ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ  ಪರೀಕ್ಷೆ ಎದುರಿಸಲು ಸಿದ್ಧರಾಗಿ


Team Udayavani, Jul 9, 2021, 6:20 AM IST

Untitled-1

ಪೊಲೀಸ್‌ ಕಾನ್‌ಸ್ಟೆಬಲ್‌ (ಪುರುಷ-ಮಹಿಳೆ) ಹುದ್ದೆಗಳ ಆಯ್ಕೆಗೆ ಲಿಖೀತ ಪರೀಕ್ಷೆಯು ಕನ್ನಡ ಮತ್ತು ಆಂಗ್ಲಭಾಷೆ ಯಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ 100 ಅಂಕಗಳಿಗೆ ಆಬೆjಕ್ಟಿವ್‌ ಮಾದರಿಯ ಪ್ರಶ್ನೆಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್‌ ಪೈಕಿ ಯಾವು­ದಾದರೂ ಒಂದು ಭಾಷೆಯಲ್ಲಿ ಉತ್ತರಿಸಬಹುದು. ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 100 ಪ್ರಶ್ನೆ ಇರಲಿದ್ದು, ಒಂದು ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. 1 ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾ­ಗುತ್ತದೆ. ಪರೀಕ್ಷೆಯ ಅವಧಿ 1 ಗಂಟೆ 30 ನಿಮಿಷ ಇರುತ್ತದೆ.

ವಿದ್ಯಾರ್ಹತೆ: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಪಿಯುಸಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದವರಿಗೆ 19-25 ವರ್ಷ, ಪರಿಶಿಷ್ಟ ಜಾತಿ/ ಪಂಗಡದವರಿಗೆ 19-27 ವರ್ಷ ಮತ್ತು ಬುಡಕಟ್ಟು ಜನಾಂಗದವರಿಗೆ 19-30 ವರ್ಷವೆಂದು ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಮೆಂಟಲ್‌ ಎಬಿಲಿಟಿ  :

ಸಾಮಾನ್ಯ ಜ್ಞಾನ ಹೊರತುಪಡಿಸಿ ಸುಲಭವಾಗಿ ಅಂಕಗಳನ್ನು ಗಳಿಸ­ ಬಹುದಾದ ವಿಭಾಗ ಮೆಂಟಲ್‌ ಎಬಿಲಿಟಿ ಪ್ರಶ್ನೆಗಳದ್ದು. ದಿನವೂ ಕನಿಷ್ಠ 5 ಮಾದ ರಿಯ 10 ಪ್ರಶ್ನೆಗಳನ್ನಾದರೂ ಬಿಡಿಸುತ್ತಾ ಬಂದರೆ, ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯ.

ಜು.12 ಕೊನೇ ದಿನ :

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆಗೆ 12-07-21 ಕೊನೇ ದಿನ. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಗೆ 14-07- 21 ಕೊನೇ ದಿನವಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಪೊಲೀಸ್‌ ಇಲಾಖೆ ವೆಬ್‌ ಸೈಟ್‌ https://recruitment.ksp.gov.in ನಲ್ಲಿ ಪ್ರಕಟಿಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖೆಯ ವೆಬ್‌ ಸೈಟ್‌ ಅನ್ನು ದಿನವೂ ನೋಡಲು ತಿಳಿಸಲಾಗಿದೆ. ಲಿಖೀತ ಪರೀಕ್ಷೆ ದಿನಾಂಕ, ಸಮಯ ಮತ್ತು ಸ್ಥಳದ ವಿವರ ಹೊಂದಿದ ಪ್ರವೇಶ ಕರೆ ಪತ್ರವನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಅಂಚೆ ಮೂಲಕ ಕಳುಹಿಸ­ಲಾಗು­­ವುದಿಲ್ಲ. ಹೀಗಾಗಿ ಲಿಖೀತ ಪರೀಕ್ಷೆಯ ಕರೆ ಪತ್ರವನ್ನು https://recruitment.ksp.gov.in  ವೆಬ್‌ ಸೈಟ್‌ ನಿಂದ ಪಡೆದುಕೊಳ್ಳಬೇಕು.

ಲಿಖಿತ ಪರೀಕ್ಷೆಯ ಪಠ್ಯಕ್ರಮ :

ಸಾಮಾನ್ಯ ಜ್ಞಾನ, ಭಾರತ ಸಂವಿಧಾನ, ಇತಿಹಾಸ – ಭಾರತ ಮತ್ತು ಕರ್ನಾಟಕ, ಭೂಗೋಳ – ಭಾರತ ಮತ್ತು ಕರ್ನಾ ಟಕ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರ­ ತದ ಸ್ವಾತಂತ್ರ್ಯ ಸಂಗ್ರಾಮ, ಭಾರತದ ಆಡಳಿತ. ಅರ್ಥಶಾಸ್ತ್ರ, ನೀತಿ ಶಿಕ್ಷಣ, ಪ್ರಚಲಿತ ವಿದ್ಯಮಾನಗಳು- ಈ ವಿಷಯ­ಗಳಿಗೆ ಸಂಬಂಧಿಸಿದ ಪಠ್ಯಕ್ರಮ­ ವನ್ನು ಲಿಖೀತ ಪರೀಕ್ಷೆ ಹೊಂದಿರುತ್ತದೆ.

ಯಶಸ್ಸು ಗಳಿಸಲು ಹೀಗೆ ಮಾಡಿ :

5-6 ವರ್ಷಗಳ ಹಿಂದಿನ ಪೊಲೀಸ್‌ ಕಾನ್‌ಸ್ಟೆàಬಲ್‌ ಹುದ್ದೆಗಳಿಗೆ ನಡೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಇಟ್ಟುಕೊಂಡು ಅದರ ಪ್ರಕಾರವೇ ಅಭ್ಯಾಸ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ. ಕೆಲವೊಮ್ಮೆ 2-3 ವರ್ಷಗಳ ಹಿಂದಿನ ಪ್ರಶ್ನೆಗಳು ರಿಪೀಟ್‌ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಅಗತ್ಯ. ದಿನವೂ ತಪ್ಪದೆ ಪೇಪರ್‌ ಓದುವ ಮೂಲಕ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪ್‌ಡೇಟ್‌ ಆಗುತ್ತಿರಿ. ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆಗೆ 6ನೇ ತರಗತಿಯಿಂದ 10ನೇ ತರಗತಿವರೆಗಿನ ಶಾಲಾ ಪಠ್ಯ ಪುಸ್ತಕಗಳನ್ನು ಓದಬೇಕು. ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ನಡೆಯುವ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವುದು ಹೇಗೆಂದು ವಿವರಿಸುವ ಗೈಡ್‌ಗಳು, ಪ್ರಶ್ನೆ ಪತ್ರಿಕೆಗಳ ಸೆಟ್‌ಗಳು ಸಿಗುತ್ತವೆ. ಅವನ್ನು ಓದಿ. ಈಗಾಗಲೇ ಪೊಲೀಸ್‌ ಆಗಿರುವ ಸ್ನೇಹಿತರು ಇದ್ದರೆ ಅವರಿಂದ ಅಥವಾ ತರಬೇತಿ ಕೇಂದ್ರಗಳಲ್ಲಿ ಓದುತ್ತಿರುವ ಸ್ನೇಹಿತರೊಂದಿಗೆ ಚರ್ಚಿಸಿ ಸಲಹೆ ಪಡೆದುಕೊಳ್ಳಿ.

ಟಾಪ್ ನ್ಯೂಸ್

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.