ಕೇಪ್‌ಟೌನ್‌: ಸರಣಿ ಗೆಲುವಿಗೆ ಆಂತಿಮ ಮೆಟ್ಟಿಲು

ಇಂದಿನಿಂದ ಸರಣಿ ನಿರ್ಣಾಯಕ ಪಂದ್ಯ ಕೇಪ್‌ಟೌನ್‌ನಲ್ಲಿ ಅಂತಿಮ ಟೆಸ್ಟ್‌ ಕೊಹ್ಲಿಗೆ 99ನೇ ಟೆಸ್ಟ್‌ ಪಂದ್ಯ

Team Udayavani, Jan 11, 2022, 6:50 AM IST

ಕೇಪ್‌ಟೌನ್‌: ಸರಣಿ ಗೆಲುವಿಗೆ ಆಂತಿಮ ಮೆಟ್ಟಿಲು

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಗೆಲುವಿನ ಸಂಭ್ರಮ ಆಚರಿಸಲು ಕಳೆದ 3 ದಶಕಗಳಿಂದ ಕಾಯುತ್ತಲೇ ಇರುವ ಭಾರತದ ಮುಂದೆ ಮತ್ತೂಂದು ಅವಕಾಶ ಎದುರಾಗಿದೆ. ಮಂಗಳವಾರದಿಂದ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಅಂಗಳದಲ್ಲಿ ಅಂತಿಮ ಟೆಸ್ಟ್‌ ಆರಂಭವಾಗಲಿದ್ದು, ಇದನ್ನು ಗೆದ್ದರೆ ಹರಿಣಗಳ ನಾಡಿನಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಪ್ರಸ್ತುತ ಸರಣಿ 1-1 ಸಮಬಲದಲ್ಲಿ ನೆಲೆಸಿರುವ ಕಾರಣ ಕೇಪ್‌ಟೌನ್‌ ಕೌತುಕ ಪರಾಕಾಷ್ಠೆ ತಲುಪಿದೆ.

ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಪುನರಾಗಮನವನ್ನು ಸಾರಿರುವುದರಿಂದ ಭಾರತದ ನೈತಿಕ ಬಲ ಸಹಜವಾಗಿಯೇ ಹೆಚ್ಚಿದೆ. ಕೊಹ್ಲಿಯ ಫಾರ್ಮ್ ಹೇಗೇ ಇರಲಿ, ಅವರ ಉಪಸ್ಥಿತಿ ತಂಡಕ್ಕೊಂದು ಬೂಸ್ಟ್‌ ಎಂಬುದರಲ್ಲಿ ಅನುಮಾನವಿಲ್ಲ.

ಅಂದಹಾಗೆ ಇದು ಕೊಹ್ಲಿ ಆಡುತ್ತಿರುವ 99ನೇ ಟೆಸ್ಟ್‌. ಮಗಳ ಮೊದಲ ಹುಟ್ಟುಹಬ್ಬದಂದೇ ಕೊಹ್ಲಿ ಈ ಟೆಸ್ಟ್‌ ಆಡಲಿಳಿಯುತ್ತಿದ್ದಾರೆ. ಹಾಗೆಯೇ ಮಂಗಳವಾರ ಕೋಚ್‌ ರಾಹುಲ್‌ ದ್ರಾವಿಡ್‌ ಅವರ 49ನೇ ಜನ್ಮದಿನವೂ ಆಗಿದೆ!

ತಪ್ಪಿದ ಸರಣಿ ಗೆಲುವು
ಕೊಹ್ಲಿ ಅಂತಿಮ ಗಳಿಗೆಯಲ್ಲಿ ಗಾಯಾಳಾಗಿ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದಿಂದ ಹೊರ ಗುಳಿದಿದ್ದರು. ಹೀಗಾಗಿ ಕೇಪ್‌ಟೌನ್‌ನಲ್ಲಿ “ಟೆಸ್ಟ್‌ ಶತಕ’ದ ಅವಕಾಶ ಅವರಿಗೆ ತಪ್ಪಿತು. ಕೊಹ್ಲಿ ಗೈರಲ್ಲಿ ಕೆ.ಎಲ್‌. ರಾಹುಲ್‌ ಮೊದಲ ಸಲ ಭಾರತ ಟೆಸ್ಟ್‌ ತಂಡವನ್ನು ಮುನ್ನಡೆಸಿದರು. ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿತು. ಸೆಂಚುರಿಯನ್‌ ಟೆಸ್ಟ್‌ ಪಂದ್ಯವನ್ನು 113 ರನ್ನುಗಳಿಂದ ಗೆದ್ದು 1-0 ಮುನ್ನಡೆಯೊಂದಿಗೆ ತನ್ನ ನೆಚ್ಚಿನ ತಾಣವಾದ ವಾಂಡರರ್ನಲ್ಲಿ ಭಾರತ ಆಡಲಿಳಿದಿತ್ತು. ಆದರಿಲ್ಲಿ ಮೊದಲ ಸಲ ಸೋಲಿನ ಮಖ ಕಾಣ ಬೇಕಾಯಿತು.

