ಒಮಿಕ್ರಾನ್‌ ಕಾರ್ಮೋಡ, ಆರ್ಥಿಕ ಕಳವಳ ಮತ್ತು ಆದ್ಯತೆ


Team Udayavani, Dec 29, 2021, 7:30 AM IST

ಒಮಿಕ್ರಾನ್‌ ಕಾರ್ಮೋಡ, ಆರ್ಥಿಕ ಕಳವಳ ಮತ್ತು ಆದ್ಯತೆ

ಪ್ರಸಕ್ತ ಸನ್ನಿವೇಶದಲ್ಲಿ ಒಮಿಕ್ರಾನ್‌ ಅನ್ನು ಲಾಕ್‌ಡೌನ್‌ ಇಲ್ಲದೆ ಎಚ್ಚರಿಕೆಯಿಂದ ನಿಭಾಯಿಸುವುದು, ಲಸಿಕಾ ಅಭಿಯಾನದ ವೇಗವರ್ಧನೆ, ಹಣದುಬ್ಬರ ನಿಯಂತ್ರಣ, ಬ್ಯಾಂಕ್‌ ಸಾಲ ನೀಡಿಕೆಗೆ ಪ್ರೋತ್ಸಾಹ, ಮೂಲ ಸೌಕರ್ಯ ಅಭಿವೃದ್ಧಿ, ರಫ್ತು ವ್ಯವಹಾರ ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಬೆಂಬಲ, ಸೈದ್ಧಾಂತಿಕ ಮತ್ತು ತರ್ಕಬದ್ಧವಾದ ಜಿಎಸ್‌ಟಿ ವಿಂಗಡಣೆ ಮೊದಲಾದ ವಿಚಾರಗಳು ಸರಕಾರಗಳ ಆದ್ಯತೆಯಾಗಬೇಕು.

ಕೊರೊನಾದ ರೂಪಾಂತರಿ ತಳಿ ಒಮಿಕ್ರಾನ್‌ ದೆಸೆಯಿಂದ ಉಂಟಾಗಿರುವ ಅನಿಶ್ಚಿತ ವಾತಾವ ರಣದ ಹಿನ್ನೆಲೆಯಿಂದಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗುತ್ತಿದ್ದ ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸುವಂತಾಗಿದೆ. ಸಂಪೂರ್ಣ ನಕಾರಾತ್ಮಕವೆಂದು ಪರಿಗಣಿಸಿದ್ದ ದೇಶದ ಆರ್ಥಿಕತೆ ಅತೀ ದೊಡ್ಡ ಕುಸಿತದಿಂದ ಹೊರಬಂದು ಅತ್ಯಂತ ವೇಗದ ಪ್ರಗತಿ ದರ ದಾಖ ಲಿಸುವತ್ತ ದಾಪುಗಾಲಿರಿಸಿದ್ದ ಸಂದರ್ಭದಲ್ಲಿ ಒಮಿಕ್ರಾನ್‌ ಆತಂಕ ಹೆಚ್ಚಾಗಿರುವುದರಿಂದ ಹಾಲಿ ವೇಗವನ್ನು ಕಾಯ್ದುಕೊಳ್ಳುವುದು ಸಂದೇಹಾಸ್ಪದ ವಾಗಿದೆ ಮತ್ತು ಪ್ರಸಕ್ತ ಸನ್ನಿವೇಶದಲ್ಲಿ ಸವಾಲು ಗಳನ್ನು ಎದುರಿಸಲು ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಈಗಿನ ಪರಿಸ್ಥಿತಿಯು ಜಾಗತಿಕ ಮಟ್ಟದಲ್ಲಿ ಕಳವಳಕಾರಿಯಾಗಿದೆ ಮತ್ತು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಅರ್ಥವ್ಯವಸ್ಥೆಯು ಕೋವಿಡ್‌ ನಿರ್ಬಂಧಗಳು ಮತ್ತು ನಿಯಂತ್ರಣ ಗಳಿಗನುಗುಣವಾಗಿ ಹಾಗೂ ಕೇಂದ್ರ ಸರಕಾರ ಮತ್ತು ಆರ್‌ಬಿಐ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡ ಸುಧಾರಣ ಉಪಕ್ರಮಗಳಿಗನು ಗುಣವಾಗಿ ಬದಲಾವಣೆಯಾಗಿದೆ. ಒಮಿಕ್ರಾನ್‌ ಹಿನ್ನೆಲೆ ಮತ್ತು ಈಗಿನ ಪರಿಸ್ಥಿತಿಯಲ್ಲಿ ಸರಕು ಮತ್ತು ಸೇವೆಗಳಿಗೆ ಆಂತರಿಕ ಬೇಡಿಕೆ ಹೆಚ್ಚುವುದು ಹಾಗೂ ಖಾಸಗಿ ಬಂಡವಾಳ ಹೂಡಿಕೆ ನಡೆಯುವುದು ಕಷ್ಟ ಸಾಧ್ಯ. ಆರ್ಥಿಕ ಪ್ರಗತಿ ಹೆಚ್ಚಲು ಸರಕು ಮತ್ತು ಸೇವೆಗಳ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ಆದುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಪ್ರಗತಿಯ ಬಗೆಗಿನ ನಿರ್ದಿಷ್ಟ ಗುರಿಯನ್ನು ನಿರ್ಧರಿಸಲಾಗದು.

