ಲಡಾಖ್‌ನಲ್ಲಿ  ವಿಶ್ವದ ಅತೀ ಎತ್ತರದ ರಸ್ತೆ

Team Udayavani, Aug 1, 2021, 6:50 AM IST

ಲಡಾಖ್‌ನಲ್ಲಿ  ವಿಶ್ವದ ಅತೀ ಎತ್ತರದ ರಸ್ತೆ

ಭಾರತದ ಗಡಿಯಂಚಿನ ಲಡಾಖ್‌ನಲ್ಲಿ ವಿಶ್ವದ ಅತೀ ಎತ್ತರದ ರಸ್ತೆಯನ್ನು ನಿರ್ಮಿಸಲಾಗಿದೆ. ಗಡಿ ರಸ್ತೆಗಳ ನಿರ್ಮಾಣ ಸಂಸ್ಥೆ (ಬಿಆರ್‌ಒ)ಯು ಸಿಯಾಚಿನ್‌ ಹಿಮನದಿಗಿಂತ ಎತ್ತರದಲ್ಲಿರುವ ಪೂರ್ವ ಲಡಾಖ್‌ನ ಉಮ್ಲಿಂಗ್‌ ಲಾ ಪಾಸ್‌ನಲ್ಲಿ  ಸಮುದ್ರಮಟ್ಟ ಕ್ಕಿಂತ 19,300 ಅಡಿಗಳಷ್ಟು ಎತ್ತರ ದಲ್ಲಿ  ಈ ರಸ್ತೆಯನ್ನು ನಿರ್ಮಿಸಿದೆ.

ಎವರೆಸ್ಟ್‌ ಬೇಸ್‌  ಕ್ಯಾಂಪ್‌ಗಿಂತಲೂ ಎತ್ತರ :

ಈ ರಸ್ತೆಯು ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗಿಂತಲೂ ಎತ್ತರದಲ್ಲಿದೆ. 52 ಕಿ.ಮೀ. ಉದ್ದದ ಈ ಟಾರು ರಸ್ತೆಯಲ್ಲಿ ವಾಹನಗಳು ಸುಗಮ ವಾಗಿ ಸಂಚರಿಸಬಹುದಾಗಿದೆ. ಉಮ್ಲಿಂಗ್‌ ಲಾ ಪಾಸ್‌ ಮೂಲಕ ಪೂರ್ವ ಲಡಾಖ್‌ನ ಚುಮಾರ್‌ ಸೆಕ್ಟರ್‌ನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಟಿಬೆಟ್‌ನಲ್ಲಿರುವ ಮೌಂಟ್‌ ಎವರೆಸ್ಟ್‌ನ ಉತ್ತರ ಬೇಸ್‌  16,900 ಅಡಿ ಎತ್ತರದಲ್ಲಿದ್ದರೆ, ನೇಪಾಲದಲ್ಲಿರುವ ದಕ್ಷಿಣ ಬೇಸ್‌ 17,598 ಅಡಿಗಳಷ್ಟು ಎತ್ತರದಲ್ಲಿದೆ. ಮೌಂಟ್‌ ಎವರೆಸ್ಟ್‌ನ ಎತ್ತರವು 29,000 ಅಡಿಗಳಿಗಿಂತ ಕೊಂಚ ಅಧಿಕವಾಗಿದೆ. ಸಿಯಾಚಿನ್‌ ಹಿಮನದಿಯು 17,700 ಅಡಿಗಳಷ್ಟು ಎತ್ತರದಲ್ಲಿದ್ದರೆ ಲೇಹ್‌ನ ಖರ್ದುಂಗ್‌ ಲಾ ಪಾಸ್‌ 17,582 ಅಡಿ ಎತ್ತರದಲ್ಲಿದೆ.

ಬೊಲಿವಿಯಾವನ್ನು ಹಿಂದಿಕ್ಕಿದ ಭಾರತ :

ಬೊಲಿವಿಯಾವು ಸಮುದ್ರ ಮಟ್ಟಕ್ಕಿಂತ 18,953 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ಈ ಹಿಂದೆ ನಿರ್ಮಿಸಿದ್ದು ಇದು ಈವರೆಗೆ ವಿಶ್ವದಲ್ಲಿಯೇ ಅತ್ಯಂತ ಎತ್ತರದ ರಸ್ತೆ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಇದೀಗ ಭಾರತ ಲಡಾಖ್‌ನಲ್ಲಿ 19,300 ಅಡಿಗಳಷ್ಟು ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸುವ ಮೂಲಕ ಈ ದಾಖಲೆಯನ್ನು ಮುರಿದಿದೆ.

ದುರ್ಗಮ ಪ್ರದೇಶ :

ಲಡಾಖ್‌ನ ಉಮ್ಲಿಂಗ್‌ ಲಾ ಪಾಸ್‌ ಅತ್ಯಂತ ಸಂಕೀರ್ಣ ಮತ್ತು ಕಠಿನ ಭೂ ಪ್ರದೇಶ ಮತ್ತು ಅತ್ಯಂತ ಕಡಿಮೆ ಎಂದರೆ ಚಳಿಗಾಲದಲ್ಲಿ ಮೈನಸ್‌ 40 ಡಿ. ಸೆ. ತಾಪಮಾನ ಇರುತ್ತದೆ. ಅಲ್ಲದೆ ಇಲ್ಲಿ ಆಮ್ಲಜನಕದ ಮಟ್ಟ ಸಾಮಾನ್ಯ ಸ್ಥಳಗಳಿಗೆ ಹೋಲಿಸಿದರೆ  50 ಪ್ರತಿಶತ ಕಡಿಮೆ ಇರುತ್ತದೆ. ಇಂತಹ ಕ್ಲಿಷ್ಟಕರ ಸನ್ನಿವೇಶದ ಹೊರತಾಗಿಯೂ ಬಿಆರ್‌ಒ ಈ ರಸ್ತೆಯನ್ನು ನಿರ್ಮಿ ಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಸ್ಥಳೀಯರಿಗೆ ವರದಾನ‌ :

ಲೇಹ್‌ನಿಂದ ಚಿಸುಮ್ಲೆ ಮತ್ತು ಡೆಮ್ಲೊಕ್‌ ಅನ್ನು ಸಂಪರ್ಕಿಸುವ ನೇರ ರಸ್ತೆ ಇದಾಗಿರುವುದರಿಂದ ಸ್ಥಳೀಯರಿಗೆ ವರದಾನವಾಗಿದೆ. ಲೇಹ್‌ಗೆ ನೇರ ರಸ್ತೆ ಸಂಪರ್ಕ ಸಾಧ್ಯವಾಗಿರುವುದರಿಂದ ಈ ಪ್ರದೇಶಗಳ  ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳಲಿದೆ. ಅಲ್ಲದೆ ಲಡಾಖ್‌ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ಸಹಕಾರಿಯಾಗಲಿದೆ.

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.