ಮಧ್ಯಪ್ರದೇಶ: ನಾಲ್ವರು ನಿಷೇಧಿತ ಜೆಎಂಬಿ ಉಗ್ರರ ಬಂಧನ
Team Udayavani, Mar 13, 2022, 8:26 PM IST
ಭೋಪಾಲ್: ನಿಷೇಧಿತ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶದ (ಜೆಎಂಬಿ) ನಾಲ್ವರು ಉಗ್ರರನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಭಾನುವಾರ ಹೇಳಿದ್ದಾರೆ.
ಬಂಧಿತರ ಬಳಿಯಿದ್ದ ಜಿಹಾದಿ ಸಾಹಿತ್ಯ ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಿಶ್ರಾ ಹೇಳಿದರು,ಐಶ್ಬಾಗ್ನ ಪೊಲೀಸ್ ಠಾಣೆಯಿಂದ 200 ಮೀಟರ್ ದೂರದಲ್ಲಿ ಮತ್ತು ಜಿಲ್ಲೆಯ ಇನ್ನೊಂದು ಪ್ರದೇಶದಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಹಾರದ ಬೋಧಗಯಾ ಸ್ಫೋಟದಲ್ಲಿ ಜೆಎಂಬಿ ಭಾಗಿಯಾಗಿರುವುದು ಕಂಡುಬಂದ ನಂತರ 2019 ರಿಂದ ಭಾರತದಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ.