ರೋಗನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ


Team Udayavani, Jul 10, 2021, 6:45 AM IST

ರೋಗನಿರೋಧಕ ಶಕ್ತಿ ವೃದ್ಧಿಗೆ ಆದ್ಯತೆ

ಕೊರೊನಾ ವೈರಸ್‌ನಿಂದಾಗಿ ಜಗತ್ತಿನಾ ದ್ಯಂತ ಇಡೀ ಮಾನವ ಕುಲ ಬಳಲುತ್ತಿದೆ. ಇದರಿಂದ ರಕ್ಷಣೆ ಪಡೆಯುವಲ್ಲಿ ನಮ್ಮ ದೇಹದಲ್ಲಿ ನೈಸರ್ಗಿಕವಾಗಿರುವ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ಬಾಧಿಸದಂತೆ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆದ್ಯತೆ ನೀಡುವುದು ಅವಶ್ಯವಾಗಿದೆ.

ವಿಟಮಿನ್‌-ಸಿ, ವಿಟಮನ್‌-ಡಿ ಮತ್ತು ಸತು(ಜಿಂಕ್‌) ಮಾತ್ರೆಗಳನ್ನು ನೀಡುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕಗಳಾಗಿವೆ. ದೈನಂದಿನ ಆವಶ್ಯಕತೆಗೆ ವಿಟಮಿನ್‌ -ಡಿ ಪೂರಕವು ಉಪಯುಕ್ತವಾಗಿದೆ. ವಿಟಮಿನ್‌-ಡಿ ಜೀವಸತ್ವವು ಇಮ್ಯೂನೋ ಮೊಡ್ಯುಲೆಟರಿ ಆಗಿದ್ದು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ವಿಟಮಿನ್‌- ಸಿ ಉತ್ಕರ್ಷಣ ನಿರೋಧಕ (ಆ್ಯಂಟಿ-ಆಕ್ಸಿಡೆಂಟ್‌) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (ರಿಯಾಕ್ಟಿವ್‌ ಆಕ್ಸಿಜನ್‌ ಸ್ಪೈಸಸ್‌) ಹಿಮ್ಮೆಟ್ಟಿಸಲು ವಿಟಮಿನ್‌ -ಸಿ ಉಪಯುಕ್ತವಾಗಿದೆ. ಸೋಂಕಿನ ಸಮಯದಲ್ಲಿ ವಿಟಮಿನ್‌- ಸಿ ಮಟ್ಟವು ಕಡಿಮೆಯಾಗಬಹುದು ಹಾಗೂ ಸೋಂಕಿನ ತೀವ್ರತೆಯೊಂದಿಗೆ ವಿಟಮಿನ್‌ -ಸಿಯ ಆವಶ್ಯಕತೆಯು ಹೆಚ್ಚಾಗುತ್ತದೆ.
ಸತು(ಜಿಂಕ್‌)ವಿನಲ್ಲಿನ ಇಮ್ಯುನೋಮೊಡ್ಯುಲೇಟರಿ ಮತ್ತು ಆ್ಯಂಟಿವೈರಲ್‌ ಗುಣಲಕ್ಷಣಗಳು ಮಹತ್ವದ ಪಾತ್ರ ವಹಿಸುತ್ತವೆ. ಸತುವಿನ ಕೊರತೆಯು ವೈರಸ್‌ ಹಾಗೂ ಬ್ಯಾಕ್ಟಿರೀಯಾಗಳನ್ನು ನಾಶಮಾಡುವ “ಎನ್‌ಕೆ’ ಮತ್ತು ಸೈಟೊಟೊಝಿಕ್‌ “ಟಿ ‘ ಸೆಲ್‌ಗ‌ಳ ಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ.

ಜೀವಸತ್ವಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು- ಕೊಬ್ಬು ಕರಗಬಲ್ಲ- ಪ್ಯಾಟ್‌ ಸೊಲ್ಯುಬುಲ್‌ ಹಾಗೂ ನೀರಿನಲ್ಲಿ ಕರಗುವ ವಾಟರ್‌ ಸೊಲ್ಯುಬುಲ್‌. ನೀರಿನಲ್ಲಿ ಕರಗುವಂಥ ಜೀವಸತ್ವಗಳು ಸಾಮಾನ್ಯವಾಗಿ ನಿರುಪದ್ರವವಾಗಿರುತ್ತವೆ. ಏಕೆಂದರೆ ಇದನ್ನು ಮೂತ್ರದ ಮೂಲಕ ಹೊರಹಾಕಲಾಗುತ್ತದೆ. ಕೊಬ್ಬು ಕರಗಬಲ್ಲ ವಿಟಮಿನ್‌ ಎ, ಡಿ, ಸಿ, ಕೆ ಗಳನ್ನು ಅಧಿಕವಾಗಿ ತೆಗೆದುಕೊಂಡಾಗ ಅವು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದನ್ನು ಹೆತ್ತವರು ನೆನಪಿನಲ್ಲಿಟ್ಟುಕೊಳ್ಳಬೇಕು.

