ಉಕ್ರೇನ್‌ನಲ್ಲಿ ಸಿಲುಕಿದ ಜಿಲ್ಲೆಯ ವಿದ್ಯಾರ್ಥಿಗಳ ಪರದಾಟ 


Team Udayavani, Mar 2, 2022, 1:50 PM IST

ಉಕ್ರೇನ್‌ನಲ್ಲಿ ಸಿಲುಕಿದ ಜಿಲ್ಲೆಯ ವಿದ್ಯಾರ್ಥಿಗಳ ಪರದಾಟ 

ಮಂಡ್ಯ: ರಷ್ಯಾ ಹಾಗೂ ಉಕ್ರೇನ್‌ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಂಡ್ಯ ಮೂಲದಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಭಾರತಕ್ಕೆ ಬರಲು ಪರದಾಟ ನಡೆಸುತ್ತಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಗ್ರಾಮದಜಯರಾಮ್‌ ಪುತ್ರ ಮನೋಜ್‌ ಹಾಗೂ ರಾಜೇಶ್‌ಖನ್ನಾ ಪುತ್ರಿ ಗಾಯಿತ್ರಿ ಖನ್ನಾ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ನಡೆಯುತ್ತಿ ರುವ ಯುದ್ಧಕ್ಕೆ ಭಯ ಬಿದ್ದಿರುವ ವಿದ್ಯಾರ್ಥಿಗಳು, ಭಾರತಕ್ಕೆ ಮರಳಲು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇಲ್ಲಿನ ಪೋಷಕರಿಗೂ ಆತಂಕ ಕಾಡುತ್ತಿದೆ.

ಬಂಕರ್‌ನಲ್ಲಿ ವಿದ್ಯಾರ್ಥಿಗಳು: ಮನೋಜ್‌ ಹಾಗೂ ಗಾಯಿತ್ರಿ ಇಬ್ಬರೂ ಉಕ್ರೇನ್‌ನ ಕಾರ್ಕಿವ್‌ ನ್ಯಾಷನಲ್‌ ಮೆಡಿಕಲ್‌ ಕಾಲೇಜಿನಲ್ಲಿ 3ನೇ ವರ್ಷದಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಒಂದು ವಾರದಿಂದ ರಷ್ಯಾ ಹಾಗೂ ಉಕ್ರೇನ್‌ ನಡುವೆ ಯುದ್ಧನಡೆಯುತ್ತಿದ್ದು, ವಿದ್ಯಾರ್ಥಿಗಳನ್ನು ಬಂಕರ್‌ನಲ್ಲಿಇಡಲಾಗಿದೆ. ಅಲ್ಲದೆ, ಕೆಲವರನ್ನು ಕಾಲೇಜಿನ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ ಎಂದು ಮನೋಜ್‌ ತಂದೆ ಜಯರಾಮು ತಿಳಿಸಿದರು.

ಕಾರ್ಕಿವ್‌ ನಗರದ ಮೇಲೆ ದಾಳಿ: ಕಾರ್ಕಿವ್‌ ನಗರದ ಮೇಲೆ ರಷ್ಯಾದ ಪಡೆಗಳು ದಾಳಿ ನಡೆಸುತ್ತಿರುವುದರಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ಬಾಂಬ್‌ ದಾಳಿ, ಬಂದೂಕು ಗುಂಡಿನ ದಾಳಿನಡೆಯುತ್ತಿವೆ. ಇದರಿಂದ ಅಲ್ಲಿನ ನಾಗರಿಕರು ಜೀವಭಯದಲ್ಲಿದ್ದಾರೆ. ಎಲ್ಲಿ ಯಾವಾಗ ಏನಾಗುತ್ತದೆಯೋ ಎಂಬ ಭೀತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಪೋಲೆಂಡ್‌ಗೆ ಹೋಗಲು ಯತ್ನ: ಮನೋಜ್‌ ಮಂಗಳವಾರ ಉಕ್ರೇನ್‌ನಿಂದ ಪೋಲೆಂಡ್‌ಗೆತೆರಳುವ ಬಗ್ಗೆ ಮಧ್ಯಾಹ್ನ 2.30ರ ಸಮಯದಲ್ಲಿನಮಗೆ ಕರೆ ಮಾಡಿ ತಿಳಿಸಿದ್ದ. ಕಾರ್ಕಿವ್‌ ನಗರದಿಂದ  12 ಕಿ.ಮೀ ದೂರದಲ್ಲಿ ರೈಲ್ವೆ ನಿಲ್ದಾಣವಿದ್ದು, ರೈಲು ಮೂಲಕ ಪೋಲೆಂಡ್‌ಗೆ ತೆರಳಿ ನಂತರ ಅಲ್ಲಿಂದಭಾರತಕ್ಕೆ ಬರಲು ಮುಂದಾಗಿದ್ದ. ಆದರೆ, ಹೊರಗೆಬಂದಾಗ ಬಾಂಬ್‌ ದಾಳಿ ನಡೆಯಿತು. ತಕ್ಷಣ ಮತ್ತೆನಮ್ಮನ್ನು ಬಂಕರ್‌ನಲ್ಲಿ ಇರಿಸಿದ್ದಾರೆ ಎಂದು ವಿಡಿಯೋಮೂಲಕ ತಿಳಿಸಿದ್ದಾನೆ ಎಂದು ಜಯರಾಂ ಮಾಹಿತಿ ನೀಡಿದರು.

