ಲೈಂಗಿಕ ಕ್ರಿಯೆ ನಡೆಸದಿದ್ದರೆ ನಾವೇನು ಸಾಯೋಲ್ಲ : ನಟಿ ಶ್ರುತಿ ಹಾಸನ್
Team Udayavani, Sep 14, 2021, 2:02 PM IST
ಹೈದರಾಬಾದ್ : ಬಹುಭಾಷಾ ನಟಿ ಶ್ರುತಿ ಹಾಸನ್ ಅವರು ಸಿನಿಮಾಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು, ಲವ್ ಅಫೇರ್ ಆ್ಯಂಡ್ ಬೋಲ್ಡ್ ಹೇಳಿಕೆಗಳ ಮೂಲಕ. ಇದೀಗ ಈ ನಟಿ ನೀಡಿರುವ ಮತ್ತೊಂದು ಹೇಳಿಕೆ ಎಲ್ಲರ ಗಮನ ಸೆಳೆಯತ್ತಿದೆ.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಶ್ರುತಿ ಅವರಿಗೆ ನೀವು ‘ಆಹಾರ’ ಮತ್ತು ‘ಲೈಂಗಿಕ ಕ್ರಿಯೆ’ ಇವುಗಳಲ್ಲಿ ಯಾವುದನ್ನು ಆಯ್ದುಕೊಳ್ಳುತ್ತಿರುವ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿರುವ ಅವರು, ಲೈಂಗಿಕ ಕ್ರಿಯೆ ಜೊತೆ ಆಹಾರ ಹೋಲಿಕೆ ಮಾಡುವುದು ಮೊದಲ ತಪ್ಪು. ಆಹಾರ ಇಲ್ಲದೆ ಯಾರೋಬ್ಬರು ಬದುಕಲು ಸಾಧ್ಯವಿಲ್ಲ. ಆಹಾರ ಇಲ್ಲದೆ ನಾವೆಲ್ಲರೂ ಬದುಕಲು ಆಗುವುದಿಲ್ಲ. ಅದೆ ಒಂದು ವೇಳೆ ಲೈಂಗಿಕ ಕ್ರಿಯೆ ನಡೆಸದಿದ್ದರೂ ನಾವು ಬದುಕಬಹುದು ಎಂದಿದ್ದಾರೆ.
ಇನ್ನು ಕಾಲಿವುಡ್, ಟಾಲಿವುಡ್ ಹಾಗೂ ಬಾಲಿವುಡ್ ನ ಜನಪ್ರಿಯ ನಟಿ ಶ್ರುತಿ ಹಾಸನ್. ‘ಅನಗನಗಾ ಓ ಧೀರುಡು’, ‘ಓ ಮೈ ಫ್ರೆಂಡ್’, ‘ಗಬ್ಬರ್ ಸಿಂಗ್’, ‘ರೇಸ್ ಗುರ್ರಂ’, ‘ಪುಲಿ’, ‘ಪ್ರೇಮಂ’, ‘ಯಾರಾ’, ‘ಕ್ರ್ಯಾಕ್’, ‘ದಿ ಪವರ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ‘ಲಾಭಂ’ ಮತ್ತು ‘ಸಲಾರ್’ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ‘ಸಲಾರ್’ ಚಿತ್ರ ತಯಾರಾಗುತ್ತಿದೆ. ‘ಸಲಾರ್’ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