ಜಿಡಿಪಿ: ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೆçಮಾಸಿಕದ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ದರ ಶೆ. 8.2ರಷ್ಟಾಗಿತ್ತು. ಆದರೆ ಇದೇ ವೇಗದಲ್ಲಿ ಮುಂದುವರಿಯುವುದು ಅನುಮಾನ. 2021-22ನೇ ಸಾಲಿನ ಜಿಡಿಪಿ ಬೆಳವಣಿಗೆ ದರ ಶೇ. 9.5ರಷ್ಟಾಗುವುದು ಎಂದು ಆರ್‌ಬಿಐ ಅಂದಾಜಿಸಿದ್ದರೂ ಇದು ಸಾಕಾರಗೊಳ್ಳುವ ಬಗ್ಗೆ ಐಎಂಎಫ್ ಮತ್ತು ವಿವಿಧ ರೇಟಿಂಗ್‌ ಸಂಸ್ಥೆಗಳು ಸಂದೇಹ ವ್ಯಕ್ತಪಡಿಸಿವೆ ಮತ್ತು ಭಾರತದ ಜಿಡಿಪಿ ದರವನ್ನು ಶೇ. 8ಕ್ಕೆ ಸೀಮಿತಗೊಳಿಸಿವೆ. ಒಂದು ವೇಳೆ ಕೋವಿಡ್‌ ಮೂರನೆಯ ಅಲೆ ಇಲ್ಲವಾಗಿದ್ದರೆ ಎರಡಂಕಿ ತಲುಪಿ, ದಾಟುವ ಹಂತದಲ್ಲಿತ್ತು. ಮೂರನೆಯ ಅಲೆ ಇಲ್ಲದಿದ್ದರೆ ದೇಶದ ಜಿಡಿಪಿ ದರ ಎರಡಂಕಿ ಕಾಣಲಿದೆ ಎಂದು ಹಣಕಾಸು ಇಲಾಖೆ ಅಭಿಪ್ರಾಯಪಟ್ಟಿತ್ತು. ಆದರೆ ಹಾಲಿ ಪರಿಸ್ಥಿತಿಯು ಅನಿಶ್ಚಿತ ವಾತಾವರಣವನ್ನು ಸೃಷ್ಟಿಸಿದೆ.

