ಕಾಫಿ ನಾಡಿನ ಕ್ರಿಕೆಟ್‌ ಪ್ರತಿಭೆಗೆ ಅಮೆರಿಕ ತಂಡದಲ್ಲಿ ಮನ್ನಣೆ


Team Udayavani, Jan 25, 2022, 7:21 PM IST

chikkamagalore news

ಚಿಕ್ಕಮಗಳೂರು: ವಿದ್ಯೆಗೆ ತಕ್ಕ ಕೆಲಸ ಸಿಕ್ಕಿಲ್ಲ. ನನ್ನ ಪ್ರತಿಭೆಗೆ ತಕ್ಕ ಅವಕಾಶ ಸಿಗಲಿಲ್ಲ, ಇಂತಹಮಾತುಗಳನ್ನು ನಿತ್ಯ ನಮ್ಮ ಸುತ್ತಮುತ್ತ ಕೇಳುತ್ತಲೇ ಇರುತ್ತೇವೆ. ಕೆಲವರು ಅವಕಾಶಕ್ಕಾಗಿ ಕಾಯದೆ ತಮ್ಮ ಬಳಿಗೆ ಅವಕಾಶಗಳು ಹುಡುಕಿಕೊಂಡು ಬರುವಂತೆಮಾಡಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ.ಆದರೆ ಕೆಲವರು ಇಲ್ಲಿ ಅವಕಾಶ ಸಿಗದೆ ವಿದೇಶಕ್ಕೆಹಾರುವುದೂ ಹೊಸದಲ್ಲ. ಇಂಥದ್ದೊಂದು ಪ್ರತಿಭಾಫಲಾಯನಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ.

ಪ್ರತಿಭಾ ಪಲಾಯನ ಎನ್ನುವುದು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಅನೇಕಕ್ಷೇತ್ರಗಳನ್ನು ಕಾಡುತ್ತಿದೆ. ಹಾಗೇ ಕ್ರೀಡಾ ಕ್ಷೇತ್ರವನ್ನು ಬಿಟ್ಟಿಲ್ಲ, ನಮ್ಮ ದೇಶದಲ್ಲಿ ಆಡಿ ಬೆಳೆದ ಅದೆಷ್ಟೋಪ್ರತಿಭೆಗಳು ಬೇರೆ ದೇಶವನ್ನು ಪ್ರತಿನಿಧಿ ಸುತ್ತಿದ್ದಾರೆ. ಹಾಗೆಯೇ ಕಾಫಿ ನಾಡಿನ ಯುವಕ ಭಾರತದಲ್ಲಿಅವಕಾಶ ವಂಚಿತನಾಗಿ ಅಮೆರಿಕ ಕ್ರಿಕೆಟ್‌ ಟೀಮ್‌ನಲ್ಲಿ ಸ್ಥಾನ ದಕ್ಕಿಸಿಕೊಂಡಿದ್ದಾನೆ. ಕ್ರಿಕೆಟ್‌ ಜಗತ್ತಿನಲ್ಲಿ ಅಮೆರಿಕಈಗ ತಾನೇ ಅಂಬೆಗಾಲಿಡುತ್ತಿದೆ.

ಯುಎಸ್‌ಎಇಂಟರ್‌ ನ್ಯಾಶನಲ್‌ ಟೀಮ್‌ನಲ್ಲಿ ಚಿಕ್ಕಮಗಳೂರು  ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ನೋಸ್ತುಶ್‌ ಸದಸ್ಯನಾಗಿದ್ದಾನೆ. ಮೂಡಿಗೆರೆ ತಾಲೂಕಿನ ಕೆಂಜಿಗೆಗ್ರಾಮದ ಪ್ರದೀಪ್‌ ಕೆಂಜಿಗೆ ಮತ್ತು ಶೃತಿ ಕೀರ್ತಿ ದಂಪತಿಪುತ್ರ ನೋಸ್ತುಶ್‌ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್‌ನಲ್ಲಿದೊಡ್ಡ ಹೆಸರು ಮಾಡಬೇಕು ಎಂಬ ಕನಸು ಹೊತ್ತುಹಗಲಿರುಳು ಶ್ರಮಿಸಿದ.

