ಉದಯವಾಣಿ ಫೋನ್ ಇನ್: ಎಸೆಸೆಲ್ಸಿ ; ಈ ಬಾರಿ ಕ್ಲಿಷ್ಟಕರ ಪ್ರಶ್ನೆ ಇಲ್ಲ, ಆತಂಕ ಬೇಡ


Team Udayavani, Mar 25, 2022, 6:20 AM IST

Untitled-1

ಮಾ. 28ರಿಂದ ಎ.11ರ ವರೆಗೆ ನಡೆಯಲಿರುವ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಂತಿಮ ತಯಾರಿಗೆ ಅನುಕೂಲ ಆಗುವಂತೆ ಉದಯವಾಣಿ ಗುರುವಾರ ಏರ್ಪಡಿಸಿದ್ದ ಫೋನ್‌ಇನ್‌ ಕಾರ್ಯಕ್ರಮದಲ್ಲಿ ಕನ್ನಡ, ಇಂಗ್ಲಿಷ್‌, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಗಣಿತ ವಿಷಯದ ತಜ್ಞರು ಭಾಗವಹಿಸಿ, ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಜತೆಗೆ ಸುಲಭವಾಗಿ ಪರೀಕ್ಷೆಯನ್ನು ಎದುರಿಸಲು ಅಗತ್ಯವಿರುವ ಅನೇಕ ಟಿಪ್ಸ್‌ಗಳನ್ನು ನೀಡಿದ್ದಾರೆ. ವಿಜ್ಞಾನ ಮತ್ತು ಗಣಿತ ವಿಷಯ ಪ್ರಶ್ನೆಗಳಿಗೆ ಶಿಕ್ಷಕರಾದ ಜಯಂತಿ ಶೆಟ್ಟಿ ಹಾಗೂ ನಾಗೇಂದ್ರ ಪೈ, ಸಮಾಜ ವಿಜ್ಞಾನ ವಿಷಯದ ಪ್ರಶ್ನೆಗಳಿಗೆ ಶೇಖರ್‌ ಭೋವಿ, ಇಂಗ್ಲಿಷ್‌ ವಿಷಯದ ಪ್ರಶ್ನೆಗಳಿಗೆ ಸವಿತಾ ದೇವಿ, ಹಿಂದಿ ವಿಷಯದ ಪ್ರಶ್ನೆಗಳಿಗೆ ಡಾ| ಮಾಲತಿ ಪೈ ಹಾಗೂ ಕನ್ನಡ ವಿಷಯದ ಪ್ರಶ್ನೆಗಳಿಗೆ ಕಿರಣ್‌ ಹೆಗ್ಡೆ ಕೆ. ಅವರು ಉತ್ತರಿಸಿದರು.

ಕೋರ್‌ ವಿಷಯ :

ಸಮಾಜ ವಿಜ್ಞಾನದಲ್ಲಿ ಮ್ಯಾಪ್‌ನಲ್ಲಿ ಯಾವ ಸ್ಥಳ ಬರಬಹುದು. ಸುಲಭವಾಗಿ ಗುರುತಿಸುವುದು ಹೇಗೆ?

(ಸುಮಾ, ಕಾರ್ಕಳ)

ಮ್ಯಾಪ್‌ ಐದು ಅಂಕದ ಪ್ರಶ್ನೆ, ಮ್ಯಾಪ್‌ ಬಿಡಿಸಿದ್ದಕ್ಕೆ ಒಂದು ಅಂಕ, ಸ್ಥಳ ಗುರುತಿಸುವುದಕ್ಕೆ 4 ಅಂಕ ಸಿಗುತ್ತದೆ. ಭಾರತದ ನಕ್ಷೆ ಬಿಡಿಸಲು ಹೆಚ್ಚೆಚ್ಚು ಬರೆದು ಅಭ್ಯಾಸ ಮಾಡಿಕೊಳ್ಳಬೇಕು. ಔಟ್‌ಲೆçನ್‌  ಬಿಡಿಸುವುದನ್ನು ಕಲಿಯಬೇಕು. ಸ್ಥಳಗಳಲ್ಲಿ ಪ್ರಮುಖವಾಗಿ ಇಂದಿರಾ ಕೋಲ್‌, ಇಂದಿರಾ ಪಾಯಿಂಟ್‌, ಕರ್ಕಾಟಕ ವೃತ್ತ, ಕಾವೇರಿ, ನರ್ಮದಾ, ಮಹಾನದಿ, ಗಂಗಾನದಿ ಇತ್ಯಾದಿ. ಬಾಕ್ರಾನಂಗಲ್‌, ನಾಗಾರ್ಜುನ, ತುಂಗಾಭದ್ರಾ, ಕೃಷ್ಣಾ ಮೇಲ್ದಂಡೆ ಯೋಜನೆ, ಪಶ್ಚಿಮ, ಪೂರ್ವ ಕರಾವಳಿಯ ಬಂದರುಗಳ ಬಗ್ಗೆ ಗಮನ ಹರಿಸಿ.

