ತೊಗರಿಗೆ ಗೊಡ್ಡು ರೋಗ ಕಾಟ; ನಿರ್ವಹಣೆಗೆ ಸಲಹೆ

Team Udayavani, Oct 28, 2021, 1:05 PM IST

17crops

ಲಿಂಗಸುಗೂರು: ಲಿಂಗಸುಗೂರು-ಮಸ್ಕಿ ತಾಲೂಕಿನ ವಿವಿಧ ಗ್ರಾಮಗಳ ಜಮೀನಿನಲ್ಲಿ ಬೆಳೆಯಲಾದ ತೊಗರಿ ಬೆಳೆಗಳ ಕ್ಷೇತ್ರಗಳಲ್ಲಿ ಹೆಚ್ಚಾಗಿ ಗೊಡ್ಡು ರೋಗ ಕಂಡು ಬರುತ್ತಿರುವುದರಿಂದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ರೈತರಿಗೆ ನಿರ್ವಹಣಾ ಕ್ರಮಗಳು ಕುರಿತು ಸಲಹೆ ನೀಡಿದರು.

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥೆ ಡಾ| ವಾಣಿಶ್ರೀ, ಡಾ| ಬಿಂದು ಹಾಗೂ ಅರವಿಂದ ರಾಠೊಡ್‌ ರೋಗಪೀಡಿತ ಕ್ಷೇತ್ರಗಳಿಗೆ ಭೇಟಿ ನೀಡಿ ರೋಗ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಸಲಹೆ ನೀಡಿದರು.

ಈ ರೋಗ ಎಸ್‌ಎಂಡಿ (ಸ್ಟೆರಿಲಿಟಿ ಮೊಜಾಯಿಕ್‌) ಎಂದು ಕರೆಯುವ ಬರಿಗಣ್ಣಿಗೆ ಕಾಣಿಸದ ಕಪ್ಪು ಬಣ್ಣದ ನುಶಿಯಿಂದ (ಅಸೇರಿಯಾ ಕೆಜ್ಯಾನೀ) ಹರಡುತ್ತದೆ. ಇದಕ್ಕೆ ಮೂಲ ಕಾರಣ ಪಿಪಿಎಸ್‌ ಎಂವಿ (ಪಿಜನ್‌ಪೀ ಸ್ಟೆರಿಲಿಟಿ ಮೊಸಾಯಿಕ್‌ ವೈರಸ್‌) ಎನ್ನುವ ವೈರಾಣು ಆಗಿದೆ. ಇದು ಗಾಳಿಯಿಂದ ಬರುತ್ತದೆ ಹೊರತು ಬೀಜದಿಂದ ಹರಡುವುದಿಲ್ಲ ಎಂದು ಮಾಹಿತಿ ನೀಡಿದರು.

ಗಿಡಗಳ ಬೆಳವಣಿಗೆ ಕುಂಠಿತವಾಗಿ ಎಲೆಗಳ ಮೇಲ್ಭಾಗದಲ್ಲಿ ತಿಳಿ-ದಟ್ಟ ಹಳದಿ ಬಣ್ಣದ ಮೊಸಾಯಿಕ್‌ ತರಹದ ಮಚ್ಚೆ ಮತ್ತು ಹೆಚ್ಚಿನ ಸಂಖ್ಯೆಯ ಮುಟುರುವ ಎಲೆಗಳನ್ನು ಹೊಂದಿ ಹೂ-ಕಾಯಿ ಇಲ್ಲದೇ ಗೊಡ್ಡಾಗಿ ಉಳಿಯುತ್ತವೆ. ಬೆಳೆಯ ಎಳೆಯ ವಯಸ್ಸಿನಲ್ಲಿ ಈ ರೋಗ ಬಂದರೆ ಕಾಂಡ ಉದ್ದವಾಗಿ ಬೆಳೆಯದೇ ಸಣ್ಣ ಟೊಂಗೆ ಹೊಂದಿರುತ್ತದೆ. ಇದರಲ್ಲಿರುವುದು ರಸ ಹೀರುವ ನುಶಿಯಾಗಿದ್ದು ರೋಗ ಪೀಡಿತ ಗಿಡದ ರಸ ಹೀರಿ ಆರೋಗ್ಯವಂತ ಗಿಡಕ್ಕೆ ಹೋದಾಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ. ಇದರ ಲಕ್ಷಣಗಳು ಕೆಲವೊಮ್ಮೆ ತೋರ್ಪಡಿಸದೇ ಆರೋಗ್ಯವಂತ ಗಿಡಗಳ ತರಹ ಕಾಣಿಸುತ್ತಿರುತ್ತವೆ. ಆದರೆ ಹೂ ಬಿಡುವ ಹಂತದಲ್ಲಿ ತೊಂದರೆ ಕಾಣಿಸುವುದು ರೋಗದ ಲಕ್ಷಣಗಳಾಗಿವೆ.

