ಕೋಲ್ಕತ್ತಾ Vs ಡೆಲ್ಲಿ: ಟಾಸ್ ಗೆದ್ದ ಕೆಕೆಆರ್, ಡೆಲ್ಲಿ ಆಡುವ ಬಳಗದಲ್ಲಿ ಸ್ವೀವ್ ಸ್ಮಿತ್
Team Udayavani, Sep 28, 2021, 3:16 PM IST
ಶಾರ್ಜಾ: ಐಪಿಎಲ್ ನಲ್ಲಿಂದು ಡಬಲ್ ಧಮಾಕ. ಇಂದು ಎರಡು ಪಂದ್ಯಗಳು ನಡೆಯುತ್ತಿದೆ. ಮೊದಲ ಪಂದ್ಯದಲ್ಲಿಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದೆ.
ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಎರಡೂ ತಂಡಗಳಲ್ಲಿ ಬದಲಾವಣೆ ಮಾಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ನ ಆರಂಭಿಕ ಆಟಗಾರ ಪೃಥ್ವಿ ಶಾ ಗಾಯಗೊಂಡ ಕಾರಣ ಅವರ ಜಾಗಕ್ಕೆ ಆಸೀಸ್ ಅನುಭವಿ ಸ್ಟೀವ್ ಸ್ಮಿತ್ ರನ್ನು ಸೇರಿಸಿಕೊಳ್ಳಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿಂದು ಎರಡು ಬದಲಾವಣೆ ಮಾಡಿಕೊಂಡಿದೆ. ಪ್ರಸಿದ್ ಕೃಷ್ಣ ಮತ್ತು ಆಂದ್ರೆ ರಸೆಲ್ ಬದಲಿಗೆ ಸಂದೀಪ್ ವಾರಿಯರ್ ಮತ್ತು ಟಿಮ್ ಸೌಥಿಗೆ ಆಡುವ ಬಳಗದಲ್ಲಿ ಜಾಗ ನೀಡಲಾಗಿದೆ.
ಇದನ್ನೂ ಓದಿ:ಕೇವಲ 2 ಪಂದ್ಯ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಗೂ ಇದೇ ಪ್ಲೇ ಆಫ್ ಅವಕಾಶ: ಹೇಗೆ ಗೊತ್ತಾ?
ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಗೇರುವುದು ಬಹುತೇಕ ಖಚಿತವಾಗಿದೆ. ಕೆಕೆಆರ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ ರೇಸ್ ನಲ್ಲಿ ಇನ್ನಷ್ಟು ಮುನ್ನುಗ್ಗುವ ಇರಾದೆಯಲ್ಲಿದೆ.
ದೆಹಲಿ ಕ್ಯಾಪಿಟಲ್ಸ್: ಶಿಖರ್ ಧವನ್, ಸ್ಟೀವನ್ ಸ್ಮಿತ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾ/ವಿ.ಕೀ), ಶಿಮ್ರನ್ ಹೆಟ್ಮೈರ್, ಲಲಿತ್ ಯಾದವ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡಾ, ಅನ್ರಿಚ್ ನೋರ್ಜೆ, ಅವೇಶ್ ಖಾನ್
ಕೋಲ್ಕತ್ತಾ ನೈಟ್ ರೈಡರ್ಸ್: ಶುಭ್ಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್ (ನಾ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿ.ಕೀ), ಸುನೀಲ್ ನರೈನ್, ಲಾಕಿ ಫರ್ಗುಸನ್, ಟಿಮ್ ಸೌಥಿ, ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