ಆರ್‌ಬಿಐ: ಸದ್ಯದ ಆರ್ಥಿಕ ಬೆಳವಣಿಗೆಯನ್ನು ಜೀವಂತವಾಗಿಸಲು ಆರ್‌ಬಿಐ ಈಗಿನ ಹಣ ಕಾಸು ನೀತಿಯಲ್ಲಿ ಪ್ರಯತ್ನಿಸುತ್ತಿದೆಯಲ್ಲದೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕತೆ ಚೇತರಿಕೆ ಯಾಗುವವರೆಗೂ ತಟಸ್ಥ ಹಣಕಾಸು ನೀತಿ ಯನ್ನು ಮುಂದುವರಿಸುವ ಇರಾದೆಯನ್ನು ಹೊಂದಿ ದಂತಿದೆ. ಆರ್ಥಿಕ ಹಿತದೃಷ್ಟಿಯಿಂದ ಆರ್‌ಬಿಐ ಹಲವಾರು ಅಸಾಂಪ್ರದಾಯಿಕ ಮಾರ್ಗಗಳ ಮೂಲಕ ಹಣಕಾಸು ವ್ಯವಸ್ಥೆಗೆ ಜಿಡಿಪಿಯ ಶೇ. 8.9ರಷ್ಟು ನಗದು ಲಭ್ಯತೆಯನ್ನು ಒದಗಿಸಿತು. ತನ್ಮೂಲಕ ಎರಡನೆಯ ತ್ರೆçಮಾಸಿಕದಲ್ಲಿ ದೇಶದ ಆರ್ಥಿಕ ಪ್ರಗತಿ ಶೇ. 8.4 ರಷ್ಟು ದಾಖಲಾಗಿ ಕೋವಿಡ್‌ ಪೂರ್ವಸ್ಥಿತಿಯನ್ನು ಮೀರಿ ಬೆಳವ ಣಿಗೆಯಾಗಿದೆ. ಮೌಲ್ಯದ ಲೆಕ್ಕಾಚಾರದಲ್ಲಿ ಹೇಳುವುದಾದರೆ ಜಿಡಿಪಿ ಜುಲೈ-ಸೆಪ್ಟಂಬರ್‌ ಅವಧಿಯಲ್ಲಿ 35.73 ಲ. ಕೋ. ರೂ.ಗಳಾಗಿದೆ. ಕಳೆದ ವರ್ಷ ಇದೇ ಆರ್ಥಿಕ ಅವಧಿಯಲ್ಲಿ ರೂ. 35.61 ಲ. ಕೋ. ರೂ.ಗಳಾಗಿತ್ತು. ಇದು ಕೋವಿಡ್‌ ಪೂರ್ವ ಸ್ಥಿರ ಬೆಳವಣಿಗೆ. ಅರ್ಥವ್ಯವಸ್ಥೆಯು ಕೋವಿಡ್‌ ಪೂರ್ವ ಮಟ್ಟ ತಲುಪಲು ಆರ್‌ಬಿಐ ಹಣಕಾಸು ನೀತಿಯ ಸಮಿತಿಯು ರೆಪೋ ದರ ಶೇ. 4 ಹಾಗೂ ರಿವರ್ಸ್‌ ರೆಪೋ ದರ ಶೇ. 3.35ರಲ್ಲೇ ಇರಿಸಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ ಮತ್ತು ಹೊಂದಾಣಿಕೆ ನೀತಿಯನ್ನು ಮುಂದುವರಿಸಿದೆ. ಇದೇ ಸಂದರ್ಭದಲ್ಲಿ ಹಣದುಬ್ಬರ ಅಂದಾಜು ದರವನ್ನು ಶೇ. 5.3ಕ್ಕೆ ನಿಗದಿಪಡಿಸಿದೆ. ಆತಂಕಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಶೇ. 9.5 ರಷ್ಟಾಗಬಹುದು ಎಂಬ ಅಂದಾಜನ್ನು ಬದಲಿಸಿಲ್ಲ. ಇದೀಗ ಒಮಿಕ್ರಾನ್‌ ಅರ್ಥವ್ಯವಸ್ಥೆಯ ಮೇಲೆ ಪುನಃ ದುಷ್ಪರಿಣಾಮ ಬೀರದೇ ಇರಲಾರದೆಂಬ ಆತಂಕ ಮನೆಮಾಡಿದೆ. ಸದ್ಯ ಆರ್‌ಬಿಐ ಪ್ರಕಟಿಸಿರುವ ಹಣಕಾಸು ನೀತಿ, ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ಸಮನ್ವಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸಾಕಷ್ಟು ಸಕಾರಾತ್ಮಕ ಮಾನ ದಂಡಗಳನ್ನು ಅನುಸರಿಸಿದೆ.

