ವೈದ್ಯೆ ನಿರ್ಲಕ್ಷ್ಯಕ್ಕೆ  3 ತಿಂಗಳ ಗಂಡು ಮಗು ಸಾವು

Team Udayavani, Feb 5, 2022, 2:43 PM IST

ವೈದ್ಯೆ ನಿರ್ಲಕ್ಷ್ಯಕ್ಕೆ  3 ತಿಂಗಳ ಗಂಡು ಮಗು ಸಾವು

ಶ್ರೀನಿವಾಸಪುರ: ವೈದ್ಯರ ನಿರ್ಲಕ್ಷ್ಯದಿಂದ 3 ತಿಂಗಳ ಗಂಡು ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟಿಸಿದ ಘಟನೆ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಗಡಿಭಾಗ ಸೋಮಯಾಜಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಸೌಮ್ಯಾ ಅವರ ನಿರ್ಲಕ್ಷ್ಯ, ಪೋಷಕರ ಮಾತಿಗೆ ಕಿವಿಗೊಡದೆ ವಿಶ್ವವನ್ನೇ ನೋಡದ 3 ತಿಂಗಳಗಂಡು ಮಗು ಮೃತಪಟ್ಟಿದೆ. ಇದರಿಂದ ಪೋಷಕರು, ಗ್ರಾಮಸ್ಥರು ಈ ಘಟನೆ ಖಂಡಿಸಿ, ಆರೋಗ್ಯ ಕೇಂದ್ರದ ಮುಂದೆ ಪ್ರತಿಭಟಿಸಿದರು.

ದೂರವಾಣಿ ಕರೆ ಮಾಡಿದ್ರೂ ನಿರ್ಲಕ್ಷ್ಯ: ಗ್ರಾಮದ ಗಂಗರತ್ನ, ಸುಬ್ರಮಣಿ ಅವರ ಗಂಡು ಮಗು ಮೃತ ದುರ್ದೈವಿ. ಪೋಷಕರುಹೇಳುವಂತೆ ಗುರುವಾರ ಮಧ್ಯಾಹ್ನ ಆರೋಗ್ಯ ಸಿಬ್ಬಂದಿಅವರ ಸೂಚನೆಯಂತೆ ಪೆಂಟಾವೆಲೆಂಟ್‌ ವ್ಯಾಕ್ಸಿನ್‌ ನೀಡಲಾಗಿದೆ. ನಂತರ ಮನೆಗೆ ತೆರಳಿದ್ದು, ಮಗು ಗಟ್ಟಿಯಾಗಿ ಅಳಲಾರಂಭಿಸಿತು. ಇದರಿಂದ ವೈದ್ಯರಿಗೆ ದೂರವಾಣಿ ಕರೆ ಮಾಡಲಾಗಿದೆ. ಇದಕ್ಕೆ ವೈದ್ಯೆ ಸುಮಾ ಪರವಾಗಿಲ್ಲ ಎಂದಿದ್ದಾರೆ.

ಫೋನ್‌ ಸಂಭಾಷಣೆಯಲ್ಲಿ ತೊಡಗಿದ್ರು: ನಂತರ ರಾತ್ರಿ ಮಗು ನೋವಿನಿಂದ ಕಿರುಚಾಡಿದಾಗ ಮತ್ತೆ ವೈದ್ಯೆ ಸುಮಾ ಅವರಿಗೆ ದೂರವಾಣಿ ಕರೆ ಮಾಡಲಾಗಿದೆ. ಆದರೂ ಜವಾಬ್ದಾರಿಯುತ ವೈದ್ಯರು ಜಾರಿಕೆ ಉತ್ತರ ನೀಡಿದ್ದಾರೆ. ಮತ್ತೆ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮಗುವನ್ನು ಆಸ್ಪತ್ರೆಗೆ ಕರೆತರಲಾಗಿದೆ. ವಿಳಂಬ ಧೋರಣೆ ಅನುಸರಿಸಿ ಮೊಬೈಲ್‌ ಫೋನ್‌ ಸಂಭಾಷಣೆಯಲ್ಲಿ ತೊಡಗಿದ್ದಾಗ, ನಾವೇ ವೈದ್ಯರಿಗೆ ಮಗುವಿನ ಪರಿಸ್ಥಿತಿ ಬಗ್ಗೆ ಹೇಳಿದ್ದು, ಆಗಲೂ ಪರವಾಗಿಲ್ಲ ಸುಧಾರಿಸುತ್ತೆ, ಹೆಚ್ಚಿನ ಚಿಕಿತ್ಸೆಗೆ ಪಟ್ಟಣಕ್ಕೆ ಹೋಗಿ ಎಂದಾಗಕೂಡಲೇ ಪಟ್ಟಣದ ಆಸ್ಪತ್ರೆಗೆ ಕರೆತರಲಾಗಿದೆ. ಅಷ್ಟರಲ್ಲಿ ಮಗು ಮೃತಪಟ್ಟಿದೆ.

ವೈದ್ಯರಿಗೆ ತೀವ್ರ ತರಾಟೆ: ಇದರಿಂದ ಮನನೊಂದ ಪೋಷಕರು, ಗ್ರಾಮಸ್ಥರು ಸಂಬಂಧಿಕರ ಜೊತೆಗೂಡಿ ಮೃತ ಮಗುವನ್ನು ಆಸ್ಪತ್ರೆಯಲ್ಲಿಟ್ಟು ವೈದ್ಯರ ನಿರ್ಲಕ್ಷದ ಬಗ್ಗೆ ಘೋಷಣೆ ಕೂಗಿದರು.ಇದೇ ವೇಳೆ ಆರೋಗ್ಯಾಧಿಕಾರಿ ವಿಜಯಮ್ಮ ಭೇಟಿ ನೀಡಿದಸಮಯದಲ್ಲಿ ಪೋಷಕರು, ಗ್ರಾಮಸ್ಥರು ಆರೋಗ್ಯಾಧಿಕಾರಿ ವಿಜಯಮ್ಮ, ಡಾ.ಸುಮಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಯಾವುದೇ ಪೂರ್ವಾಪರ ವಿಚಾರಿಸದೆ, ಮಗುವಿಗೆ ವ್ಯಾಕ್ಸಿನ್‌ಕೊಟ್ಟಿದ್ದು, ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರುಹರಿಹಾಯ್ದು, ಕಳೆದ 3 ವರ್ಷಗಳಿಂದ ಡಾ.ಸೌಮ್ಯಾ ಕೆಲಸ ಮಾಡುತ್ತಿದ್ದಾರೆ. ಆದರೂ, ರೋಗಿಗಳ ಜೊತೆ ಹೊಂದಾಣಿಕೆಇಲ್ಲದೆ ಬಾಯಿಗೆ ಬಂದಂತೆ ಗದರುತ್ತಿದ್ದರು. ಇದರಿಂದ ಡಿಎಚ್‌ಒ, ಟಿಎಚ್‌ಒ, ಶಾಸಕರ ಗಮನಕ್ಕೆ ತರಲಾಗಿದೆ. ಆದರೂ, ಈ ವೈದ್ಯೆ ರೋಗಿಗಳ ಪ್ರಾಣಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಟಾಪ್ ನ್ಯೂಸ್

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

7-kmc-ramdas-pai-block

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿದೆ ನೂತನ ಡಾ|ರಾಮದಾಸ್‌ ಎಂ.ಪೈ ಬ್ಲಾಕ್‌

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

6-

Pregnancy: ಗರ್ಭಧಾರಣೆಯ ಭಾವನಾತ್ಮಕ ಅಂಶಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.