ಸ್ಯಾಮ್‍ ಸಂಗ್‍ ಗೆಲಾಕ್ಸಿ ಟ್ಯಾಬ್‍ ಎ7 ಲೈಟ್‍

ಆನ್‍ ಲೈನ್ ತರಗತಿಗೊಂದು ಮಿತವ್ಯಯದ ಟ್ಯಾಬ್ಲೆಟ್‍

Team Udayavani, Jul 13, 2021, 8:52 PM IST

Samsung Galaxy Tab A7 Lite – Buy Now Galaxy Tab A7 Lite

ಕೋವಿಡ್‍ ಸಾಂಕ್ರಾಮಿಕದ ನಂತರ ಶಿಕ್ಷಣದ ವಿಧಾನವೇ ಏರುಪೇರಾಗಿ ಶಾಲೆಯಲ್ಲಿ ಕುಳಿತು ಶಿಕ್ಷಕರು ಮಾಡುವ ಪಾಠವನ್ನು ನೋಡುತ್ತಾ ಕಲಿಯಬೇಕಾದ ಮಕ್ಕಳು, ಮನೆಯಲ್ಲಿ ಮೊಬೈಲ್‍ ಸಾಧನದ ಪರದೆಯ ಮೇಲೆ ನೋಡುತ್ತಾ ಕಲಿಯುವ ಪರಿಸ್ಥಿತಿ ಉಂಟಾಗಿದೆ.

ಮನೆಯಲ್ಲಿ ಕಲಿಯುವ ಮಕ್ಕಳು, ಇದಕ್ಕಾಗಿ ಮೊಬೈಲ್‍ ಫೋನನ್ನೋ, ಲ್ಯಾಪ್‍ ಟಾಪ್, ಪಿ.ಸಿ. ಟ್ಯಾಬ್‍ ಅನ್ನೋ ಅವಲಂಬಿಸಬೇಕಾಗಿದೆ. ಕೋವಿಡ್‍ಗಿಂತ ಮೊದಲು ಮೊಬೈಲ್‍ ಫೋನ್‍ಗಳ ಭರಾಟೆಯಲ್ಲಿ ಟ್ಯಾಬ್ಲೆಟ್‍ (ಟ್ಯಾಬ್‍) ಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಆದರೆ ಕೋವಿಡ್‍ ನಂತರದ ಪರಿಸ್ಥಿತಿಯಲ್ಲಿ ಆನ್‍ಲೈನ್‍ ತರಗತಿಗಳು ಅನಿವಾರ್ಯವಾದ ಬಳಿಕ ಟ್ಯಾಬ್‍ಗಳ ಮಾರಾಟ ಮತ್ತೆ ಚೇತರಿಕೆ ಕಂಡಿದೆ.

ಮೊಬೈಲ್‍ ಫೋನ್‍ಗಳ ದರಕ್ಕೆ, ಮೊಬೈಲ್‍ ಪೋನಿನ ಪರದೆಗಿಂತ ದೊಡ್ಡದಾದ ಟ್ಯಾಬ್‍ಗಳು ಆನ್‍ಲೈನ್‍ ಪಾಠಗಳನ್ನುನೋಡಲು ಸೂಕ್ತವಾಗಿವೆ. ಇದನ್ನರಿತ ತಯಾರಿಕಾ ಕಂಪೆನಿಗಳು ಹೊಸ ಟ್ಯಾಬ್‍ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಟ್ಯಾಬ್ ಗಳ ತಯಾರಿಕೆಯಲ್ಲೂ ಮುಂಚೂಣಿಯಲ್ಲಿರುವ ಸ್ಯಾಮ್‍ ಸಂಗ್‍ ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿರುವ ಹೊಸ ಟ್ಯಾಬ್‍  ಸ್ಯಾಮ್‍ ಸಂಗ್‍ ಗೆಲಾಕ್ಸಿ ಟ್ಯಾಬ್‍ ಎ7 ಲೈಟ್‍.