ಇದನ್ನೂ ಓದಿ:ನೀಟ್‌ ಪಿಜಿ 2021ರ ಕೌನ್ಸೆಲಿಂಗ್‌ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು

ಹಣದುಬ್ಬರ: ಏರುತ್ತಿರುವ ಹಣದುಬ್ಬರ ಆರ್ಥಿಕ ಪ್ರಗತಿಗೆ ಅಡಚಣೆಯನ್ನುಂಟು ಮಾಡುತ್ತಿದೆ. ದೇಶದಲ್ಲಿ ಸಗಟು ಹಣದುಬ್ಬರದ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದ ಆರಂಭದಿಂದಲೂ ಎರಡಂಕಿಗಳ ಮಟ್ಟದಲ್ಲಿ ಉಳಿದಿದೆ. ನವೆಂಬರ್‌ನಲ್ಲಿ ಅದು ಶೇ. 14.23ಕ್ಕೆ ಏರಿಕೆಯಾಗಿದೆ. ದೇಶದ ವಿವಿಧೆಡೆ ಅಕಾಲಿಕ ಮಳೆಯ ಕಾರಣ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಹಾನಿಯುಂಟು ಮಾಡಿದೆ. ತರಕಾರಿ ಬೆಳೆಗೂ ತೀವ್ರ ಹಾನಿಯಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ಈಗಾಗಲೇ ಆಹಾರ ಧ್ಯಾನಗಳು, ಬೇಳೆ ಕಾಳುಗಳು, ಸಕ್ಕರೆ, ಬೆಲ್ಲ, ಹಣ್ಣುಹಂಪಲುಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಡುಗೆ ಅನಿಲವೂ ಏರುಗತಿಯಲ್ಲಿರುವುದು ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇರುವುದರಿಂದ ಹಣದುಬ್ಬರದ ಚಲನೆಯ ನಿಯಂತ್ರಣ ತಪ್ಪಿದ್ದು, ಅಲ್ಪಾವಧಿಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವುದು ಕಷ್ಟ. ಇದು ನಿಜಕ್ಕೂ ಆತಂಕದ ಸಂಗತಿಯಾಗಿದೆ.

ಜಿಎಸ್‌ಟಿ:
ಜಿಎಸ್‌ಟಿ ಸಂಗ್ರಹಣೆ ನವೆಂಬರ್‌ನಲ್ಲಿ 1.32 ಲ. ಕೋ.ರೂ. ಗಳೊಂದಿಗೆ ಸತತ 5ನೇ ತಿಂಗಳು ಒಂದು ಲ. ಕೋ. ರೂ. ದಾಟಿರುವುದು ಗಮನಾರ್ಹ. ಇದು ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿವೆ ಎಂಬ ಸೂಚನೆಯಾಗಿತ್ತು. ಕೇಂದ್ರ ಸರಕಾರದ ನೀತಿ, ನಿಯಮಗಳು ಇ-ವೇ ಬಿಲ್‌, ಇ-ಇನ್‌ವಾಯ್ಸ ಹೆಚ್ಚುವರಿ ಪರಿಣಾಮಕಾರಿ ಯಾಗಿರುವುದರಿಂದ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಬೆಲೆ ಏರಿಕೆಯ ಪ್ರಮಾಣದ ತೆರಿಗೆ ಅಂತರವೂ ಸೇರಿಕೊಂಡಿದೆ. ಅದಲ್ಲದೆ ಜಾಗೃತ ದಳದ ಚಟುವಟಿಕೆ ಚುರುಕುಗೊಂಡದ್ದರಿಂದ, ವಂಚನೆ ನಿಯಂತ್ರಣಗಳಿಂದ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆ ಹೆಚ್ಚಾಯಿತು. ಜಿಎಸ್‌ಟಿ ಸಂಗ್ರಹಣೆ ಹೆಚ್ಚಾಗಿರುವುದು ಬೆಲೆ ಏರಿಕೆಯ ಪ್ರಮಾಣದಿಂದಲೇ ಹೊರತು ಜನರ ಆದಾಯ ವೃದ್ಧಿಯಿಂದಲ್ಲ. ಸರಕಾರದ ಆರ್ಥಿಕ ಚಿತ್ರಣಗಳು ಆರ್ಥಿಕಾಭಿವೃದ್ಧಿಯ ಪೂರ್ಣ ಸಂಕೇತವಲ್ಲ. ಜಿಎಸ್‌ಟಿ, ಜಿಡಿಪಿ ಅಂಕಿ ಅಂಶಗಳು ಜನರ ಭರವಸೆಯನ್ನು ನೀಗಿಸುವುದಿಲ್ಲ.