ಭಾರತದ ಸೋಲಿಗೆ ಮುಖ್ಯ ಕಾರಣ ಎರಡು-ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ ವೈಫ‌ಲ್ಯ ಹಾಗೂ ದ್ವಿತೀಯ ಇನ್ನಿಂಗ್ಸ್‌ನ ಬೌಲಿಂಗ್‌ ವೈಫ‌ಲ್ಯ. ಮಳೆ ಬಂದ ಬಳಿಕ ಹೆಚ್ಚು ಪರಿಣಾಮಕಾರಿಯಾಗಬೇಕಿದ್ದ ಭಾರತದ ಬೌಲಿಂಗ್‌ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಮೊನಚು ಕಳೆದುಕೊಂಡಿತ್ತು. ಜೊಹಾನ್ಸ್‌ ಬರ್ಗ್‌ನಲ್ಲಿ ಹೊಸ ಜೋಶ್‌ ತೋರಬೇಕಿದ್ದ ಟೀಮ್‌ ಇಂಡಿಯಾ 7 ವಿಕೆಟ್‌ಗಳ ಸೋಲನ್ನು ಹೊತ್ತುಕೊಳ್ಳುವ ಸಂಕಟಕ್ಕೆ ಸಿಲುಕಿತು.

ಕೇಪ್‌ಟೌನ್‌ನಲ್ಲಿ ಭಾರತದ ದಾಖಲೆ ಗಮ ನಾರ್ಹ ಮಟ್ಟದಲ್ಲಿಲ್ಲ. ಆಡಿದ 5 ಟೆಸ್ಟ್‌ಗಳಲ್ಲಿ ಮೂರನ್ನು ಸೋತಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಇಲ್ಲಿನ್ನೂ ಗೆಲುವಿನ ಬಾವುಟ ಹಾರಿಸಿಲ್ಲ. ಆದರೆ ಈ ಪ್ರವಾಸದ ಮೊದಲೆರಡು ತಾಣಗಳಲ್ಲಿ ದಾಖಲಾದ ಫ‌ಲಿತಾಂಶಗಳೆಲ್ಲವೂ ಉಲ್ಟಾ ಆಗಿರುವುದು ಉಲ್ಲೇಖನೀಯ.
ಸೆಂಚುರಿಯನ್‌ನಲ್ಲಿ ಎಂದೂ ಗೆಲ್ಲದ ಭಾರತ ಮೊದಲ ಸಲ ವಿಜಯೋತ್ಸವ ಆಚರಿಸಿತು. ಹಾಗೆಯೇ ಜೊಹಾನ್ಸ್‌ಬರ್ಗ್‌ನಲ್ಲಿ ಸೋಲನ್ನೇ ಕಂಡಿರದ ನಮ್ಮ ತಂಡ ಮೊದಲ ಸಲ ಆಘಾತಕ್ಕೆ ಸಿಲುಕಿತು. ಈ ಲೆಕ್ಕಾಚಾರ ದಲ್ಲಿ ನ್ಯೂಲ್ಯಾಂಡ್ಸ್‌ ಭಾರತಕ್ಕೆ ಒಲಿದೀತೆಂಬುದೊಂದು ಲೆಕ್ಕಾಚಾರ!

ಹನುಮ ವಿಹಾರಿ ಹೊರಕ್ಕೆ
ನಾಯಕ ವಿರಾಟ್‌ ಕೊಹ್ಲಿಗಾಗಿ ಹನುಮ ವಿಹಾರಿ ಜಾಗ ಬಿಡಬೇಕಾಗುವುದು ಬಹುತೇಕ ಖಚಿತ. ಸೀನಿಯರ್‌ಗಳಾದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಇರುವಾಗ ಉಳಿದವರು ಖಾಯಂ ಸ್ಥಾನ ಪಡೆಯಲು ತುಸು ಕಾಯಬೇಕು ಎಂಬ ಕೋಚ್‌ ದ್ರಾವಿಡ್‌ ಅವರ ಹೇಳಿಕೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ವಾಂಡರರ್ನ ಮೊದಲ ಸರದಿಯಲ್ಲಿ ಪೂಜಾರ, ರಹಾನೆ ಇಬ್ಬರೂ ವಿಫ‌ಲರಾದಾಗ ಇವರ ಮೇಲೆ ತೂಗುಗತ್ತಿಯೊಂದು ನೇತಾ ಡುತ್ತಿತ್ತು. ಇಬ್ಬರೂ “ಅಂತಿಮ ಇನ್ನಿಂಗ್ಸ್‌’ ಎಂಬ ಆತಂಕದಲ್ಲಿದ್ದರು. ಆದರೆ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಷ್ಟರ ಮಟ್ಟಿಗೆ ಪ್ರದರ್ಶನ ನೀಡಿದ್ದಾರೆ.