ಆಹಾರ ಕೊರತೆ: ಇದುವರೆಗೂ ಇದ್ದ ದಿನಸಿ ಸಾಮಗ್ರಿ ಖಾಲಿಯಾಗುತ್ತಿದ್ದು, ಊಟ, ತಿಂಡಿಗೆ ಕೊರತೆಯಾಗುತ್ತಿದೆ. ಊಟ, ನೀರು ಇಲ್ಲದೆ, ಹಸಿವಿನಿಂದ ನರಳುವಂತಾಗಿದೆ. ಊಟ, ತಿಂಡಿ ತರಲು ಬಂಕರ್‌ ಬಿಟ್ಟು ಹೊರಗೆ ಬರಬೇಕಾದ ಸ್ಥಿತಿ ಎದುರಾಗಿದೆ. ಹೊರಗೆ ಬಂದರೆ ಬಾಂಬ್‌ ದಾಳಿ ಹಾಗೂ ಗುಂಡಿನ ದಾಳಿ ನಡೆಯುತ್ತಿವೆ. ಇದರಿಂದ ಊಟ, ತಿಂಡಿಗೆ ಕೊರತೆಯಾಗಿದೆ. ಮುಂದೆ ಏನು ಮಾಡುವುದು ಎಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ನೆಟ್‌ವರ್ಕ್‌ ಕಡಿತ: ವಿದ್ಯುತ್‌, ನೆಟ್‌ವರ್ಕ್‌ ಆಗಾಗ್ಗೆ ಕೈಕೊಡುತ್ತಿದೆ. ಸರಿಯಾಗಿ ಮಾತನಾಡಲು ಆಗುತ್ತಿಲ್ಲ.ವಿದ್ಯುತ್‌ ಸಂಪರ್ಕ, ನೆಟ್‌ವರ್ಕ್‌ ಕೊರತೆಯಿಂದಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಆತನೇ ವಿಡಿಯೋಮಾಡಿ ಕಳುಹಿಸುತ್ತಿದ್ದಾನೆ. ನಾವು ಸಂಪರ್ಕಮಾಡಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತದೊಂದಿಗೆ ಸಂಪರ್ಕ: ಪ್ರತಿದಿನ ಜಿಲ್ಲಾಡಳಿತದೊಂದಿಗೆ ಸಂಪರ್ಕ ಮಾಡಲಾಗುತ್ತಿದ್ದು,ವಿದ್ಯಾರ್ಥಿ ಮನೋಜ್‌ ನೀಡುವ ಕಾಖೀìವ್‌ ನಗರದ ಪರಿಸ್ಥಿತಿ ಮಾಹಿತಿಯನ್ನು ತಿಳಿಸುತ್ತಿದ್ದೇನೆ. ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

ನವೀನ್‌ ಸಾವು: ಪೋಷಕರಲ್ಲಿ ಹೆಚ್ಚಿದ ಆತಂಕ :

ಹಾವೇರಿ ಮೂಲಕ ನವೀನ್‌ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ಹಿನ್ನೆಲೆ ಮನೋಜ್‌ ಹಾಗೂ ಗಾಯಿತ್ರಿ ಖನ್ನಾ ಅವರ ಪೋಷಕರಿಗೆ ಆತಂಕ ಹೆಚ್ಚಾಗಿದೆ. ತಿಂಡಿ ತರಲು ಬಂಕರ್‌ನಿಂದ ಹೊರಗೆ ಬಂದ ನವೀನ್‌ಸಾವನ್ನಪ್ಪಿರುವುದು ಟಿವಿಯಲ್ಲಿ ನೋಡಿ ನಮಗೆ ಆತಂಕ ಹೆಚ್ಚಾಗುತ್ತಿದೆ. ಮನೋಜ್‌ ಸಂಪರ್ಕಕ್ಕೆ ಸಿಗದೆಇರುವುದರಿಂದ ಭಯವೂ ಹೆಚ್ಚಾಗಿದೆ. ಕೂಡಲೇ ಕೇಂದ್ರ ಸರ್ಕಾರ ವಿದ್ಯಾರ್ಥಿಗಳನ್ನು ಕರೆ ತರಲು ಮುಂದಾಗಬೇಕು ಎಂದು ವಿದ್ಯಾರ್ಥಿ ಮನೋಜ್‌ ತಂದೆ ಜಯರಾಮು ಮನವಿ ಮಾಡಿದರು.

ಟಾಪ್ ನ್ಯೂಸ್

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್‌ಕೌಂಟರ್‌… ಇಬ್ಬರು ಉಗ್ರರು ಹತ

Virat kohli spoke about his post-retirement life

Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Monsoon: ನಿಗದಿತ ಸಮಯಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶ: ಹವಾಮಾನ ಇಲಾಖೆ

Anjali Ambigera case: ABVP protest in Hubli

Anjali Ambigera case: ಹುಬ್ಬಳ್ಳಿಯಲ್ಲಿ ಎಬಿವಿಪಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಕ್ಕರೆ ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ

ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್‌ ಶಾಸಕ ಉದಯ್‌

11-mandya

Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Hassan; ಕೆರೆಯಲ್ಲಿ ಈಜಲು ಹೋಗಿ ನೀರು ಪಾಲಾದ ನಾಲ್ವರು ಮಕ್ಕಳು

Anjali Ambigera Case; Protest by BJP workers in Hubli

Anjali Ambigera Case; ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಈಶ್ವರ್ ಖಂಡ್ರೆ

Bidar; ಯುವಕರ‌ ಬದುಕು‌ ಹಾಳು ಮಾಡಿದ‌ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ: ಈಶ್ವರ್ ಖಂಡ್ರೆ

6-bng-crime

Drugs ಮಾರಾಟ: ಮೂವರು ವಿದೇಶಿ ಪ್ರಜೆಗಳು ಸೇರಿ 8 ಮಂದಿ ಬಂಧನ ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.