ಆದುದರಿಂದ ಬೆಲೆ ಏರಿಕೆ ನಿಯಂತ್ರಣ ಸರಕಾರದ ಪ್ರಮುಖ ಆದ್ಯತೆಯಾಗಬೇಕು.ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನಜೀವನ ವಲ್ಲದೆ ಉಳಿವು-ಅಳಿವಿನ ಸಂಘರ್ಷದಲ್ಲಿ ಹೋರಾಡುತ್ತಿರುವುದು ಸಣ್ಣ ಕೈಗಾರಿಕೆಗಳು. ಇವುಗಳು ಬಾಗಿಲು ಮುಚ್ಚಿದರೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ಬಿಗಡಾಯಿಸುವ ಭೀತಿ ಇದೆ. ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ ಕಿರು, ಸಣ್ಣ ಮತ್ತು ಮಧ್ಯಮ ವಲಯದ ಪಾಲು ಶೇ. 30ಕ್ಕೂ ಅಧಿಕ. ಆರ್ಥಿಕತೆಯ ಚಕ್ರ ಚಲಿಸಲಾರಂಭಿಸಿದರೂ ಕಿರು ಕೈಗಾರಿಕೆಗಳಿಗೆ ಒಳ್ಳೆಯ ದಿನಗಳು ಬರಲೇ ಇಲ್ಲ. ಸರಕಾರ ಈ ವಲಯದ ಕೈ ಹಿಡಿಯದಿದ್ದರೆ ಜಿಡಿಪಿಗೆ ಭಾರೀ ಕೊಡುಗೆ ನೀಡುವ ಒಂದು ವಲ ಯವೇ ನಿಷ್ಕ್ರಿಯಗೊಂಡು ಆರ್ಥಿಕತೆಗೆ ಭಾರೀ ಪ್ರಮಾಣದ ಹಿಂಜರಿಕೆಯಾಗಲಿದೆ. ಸರಕಾರವು ಕಚ್ಚಾ ವಸ್ತುಗಳ ಬೆಲೆ ಇಳಿಸಲು ಸಹಾಯ, ಇಂಧನ ಬೆಲೆಯಲ್ಲಿ ಇಳಿಕೆ, ಬ್ಯಾಂಕ್‌ ಸಾಲ ಪಡೆಯುವ ವಿಧಾನ ಸರಳೀಕರಿಸುವುದು, ಬಡ್ಡಿ ದರದಲ್ಲಿ ಕಡಿತ, ವಿದ್ಯುತ್‌ ಶುಲ್ಕ ವಿನಾಯತಿ, ರಫ್ತು ನಿಯಮ ಸರಳೀಕರಣ ಮತ್ತು ಕೃಷಿಕರಿಗೆ ನೀಡುವ ಬಡ್ಡಿದರಲ್ಲಿ ಸಣ್ಣ ಕೈಗಾರಿಕೆಗೆ ಸಾಲ ನೀಡಬೇಕು.

-ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.