ವಿಜ್ಞಾನ, ಸಮಾಜ ವಿಜ್ಞಾನ, ಗಣಿತದಲ್ಲಿ ಅಪ್ಲಿಕೇಶನ್‌ ಲೆವೆಲ್‌ ಪ್ರಶ್ನೆಗಳು ಇರಲಿವೆಯೇ?

(ಕೃಷ್ಣ ಉಡುಪಿ, ಸುಬ್ರಹ್ಮಣ್ಯ, ಬ್ರಹ್ಮಾವರ )

ಈ ವರ್ಷ ನೇರ ಮತ್ತು ಸರಳ ಪ್ರಶ್ನೆಗಳನ್ನೇ ಕೇಳುತ್ತಾರೆ. ಅಪ್ಲಿಕೇಶನ್‌ ಅಥವಾ ಇನ್‌ಡೈರೆಕ್ಟ್ ಪ್ರಶ್ನೆಗಳು ತೀರಾ ಕಡಿಮೆ ಇರಲಿವೆ. ಈ ವರ್ಷ ಅದನ್ನು ಶೇ.10ಕ್ಕೆ (ಕೋವಿಡ್‌ಗಿಂತ ಮೊದಲು ಶೇ.20ರಷ್ಟು ಇರುತಿತ್ತು) ಇಳಿಸಿದ್ದಾರೆ. ಈ ಬಾರಿ ಪರೀಕ್ಷೆ ಬರೆಯುವವರು 8, 9ನೇ ತರಗತಿ ಪರೀಕ್ಷೆ ಬರೆಯದ ಕಾರಣ ನೇರ ಪ್ರಶ್ನೆಗಳನ್ನೇ ಕೇಳಲಿದ್ದಾರೆ.

ವಿಜ್ಞಾನ ವಿಷಯದಲ್ಲಿ ಪಠ್ಯಕಡಿತ ಆಗಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆಯೇ?

(ಹಮೀದ್‌, ವಿಟ್ಲ)

ಸಮಸ್ಯೆ ಆಗಲಾರದು. ಹಿಂದಿನ ವರ್ಷಗಳಲ್ಲಿ ಓದಿರುವ ಕೆಲವೇ ಕೆಲವು ಅಂಶಗಳನ್ನು ಒಳಗೊಂಡ ಅಧ್ಯಾಯಗಳನ್ನು ಮತ್ತು ಕ್ಲಿಷ್ಟಕರ ಅಂಶಗಳನ್ನು ಕೈಬಿಡಲಾಗಿದೆ. ಆದರೆ ಇದರಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುವುದಿಲ್ಲ.

ಗಣಿತದ ಸೂತ್ರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಹೇಗೆ?

(ನಿತೀಶ್‌ ಉಡುಪಿ )

ಎಲ್ಲ ಸೂತ್ರಗಳನ್ನು ಕಲಿಯುವಾಗ ಅವುಗಳ ವ್ಯತ್ಯಾಸ ಗಮನಿಸಿಕೊಳ್ಳಬೇಕು. ಸಣ್ಣಪುಟ್ಟ ವ್ಯತ್ಯಾಸವನ್ನು ಸ್ಪಷ್ಟವಾಗಿ ಗಮನಿಸಿದರೆ ಗಣಿತದಲ್ಲಿ ಸೂತ್ರ ನೆನಪಿಟ್ಟುಕೊಳ್ಳುವುದು ಸುಲಭ. ಎಲ್ಲವೂ ಒಂದೇ ರೀತಿಯಲ್ಲಿ ಕಂಡರೂ ಸಣ್ಣ ಸಣ್ಣ ವ್ಯತ್ಯಾಸ ಇರುತ್ತದೆ. ಅದನ್ನು ಗಮನಿಸಿ, ಬರೆದು ನೆನಪಿಟ್ಟುಕೊಳ್ಳಬೇಕು.

