ಪಾಕಿಸ್ಥಾನ‌ಕ್ಕೆ ಯುದ್ಧ ಹಡಗು ನೀಡಿದ ಚೀನ

"ಟೈಪ್‌ 054ಎ/ಪಿ' ಮಾದರಿಯ ಈ ಹಡಗುಗಳ ಹಸ್ತಾಂತರ

Team Udayavani, Nov 10, 2021, 7:15 AM IST

ಪಾಕಿಸ್ಥಾನ‌ಕ್ಕೆ ಯುದ್ಧ ವಿಮಾನ ನೀಡಿದ ಚೀನ

ಬೀಜಿಂಗ್‌: ಹಿಂದೂ ಮಹಾಸಾಗರದಲ್ಲಿ ಹಾಗೂ ಅರಬಿ ಸಮುದ್ರದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು ಶತಾಯಗತಾಯ ಹವಣಿಸು ತ್ತಿರುವ ಚೀನ, ಇದಕ್ಕೆ ಪೂರಕವಾಗಿ ತಾನು ತಯಾರಿಸಿರುವ ಅತ್ಯಾಧುನಿಕ ಯುದ್ಧ ಹಡಗುಗಳನ್ನು ಪಾಕಿಸ್ಥಾನ‌ಕ್ಕೆ ಹಸ್ತಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲ ಹಡಗುಗಳನ್ನು “ಚೀನ ಸ್ಟೇಟ್‌ ಶಿಪ್‌ಬಿಲ್ಡಿಂಗ್‌ ಕಾರ್ಪೊರೇಶನ್‌’ (ಸಿಎಸ್‌ಎಸ್‌ಸಿ) ಸಂಸ್ಥೆ ನಿರ್ಮಿಸಿದೆ. ಶಾಂಘೈನಲ್ಲಿ ಇತ್ತೀಚೆಗೆ ನಡೆದಿದ್ದ ಸರಳ ಸಮಾರಂಭವೊಂದರಲ್ಲಿ ಪಾಕಿಸ್ಥಾನ‌ ನೌಕಾ ಪಡೆಯ ಮುಖ್ಯಸ್ಥರಿಗೆ ಚೀನ ನೌಕಾಪಡೆಯ ಮುಖ್ಯಸ್ಥರು ಈ ಹಡಗುಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ. ಹೀಗೆ, ಹಸ್ತಾಂತರಗೊಂಡಿರುವ “ಟೈಪ್‌ 054ಎ/ಪಿ’ ಎಂಬ ಮಾದರಿಯ ಈ ಹಡಗುಗಳನ್ನು “ಪಿಎನ್‌ಎಸ್‌ ತುಘ್ರಿಲ್’ ಎಂದು ಮರುನಾಮಕರಣ ಮಾಡಲಾಗಿದೆ ಎಂದು “ಗ್ಲೋಬಲ್‌ ಟೈಮ್ಸ್‌’ ವರದಿ ಮಾಡಿದೆ.

ಇದರ ಬೆನ್ನಲ್ಲೇ ಚೀನದಲ್ಲಿರುವ ಪಾಕಿಸ್ಥಾನ‌ ರಾಯಭಾರಿ ಮೊಯಿಲ್‌ ಉಲ್‌ ಹಕ್‌ ಅವರು ಹೇಳಿಕೆ ನೀಡಿ, ಪಿಎನ್‌ಎಸ್‌ ತುಘ್ರಿಲ್ ಯುದ್ಧ ಹಡಗುಗಳ ಹಸ್ತಾಂತರದಿಂದ ಹಿಂದೂ ಮಹಾ ಸಾಗರದಲ್ಲಿ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶಗಳು ಪಾಕಿಸ್ಥಾನ‌ಕ್ಕೆ ಸಮಾನ ಅವಕಾಶ ಸಿಕ್ಕಂತಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಅವರ ಈ ಮಾತುಗಳು ಭಾರತಕ್ಕೆ ಪರೋಕ್ಷ ಎಚ್ಚರಿಕೆಯಾಗಿವೆ.

ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್‌

ಸಮ್ಮೇಳನಕ್ಕೆ ಬರುವುದಿಲ್ಲ; ಚೀನ ಸ್ಪಷ್ಟನೆ: ಆಫ್ಘಾನಿಸ್ಥಾನ‌ದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗೆ ಕುರಿತಂತೆ ದಕ್ಷಿಣ ಏಷ್ಯಾ ರಾಷ್ಟ್ರ ಗಳು ಕೈಗೊಳ್ಳಬಹುದಾದ ರಾಜತಾಂತ್ರಿಕ ನಿರ್ಧಾರ ಗಳ ಕುರಿತಾಗಿ ಚರ್ಚಿಸಲು ಹೊಸದಿಲ್ಲಿಯಲ್ಲಿ ಭಾರತ ಏರ್ಪಡಿಸಿರುವ ಅಂತಾರಾಷ್ಟ್ರೀಯ ಸಮ್ಮೇ ಳನಕ್ಕೆ ಬರುವುದಿಲ್ಲ ಎಂದು ಚೀನ ಹೇಳಿದೆ. ವಾರದ ಹಿಂದೆ, ಈ ಸಮ್ಮೇಳನದಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ‌ ಹೇಳಿತ್ತು. ಈಗ ಚೀನ ಕೂಡ ಅದೇ ನಿರ್ಧಾರ ತಳೆದಿದೆ.

“ಬುಧವಾರಕ್ಕೆ ಅನೇಕ ಕಾರ್ಯಕ್ರಮಗಳು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಸಭೆಗೆ ಹಾಜ ರಾಗಲು ಸಾಧ್ಯವಾಗುತ್ತಿಲ್ಲ. ಆದರೆ ದ್ವಿಪಕ್ಷೀಯ ಮಾರ್ಗದೊಂದಿಗೆ ಭಾರತದೊಂದಿಗೆ ಮಾತುಕತೆ ಯಲ್ಲಿರುತ್ತೇವೆ’ ಎಂದು ಚೀನ ಕಾರಣ ನೀಡಿದೆ.

ದಿಲ್ಲಿಯಲ್ಲಿ ನ. 10ರಂದು ಈ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಇರಾನ್‌, ರಷ್ಯಾ, ಕಜಕಿಸ್ಥಾನ‌, ಕಿರ್ಗಿಸ್ಥಾನ‌, ತಜಿಕಿಸ್ಥಾನ‌, ತುರ್ಕ್‌ ಮೆನಿಸ್ಥಾನ‌ ಮತ್ತು ಉಜ್ಬೇಕಿಸ್ಥಾನ‌ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 

ಟಾಪ್ ನ್ಯೂಸ್

naksal (2)

Naxal ಶರಣಾದರೆ ಸರಕಾರದಿಂದ  ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್‌

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ

ಸುಳ್ಳು ವರದಕ್ಷಿಣೆ ಪ್ರಕರಣ ತಡೆಗೆ ಮದುವೆಯಲ್ಲಿ ದೊರೆತ ಉಡುಗೊರೆ ಪಟ್ಟಿ ಇರಿಸಿಕೊಳ್ಳಿ

naksal (2)

Naxal ಶರಣಾದರೆ ಸರಕಾರದಿಂದ  ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್‌

India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ಆಯೋಜನೆ

India vs South Africa: 48 ವರ್ಷಗಳ ಬಳಿಕ ಚೆನ್ನೈಯಲ್ಲಿ ಮಹಿಳಾ ಟೆಸ್ಟ್‌ ಪಂದ್ಯ ಆಯೋಜನೆ

1-ewewqe

Anjali ಹತ್ಯೆ: ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಪ್ರತಿಭಟನೆ; ಬಿಜೆಪಿ ಕಾರ್ಯಕರ್ತರು ವಶಕ್ಕೆ

Exam

SSLC  ಪರೀಕ್ಷೆ-2:  ನೋಂದಣಿ ದಿನಾಂಕ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.