ಸ್ಟೇಜ್ ಕ್ಯಾರೇಜ್, ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿಗೆ ಒಂದು ತಿಂಗಳ ಕಾಲಾವಕಾಶ
Team Udayavani, Aug 19, 2021, 1:17 PM IST
ಬೆಂಗಳೂರು: ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳ ತೆರಿಗೆ ಪಾವತಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳು ನನ್ನನು ಭೇಟಿ ಮಾಡಿ ಕೋವಿಡ್ ಹಿನ್ನಲೆಯಲ್ಲಿ ಉದ್ದಿಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ವಿಧಾನಮಂಡಲ ಅಧಿವೇಶನ ದಿನಾಂಕ ನಿಗದಿ: ಸಂಪುಟ ಸಭೆಯಲ್ಲಿ ತೀರ್ಮಾನ
ಆಗಸ್ಟ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಸೆಪ್ಟೆಂಬರ್ 15 ರವರೆಗೆ ಹಾಗೂ ಸೆಪ್ಟೆಂಬರ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಅಕ್ಟೋಬರ್ 15 ರವರೆಗೆ ದಂಡರಹಿತವಾಗಿ ಪಾವತಿಸಲು ವಿಸ್ತರಿಸಲಾಗಿದೆ. ಇದರಿಂದ ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.