ವಿಜ್ಞಾನದ ಪ್ರಮುಖಾಂಶ :

ವಿಜ್ಞಾನ ವಿಷಯದಲ್ಲಿ ಲೋಹ-ಅಲೋಹ, ಆಮ್ಲ-ಪ್ರತ್ಯಾಮ್ಲ, ವಾಯುವಿಕ ಉಸಿರಾಟ- ಅವಾಯುವಿಕ ಉಸಿರಾಟ ಮೊದಲಾದ ವಿಷಯದಲ್ಲಿ ಯಾವುದಾದರೂ ಒಂದು ಸ್ಪಷ್ಟ ಗೊತ್ತಾದರೆ ಇನ್ನೊಂದನ್ನು ಸುಲಭವಾಗಿ ಬರೆಯಬಹುದು.

ವಿಜ್ಞಾನದಲ್ಲಿ 12 ಅಂಕದ ಚಿತ್ರಗಳೇ ಇರುತ್ತದೆ. ಭೌತ ಶಾಸ್ತ್ರ, ರಸಾಯಶಾಸ್ತ್ರ  ಹಾಗೂ ಜೀವಶಾಸ್ತ್ರದಲ್ಲಿ ತಲಾ 2 ಚಿತ್ರ ಬರುತ್ತದೆ. ಬೆಳಕು, ವಿದ್ಯುತ್‌ಶಕ್ತಿ, ವಿದ್ಯುತ್‌ ಕಾಂತಿಯ ಪರಿಣಾಮ ಈ ಅಧ್ಯಯಗಳಲ್ಲಿ 20 ಅಂಕದ ಪ್ರಶ್ನೆಗಳು ಬರುತ್ತದೆ. ಕಾರ್ಬನ್‌, ಲೋಹ, ಅಲೋಹ, ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ, ಆಮ್ಲ, ಪ್ರತ್ಯಾಮ್ಲದ ಗುಣಗಳು, ತಟಸ್ಥ ದ್ರಾವಣಗಳು, ಲವಣಗಳ ಉಪಯೋಗ, ಜೀವಶಾಸ್ತ್ರದಲ್ಲಿ ಜೀರ್ಣಕ್ರಿಯೆ, ಸಸ್ಯಗಳಲ್ಲಿ ಆಹಾರ ಮತ್ತು ನೀರಿನ ಸಾಗಾಣಿಕೆ, ರಕ್ತನಾಳಗಳ ವಿಧಗಳು, ಘಟಕಗಳು, ಅವುಗಳ ಕಾರ್ಯ, ವಿಸರ್ಜನ ಕ್ರಿಯೆ ಇತ್ಯಾದಿ ಪಾಠಗಳ ಪ್ರಶ್ನೆ ಪ್ರಮುಖವಾಗಿ ಬರುತ್ತದೆ.

ಗಣಿತದಲ್ಲಿ ಗಮನ ಹರಿಸಬೇಕಾದದ್ದು :

ಗಣಿತದಲ್ಲಿ ಥೆರಂ ಬಂದೇ ಬರುತ್ತದೆ. ದೊಡ್ಡ ಥೆರಂ ಚಿಕ್ಕ ಥೆರಂ ಪ್ರತ್ಯೇಕವಾಗಿ ಬರಲಿದೆ. ಗ್ರಾಫ್ ಕೂಡ ಅತೀ ಮುಖ್ಯವಾಗಿರುತ್ತದೆ. ಪ್ರಮೇಯಗಳು, ಓಜೀವ್‌ ರಚನೆ, ಪ್ರಾಯೋಗಿಕ ರಚನೆಗಳು, ಸರಾಸರಿ, ಮಧ್ಯಾಂಕ ಅಥವಾ ಬಹುಲೆಕ್ಕವನ್ನು ಕಂಡು ಹಿಡಿಯುವುದು. ಸೂತ್ರದ ಸಹಾಯದಿಂದ ವರ್ಗಸಮೀಕರಣವನ್ನು ಬಿಡಿಸುವುದು, ಮೂಲಗಳ ಸ್ವಭಾವವನ್ನು ಪರೀಕ್ಷಿಸುವುದು ಇತ್ಯಾದಿ ಬಹು ಮುಖ್ಯವಾಗಿರುತ್ತದೆ.

