ನಾಸಾ ಯಾತ್ರೆಗೆ ಭಾರತೀಯ ಮೂಲದ ಅನಿಲ್ ಮೆನನ್ ಆಯ್ಕೆ
Team Udayavani, Dec 8, 2021, 6:20 AM IST
ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾ, ತನ್ನ ಮುಂದಿನ ಕಾರ್ಯಾಚರಣೆಗೆ ಭಾರತೀಯ ಮೂಲದ ಭೌತಶಾಸ್ತ್ರಜ್ಞ ಅನಿಲ್ ಮೆನನ್ ಅವರನ್ನು ಆಯ್ಕೆ ಮಾಡಿದೆ.ಈ ಕಾರ್ಯಾಚರಣೆಗಾಗಿ ಒಟ್ಟು 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಅನಿಲ್ ಮೆನನ್ ಅವರು ನಾಸಾದ ಸ್ಪೇಸ್ ಎಕ್ಸ್ ಕಾರ್ಯಾಚರಣೆಯಲ್ಲಿ ಫ್ಲೈಟ್ ಸರ್ಜನ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಅಮೆರಿಕ ವಾಯುಪಡೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!
ನೂತನ ಕಾರ್ಯಾಚರಣೆಯಲ್ಲಿ ಗಗನಯಾತ್ರಿಯಾಗಿ ಪಾಲ್ಗೊಳ್ಳಲು 12,000 ಅರ್ಜಿಗಳು ಬಂದಿದ್ದು, ಅದರಲ್ಲಿ 10 ಮಂದಿಯನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರಿಗೆ ಜನವರಿಯಿಂದ ಎರಡು ವರ್ಷಗಳ ಕಾಲ ತರಬೇತಿ ಶುರುವಾಗಲಿದೆ.