ರೋಗದ ಹತೋಟಿಗಾಗಿ ರೋಗ ನಿರೋಧಕ ತಳಿಗಳಾದ ಬಿಎಸ್‌ಎಂಆರ್‌ ಹಾಗೂ ಜಿಆರ್‌ಜಿ ತಳಿ ಆಯ್ಕೆ ಮಾಡಬೇಕು. ಕೂಳೆ ಬೆಳೆಯಲು ರೈತರು ನಿಲ್ಲಿಸಬೇಕು. ರಾಶಿಯಾದ ಮೇಲೆ ಉಳಿದ ತೊಗರಿ ಕಸ, ಕಟ್ಟಿಗೆ ಎಲ್ಲವನ್ನು ಆಯ್ದು ಸುಡಬೇಕು. ಬಿತ್ತನೆಯಾದ 40-45 ದಿನಗಳಲ್ಲಿ ಬೆಳೆ ಪರಿಶೀಲಿಸಿ ರೋಗ ಪೀಡಿದ ಬೆಳೆ ಕಂಡು ಬಂದಲ್ಲಿ ಅದನ್ನು ಕಿತ್ತು ಹಾಕಬೇಕು. ಇಲ್ಲವಾದಲ್ಲಿ ಗಾಳಿಯಲ್ಲಿ ಪಸರಿಸುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡ 17 ರ ತರುಣಿ !!

ಎಕೋ ಮೈಟ್‌/ ಓ ಮೈಟ್‌ ಅನ್ನು ಪ್ರತಿ ಲೀ. ನೀರಿಗೆ 1 ಮಿ.ಲೀ. ಬೆರೆಸಿ ಸಿಂಪಡಿಸಬೇಕು ಅಥವಾ ಬೇವಿನ ಎಣ್ಣೆ ಪ್ರತಿ ಲೀ. ನೀರಿಗೆ 2 ಮಿ.ಲೀ. ಬೆರೆಸಿ ಸಿಂಪಡಿಸಬಹುದು ಅಥವಾ ಡೈಫೆನ್‌ಥುರಿಯಂ ಪ್ರತಿ ಲೀ. ನೀರಿಗೆ 2.5 ಗ್ರಾಂ ಬೆರೆಸಿ ಸಿಂಪಡಿಸಬೇಕು ಅಥವಾ ಅಬಾಮೆಕ್ಟಿನ್‌ ಪ್ರತಿ ಲೀ. ನೀರಗೆ 1 ಗ್ರಾಂ. ಬೆರೆಸಿ ಸಿಂಪಡಿಸಬೇಕು ಎಂದು ರೈತರಿಗೆ ತಿಳಿಸಿದರು.

ಟಾಪ್ ನ್ಯೂಸ್

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Gadag

ಮೋದಿಯಿಂದ ಬಡತನ ಮುಕ್ತ ಭಾರತ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.