ಸಮಾಜ ವಿಜ್ಞಾನದ ಪ್ರಮುಖಾಂಶ :

ಇತಿಹಾಸ, ಭೌಗೋಳ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ, ವ್ಯವಹಾರ ಅಧ್ಯಯನ ವಿಭಾಗಗಳಲ್ಲಿ ಮುಖ್ಯವಾಗಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857ರಲ್ಲಿನ ವಿಫ‌ಲತೆಗೆ ಕಾರಣ, ರಾಜಕೀಯ ಮತ್ತು ಆರ್ಥಿಕ ಕಾರಣಗಳು, ಪರಿಣಾಮಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿ, ತೀವ್ರಗಾಮಿಗಳು ಹಾಗೂ ತೀವ್ರಗಾಮಿಗಳ ಪಾತ್ರದ ಬಗ್ಗೆ ಕೇಳುವ ಸಾಧ್ಯತೆಯಿದೆ. ಗಾಂಧಿಯುಗದಲ್ಲಿ ಸುಭಾಷ್‌ಚಂದ್ರ ಭೋಸ್‌, ಮೊದಲ ಪ್ರಧಾನಿ ನೆಹರೂ ಸಾಧನೆ, ಸ್ವಾತಂತ್ರ್ಯ ಭಾರತಕ್ಕೆ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕೊಡುಗೆ ಇತ್ಯಾದಿ. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು, ಬೆಳೆಯ ಋತುಗಳು, ಮಣ್ಣಿನ ಗುಣಲಕ್ಷಣ, ಕೈಗಾರಿಕೆಗಳ ಮೇಲೆ ಪ್ರಭಾವ ಬೀರುವ ಅಂಶಗಳು, ಭಾರತದ ಭೂ ಸಂಪನ್ಮೂಲ -ಕೃಷಿಯ ವಿಧಗಳು, ಕೃಷಿ ಪದ್ಧತಿ. ಕೈಗಾರಿಕೆಗಳು- ಪ್ರಾಮುಖ್ಯ, ಬ್ಯಾಂಕ್‌ನ ವ್ಯವಹಾರಗಳು ಇತ್ಯಾದಿ ಅಧ್ಯಾಯಗಳ ಮೇಲೆ ಹೆಚ್ಚಿನ ಗಮನಹರಿಸಬೇಕು.

ಪ್ರಮುಖ ಟಿಪ್ಸ್‌  :

