ಅಮ್ಮನ ಜೀವ ತಗೆದ ಮಗಳ ವಾಟ್ಸ್ಆ್ಯಪ್ ಸ್ಟೇಟಸ್
Team Udayavani, Feb 15, 2022, 7:30 AM IST
ಸಾಂದರ್ಭಿಕ ಚಿತ್ರ.
ಮುಂಬೈ: ಮಗಳು ವಾಟ್ಸ್ಆ್ಯಪ್ನಲ್ಲಿ ಹಾಕಿದ್ದ ಸ್ಟೇಟಸ್ನಿಂದ ತಾಯಿಯ ಕೊಲೆಯಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
20 ವರ್ಷದ ಯುವತಿ ಇತ್ತೀಚೆಗೆ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಒಂದನ್ನು ಹಾಕಿದ್ದು, ಅದು ಯಾರಿಗೋ ಬೈಯುವಂತಿತ್ತು. ಅದನ್ನು ಕಂಡ ಆಕೆಯ ಸ್ನೇಹಿತೆಯೊಬ್ಬಳು, ತನಗೆ ಬೈಯುವುದಕ್ಕೇ ಈ ಸ್ಟೇಟಸ್ ಹಾಕಿದ್ದಾಳೆ ಎಂದು ತಿಳಿದುಕೊಂಡು ಅದರ ಬಗ್ಗೆ ತನ್ನ ತಾಯಿಯ ಬಳಿ ಬಂದು ಸ್ಟೇಟಸ್ ಬಗ್ಗೆ ದೂರು ಹೇಳಿದ್ದಾಳೆ.
ಫೆ. 10ರಂದು ಆ ಯುವತಿಯ ಕುಟುಂಬವು, ಸ್ಟೇಟಸ್ ಹಾಕಿದ್ದ ಯುವತಿಯ ತಾಯಿ ಲೀಲಾವತಿ ದೇವಿ ಬಳಿ ಬಂದು ಜಗಳವಾಡಿದ್ದಾರೆ.
ಆ ಸಂದರ್ಭದಲ್ಲಿ ವಾದ-ವಿವಾದ ನಡೆದು, ಆಕೆಯ ಮೇಲೆ ಮಾರಣಾಂತಿಕ ಹಲ್ಲೆಯನ್ನೂ ಮಾಡಿದ್ದಾರೆ.
ಗಂಭೀರ ಗಾಯಾಳುವಾಗಿದ್ದ ಲೀಲಾವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.