ವಿಪರೀತ ರೋಗನಿರೋಧಕ ಶಕ್ತಿಯು ಹಾನಿಕಾರಕವಾಗಬಹುದು ಎಂಬುದಕ್ಕೆ ಪುರಾವೆಗಳಿವೆ. ಇದರರ್ಥ ರೋಗ ನಿರೋಧಕ ವ್ಯವಸ್ಥೆಯ ನಿಷ್ಕ್ರಿಯ (ಡಿಸ್‌ಫಂಕ್ಷನ್‌) ಅಥವಾ ಒವರ್‌ಡ್ರೈವ್‌- ಹಾನಿಗೆ ಕಾರಣವಾಗಬಲ್ಲುದಲ್ಲದೆ ಅತೀ ಬಲವಾದ ರೋಗನಿರೋಧಕ ಶಕ್ತಿಯು ಜೀವಕೋಶಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಬಹುದು. ಇದರಿಂದಾಗಿ ಪ್ರಮುಖ ಅಂಗಾಂಗಗಳು ಹಾನಿಗೊಳಗಾಗಬಹುದು.

ತಮ್ಮದೇ ಆದ ಅಡ್ಡಪರಿಣಾಮಗಳನ್ನು ಹೊಂದಿರುವ ಪೂರಕಗಳನ್ನು ತೆಗೆದುಕೊಳ್ಳುವುದಕ್ಕಿಂತ ಪ್ರತಿನಿತ್ಯ ದೈಹಿಕ ಚಟುವಟಿಕೆಕೆ, ಸಾಕಷ್ಟು ನೀರಿನ ಸೇವನೆ ಹಾಗೂ ನಿದ್ರೆ ಹೆಚ್ಚು ಪ್ರಯೋಜನಕಾರಿಯಾಗಿದೆ. ತುಳಸಿ ಹಾಗೂ ಶುಂಠಿ-ಆ್ಯಂಟಿ ವೈರಲ್‌ ಹಾಗೂ ಉರಿಯೂತ ನಿರೋಧಕ (ಆ್ಯಂಟಿ ಇನ್‌ಫ್ಲಮೇಟರಿ) ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ಪ್ರತೀ ದಿನ ಸೇವಿಸಬಹುದು.

ಮಾರುಕಟ್ಟೆಗಳಲ್ಲಿ ಲಭಿಸುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ಉತ್ಪನ್ನಗಳು ವಿವಿಧ ಔಷಧಯುಕ್ತ ಗಿಡಮೂಲಿಕೆಗಳ ಮಿಶ್ರಣವಾಗಿವೆ. ಪ್ರಸ್ತುತ ಅಧ್ಯಯನದ ಪ್ರಕಾರ ಮೂರರಿಂದ ಆರು ತಿಂಗಳುಗಳವರೆಗೆ ನಿಯಮಿತವಾಗಿ ಇವುಗಳನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ, ಶಕ್ತಿಯ ಮಟ್ಟ, ದೈಹಿಕ ಸಾಮರ್ಥ್ಯ ಮತ್ತು ಮಕ್ಕಳ ಜೀವನದ ಗುಣಮಟ್ಟ ವೃದ್ಧಿಸುತ್ತದೆ.

ಮಕ್ಕಳಿಗಿರಲಿ ಶ್ರೀರಕ್ಷೆ
ಈ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಮಕ್ಕಳಲ್ಲಿ ರೋನಿರೋಧಕ ಶಕ್ತಿಯನ್ನು ಸ್ವಾಭಾವಿಕವಾಗಿ ಹೆಚ್ಚಿಸಬಹುದಾಗಿದೆ.

1 ಸಮತೋಲಿತ, ಆರೋಗ್ಯಕರ ಆಹಾರ – ಹಣ್ಣು-ತರಕಾರಿಗಳ ಸೇವನೆ.
2 ಸಂಸ್ಕರಿಸಿದ ಆಹಾರವನ್ನು ಸ್ವೀಕರಿಸದೆ ಇರುವುದು.
3 ಪ್ರತೀ ದಿನ 8 ಲೋಟ ನೀರು ಕುಡಿಯುವುದು.
4 ಯೋಗ ಸೇರಿದಂತೆ ಉತ್ತಮ ದೈಹಿಕ ಚಟುವಟಿಕೆಗಳು.
5 8ರಿಂದ 10 ಗಂಟೆ ಉತ್ತಮ ನಿದ್ರೆ.
6 ಮನೆಯಲ್ಲಿ ಒತ್ತಡರಹಿತ ವಾತಾವರಣ ಕಾಯ್ದುಕೊಳ್ಳುವುದು.
7 ಎಳೆಬಿಸಿಲಿನ ಶಾಖ ಪಡೆಯುವುದು.
8 ಮೊಬೈಲ್‌ ಬಳಕೆಯನ್ನು ಕಡಿಮೆ ಮಾಡುವುದು.

– ಡಾ| ಸಂತೋಷ್‌ ಸೋನ್ಸ್‌, ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರು, ಎ.ಜೆ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.