  • ವಿಜ್ಞಾನದಲ್ಲಿ ಮಾನವನ ಜೀರ್ಣಾಂಗ ವ್ಯೂಹ, ಹೃದಯ, ಮೆದುಳಿನ ಚಿತ್ರಗಳು
  • ಅನುವಂಶೀಯತೆಯಲ್ಲಿ ಮೆಂಡಲ್‌ನ ಪ್ರಯೋಗಗಳು, ಏಕತಳೀಕರಣ, ದ್ವಿತಳೀಕರಣ ಪ್ರಯೋಗಗಳು
  • ವಿಜ್ಞಾನ ವಿಷಯದಲ್ಲಿ ಸರಳ ಮತ್ತು ನೇರ ಪ್ರಶ್ನೆಗಳು ಇರಲಿದೆ. ಎಪ್ಲಿಕೇಶನ್‌ ಲೆವೆಲ್‌ ಪ್ರಶ್ನೆ ಕಡಿಮೆ ಇರಲಿದೆ.
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ಶಾಸ್ತ್ರವನ್ನು ಪ್ರತ್ಯೇಕವಾಗಿ ಓದಬೇಕು.
  • ಗಣಿತದಲ್ಲಿ ಸೂತ್ರಗಳನ್ನು, ಸಮೀಕರಣಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಬೇಕು.
  • ಗ್ರಾಫ್ಸ್, ಪ್ರಮೇಯ, ಬಹುಲೆಕ್ಕ, ಶ್ರೇಢಿಗಳ ಬಗ್ಗೆ ಗಮನ ಹೆಚ್ಚಿರಲಿ.
  • ವಿಷಯವನ್ನು ಕಂಠಪಾಠಕ್ಕಿಂತ ಅರ್ಥಮಾಡಿಕೊಂಡು ಬರೆಯಿರಿ.
  • ಆರೋಗ್ಯದ ಬಗ್ಗೆ ಕಾಳಜಿ, ಆತ್ಮವಿಶ್ವಾಸ ಅತೀ ಮುಖ್ಯ.
  • ಪರೀಕ್ಷೆಯನ್ನು ನವೋಲ್ಲಾಸ ದಿಂದ ಎದುರಿಸಬೇಕು.
  • ಪಠ್ಯಪುಸ್ತಕದ ಲೆಕ್ಕವನ್ನೇ ಹೆಚ್ಚಾಗಿ ನೋಡಿಕೊಂಡರೆ ಸಾಕಾಗುತ್ತದೆ.
  • ಶಾರ್ಟ್‌ ನೋಟ್‌ ಮಾಡಿಕೊಂಡ ಅಂಶಗಳನ್ನು ಆಗಾಗ ಪುನರ್‌ ಮನನ ಮಾಡಿ.
  • ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ, ಮಾದರಿ ಪ್ರಶ್ನೆಪತ್ರಿಕೆಯ ಶಾರ್ಟ್‌ನೋಟ್‌ ಮಾಡಿಕೊಳ್ಳಬೇಕು.

ಭಾಷಾ ವಿಷಯಗಳು  :

ಮಕ್ಕಳು ಪರೀಕ್ಷೆ ಸಿದ್ಧತೆ ನಡೆಸುತ್ತಿರುವಾಗ ಹೆತ್ತವರಾಗಿ ನಾವೇನು ಮಾಡಬೇಕು?

(ರವೀಂದ್ರ, ನೆಲ್ಯಾಡಿ)

ಮಕ್ಕಳ ಓದಿನ ಜತೆಗೆ ಅವರ ಆರೋಗ್ಯದ ಕಡೆಗೂ ಗಮನವಿರಲಿ. ಅವರಲ್ಲಿ ಆತ್ಮವಿಶ್ವಾಸ ಬೆಳೆಸಿ. ಓದುತ್ತಿರುವಾಗ ಮಧ್ಯೆ ಲಘು ಆಹಾರ, ಕುಡಿಯಲು ನೀರನ್ನು ಕೊಡಿ. ಜಂಕ್‌ ಫ‌ುಡ್‌ಗಳಿಂದ ದೂರವಿರಿಸಿ. ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತು ಓದುವುದು ಆರೋಗ್ಯಕರವಲ್ಲ. ಆಗಾಗ ಮುಖ ತೊಳೆಯುವುದು, ಕನಿಷ್ಠ ಎರಡು ಗಂಟೆಗಳಿಗೊಮ್ಮೆಯಾದರೂ ಸ್ಥಳ ಬದಲಾವಣೆ ಮಾಡುವುದು ಒಳ್ಳೆಯದು. ಅತ್ತಿಂದಿತ್ತ ನಡೆಯುತ್ತಾ ಓದುವುದು ಆರೋಗ್ಯಕರ ಕ್ರಮವಲ್ಲ. ಗಟ್ಟಿಯಾಗಿ ಓದಲಿ, ಓದಿದ್ದನ್ನು ಬರೆದು ಕಲಿಯಲು ಪ್ರೋತ್ಸಾಹಿಸಿ. ಮೊಸಂಬಿ, ಕಿತ್ತಳೆ ಜ್ಯೂಸ್‌ ಈ ಅವಧಿಯಲ್ಲಿ ಮಕ್ಕಳಿಗೆ ಸೇವಿಸಲು ಕೊಡದೇ ಇರುವುದು ಉತ್ತಮ.

ಹಳೆಗನ್ನಡ, ಕವಿ ಪರಿಚಯ ನೆನಪಿಟ್ಟುಕೊಳ್ಳುವುದು ಹೇಗೆ?

