ಅಫ್ಘಾನ್ ನಿಂದ ಸೇನೆಯನ್ನು ವಾಪಸ್ ಕರೆಸಿಕೊಂಡ ಅಮೆರಿಕಾ : ನನ್ನ ಒಳ್ಳೆ ನಿರ್ಧಾರ ಎಂದ ಬೈಡನ್


Team Udayavani, Sep 1, 2021, 8:40 AM IST

hdghdfgdfg

ಕಾಬೂಲ್‌: ಬರೋಬ್ಬರಿ 20 ವರ್ಷ…, ಅಫ್ಘಾನಿಸ್ತಾನ ನೆಲದಿಂದ ದೂರದ ಅಮೆರಿಕ ಹೊರಗೆ ಕಾಲಿಟ್ಟಿದೆ. 2001ರಲ್ಲಿ ಅಲ್‌ಖೈದಾ ಉಗ್ರ ಒಸಾಮ ಬಿನ್‌ ಲಾಡೆನ್‌ನ ಹತ್ಯೆಗಾಗಿ ಅಫ್ಘಾನಿಸ್ತಾನ ನೆಲಕ್ಕೆ ಬಂದಿಳಿದಿದ್ದ ಅಮೆರಿಕದ ಸೇನೆ, ತಾಲಿಬಾನ್‌ನೊಂದಿಗೆ ಒಪ್ಪಂದ ಮಾಡಿಕೊಂಡು ವಾಪಸ್‌ ತೆರಳಿದೆ. ಮೊದಲೇ ತಾಲಿ ಬಾನ್‌ ಉಗ್ರರಿಗೆ ಮಾತುಕೊಟ್ಟಂತೆ ಆ.31ಕ್ಕೆ ಸರಿಯಾಗಿ ದೇಶ ಬಿಟ್ಟು ಹೊರನಡೆದಿದೆ.

ಈ 20 ವರ್ಷಗಳಲ್ಲಿ ಅಮೆರಿಕ ಅಫ್ಘಾನಿಸ್ತಾನದ ಸೇನೆಗೆ ತರಬೇತಿ ನೀಡುವುದರಲ್ಲೇ ಸಮಯ ಸವೆ ಸಿತು. ಆದರೆ, ದೇಶ ನಿರ್ಮಾಣ ವಿಚಾರದಲ್ಲಿ ಸಂಪೂ ರ್ಣವಾಗಿ ತನ್ನ ಪಾತ್ರ ಮರೆತ ಅಮೆರಿಕ, ಈಗ ಮತ್ತೆ ತಾಲಿಬಾನ್‌ ಉಗ್ರರ ಕೈಗೇ ದೇಶವನ್ನು ಒಪ್ಪಿಸಿ ಹೋದಂತಾಗಿದೆ. ಸೋಮವಾರ ಮಧ್ಯರಾತ್ರಿ ಅಮೆರಿ ಕದ ಯೋಧರನ್ನು ಹೊತ್ತಕಡೇ ಯುದ್ಧ ವಿಮಾನ ಸಿ17 ಕಾಬೂಲ್‌ನ ಹಮೀದ್‌ ಕಜೈì ಅಂತಾರಾಷ್ಟ್ರೀಯ ನಿಮಾನ ನಿಲ್ದಾಣದಿಂದ ವಾಪಸ್‌ ಹೋಯಿತು. ಇದ ರಲ್ಲಿ ಕಡೆಯವರಾಗಿ ಮೇಜರ್‌ ಜನರಲ್‌ ಕ್ರಿಸ್‌ ಡೋನಾಹ್‌ ಮತ್ತು ರಾಯಭಾರಿ ರೋಸ್‌ ವಿಲ್ಸನ್‌ ಪ್ರಯಾಣ ಬೆಳೆಸಿದರು.

ಈ ಬಗ್ಗೆ ಅಧಿಕೃತ ಹೇಳಿಕೆ ಹೊರಡಿಸಿದ ಪೆಂಟಗಾನ್‌, ಆ.14ರಿಂದ ಇಲ್ಲಿವರೆಗೆ79 ಸಾವಿರ ಜನರನ್ನು ಅಮೆರಿಕಕ್ಕೆ ಸ್ಥಳಾಂತರ ಮಾಡಿರುವು ದಾಗಿ ಹೇಳಿತು. ಇದರಲ್ಲಿ 6 ಸಾವಿರ ಅಮೆರಿಕನ್ನರು, ಉಳಿದಂತೆ 73 ಸಾವಿರ ಆಫ‌^ನ್ನರನ್ನೂ ತಮ್ಮ ದೇಶಕ್ಕೆ ಕರೆ ದೊಯ್ದಿದ್ದಾರೆ. ಸದ್ಯ ಅಮೆರಿಕದ ಸೇನಾಪಡೆ ಸಂಪೂರ್ಣವಾಗಿ ಆಫ‌^ನ್‌ನಿಂದ ವಾಪಸ್‌ ಹೋದಂತೆ ಆಗಿದೆ. ಆದರೆ, ಇನ್ನೂ ಕೆಲವು ನಾಗರಿಕರು ಅಲ್ಲೇ ಉಳಿದಿದ್ದಾರೆ. ಇವ ರನ್ನು ವಾಪಸ್‌ ಕರೆಸಿಕೊಳ್ಳುವ ಬಗ್ಗೆ ಕತಾರ್‌ನ ರಾಯ ಭಾರಕಚೇರಿ ಪ್ರಯತ್ನ ಪಡಲಿದೆ ಎಂದು ಹೇಳಿದೆ.