ಇದನ್ನೂ ಓದಿ : ವಿಧಾನಸೌಧಕ್ಕೆ ಇರೋ ಭದ್ರತೆ ಕೆಆರ್‌ಎಸ್ ಡ್ಯಾಂಗಿಲ್ಲ: ಸುಮಲತಾ

ಸಾಮಾನ್ಯವಾಗಿ ಟ್ಯಾಬ್‍ ಗಳಲ್ಲಿ ಎರಡು ಅಳತೆಯ ಪರದೆಗಳಿರುತ್ತವೆ. 10.4 ಇಂಚು ಅದನ್ನು ಬಿಟ್ಟರೆ 8.7 ಇಂಚು. ಗೆಲಾಕ್ಸಿ ಟ್ಯಾಬ್‍ ಎ7 10.4 ಇಂಚಿನ ಪರದೆ ಹೊಂದಿತ್ತು. ಇದು ಗೆಲಾಕ್ಸಿ ಎ7 ಲೈಟ್‍ ಆವೃತ್ತಿಯಾಗಿದ್ದು, ಇದರಲ್ಲಿ 8.7 ಇಂಚಿನ ಪರದೆಯಿದೆ. 10.4 ಇಂಚಿನ ಪರದೆಯಿರುವ ಟ್ಯಾಬ್‍ ಸ್ವಲ್ಪ ದೊಡ್ಡದಾಯ್ತು ಎನ್ನುವವರಿಗೆ ಇದು ಸೂಕ್ತವಾಗಿದೆ. ಒಂದೇ ಕೈಯಲ್ಲಿ ಹಿಡಿದು ಬಳಸುವಷ್ಟು ಅನುಕೂಲಕರವಾಗಿದೆ.  ಮೊಬೈಲ್‍ ಫೋನಿನ ಚಿಕ್ಕಪರದೆಯಲ್ಲಿ ನೋಡುವುದು ಕಣ್ಣಿಗೆ ಶ್ರಮದಾಯಕ ಎನಿಸುವವರಿಗೆ, ಈ ಪರದೆಯ ಅಳತೆ ಸಮಾಧಾನ ತರುತ್ತದೆ. ಶೇ. 80ರಷ್ಟು ಸ್ಕ್ರೀನ್‍ ಟು ಬಾಡಿ ರೇಶಿಯೋ ಇದೆ. ಎಲ್‍ಸಿಡಿ ಡಿಸ್‍ ಪ್ಲೇ ಹೊಂದಿದ್ದು,  ಫುಲ್‍ ಎಚ್‍ಡಿ ಇರುವುದರಿಂದ ಚಿತ್ರಗಳು, ವಿಡಿಯೋಗಳ ವೀಕ್ಷಣೆ ತೃಪ್ತಿಕರವಾಗಿದೆ. ಇದರ ತೂಕ 371 ಗ್ರಾಂ ಇದ್ದು, ಸ್ಲಿಮ್‍ ಕೂಡ ಇದೆ.  ಲೋಹದ ದೇಹ ಹೊಂದಿರುವುದು ವಿಶೇಷ.

ಗೆಲಾಕ್ಸಿ ಟ್ಯಾಬ್‍ ಎ7 ಲೈಟ್‍ ಸಿಮ್‍ ಕಾರ್ಡ್ ( ಸಿಂಗಲ್‍ ಸಿಮ್‍) ಹಾಕುವ ಹಾಗೂ ಸಿಮ್‍ ಕಾರ್ಡ್‍ ರಹಿತವಾಗಿ ವೈಫೈನಲ್ಲಿ ಮಾತ್ರ ಬಳಸಬಹುದಾದ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ.  ಇದರ ಸಿಮ್‍ ಮಾದರಿಯ ಟ್ಯಾಬ್‍ನಲ್ಲಿ  ಕರೆಗಳು ಬಂದಾಗ ಕರೆಗಳನ್ನು ಸ್ವೀಕರಿಸಿ ಮಾತನಾಡಲು ಅಡ್ಡಿಯಿಲ್ಲ. ಹಾಗೆಂದು ಇದು ಮೊಬೈಲ್‍ ಫೋನಿನಂತೆ ಮಾತನಾಡುವುದಕ್ಕೆ ಹೆಚ್ಚು ಅನುಕೂಲಕರವಲ್ಲ! ಯಾವಾಗಲಾದರೂ ಅನಿವಾರ್ಯತೆ ಎದುರಾದಾಗ ಮಾತನಾಡಲು ಅಷ್ಟೇನೂ ತ್ರಾಸದಾಯಕವಲ್ಲ.