(ರಾಜೇಶ್‌ ದೇರಳಕಟ್ಟೆ, ಸೀಮಾ ಧರ್ಮಸ್ಥಳ )

ಹಳೆಗನ್ನಡ, ಹೊಸಗನ್ನಡದಲ್ಲಿ ಒಬ್ಬ ಕವಿಯ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ಇತ್ತೀಚಿನ ಪ್ರಶಸ್ತಿಗಳ ಬಗ್ಗೆಯೂ ಕೇಳುತ್ತಾರೆ. ಪಾಠ ಹಾಗೂ ಪದ್ಯದಿಂದ ತಲಾ ಒಬ್ಬರನ್ನು ಕೇಳುತ್ತಾರೆ. ಇಸವಿ ನೆನಪಿಟ್ಟುಕೊಳ್ಳಿ.

ಇಂಗ್ಲಿಷ್‌ ಗ್ರಾಮರ್‌ ಬಳಕೆ ಹೇಗಿರಬೇಕು?

(ಆಶಾ, ಕಟಪಾಡಿ)

ವ್ಯಾಕರಣದಲ್ಲಿ ಮುಖ್ಯವಾಗಿ ನೋಡಬೇಕಿರುವುದು ಟೆನ್ಸಸ್‌ ಆ್ಯಂಡ್‌ ಕರೆಕ್ಟ್ ಫಾರ್ಮ್ ವರ್ಬ್ (ಕಾಲ ಮತ್ತು ಮುಂದಿನ ಪದವನ್ನು ಸರಿ ಮಾಡಿ ಬರೆಯಬೇಕು), ಪ್ರಫೋಸಿಶನ್ಸ್‌, ಕಂಜೆಕ್ಷನ್ಸ್‌, ಆರ್ಟಿಕಲ್ಸ್‌ (ಎ, ಆ್ಯನ್‌, ದ ಹೇಗೆ ಬರೆಯುವುದು), ಕ್ವಶ್ಚನ್‌ ಟ್ಯಾಗ್ಸ್‌, ಮೋಡಲ್ಸ್‌- ಲ್ಯಾಂಗ್ವೇಜ್‌ ಪಂಕ್ಷನ್ಸ್‌ ಆ್ಯಕ್ಟಿವ್‌ ಮತ್ತು ಪ್ಯಾಸಿವ್‌ ವಾçಸ್‌ (ಕತ್ತರಿ ಮತ್ತು ಕರ್ಮಣಿ ವಾಕ್ಯಗಳ ಬಳಕೆ), ಡಿಗ್ರೀಸ್‌ ಆಫ್ ಕಂಪ್ಯಾರಿಸನ್‌ (ಎರಡು ವಸ್ತುಗಳ ಹೋಲಿಕೆ), ರಿಪೋರ್ಟ್‌ಡೆ ಸ್ಪೀಚ್‌ (ಒಬ್ಬರು ಹೇಳಿದ ಮಾತನ್ನು ಇನ್ನೊಬ್ಬರು ಹೇಳುವಾಗ ಸಾಕಷ್ಟು ಬದಲಾವಣೆ ಆಗುತ್ತದೆ), ಇಫ್ ಕ್ಲಾಸ್‌ ಆಫ್ ಕಂಡೀಶನ್‌, ಇನಿ³ನಿಟಿವ್‌, ಪ್ರೇಸಲ್‌  ವರ್ಬ್ಸ್, ಐಡೆಂಟಿಫಾಯಿಂಗ್‌ ಪಾರ್ಟ್‌ ಆಫ್ ಸ್ಪೀಚ್‌ ಮೊದಲಾದವುಗಳೆಡೆ ಗಮನ ನೀಡಿ.

ಇಂಗ್ಲಿಷ್‌ನಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ?

(ಶ್ರೀಶಾಂತ್‌, ಬಂಟ್ವಾಳ)

