ರಫ್ತು ಮಾಡಲು ಅವಕಾಶ ಸೃಷ್ಟಿಸಿ

ವಿದೇಶ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು

Team Udayavani, Sep 22, 2021, 6:31 PM IST

ರಫ್ತು ಮಾಡಲು ಅವಕಾಶ ಸೃಷ್ಟಿಸಿ

ಯಾದಗಿರಿ:ಜಿಲ್ಲೆಯಿಂದವಿದೇಶಕ್ಕೆಉತ್ಪನ್ನಗಳನ್ನು ರಫ್ತು ಮಾಡಲು ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಂಟಿ ಕೃಷಿ ನಿರ್ದೇಶಕರ ಇಲಾಖೆಗಳು ಸಮನ್ವಯ ಸಾಧಿಸಿ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ತಿಳಿಸಿದರು.

ನಗರದ ಖಾಸಗಿ ರೆಸಿಡೆನ್ಸಿ ಹೋಟೆಲ್‌ನಲ್ಲಿ ಜಿಲ್ಲಾ ಕೈಗಾರಿಕ ಕೇಂದ್ರದ ವತಿಯಿಂದ 75ನೇ ಸ್ವಾತಂತ್ರೋತ್ಸವ ಪ್ರಯುಕ್ತ ಆಜಾದಿ ಕಾ ಅಮೃತ ಮಹೋತ್ಸವ ಭಾಗವಾಗಿ ಮಂಗಳವಾರ ಆಯೋಜಿಸಿದ್ದ ವಾಣಿಜ್ಯ ಸಪ್ತಾಹದಡಿ ರಫ್ತು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಫ್ತು ಮಾಡುವುದು ಬಹಳಷ್ಟು ಕಡಿಮೆಯಾಗಿದ್ದು, ಅದರಲ್ಲಿ ಯಾದಗಿರಿ ಜಿಲ್ಲೆಯಲ್ಲಿ ರಫ್ತು ಮಾಡುವಂತಹ ಉತ್ಪನ್ನಗಳನ್ನು ಉತ್ಪಾದಿಸುತ್ತಿಲ್ಲ. ಹೀಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಕೈಗಾರಿಕೋದ್ಯಮದಾರರಿಗೆ ಇದರ ಕುರಿತು ತಿಳಿವಳಿಕೆ ನೀಡಿ ಉತ್ತೇಜಿಸುವುದು ಬಹುಮುಖ್ಯವಾಗಿದೆ ಎಂದರು.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ರಫ್ತುವಿನ ಭಾಗವಾಗಿ ಕೆಲ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಇದರ ಲಾಭ ಪಡೆದು ಅಂತಾರಾಷ್ಟ್ರೀಯ ಸಂಬಂಧಗಳನ್ನು ಬೆಸೆದು ನಮಗೆ ಅವಶ್ಯವಿರುವ ವಿದೇಶ ವಸ್ತುಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು. ವಿದೇಶಗಳಲ್ಲಿ ಬೇಡಿಕೆಯಾಗಿರುವ ಪದಾರ್ಥಗಳ ಬಗ್ಗೆ ತಿಳಿದುಕೊಂಡು ಜಿಲ್ಲೆಯಲ್ಲಿ ಹೆಚ್ಚಾಗಿ ಉತ್ಪಾದಿಸಿ ರಫ್ತು ಮಾಡಬೇಕು. ಮಸಾಲೆ ಪದಾರ್ಥಗಳು ಶೇಂಗಾ ಬೀಜಗಳು, ಹತ್ತಿಗಳನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡಬಹುದಾಗಿದೆ ಎಂದರು. ಜಿಲ್ಲೆಯ ಉದ್ಯಮದಾರರಿಗೆ ಮಾಹಿತಿ ನೀಡಿ ರಫ್ತು ಕೈಗೊಳ್ಳಲು ಮುಂದೆ ಬರಲಿ ಮತ್ತು ನಮ್ಮ ಜಿಲ್ಲೆಯು ರಫ್ತು ಜಿಲ್ಲೆಗಳಲ್ಲಿ ಗುರುತಿಸುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ್‌ ರಘೋಜಿ ಮಾತನಾಡಿ, ಸರಕಾರದಿಂದ ಪ್ರತಿಯೊಂದಕ್ಕೂ ಸಹಕಾರ ಮತ್ತು ಯೋಜನೆಗಳಿದ್ದು, ಇದರ ಲಾಭ ಪಡೆಯಬೇಕು. ಕೈಗಾರಿಕಾ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿಯಲು ಮತ್ತು ರಫ್ತುವಿನ ಕುರಿತು ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಎನ್‌. ಮ್ಯಾಗೇರಿ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬೆಳೆಗಳಲ್ಲಿ ಹತ್ತಿ 1,52,798 ಹೆಕ್ಟೇರ್‌ನಲ್ಲಿ 2,56,612 ಮೆ. ಟನ್‌ ಬೆಳೆಯಲಾಗುತ್ತಿದ್ದು, ಅದು ಉತ್ತಮ
ಗುಣಮಟ್ಟದಿಂದ ಕೂಡಿದೆ. ಆ ಹತ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಂಸ್ಕರಿಸಿದರೆ ನಾವು ಸಹ ರಫ್ತು ಮಾಡಬಹುದಾಗಿದೆ ಎಂದು ತಿಳಿಸಿದರು.

ಯಾದಗಿರಿ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಹನುಮಾನ್‌ ದಾಸ್‌ ಮುಂದಡ, ರೈಸ್‌ ಮಿಲ್‌ ಅಸೋಷಿಯೇಷನ್‌ ಅಧ್ಯಕ್ಷ ಲಾಯಖ್‌ ಹುಸೇನ್‌ ಬಾದಲ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎನ್‌. ಸಿದೇಶ್ವರ ಇದ್ದರು. ಸಹಾಯಕ ನಿರ್ದೇಶಕ ಎಂ.ಎ. ಸಲೀಂ ಸ್ವಾಗತಿಸಿದರು. ಅಧೀಕ್ಷಕ ಷಣ್ಮುಖ ವಂದಿಸಿದರು.

ಟಾಪ್ ನ್ಯೂಸ್

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wadgera; A crocodile appeared in the farm

Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ

4-yadagiri

Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್

1-wewwe

Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು

yadagiri

SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

15-rain

Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.