ಇದು 3 ಜಿಬಿ ರ್ಯಾಮ್‍, 32 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. ಅಗತ್ಯವೆನಿಸಿದರೆ 1 ಟಿಬಿಯವರೆಗೂ ಮೆಮೊರಿಕಾರ್ಡ್ ಹಾಕಿಕೊಳ್ಳಬಹುದು. ಆನ್‍ಲೈನ್‍ ತರಗತಿಗಳು, ಝೂಮ್‍ ಮೀಟಿಂಗ್‍ ಮತ್ತಿತರ ಸಾಧಾರಣ ಬಳಕೆಗೆ ಈ ರ್ಯಾಮ್‍ ಮತ್ತು ಆಂತರಿಕ ಸಂಗ್ರಹ ಸಾಕು.

ಇದರಲ್ಲಿ, 8 ಮೆ.ಪಿ. ಪ್ರಾಥಮಿಕ ಕೆಮರಾ, 2 ಮೆ.ಪಿ. ಮುಂಬದಿ ಕ್ಯಾಮರಾ ಇದೆ. ಟ್ಯಾಬ್‍ಗಳಲ್ಲಿ ಕ್ಯಾಮರಾಕ್ಕೆ ಅಂತಹ ಮಹತ್ವ ಇಲ್ಲ. ಮೊಬೈಲ್‍ ಫೋನಿನಂತೆ ಟ್ಯಾಬ್‍ಗಳನ್ನು ಕೈಯಲ್ಲಿ ಹಿಡಿದು ಫೋಟೋ, ವೀಡಿಯೋ ಮಾಡುವುದೂ ಇಲ್ಲ. ಆನ್‍ಲೈನ್‍ ತರಗತಿಗಳು, ಮೀಟಿಂಗ್‍ಗಳಿಗೆ ಮುಂಬದಿ ಕ್ಯಾಮರಾ ಅಗತ್ಯವಿರುವುದರಿಂದ ಹಿಂಬದಿ ಕ್ಯಾಮರಾ ಬದಲು ಮುಂಬದಿ ಕ್ಯಾಮರಾಕ್ಕೆ ಕಂಪೆನಿಗಳು ಹೆಚ್ಚು ಒತ್ತು ಕೊಟ್ಟರೆ ಒಳ್ಳೆಯದು ಅನಿಸುತ್ತದೆ. ಈ ಟ್ಯಾಬ್‍ನಲ್ಲಿ ಹಿಂಬದಿಗೆ ಇರುವ 8 ಮೆ.ಪಿ. ಕ್ಯಾಮರಾ, ಮುಂಬದಿಯಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು.

ಗೆಲಾಕ್ಸಿ ಟ್ಯಾಬ್‍ ಎ7 ಲೈಟ್‍, ಆಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಹೀಗಾಗಿ ಮೊಬೈಲ್‍ ಫೋನಿನಲ್ಲಿ ದೊರಕುವ ಯೂಸರ್‍ ಫೇಸ್‍ ಇಲ್ಲಿಯೂ ದೊರಕುತ್ತದೆ. ಇದು ಮೀಡಿಯಾಟೆಕ್‍ ಎಂಟಿ8768ಟಿ ಪ್ರೊಸೆಸರ್‍ ಹೊಂದಿದೆ.  ಬಳಕೆಯಲ್ಲಿ ಯಾವುದೇ ಅಡೆತಡೆ ಕಂಡುಬರುವುದಿಲ್ಲ. ಮಧ್ಯಮ ದರ್ಜೆಯ ಟ್ಯಾಬ್‍ಗಳಲ್ಲಿ ನಿರೀಕ್ಷಿಸಬಹುದಾದ ವೇಗವಿದೆ.