ಬರವಣಿಗೆ ಶೈಲಿ (ಹ್ಯಾಂಡ್‌ರೈಟಿಂಗ್‌) ಉತ್ತಮವಾಗಿರ ಬೇಕು. ವಸ್ತುನಿಷ್ಠ  ಘಟನೆಗಳನ್ನು ಆಧರಿಸಿ ಕಾಲ್ಪನಿಕ, ಘಟನೆಗಳು, ನಾಟಕಗಳು ಇರುವಂಥ ಪಾಠಗಳಿವೆ. ಬರೆದದ್ದು ಒಂದು, ಮೌಲ್ಯಮಾಪಕರಿಗೆ ತಲುಪಿದ್ದೇ ಒಂದಾದರೆ ಇಲ್ಲಿ ಅಂಕ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ರೀಪಿಟೆಡ್‌ ಕ್ವಶ್ಚನ್‌ ಇರುತ್ತದೆ. ಪ್ರೊಫೈಲ್‌ ಬರೆಯಲು ಹೇಳಿದರೆ ಯಾರಾದರೂ ವ್ಯಕ್ತಿಗಳ ಬಗ್ಗೆ ಕೊಡುತ್ತಾರೆ. ಕನಿಷ್ಠ ಏನು ಗೊತ್ತಿದೆಯೋ ಅದನ್ನಾದರೂ ಬರೆಯಿರಿ. ಕಥೆ ಬರೆಯುವುದರಲ್ಲಿ ಔಟ್‌ಲೆçನ್‌ ಇರುತ್ತದೆ. ಅದನ್ನು ಓದಿಕೊಂಡು ಪ್ರಶ್ನೆಯಲ್ಲಿರುವ ಕ್ಲೂ ತಿಳಿದು ಬರೆಯಬೇಕು. ಇದಕ್ಕಾಗಿ ಪಂಚತಂತ್ರದ ಕಥೆ ಓದಿಕೊಂಡಿರಬೇಕು.

ಇಂಗ್ಲಿಷ್‌ ಕೋಟ್ಸ್‌ ಫ್ರೇಮ್‌ ಮೆಮೊರಿಗೆ ಯಾವುದು ಬರಬಹುದು?

(-ಚೇತನಾ, ಉಡುಪಿ)

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕ್ವಾಲಿಟಿ ಆಫ್ ಮರ್ಸಿ ಮತ್ತು ಬ್ಲೈಂಡ್‌ ಬಾಯ್‌ ಇವೆರಡರಲ್ಲಿ ಒಂದನ್ನು ಆರಿಸಿಕೊಂಡರೆ ಸಾಕು ಕನಿಷ್ಠ 4 ಅಂಕಗಳನ್ನು ಗಳಿಸಬಹುದು.

ಹಿಂದಿ ಕಲಿಕೆಯಲ್ಲಿ ಸುಲಭವಾಗಿ ನೆನಪಿನಲ್ಲಿಡುವಂತೆ ಕಲಿಯುವುದು ಹೇಗೆ?

(ಪ್ರವೀಣ್‌, ಮಂಗಳೂರು)

ಪ್ರಶ್ನೆಯ ಒಳಗೆ ಉತ್ತರಗಳು ಸಿಲುಕಿಕೊಂಡಿರುತ್ತದೆ. ಅದನ್ನು ಹುಡುಕುವ ಪ್ರಯತ್ನ ಮಾಡಬೇಕು. ಪ್ರತಿಯೊಂದು ಶಾಲೆಯಲ್ಲೂ, ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿ ಸಂಪನ್ಮೂಲ ವ್ಯಕ್ತಿಗಳನ್ನೂ ಸೇರಿಸಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಯಾವ ಸಮಯದಲ್ಲಿ ಬೇಕಾದರೂ ಕೇಳಬಹುದು.

ಹಿಂದಿಯಲ್ಲಿ ಪತ್ರ ಲೇಖನ ಹೇಗೆ?

(ನಾಗರತ್ನಾ, ಕುಂದಾಪುರ)

ಹಿಂದಿಯಲ್ಲಿ ಪತ್ರ ಬರೆಯುವಾಗ ಮೊದಲಿಗೆ ಪ್ರೇಕ್ಷಕ್‌ ಎಂದು ಬರೆಯುತ್ತೇವೆ. ಇಲ್ಲಿ ಪ್ರ ಮತ್ತು ರ ಅನ್ನು ಸರಿಯಾಗಿ ಬರೆಯಿರಿ. ಇಲ್ಲೇ ತಪ್ಪಾದರೆ ಅಂಕ ಕಡಿತವಾಗುವ ಸಾಧ್ಯತೆ ಇದೆ. ಲೇಖನ ಚಿಹ್ನೆಗಳಿಗೆ ತುಂಬಾ ಪ್ರಾಮುಖ್ಯ ಇದೆ. ಹೀಗಾಗಿ ಈ ಬಗ್ಗೆ ಗಮನವಿರಲಿ. ಪತ್ರ ಬರೆಯುವ ವಿಧಾನ ಕನ್ನಡ, ಇಂಗ್ಲಿಷ್‌, ಹಿಂದಿಯಲ್ಲಿ ಒಂದೇ ತೆರನಾಗಿರುತ್ತದೆ. ಭಾಷೆ ಮಾತ್ರ ಬೇರೆಬೇರೆಯಷ್ಟೆ.

