ಜಗತ್ತಿನಲ್ಲಿ ಛಾಪು ಮೂಡಿಸಿದ ಭಾಷೆ ಕನ್ನಡ

Team Udayavani, Dec 20, 2021, 2:47 PM IST

23kannada

ಬೀದರ: ಕನ್ನಡ ಭಾಷೆಯು ತನ್ನದೇಯಾದ ಸುದೀರ್ಘ‌ ಮತ್ತು ಶ್ರೇಷ್ಠವಾದ ಪರಂಪರೆ ಹೊಂದಿದೆ. ಕನ್ನಡ ಭಾಷೆ ಸತತವಾಗಿ ಬಳಸುವ ಮೂಲಕ ಬೆಳೆಸುವ ಮತ್ತು ಉಳಿಸುವ ಮಹತ್ವದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಪುಂಡಲೀಕರಾವ್‌ ಇಟಕಂಪಳ್ಳಿ ತಿಳಿಸಿದರು.

ನಗರದ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ “ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಬರವಣಿಗೆ ರೂಢಿಸಿಕೊಳ್ಳಬೇಕು. ಪ್ರತಿದಿನ ಕನ್ನಡ ದಿನಪತ್ರಿಕೆಗಳ ಓದು ಈ ನಿಟ್ಟಿನಲ್ಲಿ ತುಂಬಾ ಸಹಕಾರಿ ಎಂದು ಹೇಳಿದರು.

ಸಾಹಿತಿ ಶ್ರೀದೇವಿ ಖಂಡಾಳೆ ಉಪನ್ಯಾಸ ನೀಡಿ, ಕನ್ನಡ ಭಾಷೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದಾಗಿದ್ದು, ತನ್ನದೇಯಾದ ಲಿಪಿ ಹೊಂದುವ ಮೂಲಕ ಸಮೃದ್ಧವಾದ ಸಾಹಿತ್ಯದ ಫಸಲನ್ನು ಪಡೆದು ಜಗತ್ತಿನಾದ್ಯಂತ ತನ್ನ ಛಾಪನ್ನು ಮೂಡಿಸಿಕೊಂಡಿದೆ. ಹಲ್ಮಿಡಿ ಶಾಸನದಿಂದ ಪ್ರಾರಂಭವಾದ ಇದರ ಬೆಳವಣಿಗೆ ರಾಜಮನೆತನಗಳ ಕಾಲಾವಧಿಯಲ್ಲಿ ವಿಕಸಿತಗೊಳ್ಳುತ್ತಾ ಶ್ರೇಷ್ಠ ಹಾಗೂ ಜನಪರವಾದ ಭಾಷೆ, ಸಾಹಿತ್ಯವಾಗಿ ರೂಪಗೊಂಡಿದೆ. ಕನ್ನಡಿಗರು ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅಖಂಡ ಕರ್ನಾಟಕ ರೂಪಗೊಳ್ಳಲು ಹಲವಾರು ಸಾಹಿತಿಗಳ, ಹೋರಾಟಗಾರರ, ಮುತ್ಸದಿಗಳ ಕೊಡುಗೆ ಸಾಕಷ್ಟಿದೆ ಎಂದರು.

ಜಾನಪದ ಗಾಯಕ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಬ್ರಿಟಿಷ ವಿದ್ವಾಂಸರ ಕೊಡುಗೆ ತುಂಬಾ ದೊಡ್ಡದಿದೆ. ಕಿಟ್ಟಲ್‌ ಅವರು ವಿಶ್ವಕೋಶ ದಂತಹ ಉಪಯುಕ್ತ ಗ್ರಂಥ ನೀಡಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಸೀನಿಯರ್‌ ಫೆಲೋಶಿಪ್‌ ಪುರಸ್ಕೃತ ಡಾ| ಸುನಿತಾ ಕೂಡ್ಲಿಕರ್‌ ಸನ್ಮಾನ ಸ್ವೀಕರಿಸಿ ಮಾತನಾಡಿ, ಡಾ| ಅತಿವಾಳೆ ಅವರು ಸಾಹಿತ್ಯ ವೇದಿಕೆ ಮೂಲಕ ರಚನಾತ್ಮಕ ಹಾಗೂ ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ವೇದಿಕೆ ಗೌರವಾಧ್ಯಕ್ಷ ಡಾ| ಸಂಜೀವಕುಮಾರ್‌ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ಜಿಲ್ಲೆ ಬೀದರನಲ್ಲಿ ಹೆಚ್ಚೆಚ್ಚು ಕನ್ನಡದ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಅಗತ್ಯವಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟಿರುವ ಘಟನೆಗೆ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳು ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು. ಡಾ| ರವೀಂದ್ರ ಲಂಜವಾಡಕರ್‌ ಸ್ವಾಗತಿಸಿದರು. ಸೃಜನ್ಯ ಅತಿವಾಳೆ ನಿರೂಪಿಸಿದರು. ಡಾ| ಶಾಮರಾವ ನೆಲವಾಡೆ ವಂದಿಸಿದರು.

ಟಾಪ್ ನ್ಯೂಸ್

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

fashion-world

Fashion World: ಮಹಿಳೆಯರ ನೆಚ್ಚಿನ ಉಡುಗೆ ಸೀರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

7-uv-fusion

Father: ಅಪ್ಪ – ಮರೆಯಲಾಗದ ಬಂಧ…

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.