ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ


Team Udayavani, Jan 25, 2022, 11:30 PM IST

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ.

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಒಂದು ಹಂತದ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. ವನಿತಾ ಸಿಂಗಲ್ಸ್‌ನಲ್ಲಿ ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ ಮತ್ತು ಅಮೆರಿಕದ ಮ್ಯಾಡಿಸನ್‌ ಕೀಸ್‌ ಎದುರಾಗಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ನೆಚ್ಚಿನ ಆಟಗಾರ ರಫೆಲ್‌ ನಡಾಲ್‌ ಮತ್ತು ಮ್ಯಾಟಿಯೊ ಬೆರೆಟಿನಿ ಸೆಣಸಾಡಲಿದ್ದಾರೆ.

ವಿಶ್ವದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಮೊದಲ ಸಲ ತವರಿನ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸುವ ಹಾದಿಯಲ್ಲಿದ್ದು, ಮಂಗಳವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ನಂ. 21 ಆಟಗಾರ್ತಿ ಜೆಸ್ಸಿಕಾ ಪೆಗುಲಾ ಅವರನ್ನು 6-2, 6-0 ಅಂತರದಿಂದ ಸುಲಭದಲ್ಲಿ ಮಣಿಸಿದರು. ಕೇವಲ ಒಂದು ಗಂಟೆ, ಮೂರು ನಿಮಿಷದಲ್ಲಿ ಬಾರ್ಟಿ ಗೆದ್ದು ಬಂದರು.

ಇವರ ಎದುರಾಳಿಯಾಗಿರುವ ಮ್ಯಾಡಿಸನ್‌ ಕೀಸ್‌ ಜೆಕ್‌ ಗಣರಾಜ್ಯದ 4ನೇ ಶ್ರೇಯಾಂಕಿತೆ ಕ್ರೆಜಿಕೋವಾ ವಿರುದ್ಧ 6-3, 6-2ರಿಂದ ಮೇಲುಗೈ ಸಾಧಿಸಿದರು.

ಮಾಜಿ ಕ್ರಿಕೆಟ್‌ ಆಟಗಾರ್ತಿಯೂ ಆಗಿರುವ ಬಾರ್ಟಿ 2019ರಲ್ಲಿ ಫ್ರೆಂಚ್‌ ಓಪನ್‌, 2021ರಲ್ಲಿ ವಿಂಬಲ್ಡನ್‌ ಜಯಿಸಿದರೂ ತವರಿನ ಪ್ರಶಸ್ತಿ ಇನ್ನೂ ಒಲಿದಿಲ್ಲ. ಇಲ್ಲಿ ಗೆದ್ದರೆ 1978ರ ಬಳಿಕ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ಆತಿಥೇಯ ನಾಡಿನ ಸಾಧಕಿ ಎನಿಸಲಿದ್ದಾರೆ. ಅಂದು ಕೊನೆಯ ಸಲ ಕ್ರಿಸ್‌ ಓ’ನೀಲ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದರು. ಪ್ರಸಕ್ತ ಕೂಟದಲ್ಲಿ ಆ್ಯಶ್ಲಿ ಬಾರ್ಟಿ ಅಮೋಘ ಫಾರ್ಮ್ ನಲ್ಲಿದ್ದು , ಇಲ್ಲಿಯ ತನಕ ಒಂದೂ ಸೆಟ್‌ ಕಳೆದುಕೊಂಡಿಲ್ಲ.