ಆದರೆ, ಇಲ್ಲಿ ಅವಕಾಶವಂಚಿತನಾಗಿ ಅನಿವಾರ್ಯವಾಗಿ ಬೇರೆ ದೇಶದತ್ತ ಮುಖ ಮಾಡಿದ್ದಾರೆ. 2017ರಿಂದ ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿರುವ ನೋಸ್ತುಶ್‌ ಅಮೆರಿಕತಂಡದ ಪರ ಟಿ-20 ಸೇರಿದಂತೆ ವಿವಿಧಪಂದ್ಯಗಳಲ್ಲಿ ಆಡಿದ್ದಾರೆ. ಸದ್ಯ ತವರೂರುಚಿಕ್ಕಮಗಳೂರಿಗೆ ಆಗಮಿಸಿರುವಅವರು, ನಗರದ ಸುಭಾಷ್‌ ಚಂದ್ರಬೋಸ್‌ ಆಟದಮೈದಾನದಲ್ಲಿ ನೆಟ್‌ ಪ್ರ್ಯಾಕ್ಟಿಸ್‌ನಲ್ಲಿ ಭಾಗಿಯಾಗಿದ್ದರು.

ನಾನು ಕ್ರಿಕೆಟ್‌ ಆರಂಭಿಸಿದ್ದು, ನನ್ನ ಹೆಮ್ಮೆಯ ದೇಶ ಭಾರತದಲ್ಲೇ, ನನ್ನ ದೇಶದ ಪರ ಆಡುವ ಆಸೆಯಿತ್ತು. ಆದರೆ ಇಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ. ಹಾಗಾಗಿ ಅಮೆರಿಕಗೆ ಹೋಗಬೇಕಾಗಿ ಬಂತು ಎಂದು ನೋಸ್ತುಶ್‌ ನೋವಿನಿಂದ ಹೇಳುತ್ತಾರೆ. ನಾನು ಕ್ರಿಕೆಟನ್ನು ತುಂಬಾ ಪ್ರೀತಿಸುತ್ತೇನೆ. ಆಟವನ್ನುಎಂಜಾಯ್‌ ಮಾಡುತ್ತೇನೆ. ಈ ಹಿಂದೆ ಕ್ಲಬ್‌ ಪರಆಡುವಾಗ ಮಯಾಂಕ್‌ ಅಗರ್ವಾಲ್‌, ಕರುಣ್‌ನಾಯರ್‌, ಶ್ರೇಯಸ್‌ ಅಯ್ಯರ್‌ ಜತೆ ಆಡಿದ್ದೇನೆ. ಮುಂದಿನ ಜೂನ್‌ ತಿಂಗಳಲ್ಲಿವರ್ಲ್ಡ್ಕಪ್‌ ಕ್ವಾಲಿಫೈಯರ್‌ ಮ್ಯಾಚ್‌ ಇದೆ.2023ರಲ್ಲಿ ವರ್ಲ್ಡ್ಕಪ್‌ ಮ್ಯಾಚ್‌ ಚಿನ್ನಸ್ವಾಮಿಸ್ಟೇಡಿಯಂನಲ್ಲಿ ಆಡುವಾಸೆಯಿದೆ ಎಂದುನೋಸ್ತುಶ್‌ ಹೇಳುತ್ತಾರೆ.

ನೋಸ್ತುಶ್‌ ಉತ್ತಮ ಬ್ಯಾಟ್ಸ್‌ಮನ್‌ ಮತ್ತುಎಡಗೈ ಸ್ಪಿನ್‌ ಬೌಲರ್‌ ಆಗಿದ್ದು, ಅಮೆರಿಕ ತಂಡವನ್ನುಪ್ರತಿನಿ ಧಿಸುತ್ತಿದ್ದಾರೆ. ಕಾಫಿ ನಾಡಿನ ಯುವಕನೊಬ್ಬಅಮೆರಿಕ ಕ್ರಿಕೆಟ್‌ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡು ಕಾμ ನಾಡಿಗೆ ಕೀರ್ತಿ ತಂದಿದ್ದು ಸಂತೋಷ ಪಡುವಂತಹವಿಷಯವಾದರೂ ನಮ್ಮ ದೇಶದಲ್ಲಿ ಅರಳಬೇಕಾದಪ್ರತಿಭೆಯೊಂದು ಅವಕಾಶ ಸಿಗದೆ ಬೇರೆ ದೇಶದಲ್ಲಿಅರಳುತ್ತಿರುವುದು ಮಾತ್ರ ನೋವಿನ ಸಂಗತಿ.

ಸಂದೀಪ ಜಿ.ಎನ್‌.ಶೇಡ್ಗಾರ್‌

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.