ಅಖಾಡಕ್ಕೆ ಇಳಿದ ಹೊಸಬರು: ಸೆಪ್ಟೆಂಬರ್‌ನಲ್ಲಿ ನವವೈಭವ

Team Udayavani, Sep 4, 2021, 1:15 PM IST

ಅಖಾಡಕ್ಕೆ ಇಳಿದ ಹೊಸಬರು: ಸೆಪ್ಟೆಂಬರ್‌ನಲ್ಲಿ ನವವೈಭವ

ನೋಡುವಷ್ಟು ನೋಡಿ, ಹೊಸಬರು ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ಹೌಸ್‌ಫ‌ುಲ್‌ ಪ್ರದರ್ಶನದ ಅನುಮತಿಗೆ ಕಾದು ಸುಸ್ತಾದ ಹೊಸಬರು ಗಟ್ಟಿ ನಿರ್ಧಾರ ಮಾಡಿ, ತಮ್ಮ ಸಿನಿಮಾಗಳ ಬಿಡುಗಡೆಗೆ ಮುಂದಾಗಿದ್ದಾರೆ. ಈ ಮೂಲಕ  ಸೆಪ್ಟೆಂಬರ್‌ ತಿಂಗಳನ್ನು ಪೂರ್ತಿ ಹೊಸಬರು ತಮ್ಮದಾಗಿಸಿ ಕೊಳ್ಳಲಿದ್ದಾರೆ.

ಹಾಗೆ ನೋಡಿದರೆ ಸೆ.10ಕ್ಕೆ ಶಿವ ರಾಜ್‌ಕುಮಾರ್‌ ಅಭಿನಯದ “ಭಜರಂಗಿ-2′ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಹೌಸ್‌ಫ‌ುಲ್‌ ಪ್ರದರ್ಶನಕ್ಕೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಇದು ಶಿವಣ್ಣ ಅಭಿಮಾನಿಗಳಿಗೆ ಬೇಸರ ‌ ತಂದಿರಬಹುದು. ಆದರೆ, ‌ ಒಂದಷ್ಟು ಹೊಸಬರ ಸಿನಿಮಾಗಳು ಮಾತ್ರ ಈ ಗ್ಯಾಪ್‌ನಲ್ಲಿ ಬಿಡುಗಡೆ ಮಾಡಲು ಮುಂದಾಗಿವೆ. ಈಗಾಗಲೇ “ಲಂಕೆ’, “ಓಶೋ’, “ಆಶ್ಚರ್ಯ’, “ಚಡ್ಡಿದೋಸ್ತ್’, “ಜಿಗ್ರಿ ದೋಸ್ತ್’ ಸೇರಿದಂತೆ ಇನ್ನೂ ಒಂದಷ್ಟು ಸಿನಿಮಾಗಳು ಈ ತಿಂಗಳಲ್ಲೇ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಇದನ್ನೂ ಓದಿ:ಇಂದು ಅನಂತ್‌ನಾಗ್‌ ಬರ್ತ್‌ಡೇ: ಎವರ್‌ಗ್ರೀನ್‌ ಹೀರೋ ಕೈಯಲ್ಲಿ ವಿಭಿನ್ನ ಪಾತ್ರಗಳು

ಇದರಲ್ಲಿ ಯೋಗಿ ಅಭಿನಯದ “ಲಂಕೆ’ಯೊಂದು ಬಿಟ್ಟರೆ ಮಿಕ್ಕಂತೆ ಬಹುತೇಕ ಸಿನಿಮಾಗಳು ಹೊಸಬರದ್ದೇ ಆಗಿವೆ. ಸೆ.10ಕ್ಕೆ ಯೋಗಿ ಅಭಿನಯದ “ಲಂಕೆ’, “ಓಶೋ’ ಹಾಗೂ “ಆಶ್ಚರ್ಯ’ ಎಂಬ ಚಿತ್ರಗಳು ತೆರೆಕಾಣಲಿವೆ. ಸೆ.17ರಂದು “ಚಡ್ಡಿದೋಸ್ತ್’, “ಜಿಗ್ರಿದೋಸ್ತ್’ ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಇದರ ಜೊತೆಗೆ ಇನ್ನೊಂದೆರಡು ಚಿತ್ರಗಳು ಕೂಡಾ ಬಿಡುಗಡೆಗೆ ಬರುವ ಸಾಧ್ಯತೆ ಇದೆ.

ಯಾಕೆ ಈ ನಿರ್ಧಾರ: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳು ಸಂಕಷ್ಟ ಎದುರಿಸುತ್ತಲೇ ಬರುತ್ತಿವೆ. ಅದು ರಿಲೀಸ್‌ ಸಮಯದಲ್ಲಿ. ಸ್ಟಾರ್‌ ಸಿನಿಮಾಗಳ ಮಧ್ಯೆ ರಿಲೀಸ್‌ ಆದರೂ ಸಮಸ್ಯೆ, ಹೊಸಬರ ನಾಲ್ಕೈದು ಚಿತ್ರಗಳ ಜೊತೆ ರಿಲೀಸ್‌ ಆದರೂ ಸಮಸ್ಯೆ. ಚಿತ್ರಮಂದಿರಗಳಿಗಾಗಿ “ಹೋರಾಟ’ ಮಾಡಬೇಕಾದ ಅನಿವಾರ್ಯತೆ. ಜೊತೆಗೆ ಚಿತ್ರಮಂದಿರಗಳ ಬಾಡಿಗೆ. ಈ ಎಲ್ಲಾ ಕಾರಣಗಳಿಂದಾಗಿ ಹೊಸಬರಿಗೆ ಸದ್ಯದ ಪರಿಸ್ಥಿತಿ ಸೂಕ್ತವಾಗಿದೆ. ಅತ್ತ ಕಡೆ ಚಿತ್ರಮಂದಿರಗಳು ಸಿಗುತ್ತವೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಶೋಗಳಿಗೆ ಅವಕಾಶವಿದೆ. ಜೊತೆಗೆ ಆರ್ಥಿಕವಾಗಿ ಹೊರೆಯೂ ಕಡಿಮೆಯಾಗುತ್ತದೆ. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಹೊಸಬರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಸ್ಪಷ್ಟತೆ ಇಲ್ಲದ ಸ್ಟಾರ್ ರಿಲೀಸ್‌: ಸ್ಟಾರ್‌ ಸಿನಿಮಾಗಳ ಬಿಡುಗಡೆ ಯಾವಾಗ ಎಂದು ಕೇಳಿದರೆ ಸದ್ಯಕ್ಕೆ ಉತ್ತರಿಸೋದು ಕಷ್ಟ. ಏ‌ಕೆಂದರೆ ಸ್ಟಾರ್‌ ಸಿನಿಮಾಗಳ ನಿರ್ಮಾಪಕರು ಚಿತ್ರಮಂದಿರಗಳ ಹೌಸ್‌ಫ‌ುಲ್‌ ಪ್ರದರ್ಶನದ ಅನುಮತಿಗೆ ಕಾಯುತ್ತಿದ್ದಾರೆ. ಅನುಮತಿ ಸಿಕ್ಕ ಬಳಿಕ ಯಾವ ಸ್ಟಾರ್‌ ಸಿನಿಮಾ ಮೊದಲು ಬಿಡುಗಡೆಯಾಗುತ್ತದೆ ಎಂಬ ಸ್ಪಷತೆ ಇನ್ನೂ ಸಿಕ್ಕಿಲ್ಲ.

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.