ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಕಳೆದ ವರ್ಷ 14 ಸಾವಿರ ಸೀಟುಗಳಲ್ಲಿ ಕೇವಲ 3 ಸಾವಿರ ಭರ್ತಿ; ಮುಂದಿನ ವರ್ಷ

Team Udayavani, Jan 29, 2022, 7:40 AM IST

ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ (2022-23) ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಖಾಸಗಿ ಶಾಲೆಗಳಿಗೆ ನೀಡುವ ಸೀಟುಗಳ ಸಂಖ್ಯೆ ಸುಮಾರು ಮೂರು ಸಾವಿರದಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.

ಪ್ರಸಕ್ತ ಶೈಕ್ಷಣಿಕ ವರ್ಷ ಕೊರೊನಾ ಸೋಂಕು ಹೆಚ್ಚಳ ಮಕ್ಕಳ ದಾಖಲಾತಿ ಮೇಲೆಯೂ ಪರಿಣಾಮ ಬೀರಿದ್ದು, ಸುಮಾರು ಶೇ. 25ರಿಂದ 30ರಷ್ಟು ಮಕ್ಕಳು ದಾಖಲಾಗಿಲ್ಲ. ಇದು ಮುಂದಿನ ವರ್ಷದ ಆರ್‌ಟಿಇ ಸೀಟಿನ ಮೇಲೂ ಪರಿಣಾಮ ಬೀರಲಿದೆ. ಯಾಕೆಂದರೆ ಪ್ರತೀ ಬಾರಿಯೂ ಹಿಂದಿನ ವರ್ಷದ ದಾಖಲಾತಿ ಆಧಾರದಲ್ಲಿ ಖಾಸಗಿ ಶಾಲೆಗಳಿಗೆ ಶೇ. 25ರಷ್ಟು ಆರ್‌ಟಿಇ ಸೀಟುಗಳನ್ನು ನಿಗದಿ ಮಾಡಲಾಗುತ್ತದೆ.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊರೊನಾ ಸೋಂಕು ಹೆಚ್ಚಳ, ಶುಲ್ಕ ಹೆಚ್ಚಳ, ಆನ್‌ಲೈನ್‌ ತರಗತಿಗಳಿಗೆ ಸೂಕ್ತ ಪರಿಕರ ಇಲ್ಲದಿರುವುದು, ಆರ್ಥಿಕ ಬಿಕ್ಕಟ್ಟು ಸಹಿತ ಹಲವು ಕಾರಣಗಳಿಂದ ಮಕ್ಕಳ ದಾಖಲಾತಿ ಕುಸಿದಿದೆ. ಇದೇ ದಾಖಲಾತಿ ಆಧಾರದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸೀಟು ಹಂಚಿಕೆ ಮಾಡುವುದರಿಂದ ಸರಕಾರದಿಂದ ಖಾಸಗಿ ಶಾಲೆಗಳಿಗೆ ಸೀಟು ಹಂಚಿಕೆ ಮಾಡುವುದರ ಸಂಖ್ಯೆ ಕಡಿಮೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಕಳೆದ ವರ್ಷ 3 ಸಾವಿರ ಸೀಟುಗಳಷ್ಟೇ ಭರ್ತಿ
ಕಳೆದ ವರ್ಷ ಆರ್‌ಟಿಇ ಸೀಟು ಪಡೆಯಲು ಪೋಷಕರು ನಿರಾಸಕ್ತಿ ತೋರಿದ್ದು, ರಾಜ್ಯಾದ್ಯಂತ ಒಟ್ಟಾರೆ 14,042 ಸೀಟುಗಳಲ್ಲಿ ಕೇವಲ 3,063ಕ್ಕಷ್ಟೇ ಮಕ್ಕಳು ದಾಖಲಾಗಿದ್ದರು. ಹೀಗಾಗಿ ಮುಂದಿನ ವರ್ಷದ ಸೀಟು ಹಂಚಿಕೆ ಸಂಖ್ಯೆ 14 ಸಾವಿರಕ್ಕಿಂತ ಕಡಿಮೆಯಾಗಬಹುದು ಎಂದು ತಿಳಿದುಬಂದಿದೆ. 2022-23ನೇ ಸಾಲಿನ ಸೀಟು ಗಾಗಿ ಅರ್ಜಿ ಸಲ್ಲಿಸಲು ಫೆ. 3ರಿಂದ ಮಾ. 3ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಫೆ. 1ರಂದು ಈ ಬಾರಿ ಲಭ್ಯವಿರುವ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳು ಮತ್ತು ಶಾಲೆಗಳ ವಿವರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಲಿದೆ.

ಖಾಸಗಿ ಶಾಲೆಗಳಲ್ಲಿ ಈ ವರ್ಷದ ದಾಖಲಾತಿ ಆಧಾರದಲ್ಲಿ ಮುಂದಿನ ವರ್ಷದ ಶೇ. 25ರಷ್ಟು ಸೀಟು ನಿಗದಿ ಮಾಡಲಾಗುತ್ತದೆ. ಈ ವರ್ಷ ದಾಖಲಾತಿ ಪ್ರಮಾಣ ಕೆಲವೆಡೆ ಕುಸಿದಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಮುಂದಿನ ವರ್ಷದ ಆರ್‌ಟಿಇ ಸೀಟು ಸಂಖ್ಯೆ ಸ್ವಲ್ಪ ಕಡಿಮೆಯಾಗಬಹುದು.
– ಪ್ರಸನ್ನಕುಮಾರ್‌,
ಪ್ರಾಥಮಿಕ ಶಿಕ್ಷಣ ನಿರ್ದೇಶಕರು

ಟಾಪ್ ನ್ಯೂಸ್

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

3 ಕೋ. ರೂ. ಹಣ ಚೆನ್ನೈಯಿಂದ ಪೆನ್‌ಡ್ರೈವ್‌ ಖರೀದಿ: ಜಿ.ಟಿ.ದೇವೇಗೌಡ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

ಕೋರ್ಟ್‌ ಆವರಣದಲ್ಲೇ ಕಣ್ಣೀರಿಟ್ಟ ಎಚ್‌.ಡಿ. ರೇವಣ್ಣ

Prajwal Revanna ಪರ ಮಾತನಾಡಲಾರೆ, ರೇವಣ್ಣ ಪರ ಮಾತ್ರ ಹೋರಾಟ: ಕುಮಾರಸ್ವಾಮಿ

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

D. K. Shivakumar ಪರ ಒಕ್ಕಲಿಗ ಸಚಿವರು, ಶಾಸಕರ ಬ್ಯಾಟಿಂಗ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

Election Commission; ಜೂ.6ರ ವರೆಗೆ ನೀತಿ ಸಂಹಿತೆ ಸಡಿಲಿಕೆ ಇಲ್ಲ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

ಸಂಧಾನ ಮೂಲಕ ವಿವಾದ ಬಗೆಹರಿಸಿಕೊಳ್ಳಿ: ರೋಹಿಣಿ, ರೂಪಾಗೆ ಸು.ಕೋರ್ಟ್‌ ಸಲಹೆ

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe: ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Mangaluru ಆತ್ಮಹತ್ಯೆಗೆ ಶರಣಾದ ಇಂಜಿನಿಯರಿಂಗ್ ವಿದ್ಯಾರ್ಥಿ

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Heart Attack ಸಿದ್ದಾಪುರ; ಹೃದಯಾಘಾತದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.