ಚುಟುಕು ಮಾದರಿ ನಾಯಕನಾಗಿ ಕೊಹ್ಲಿಗಿಂದು ವಿದಾಯ ಪಂದ್ಯ: ಕೋಚ್ ಶಾಸ್ತ್ರಿಗೂ ಅಂತಿಮ ಆಟ
Team Udayavani, Nov 8, 2021, 9:55 AM IST
ದುಬೈ: ಐಸಿಸಿ ಟಿ20 ವಿಶ್ವಕಪ್ 2021ರಿಂದ ಭಾರತ ತಂಡ ಹೊರಬಿದ್ದಿದೆ. ಆದರೆ ಇಂದು ತನ್ನ ಕೊನೆಯ ಪಂದ್ಯವಾಡುತ್ತಿದ್ದು, ನಮೀಬಿಯಾ ಎದುರಾಳಿಯಾಗಿರಲಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇಂದು ಟಿ20 ತಂಡದ ನಾಯಕನಾಗಿ ತನ್ನ ಕೊನೆಯ ಪಂದ್ಯವನ್ನು ಆಡುತ್ತಿದ್ದಾರೆ.
ಕೂಟದ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಟಿ20 ನಾಯಕತ್ವವನ್ನು ತ್ಯಜಿಸುತ್ತಿರುವುದಾಗಿ ಘೋಷಣೆ ಮಾಡಿದ್ದರು. ಸೂಪರ್ 12 ಹಂತದಲ್ಲಿ ಮೊದಲೆರಡು ಪಂದ್ಯಗಳನ್ನು ಸೋತ ಭಾರತ ಸೆಮಿ ಫೈನಲ್ ರೇಸ್ ನಿಂದ ಹೊರಬಿದ್ದಿದೆ. ಇಂದು ಔಪಚಾರಿಕ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ.
ಇದೇ ವೇಳೆ ಕೋಚ್ ರವಿ ಶಾಸ್ತ್ರಿ ಅವರ ಅಧಿಕಾರವಧಿ ಕೂಡಾ ಅಂತ್ಯವಾಗಲಿದೆ. ಇಂದು ರವಿ ಶಾಸ್ತ್ರಿ ಕೋಚ್ ಅಡಿಯಲ್ಲಿ ಭಾರತ ಕೊನೆಯ ಪಂದ್ಯವಾಡುತ್ತಿದೆ. ವಿಶ್ವಕಪ್ ಬಳಿನ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಆಗಿರಲಿದ್ದಾರೆ.
ಇದನ್ನೂ ಓದಿ:ಮಮತಾ ಮಡಿವಾಳ: ಮಗಳ ಕ್ರಿಕೆಟ್ ಭವಿಷ್ಯಕ್ಕಾಗಿ ತಂದೆಯ ತ್ಯಾಗ
ಟಿ20 ವಿಶ್ವಕಪ್ ಕೂಟದ ಸೆಮಿ ಫೈನಲ್ ಗೆ ನಾಲ್ಕು ತಂಡಗಳು ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಿದರೆ, ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.