕ್ರಿಯೆ ಸರಳೀಕರಿಸಬೇಕು. ಜೂ. 21 ರಿಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಜನಸಂಖ್ಯೆ ಆಧಾರದಲ್ಲಿ ಲಸಿಕೆ ವಿತರಣೆ ಮಾಡಬೇಕು. ಅತ್ಯಂತ ವೈಜ್ಞಾನಿಕ ನೀತಿ ಮಾದರಿಯಲ್ಲಿ ಲಸಿಕಾಕರಣದ ವ್ಯವಸ್ಥೆ ಆಗಬೇಕು.

ಕೊರೊನಾ ಲಸಿಕೆ ಜೊತೆಗೆ ಸೋಂಕಿತರ ಚಿಕಿತ್ಸೆಗೆ ಅತೀ ಅಗತ್ಯವಾಗಿರುವ ವೈದ್ಯಕೀಯ, ವೈದ್ಯಕೀಯೇತರ ಸಿಬ್ಬಂದಿ, ವೆಂಟಿಲೇಟರ್‌, ಆಕ್ಸಿಜನ್‌, ಔಷಧಿಗಳನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಎಂ.ಎಸ್‌. ರಾಮೇಗೌಡ, ರವಿಕುಮಾರ್‌, ಶ್ರೀನಿವಾಸ ಚಿನ್ನಿಕಟ್ಟಿ ,ರಂಗನಾಥ್‌, ಶ್ರೀನಿವಾಸ್‌, ಮಹೇಶಪ್ಪ, ರಾಮಣ್ಣ , ಬಸಮ್ಮ, ಮಂಜುಳಮ್ಮ, ಶಾಂತಮ್ಮ ಇತರರು ಇದ್ದರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜನ್ಮದಿನದ ಅಂಗವಾಗಿ ವಿವಿಧೆಡೆ ಸಸಿ ನೆಡಲಾಯಿತು.

ಟಾಪ್ ನ್ಯೂಸ್

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

1-qweewqe

Prajwal Case; ತಮ್ಮ ಹೆಸರು ಬಳಸದಂತೆ ಕೋರ್ಟ್ ತಡೆ ತಂದ ಎಚ್ ಡಿಡಿ, ಎಚ್ ಡಿಕೆ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

ಬಿಜೆಪಿ ಸೇರಿದಾಕ್ಷಣ ಶುದ್ಧರಾಗಲು ಆ ಪಕ್ಷ ವಾಷಿಂಗ್‌ ಮಶೀನಾ: ರಮಾನಾಥ ರೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.