ಮರದಲ್ಲಿನ ದಾರಕ್ಕೆಸಿಲುಕಿದ್ದ ಮೈನಾ ಪಕ್ಷಿ ರಕ್ಷಣೆ

Team Udayavani, Aug 15, 2021, 6:09 PM IST

ಮರದಲ್ಲಿನ ದಾರಕ್ಕೆಸಿಲುಕಿದ್ದ ಮೈನಾ ಪಕ್ಷಿ ರಕ್ಷಣೆ

ಎಚ್‌.ಡಿ.ಕೋಟೆ: ಗಾಳಿಪಟಕ್ಕೆ ಅಳವಡಿಸಿದ್ದ ದಾರದಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೈನಾ ಪಕ್ಷಿಯನ್ನು ಸಾರ್ವಜನಿಕರು ಹಾಗೂ ಸೆಸ್ಕ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕೋಟೆ ಪಟ್ಟಣದ ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್‌ ಬಳಿ ಇರುವ ಭಾರೀ ಗಾತ್ರದ ಅರಳಿ ಮರದಕೊಂಬೆಯಲ್ಲಿ ಗಾಳಿಪಟದ ದಾರಕ್ಕೆ
ಮೈನಾ ಪಕ್ಷಿ ತನಗರಿವಿಲ್ಲದಂತೆ ಸುತ್ತಿಕೊಂಡಿತ್ತು. ಪಕ್ಷಿಯ ಕಾಲು ಮತ್ತು ರೆಕ್ಕೆಗೆ ಸಿಲುಕಿಕೊಂಡು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿತ್ತು.

ಹಾರಲಾರದೆ ಮರದ ಕೊಂಬೆಯಲ್ಲಿ ಸಿಲುಕಿಕೊಂಡಿದ್ದ ಮೈನಾ ಮೇಲೆ ಕಾಗೆಗಳು ದಾಳಿ ನಡೆಸಲು ಯತ್ನಿಸುತ್ತಿದ್ದವು. ಈ ದೃಶ್ಯ ಗಮನಿಸಿದ ಸಾರ್ವಜನಿಕರು ಕಾಗೆಗಳನ್ನು ಸ್ಥಳದಿಂದ ಓಡಿಸಿ ಪಕ್ಷಿ ರಕ್ಷಣೆಗೆ ಮುಂದಾದರು. ಭಾರೀ ಗಾತ್ರದ ಅರಳಿ ಮರದ ಮಧ್ಯದ ಕೊಂಬೆಗೆ ಸಿಲುಕಿ ಕೊಂಡಿದ್ದ ಮೈನಾ ಪಕ್ಷಿಯ ತಳಭಾಗದಲ್ಲಿ ವಿದ್ಯುತ್‌ ತಂತಿ ಹಾದು ಹೋಗಿತ್ತು.

ಇದನ್ನೂ ಓದಿ:ಕಬಕ ಗ್ರಾ.ಪಂನಲ್ಲಿ ಗ್ರಾಮ ಸ್ವರಾಜ್ಯ ರಥ ಅಡ್ಡಿ – ಮೂವರು ವಶಕ್ಕೆ

ಪಕ್ಷಿ ರಕ್ಷಿಸಬೇಕಾದರೆ ವಿದ್ಯುತ್‌ ಲೈನ್‌ ಕಡಿತಗೊಳಿಸಬೇಕಾಗಿತ್ತು. ಅದರಂತೆ ಸಾರ್ವಜನಿಕರು ಸೆಸ್ಕ್ಗೆಕರೆ ಮಾಡಿ ವಿದ್ಯುತ್‌ ಸ್ಥಗಿತಗೊಳಿಸಿ ಮೈನಾ ಪಕ್ಷಿಯನ್ನು ರಕ್ಷಿಸುವಂತೆ ಮನವಿ ಮಾಡಿಕೊಂಡರು. ಕೂಡಲೇ ಮಾರ್ಗ ದಾಳು (ಲೈನ್‌ಮ್ಯಾನ್‌) ನೂರುಲ್ಲಾ ವಿದ್ಯುತ್‌ ಸ್ಥಗಿತಗೊಳಿಸಿದ ಬಳಿಕ ಸ್ಥಳಕ್ಕೆ ಧಾವಿಸಿ ಕಂಬವನ್ನೇರಿದರು. ಅಲ್ಲಿಂದಲೇ ಪಕ್ಷಿ ಸಿಲುಕಿಕೊಂಡಿದ್ದ ಮರದ ಕೊಂಬೆಯನ್ನು ಕತ್ತರಿಸಬೇಕಿತ್ತು. ಕೊಂಬೆ ಕೆಳಗೆ ಬಿದ್ದರೆ ಪಕ್ಷಿಯೂ ಕೆಳಗೆ ಬಿದ್ದು ಸತ್ತು ಹೋಗುವ ಸಾಧ್ಯತೆ ಇತ್ತು.

ಹೀಗಾಗಿ ಸಾರ್ವಜನಿಕರು ಬ್ಲಾಂಕೇಟ್‌ ಗಳನ್ನು ಬಳಸಿ ಬಲೆಯ ಮಾದರಿಯಲ್ಲಿ ಪಕ್ಷಿ ಬೀಳುವ ಜಾಗಕ್ಕೆ ಅಡ್ಡಗಟ್ಟಿ ಹಿಡಿದು ಕೊಂಡರು. ಲೈನ್‌ಮಾನ್‌ ಕೊಂಬೆಯನ್ನು ಕತ್ತರಿಸುತ್ತಿದ್ದಂತೆ ಬ್ಲಾಂಕೇಟ್‌ ಮೇಲೆ ಪಕ್ಷಿ ಬಿದ್ದಿತ್ತು. ಬಳಿಕ ಜನರು ಪಕ್ಷಿಯನ್ನು ಹಿಡಿದುಕೊಂಡು ಕಾಲು ಮತ್ತು ರೆಕ್ಕೆಗೆ ಸಿಲುಕಿದ್ದ ದಾರ ಬಿಡಿಸಿ ಹಾರಿ ಹೋಗಲು ಅನುವು ಮಾಡಿಕೊಟ್ಟರು. ಸಾರ್ವಜನಿಕರು ಹಾಗೂ ಲೈನ್‌ಮ್ಯಾನ್‌ ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೈನಾ ಪಕ್ಷಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

-ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

Heavy Rain; ವರುಣನ ಅಬ್ಬರಕ್ಕೆ ತಂಬಾಕು, ಶುಂಠಿ ಬೆಳೆ ಜಲಾವೃತ; ರೈತರ ಆತಂಕ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

1-sadsadas

Hunsur; ಬೈಕ್‌ಗಳ ಮುಖಾಮುಖಿ: ಓರ್ವ ಸಾವು, ಇಬ್ಬರು ಗಂಭೀರ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Hunasuru: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು… ಎರಡು ಬಸ್, ಎರಡು ಕಾರು ಜಖಂ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

To India’s youth get jobs, Modi should retire: Rahul Gandhi

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.