5100 ಎಂಎಎಚ್‍ ಬ್ಯಾಟರಿ ಹೊಂದಿದೆ. ಇದಕ್ಕೆ 15 ವ್ಯಾಟ್‍ನ ವೇಗದ ಚಾರ್ಜರ್‍ ನೀಡಲಾಗಿದೆ. ಟೈಪ್‍ ಸಿ ಪೋರ್ಟ್‍ ನೀಡಲಾಗಿದೆ. ಆರಂಭಿಕ ಮಧ್ಯಮ ದರ್ಜೆಯ ಟ್ಯಾಬ್‍ಗಳಿಗೆ ಹೋಲಿಸಿದರೆ ಚಾರ್ಜಿಂಗ್‍ ವೇಗ ಚೆನ್ನಾಗಿದೆ. ಹೆಚ್ಚಿನ ಬಳಕೆ ಮಾಡಿದರೂ ಬ್ಯಾಟರಿ 1 ದಿನ ಬಾಳಿಕೆ ಬರುತ್ತದೆ.

ಇದಕ್ಕೆ ಡಾಲ್ಬಿ ಅಟ್‍ಮೋಸ್‍ ಸ್ಪೀಕರ್‍ ಸೌಲಭ್ಯ ನೀಡಲಾಗಿದೆ. ಎರಡು ಸ್ಪೀಕರ್‍ ಸೌಲಭ್ಯವಿದ್ದು, ಸ್ಟೀರಿಯೋ ಧ್ವನಿ ವ್ಯವಸ್ಥೆ ಇದೆ. ಯೂಟ್ಯೂಬ್‍ ಮೂಲಕ ವಿಡಿಯೋ, ಹಾಡು ಇತ್ಯಾದಿ ನೋಡಿದಾಗ ಸೌಂಡ್‍ ಎಫೆಕ್ಟ್ ಚೆನ್ನಾಗಿದೆ. 3.5 ಎಂ.ಎಂ. ಆಡಿಯೋ ಜಾಕ್‍ ಸಹ ಹಾಕಿಕೊಳ್ಳಬಹುದು.

ಆರಂಭದಲ್ಲೇ ತಿಳಿಸಿದಂತೆ ಇದು ಎರಡು ಆವೃತ್ತಿಯಲ್ಲಿ ಲಭ್ಯವಿದೆ. ಸಿಮ್‍ ಕಾರ್ಡ್‍ ರಹಿತ, ವೈಫೈ ಮಾತ್ರ ಇರುವ ಮಾಡೆಲ್‍ 11,999 ರೂ. ಇದೆ. ಈ ಮಾದರಿ ಅಮೆಜಾನ್‍ ನಲ್ಲಿ ಲಭ್ಯ.

ಸಿಂಗಲ್‍ ಸಿಮ್‍ ಮತ್ತು ವೈಫೈ ಇರುವ ಮಾದರಿಗೆ 14,999 ರೂ. ಇದೆ. ಇದು ಫ್ಲಿಪ್‍ಕಾರ್ಟ್‍ನಲ್ಲಿ ದೊರಕುತ್ತದೆ.

ತಮ್ಮ ಮಕ್ಕಳ ಆನ್‍ಲೈನ್‍ ತರಗತಿಯ ಸಲುವಾಗಿಯೇ 15 ಸಾವಿರದೊಳಗೆ ಒಂದು ಮೊಬೈಲ್‍ ಫೋನ್‍ ಬೇಕೆಂದುಕೊಳ್ಳುವವರು, ಮೊಬೈಲ್‍ ಫೋನ್‍ ಬದಲು ಈ ಟ್ಯಾಬ್‍  ಅನ್ನು ಆಯ್ಕೆ ಮಾಡಬಹುದು.

-ಕೆ.ಎಸ್‍. ಬನಶಂಕರ ಆರಾಧ್ಯ

ಇದನ್ನೂ ಓದಿ : 45 ರೂ. ಗೆ ಅನಿಯಮಿತ ಕರೆ, 10 ಜಿಬಿ ಡೇಟಾ ನೀಡುತ್ತಿದೆ ಬಿ ಎಸ್ ಎನ್ ಎಲ್

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.