ಕೀಪರ್‌ ರಿಷಭ್‌ ಪಂತ್‌ ಬ್ಯಾಟಿಂಗ್‌ ನಿರೀ ಕ್ಷಿತ ಮಟ್ಟದಲ್ಲಿಲ್ಲ. ಆರಂಭದಲ್ಲೇ ಅವಸರ ಮಾಡಿ ಕೊಂಡು ವಿಕೆಟ್‌ ಕೈಚೆಲ್ಲುತ್ತಾರೆ. ಆದರೂ ಸಾಹಾ ಬರುವ ಸಾಧ್ಯತೆ ಇಲ್ಲ. ಹೀಗಾಗಿ ಪಂತ್‌ ಹೆಚ್ಚು ಜವಾಬ್ದಾರಿಯುತವಾಗಿ ಆಡಬೇಕಿದೆ.

ಹುಮ್ಮಸಿನಲ್ಲಿ ದ. ಆಫ್ರಿಕಾ
ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಹಿನ್ನಡೆಯಿಂದ ಚೇತರಿಸಿಕೊಂಡು ಸರಣಿಯನ್ನು ಸಮಬಲಕ್ಕೆ ತಂದ ಸಂಭ್ರಮದಲ್ಲಿದೆ. ಎಲ್ಗರ್‌, ಮಾರ್ಕ್‌ ರಮ್‌, ಬವುಮ, ಡುಸೆನ್‌, ರಬಾಡ, ಒಲಿ ವರ್‌ ಅವರನ್ನು ನೆಚ್ಚಿಕೊಂಡಿದೆ. ಆದರೆ ಒಟ್ಟು ಸಾಮರ್ಥ್ಯದಲ್ಲಿ ಈಗಲೂ ಎಲ್ಗರ್‌ ಪಡೆ ಭಾರತಕ್ಕಿಂತ ಕೆಳ ಮಟ್ಟದಲ್ಲೇ ಇದೆ. ಇದನ್ನು ನಮ್ಮವರು ಚೆನ್ನಾಗಿ ಅರ್ಥೈಸಿಕೊಂಡು ಹೋರಾಟ ಸಂಘಟಿಸಬೇಕಿದೆ.

ಇಶಾಂತ್‌ ಆಗಮನ?
ಭಾರತದ ಬೌಲಿಂಗ್‌ ಸರದಿಯಲ್ಲೂ ಒಂದು ಬದಲಾವಣೆ ಕಂಡುಬರಲಿದೆ. ಗಾಯಾಳು ಮೊಹಮ್ಮದ್‌ ಸಿರಾಜ್‌ ಸ್ಥಾನವಿಲ್ಲಿ ತೆರವಾಗಲಿದೆ. ಸೀನಿಯರ್‌ಗಳಾದ ಇಶಾಂತ್‌ ಶರ್ಮ ಮತ್ತು ಉಮೇಶ್‌ ಯಾದವ್‌ ರೇಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಟ್ರ್ಯಾಕ್‌ಗಳಲ್ಲಿ ನೀಳಕಾಯದ ಇಶಾಂತ್‌ ಶರ್ಮ ಹೆಚ್ಚು ಪರಿಣಾಮಕಾರಿ ಆಗಬಲ್ಲರು ಎಂಬುದೊಂದು ಲೆಕ್ಕಾಚಾರ.

ಸಂಭಾವ್ಯ ತಂಡಗಳು
ಭಾರತ: ಕೆ.ಎಲ್‌. ರಾಹುಲ್‌, ಮಾಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್‌ ಪಂತ್‌, ಆರ್‌. ಅಶ್ವಿ‌ನ್‌, ಶಾದೂìಲ್‌ ಠಾಕೂರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮ/ಉಮೇಶ್‌ ಯಾದವ್‌.

ದಕ್ಷಿಣ ಆಫ್ರಿಕಾ:
ಡೀನ್‌ ಎಲ್ಗರ್‌ (ನಾಯಕ),ಐಡನ್‌ ಮಾರ್ಕ್‌ರಮ್‌, ಕೀಗನ್‌ ಪೀಟರ್‌ಸನ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಟೆಂಬ ಬವುಮ, ಕೈಲ್‌ ವೆರೇಯ್ನ, ಮಾರ್ಕೊ ಜಾನ್ಸೆನ್‌, ಕೇಶವ್‌ ಮಹಾರಾಜ್‌, ಕಾಗಿಸೊ ರಬಾಡ, ಡ್ನೂನ್‌ ಒಲಿವರ್‌, ಲುಂಗಿ ಎನ್‌ಗಿಡಿ.
ಆರಂಭ: ಅಪರಾಹ್ನ 1.30
ಪ್ರಸಾರ: ಸ್ಟಾರ್‌ ಸ್ಪೋರ್ಟ್

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.