ಪ್ರಮುಖ ಟಿಪ್ಸ್‌  :

  • ಪೂರ್ವ ಸಿದ್ಧತಾ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ಅಭ್ಯಾಸ ಮಾಡಿಕೊಳ್ಳುವುದು.
  • ಈ ವರ್ಷದ ಪ್ರಶ್ನೆ ಪತ್ರಿಕೆಯಲ್ಲಿ ಕ್ಲಿಷ್ಟತೆಯ ಪ್ರಶ್ನೆಗಳು ಇಲ್ಲ. ಆತಂಕವಿಲ್ಲದೆ ಉತ್ತರಿಸಿ.
  • ಭಾಷಾ ಪಾಠಗಳಲ್ಲಿ ಅಕ್ಷರಗಳನ್ನು ದುಂಡಾಗಿ, ದೊಡ್ಡದಾಗಿ ಬರೆಯುವುದು.
  • ಕಂಠ ಪಾಠದ ಪದ್ಯಗಳಲ್ಲಿ 7 ಪದ್ಯಗಳಲ್ಲಿನ ಒಂದೊಂದು ಕಂಠ ಪಾಠಕ್ಕಿರುವ ಪದ್ಯಭಾಗವನ್ನು ಕಲಿತುಕೊಳ್ಳುವುದು.
  • ಪತ್ರಲೇಖನಕ್ಕೆ ಸಂಬಂಧಿಸಿದಂತೆ 2 ಆಯ್ಕೆಗಳಲ್ಲಿ ವ್ಯಾವಹಾರಿಕ ಪತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸುಲಭವಾಗಿ ಅಂಕ ಗಳಿಸಬಹುದು.
  • ಪ್ರಬಂಧ ಬರೆಯುವಾಗ ಪ್ಯಾರಗ್ರಾಫ್ ಮಾಡಿ ಉತ್ತರಿಸುವುದು. ಪೀಠಿಕೆ, ವಿಷಯ ಪ್ರಸ್ತಾವನೆ, ಉಪಸಂಹಾರ ಹೀಗೆ.
  • ಅಲಂಕಾರ ಗುರುತಿಸುವಾಗ ಉಪಮಾ ಮತ್ತು ರೂಪಾಲಂಕಾರಗಳ ಉದಾಹರಣೆಯನ್ನು ಹೆಚ್ಚು ಗಮನ ಕೊಡುವುದು.
  • ಭಾಷಾ ವಿಷಯದ ಪಾಠಗಳಲ್ಲಿ ಹೆಚ್ಚಿನವು ಕಥೆಯ ರೂಪದಲ್ಲಿರುವುದರಿಂದ ಪ್ರತೀ ಭಾಗವನ್ನು ಕಥೆಯ ರೂಪದಲ್ಲಿ ನೆನಪಿಟ್ಟುಕೊಂಡರೆ ಉತ್ತಮ.
  • ಕವಿ ಪರಿಚಯ ಮಾಡುವಾಗ ಒಂದು ಗದ್ಯಭಾಗದ ಕವಿ. ಒಂದು ಪದ್ಯ ಭಾಗದ ಕವಿ ಪರಿಚಯಕ್ಕೆ ಕೇಳುವ ಸಾಧ್ಯತೆ ಹೆಚ್ಚಿರುತ್ತದೆ.
  • ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳು ಕೆಲವು ಸಂದರ್ಭಗಳಲ್ಲಿ ತಪ್ಪಾಗಿದ್ದರೆ ಅದನ್ನು ಬರೆಯಲು ಪ್ರಯತ್ನಿಸಿದವರಿಗೆ ಅಂಕ ನೀಡಲಾಗುತ್ತದೆ. ಹಾಗಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಉತ್ತಮ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.