ಇದನ್ನೂ ಓದಿ:ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ನಡಾಲ್‌ 7ನೇ ಸೆಮಿಫೈನಲ್‌
ನೊವಾಕ್‌ ಜೊಕೋವಿಕ್‌ ಗೈರಲ್ಲಿ ಈ ಕೂಟದ ಫೇವರಿಟ್‌ ಆಟಗಾರನಾಗಿರುವ ರಫೆಲ್‌ ನಡಾಲ್‌ ಕಾಣುತ್ತಿರುವ 7ನೇ ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌ ಇದಾಗಿದೆ. ಕೆನಡಾದ ಯುವ ಟೆನಿಸಿಗ ಡೆನ್ನಿಸ್‌ ಶಪೊವಲೋವ್‌ ವಿರುದ್ಧ ನಡೆಸಿದ 4 ಗಂಟೆ, 8 ನಿಮಿಷಗ ಮ್ಯಾರಥಾನ್‌ ಹೋರಾಟದ ಬಳಿಕ ಅವರು ಕ್ವಾರ್ಟರ್‌ ಫೈನಲ್‌ ಹಂತ ದಾಟಿದರು. ಗೆಲುವಿನ ಅಂತರ 6-3, 6-4, 4-6, 3-6, 6-3.

21ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಫೆಲ್‌ ನಡಾಲ್‌ ಕೊನೆಯ ಸಲ ಇಲ್ಲಿ ಕಿರೀಟ ಏರಿಸಿಕೊಂಡದ್ದು 2009ರಲ್ಲಿ. ಅವರ ಸೆಮಿಫೈನಲ್‌ ಎದುರಾಳಿ ಇಟಲಿಯ 7ನೇ ಶ್ರೇಯಾಂಕದ ಮ್ಯಾಟಿಯೊ ಬೆರೆಟಿನಿ. 5 ಸೆಟ್‌ಗಳ ಇನ್ನೊಂದು ಕ್ವಾರ್ಟರ್‌ ಫೈನಲ್‌ ಕಾದಾಟದಲ್ಲಿ ಅವರು ಫ್ರಾನ್ಸ್‌ನ ಗೇಲ್‌ ಮಾನ್‌ಫಿಲ್ಸ್‌ ವಿರುದ್ಧ 6-4, 6-4, 3-6, 3-6, 6-2 ಆಂತರದ ಗೆಲುವು ಒಲಿಸಿಕೊಂಡರು.

ಸಾನಿಯಾ ಜೋಡಿ ನಿರ್ಗಮನ
ಮಿಕ್ಸೆಡ್‌ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ರಾಜೀವ್‌ ರಾಮ್‌ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದೆ. ಇದರೊಂದಿಗೆ ಸಾನಿಯಾ ಮಿರ್ಜಾ ಅವರ ಆಸ್ಟ್ರೇಲಿಯನ್‌ ಓಪನ್‌ಗೆ ಪೂರ್ಣ ವಿರಾಮ ಬಿದ್ದಿದೆ. ಪ್ರಸಕ್ತ -ತುವಿನ ಬಳಿಕ ಸಾನಿಯಾ ಟೆನಿಸ್‌ಗೆ ಗುಡ್‌ಬೈ ಹೇಳಲಿರುವುದರಿಂದ ಇದು ಅವರ ಕೊನೆಯ “ಮೆಲ್ಬರ್ನ್ ಪಾರ್ಕ್‌’ ಪಂದ್ಯವೆನಿಸಿತು.

ಮಂಗಳವಾರ ನಡೆದ ಜಿದ್ದಾಜಿದ್ದಿ ಮುಖಾಮುಖಿಯಲ್ಲಿ ಆತಿಥೇಯ ಆಸ್ಟ್ರೇಲಿಯದ ಜಾಸನ್‌ ಕ್ಯುಬ್ಲಿರ್‌-ಜೇಮಿ ಫೋರ್ಲಿಸ್‌ ವಿರುದ್ಧ ಇಂಡೋ-ಅಮೆರಿಕನ್‌ ಜೋಡಿ 4-6, 6-7 (5-7) ಅಂತರದಿಂದ ಪರಾಭವಗೊಂಡಿತು.
ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ವನಿತಾ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಪರಾಭವಗೊಂಡಿದ್ದರು. ಇಲ್ಲಿ ಸಾನಿಯಾರ ಜತೆಗಾರ್ತಿ ಆಗಿದ್ದವರು ಉಕ್ರೇನಿನ ನಾದಿಯಾ ಕಿಶೆನೋಕ್‌.

ಟಾಪ್ ನ್ಯೂಸ್

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.