ದೇಶಾದ್ಯಂತ ಸಂಭ್ರಮಾಚರಣೆ : ಅತ್ತ ಅಮೆರಿಕನ್ನರು ದೇಶ ಬಿಟ್ಟು ಹೋಗುತ್ತಿದ್ದಂತೆ ಇತ್ತ ಅಫ್ಘಾನಿಸ್ತಾನದಲ್ಲಿ ಸಂಭ್ರಮಾಚರಣೆಯೂ ಜೋರಾಗಿ ನಡೆಯಿತು. ತಾಲಿ ಬಾನ್‌ ಧ್ವಜವನ್ನು ಇರಿಸಿಕೊಂಡು ಕಾಬೂಲ್‌ ಸೇರಿ ದಂತೆ ಪ್ರಮುಖ ನಗರಗಳಲ್ಲಿ ಓಡಾಡಿದ ಉಗ್ರರು, ನಾವು ಮತ್ತೆ ಇತಿಹಾಸ ನಿರ್ಮಿಸಿದ್ದೇವೆ, ಅಮೆರಿಕನ್ನರು ಮತ್ತು ನ್ಯಾಟೋ ಪಡೆಗಳು ಆಫ‌^ನ್‌ ಅನ್ನು ವಶಪಡಿಸಿ ಕೊಂಡಿದ್ದವು. ನಾವು ಅವರಿಂದ ಮತ್ತೆ ವಾಪಸ್‌ ಪಡೆದಿ ದ್ದೇವೆ ಎಂದು ತಾಲಿಬಾನ್‌ ಅಧಿಕಾರಿಯೊಬ್ಬರು ಸಂಭ್ರ ಮದಿಂದ ಹೇಳಿದರು. ಅಷ್ಟೇ ಅಲ್ಲ, ತಮ್ಮ ದೇಶವನ್ನು ವಶಕ್ಕೆ ತೆಗೆದುಕೊಳ್ಳಲು ಬಂದವರಿಗೆ ತಕ್ಕ ಪಾಠ ಕಲಿಸಿ ದ್ದೇವೆ ಎಂದೂ ಹೇಳಿಕೊಂಡರು.

ವಿಮಾನ ನಿಲ್ದಾಣದಲ್ಲಿ ಕುಣಿದುಕುಪ್ಪಳಿಸಿದರು!

ಅಮೆರಿಕದ ಯುದ್ಧ ವಿಮಾನ ಹೋಗುತ್ತಿದ್ದಂತೆ, ಕಾಬೂಲ್‌ನ ಹಮೀದ್‌ ಕಜೈì ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆದ ತಾಲಿಬಾನ್‌ ಉಗ್ರರು, ಕುಣಿದು ಕುಪ್ಪಳಿಸಿ ದರು. ಅಮೆರಿಕ ಬಿಟ್ಟು ಹೋದ, ಯುದ್ಧ ವಿಮಾನಗಳು, ಹೆಲಿಕಾ ಪ್ಟರ್‌ಗಳು, ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದರು. ಅಷ್ಟೇ ಅಲ್ಲ, ಯುದ್ಧ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತು ಸಂಭ್ರಮಿಸಿದರು. ಈ ಮಧ್ಯೆ, ತಾಲಿಬಾನ್‌ನ ಅತ್ಯಂತ ನುರಿತ ಪಡೆ, ಬದ್ರಿ ಘಟಕವು ಕಾಬೂಲ್‌ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಉನ್ನತ ಮಟ್ಟದ ಸಮಿತಿ

ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಬಗ್ಗೆ ಗಮನ ಹರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಮಿತಿ ರಚಿಸಿ ದ್ದಾರೆ. ಈ ಸಮಿತಿಯಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದಾರೆ. ಅಫ್ಘಾನಿಸ್ತಾನದಲ್ಲಿ ಬಾಕಿ ಉಳಿದಿ ರುವ ಭಾರತೀಯರನ್ನು ವಾಪಸ್‌ ಕರೆತರುವುದು, ಹಾಗೆಯೇ ಅಲ್ಲಿ ಉಳಿದಿರುವ ಧಾರ್ಮಿಕ ಅಲ್ಪಸಂಖ್ಯಾತರನ್ನು ವಾಪಸ್‌ ತರುವ ಬಗ್ಗೆ ಚರ್ಚೆಯಾಗಿದೆ.ಅಲ್ಲದೆ, ಆಫ‌^ನ್‌ಭೂಮಿಯನ್ನು ಬೇರೆದೇಶಗಳು ತಮ್ಮ ಹಿತಾಸಕ್ತಿಗಾಗಿ ಬಳಕೆ ಮಾಡದಂತೆ ನೋಡಿಕೊಳ್ಳುವುದು ಬೇಗೆ ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.